06/08/2025
ಅನಾರೋಗ್ಯ ಎಂದರೇನು?
ದೋಷಗಳ, ಧಾತುಗಳ, ಮಲಗಳ ಆಧಾರವೇ ಮನುಷ್ಯನ ದೇಹ. ವಾತ, ಪಿತ್ತ ಮತ್ತು ಕಫಗಳೆಂಬುದೇ ತ್ರಿದೋಷಗಳು; ವಸಾ, ರಕ್ತ, ಮಾಂಸ, ಮೇದಸ್ಸು, ಎಲುಬು, ಮಜ್ಜಾ, ಶುಕ್ರ ಇವು ಏಳು ಸಪ್ತಧಾತುಗಳು. ಮಲ, ಮೂತ್ರ, ಬೆವರು ಮೊದಲಾದವುಗಳು ಮಲಗಳು.
ಇವೆಲ್ಲವೂ ಸಾಮ್ಯದಿಂದಿದ್ದರೆ ಆರೋಗ್ಯವೆನಿಸುತ್ತದೆ. ಯಾವುದೊಂದೂ ಹೆಚ್ಚಲೂ ಬಾರದು, ಕಡಿಮೆಯಾಗಲೂ ಬಾರದು; ಸಮತೆಯಿಂದಿರಬೇಕು. ಅದೇ ಆರೋಗ್ಯ. ಇವುಗಳು ಕ್ಷಯ ವೃದ್ಧಿಯಾಗಿ, ವೈಷಮ್ಯದಲ್ಲಿರುವುದೇ ಅನಾರೋಗ್ಯ.