
01/10/2024
For Those with Diabetes:
Diabetes has become a common condition in recent times. As we’ve mentioned before, once it develops, it cannot be completely cured, but it can be managed effectively. To do this, it’s essential to follow a strict diet, maintain a healthy lifestyle, and adhere to your doctor's advice. Including millets in your diet can also be very beneficial.
Millets have a low glycemic index, which helps regulate blood sugar levels, preventing spikes and keeping diabetes under control. If your blood sugar levels are elevated, alongside the medications you are taking, regular consumption of millets can gradually help bring your sugar levels under control.
ಸಕ್ಕರೆಕಾಯಿಲೆ ಇರುವವರಿಗೆ - ಸಕ್ಕರೆಕಾಯಿಲೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕೂಡ ಸಾಮಾನ್ಯ ಕಾಯಿಲೆ ಆಗಿ ಬಿಟ್ಟಿದೆ. ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡರೆ, ಮತ್ತೆ ಅದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಕಟ್ಟುನಿಟ್ಟಿನ ಆಹಾರಪದ್ಧತಿ, ಸರಿಯಾದ ಜೀವನಶೈಲಿ ಹಾಗೂ ವೈದ್ಯರ ಸಲಹೆಗಳನ್ನು ಅನುಸರಿಸುವ ಜೊತೆಗೆ ಸಿರಿ ಧಾನ್ಯಗಳನ್ನು ಕೂಡ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು. ಯಾಕೆಂದರೆ ಇದರಲ್ಲಿ ಕಂಡು ಬರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಂಡು, ಸಕ್ಕರೆಕಾಯಿಲೆಯನ್ನು ಕಂಟ್ರೋಲ್ ಮಾಡುತ್ತದೆ. ಇನ್ನು ಒಂದು ವೇಳೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ, ಮಿತಿಮೀರಿ ಹೋಗಿದ್ದರೆ, ತಾವು ತೆಗೆದು ಕೊಳ್ಳುತ್ತಿರುವ ಔಷಧಿಗಳ ಜೊತೆಗೆ ಸಿರಿ ಧಾನ್ಯಗಳನ್ನು ಸೇವನೆ ಮಾಡುತ್ತಾ ಬಂದರೆ ಕ್ರಮೇಣವಾಗಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ