06/07/2024
ಹೀಗಿದ್ದರು.. ಕೌಲಗುಡ್ ಡಾಕ್ಟರ..
ಇದು ಸುಮಾರು ವರ್ಷಗಳ ಹಿಂದಿನ ಘಟನೆ..(1980/81)
ಆಗ ನಾನು KMC ಯಲ್ಲಿ ಅದೇ ತಾನೇ MBBS ಪಾಸಾಗಿ house surgeon ಆಗಿ ಕೆಲಸ ಮಾಡ್ತಾ ಇದ್ದೆ..
ನನ್ನ posting OBG department ನಲ್ಲಿ..2 ತಿಂಗಳ ಪೋಸ್ಟಿಂಗ್ ಅದು.. ಅದರಲ್ಲಿ ಒಂದು ತಿಂಗಳು labour room duty ಆಗಿತ್ತು..
ನನ್ನ ಜೊತೆಗೆ ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ..(Dr. Mumtaz ಬೆಂಡಿಗೇರಿ ) ಮತ್ತು ಒಬ್ಬ ಸೀನಿಯರ್ ಹೌಸ್ surgeon..(,Dr. Sunita Shenoy..) ಇವರೂ duty ಮಾಡ್ತಾ ಇದ್ದರು ಲೇಬರ್ ರೂಮ್ ನಲ್ಲಿ..senior house surgeon ಹುದ್ದೆಗೆ ಈಗ senior resident ಎಂತಲೂ ಕರೆಯುತ್ತಾರೆ..
ಈ ಇಬ್ಬರೂ ಮಹಿಳೆ ವೈದ್ಯರೂ ತುಂಬಾನೇ ಪ್ರಾಮಾಣಿಕ ರಾಗಿ ಕೆಲಸ ಮಾಡ್ತಾ ಇದ್ದರು.. ಮತ್ತು ನನ್ನಂತಹ ಜೂನಿಯರ್ ವೈದ್ಯನಿಗೆ ಯೋಗ್ಯ ಮಾರ್ಗದರ್ಶನ ಕೂಡಾ ನೀಡುತ್ತಾ ಇದ್ದರು..
Labour room duty ಅಂದರೆ ಗೊತ್ತಲ್ಲ.. ತುಂಬಾನೇ ಬಿಝಿ.. ರಾತ್ರಿಯೆಲ್ಲ delivery ಆಗ್ತಾನೆ ಇದ್ದವು.. ಮತ್ತೇ ಬಾಜೂ ರೂಮಿನಲ್ಲಿ complicated ಹೆರಿಗೆ cases ಗಳು ಇರ್ತಾ ಇದ್ದವು..(eclampsia.. ಅಂತಹ..),
ನನ್ನ ಕೆಲಸ.. ಲೇಬರ್ ರೂಮಿನಲ್ಲಿ ಆದ delivery cases ಗಳ case sheet ಬರೆಯುವದು..blood transfusion ಏನಾದರೂ ಬೇಕಾದರೆ arrange ಮಾಡೋದು..
Labour room ನ 3rd floor ನಲ್ಲಿ ಒಂದು laboratory ಇರ್ತಾ ಇತ್ತು.. ಹೀಗಾಗಿ ರಾತ್ರಿಯೆಲ್ಲ ಕೆಳ floor ನಿಂದ ಮೇಲಿನ ಮಹಡಿಗೆ, ಮೇಲಿನ ಮಹಡಿಯಿಂದ ಲೇಬರ್ ರೂಮಿಗೆ ಅದೆಷ್ಟು ಚಕ್ಕರ ಹೊಡೆಯುತ್ತಿದೆ , ಅದಕ್ಕೆ ಲೆಕ್ಕವೇ ಇರ್ತಾ ಇರಲಿಲ್ಲ..
ಒಂದು ದಿನ.. ರಾತ್ರಿಯ 11 ಗಂಟೆ ಮೀರಿ ಹೋಗಿದೆ.. ಅದೇನೂ ಗೊತ್ತಿಲ್ಲ.. ಒಬ್ಬ ಮಹಿಳೆಗೆ delivery ವೇಳೆಯಲ್ಲಿ ತುಂಬಾನೇ ರಕ್ತ ಸ್ರಾವ ಆಗಿ , ಆ ಮಹಿಳೆಯ ಆರೋಗ್ಯ ತುಂಬಾನೇ ಸೀರಿಯಸ್ ಆಗಿತ್ತು..(ಬಹುಶಃ..PPH ಆಗಿರಬೇಕು.. ನನಗೆ ಅಷ್ಟೊಂದು ನೆನಪಿಲ್ಲ..)
ನಮ್ಮ ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿ Dr. ಬೆಂಡಿಗೇರಿ ಮಾಮ್.. ಮತ್ತು Dr. Sunita Shenoy ಬಹಳ ಟೆನ್ಶನ್ ನಲ್ಲಿದ್ದರು.. ಕಾರಣ ಆ ಮಹಿಳೆಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು..(that lady needed immediate blood transfusion..)
ಆಗ ನಮ್ಮ KMC ಯಲ್ಲಿ Blood Bank ಇರಲಿಲ್ಲ.. ದೂರದ ಕೇಶವಾಪೂರ ನಲ್ಲಿ.. ಒಂದು pvt Blood Bank ಒಂದಿತ್ತು..(ಆಗಿನ ಸಂಗೀತ ಸಿನೆಮಾ ಟಾಕೀಸ್ ಹತ್ತಿರ..)
ಆ ಮಹಿಳೆಯ ಸಂಬಂಧಿ ಕರ್ಯಾರೂ ರಕ್ತ ದಾನ ಮಾಡಲು ಒಪ್ಪುತ್ತಾ ಇರಲಿಲ್ಲ.. ಈಗ ಉಳಿದ ಒಂದೇ ದಾರಿ.. ಅದೇ .. ಆ pvt Blood Bank ಗೆ ಹೋಗಿ blood ತರಬೇಕು.. ನಾನು.. ಮತ್ತು ಆ ಮಹಿಳೆ ಯ ಒಬ್ಬ ಅಟೆಂಡರ್ , ಇನ್ನೇನೂ ಹೋಗಬೇಕು ಎಂದು ರೆಡಿ ಆಗ್ತಾ ಇದ್ದೆವು.. ಅಷ್ಟರಲ್ಲಿ..
ಒಬ್ಬ ಮಧ್ಯ ವಯಸ್ಸಿನ ಮನುಷ್ಯ, ಬೆನ್ನು.. ಸ್ವಲ್ಪ ಬಾಗಿದೆ.. ಪೈಜಾಮಾ, ಮೇಲೊಂದು ಬಿಳಿ ಬಣ್ಣದ half shirt.. ಕಣ್ಣಿಗೆ ಒಂದು ಚಸ್ಮ.. ಕಾಲಲ್ಲಿ sleepers.. ನಮ್ಮ ಲೇಬರ್ ರೂಮ್ ಮುಂದೆ ಪ್ರತ್ಯಕ್ಷ ರಾದರು..
ಅವರು.. ಯಾರೆಂದೀರಿ..?
ನಮ್ಮ ಕೌಲ್ಗುಡ್ ಸರ್..
Dr.Sreenivas kaulgud.. professor and head of the department of obstetrics and gynaecology..KMC Hubli..
ಒಂದೈದು ನಿಮಿಷದಲ್ಲಿ ಅವರಿಗೆ ಈ ಘಟನೆಯ ವಿವರ ನೀಡಿದರು.. ನಮ್ಮ ಸೀನಿಯರ್ ಹೌಸ್ house surgeon ಮತ್ತು ಮಹಿಳಾ post graduates..
ಮತ್ತೇನು ಕೇಳ್ತೀರಾ..?
Blood transfusion ready..
Donor.. ಯಾರೆಂದು ಊಹಿಸಿ ಬಲ್ಲಿರಾ..?
Yes.. ಅವರೇ.. ಸಜ್ಜನಿಕೆಯ ಸಾಕಾರ.. ನಮ್ಮ ನೆಚ್ಚಿನ kaulgud ಸರ್..
ಹೌದು.. ಸ್ವತಃ kaulgud ಸರ್.. ಅವರೇ ತಮ್ಮ ರಕ್ತ ದಾನ ಮಾಡಿದರು ಅಂತಹ ರಾತ್ರಿಯಲ್ಲಿ.. ಮತ್ತು ಆ ಮಹಿಳೆಯ ಜೀವ ಉಳಿಸಿದರು.. ಒಬ್ಬ ಸ್ತ್ರೀ ರೋಗ ತಜ್ಞ ಆಗಿ..
can you imagine..such incidents ..in today's life.. that to by a professor..senior one..
ಹೀಗಿದ್ದರು ನಮ್ಮ ನೆಚ್ಚಿನ ಗುರುಗಳು...
Dr.S.N. Kaulgud..
ಮರುದಿನ.. ನಮ್ಮ ಹಿರಿಯ ವೈದ್ಯ ರಾದ Dr. ಮುಮ್ತಾಜ್ ಬೆಂಡಿಗೇರಿ..ಹೇಳಿದರು..
ಪಾಟೀಲ್.. ಇದು ನಿನಗೆ ಹೊಸ ಅನುಭವ.. ಆದರೆ Kaulgud ಸರ್ ಇಂತಹ blood donation ಅದೆಷ್ಟೋ ಸಲ ಮಾಡಿದ್ದಾರೆ.. ಇದು ನಮಗೆಲ್ಲ ತಿಳಿದಿರುವ ವಿಷಯ..
Kaulgud ಸರ್.. ಅದೆಷ್ಟೋ ಸಲ.. ರಾತ್ರಿಯ ವೇಳೆಯಲ್ಲಿ ಆಸ್ಪತ್ರೆಗೆ ಬರ್ತಾ ಇದ್ದರೆಂತೆ.. ಅದೂ labour room ಗೆ special ಆಗಿ..
ಇಂತಹ ಮಹಾನುಭಾವ ಗುರುಗಳ ಕೆಳಗೆ ವಿದ್ಯಾಭ್ಯಾಸ ಮಾಡಿದ ನಾನೇ ಧನ್ಯ..
ಹೀಗಿತ್ತು.. ನಮ್ಮ ಆಗಿನ ಕಾಲದ KMC..
ಹೀಗಿದ್ದರು ನಮ್ಮ ಗುರುಗಳು..
simple..down to earth..very good teacher, excellent surgeon..and above all these..a perfect gentleman..a true human being..kind hearted doctor..
My teacher..
Dr.S.N. Kaulgud..
ಮುಂದೆ ಅವರು Mysore medical College ಗೆ ಟ್ರಾನ್ಸಫರ್ ಆಗಿ ಹೋದರು.. ಅದರೆ ಕೆಲವೇ ವರ್ಷಗಳಲ್ಲಿ.. ಆ ಭಗವಂತ ತನ್ನ ನಾಡಿಗೆ ಅವರನ್ನು ಆಮಂತ್ರಿಸಿದ... ಬಹುಶಃ.. ಅಲ್ಲಿಯ ಆಸ್ಪತ್ರೆಯ ಲೇಬರ್ ರೂಮ್ ನೋಡಿ ಕೊಳ್ಳಲೇನೋ..!!
Dr. ಉದಯ ಪಾಟೀಲ,
ನೇತ್ರ ತಜ್ಞರು..
ಕಲ್ಬುರ್ಗಿ...
ದೂರವಾಣಿ..