17/06/2025
ವಿಶ್ವ ರಕ್ತದಾನಿಗಳ ದಿನಾಚರಣೆ- 2025
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕ ಉಡುಪಿ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಉಡುಪಿ, ಯೂತ್ ರೆಡ್ ಕ್ರಾಸ್, ರೋಟರಾಕ್ಟ್ ಕ್ಲಬ್,ರಾಷ್ಟ್ರೀಯ ಸೇವಾ ಯೋಜನೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ ಹಾಗೂ ಜೆಸಿಐ ಅಲುಮಿನಿ ಕ್ಲಬ್ ವಲಯ 15 ಇವರ ಸಂಯುಕ್ತ ಆಶ್ರಯದಲ್ಲಿ
ವಿಶ್ವ ರಕ್ತದಾನಿಗಳ ದಿನಾಚರಣೆ- 2025
ಧ್ಯೇಯ- ರಕ್ತನೀಡಿ, ಭರವಸೆ ನೀಡಿ, ಜೊತೆಯಾಗಿ ನಾವು ಜೀವ ಉಳಿಸೋಣ
Give Blood, Give Hope: Together we save Life.
ಎಂಬ ಧ್ಯೇಯ ವಾಕ್ಯದೊಂದಿಗೆ
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಜ್ಞಾವಿಧಿ ಬೋಧನೆ
ದಿನಾಂಕ- 17/06/2025. ಸಮಯ: ಬೆಳಿಗ್ಗೆ- 10-00 ಗಂಟೆಗೆ.
ಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಸವರಾಜ್ ಜಿ ಹುಬ್ಬಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು ಉಡುಪಿ. ಇವರು ನೆರವೇರಿಸಿ ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನಗಳಲ್ಲಿ ಒಂದಾಗಿದೆ. ರಕ್ತವನ್ನು ದಾನದಿಂದಲೆ ಪಡೆಯಬೇಕು ಕೃತಕವಾಗಿ ತಯಾರಿಸಲೂ ಸಾದ್ಯವಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿ ತನ್ನ ಜೀವಿತಾವಾಧಿಯಲ್ಲಿ 160ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಬಹುದು ಎಲ್ಲರು ರಕ್ತದಾನದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ ಆಶೋಕ ಜಿಲ್ಲಾ ಸರ್ಜನ ಜಿಲ್ಲಾ ಆಸ್ಪತ್ರೆ ಉಡುಪಿ ಇವರು ಮಾತನಾಡಿ ಉಡುಪಿ ಜಿಲ್ಲೆ ರಕ್ತ ದಾನಿಗಳ ಜಿಲ್ಲೆ ಎಂದು ಗುರುತಿಸಲ್ಪಟ್ಟಿರುತ್ತದೆ, ಮತ್ತು ವಿದ್ಯಾರ್ಥಿ ಜೀವನದಲ್ಲಿ ರಕ್ತದಾನ ಮಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಂದು ಅತೀ ಹೆಚ್ಚು ಬಾರಿ ರಾಕ್ತದಾನ ಮಾಡಿದ ಮಹನೀಯರಿಗೆ ಸನ್ಮಾನ ಮಾಡಲಾಯಿತು.
1. ಶ್ರೀ ಲಕ್ಷೀಶ ಉಡುಪ್ - A +ve, 56- ಬಾರಿ ರಕ್ತದಾನ
2. ರೂಪ ಬಲ್ಲಾಳ- B +ve , 48- ಬಾರಿ ರಕ್ತದಾನ
3. ಕಾರ್ತಿಕ್ ನಾಯ್ಕ್ - B +ve, 44- ಬಾರಿ ರಕ್ತದಾನ
4. ಜಗದೀಶ ಚಂದ್ರನ್ -A +ve, 50- ಬಾರಿ ರಕ್ತದಾನ
5. ಗಿರಿಜ ಸುವರ್ಣ – B +ve, 28- ಬಾರಿ ರಕ್ತದಾನ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹನೀಯರಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ ಚಿದಾನಂದ ಸಂಜು.ಎಸ.ವಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಡುಪಿ. ಇವರು ಉಪಸ್ಥಿರಿದ್ದ ವಿದ್ಯಾರ್ಥಿಗಳಿಗೆ ಪ್ರತಿಜ್ಷಾ ವಿಧಿ ಬೋಧನೆ ಮಾಡಿದರು. ಕಾರ್ಯಕ್ರಮದಲ್ಲಿ, ಡಾ.ನಾಗರಾಜ್ ಎಸ್. ಆಸ್ಪತ್ರೆ ಮತ್ತು ವೈದ್ಯಕೀಯ ಅಧಿಕ್ಷಕರು, ಡಾ ವೀಣಾ ಕುಮಾರಿ, ವೈದ್ಯಾಧಿಕಾರಿ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, JFJPDM ಆಶಾ ಅಲೇನ್ ವಾಜ್ ಅದ್ಯಕ್ಷರು ಅಲೂಮಿನಿ ಕ್ಲಬ ವಲಯ 15 ಮತ್ತು ಶ್ರೀ ಮಂಜುನಾಥ ವಾರ್ತಾಧಿಕಾರಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ ಮಮತಾ ಕೆ.ವಿ , ಪ್ರಾಂಶುಪಾಲರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ ಉಡುಪಿ. ಇವರು ಅದ್ಯಕ್ಷತೆ ವಹಿಸಿ ನಮ್ಮ ಕಾಲೇಜಿನಲ್ಲಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ ಮತ್ತು 250ಕ್ಕೂ ಹೆಚ್ಚು ರಕ್ತದ ಯುನಿಟ್ ಸಂಗ್ರಹ ಮಾಡಲಾಗಿರುತ್ತದೆ ಹಾಗೂ ಇವತ್ತಿನ ರಕ್ತದಾನ ಶಿಬಿರದಲ್ಲಿ 150ಕ್ಕೂ ಹೆಚ್ಚು ರಕ್ತದ ಯುನಿಟ್ ಸಂಗ್ರಹಿಸುವ ಗುರಿ ಹೊಂದಿರುತ್ತೇವೆ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ ಎಂದು ತಿಳಿಸಿದರು
ಸ್ವಾಗತ:ಡಾ ವಿದ್ಯಾಲಕ್ಷಿ ಡೀನ ಕಮ್ಯೂನಿಟಿ ಸರ್ವೀಸ್ ಇವರಿ ನೆರವೇರಿಸಿದರು. ಧನ್ಯವಾದ ಸಮರ್ಪಣೆ: ಡಾ ಯೋಗಿಶ ಆಚಾರ್ಯ ಸಹಾಯಕ ಡೀನ್ ಯುತ್ ರೆಡ ಕ್ರಾಸ ಇವರು ಮಾಡಿದರು ಪ್ರಾರ್ಥನೆ ಗೀತಾ ಮತ್ತು ಅವರ ತಂಡ ನೇರವೇರಿಸಿದರು. ಶ್ರೀ ಮಾಹಾಬಲೇಶ್ವರ ಜಿಲ್ಲಾ ಕಾರ್ಯಕ್ರಮ ಮೇಲ್ವೀಚಾರಕರು ಕಾರ್ಯಕ್ರಮ ನೀರುಪಣೆ ಮಾಡಿದರು. ಇವತ್ತಿನ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 150 ಯುನಿಟ್ ರಕ್ತ ಸಂಗ್ರಹಿಸಲಾಯಿತು.