13/03/2021
*ಕೊರಗುವವರಿಗಾಗಿ ಕೆಲವು ಸ್ಪೂರ್ತಿಗಳು ಇಲ್ಲಿವೆ,*
ಕೆಲವರು ಕೆಲಸ ಮಾಡುವ ಮನಸ್ಸಿಲ್ಲದೆ ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಕೊರತೆಗಳನ್ನು ಎತ್ತಿ ತೋರಿಸಿ ಜವಾಬ್ದಾರಿಗಳಿಂದ ಜಾರಿಕೊಳ್ಳಲು ಯತ್ನಿಸುತ್ತಾರೆ. ಕೊರತೆಗಳು ಹಾಗೂ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತವೆ. ಅದಕ್ಕಾಗಿ ಸಮಸ್ಯೆ ಅಥವಾ ಕೊರತೆಗಳು ನಿಮಗಷ್ಟೇ ಇವೆ ಎಂದು ಕೊರಗಬೇಡಿ. ನನಗೂ ಕೊರತೆಗಳಿವೆ. ಆದರೆ ನಾನು ಕೊರಗುವುದಿಲ್ಲ. ಕಷ್ಟಗಳಿಗೆ ನನ್ನ ಹೃದಯ ಕಲ್ಲಾಗಿದೆ. ಆದರೆ ಕೊರಗುವವರಿಗಾಗಿ ಕೆಲವು ಸ್ಪೂರ್ತಿಗಳು ಇಲ್ಲಿವೆ ;
*೧* ) “ನನಗೆ ಸರಿಯಾದ ಶಿಕ್ಷಣ ಸಿಗಲಿಲ್ಲ…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಫೋರ್ಡ್ ಮೋಟಾರ್ಸ್ ಕಂಪನಿ ಮಾಲೀಕರಾದ ‘ಹೆನ್ರಿ ಫೋರ್ಡ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರಿಗೂ ಉಚಿತ ಶಿಕ್ಷಣ ಸಿಕ್ಕಿರಲಿಲ್ಲ…
*೨* ) “ನಾನು ಚಿಕ್ಕವನಿರುವಾಗಲೇ ನನ್ನ ತಂದೆ ತೀರಿಕೊಂಡರು…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಸಹ ಚಿಕ್ಕವರಿರುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು…
*೩* ) ”ನಾನು ಬಡ ಕುಟುಂಬದಲ್ಲಿ ಜನಿಸಿರುವೆ…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ‘ಡಾ. ಎ.ಪಿ.ಜೆ. ಅಬ್ದುಲ ಕಲಾಮ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಕೂಡ ಬಡ ಕುಟುಂಬದಲ್ಲಿ ಹುಟ್ಟಿ, ಬೆಳೆದು ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ…
*೪* ) “ನನ್ನ ಅರ್ಧ ಜೀವನ ಸೈಕಲ್ ಮೇಲೆಯೇ ಕಳೆದು ಹೋಯಿತು…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ವಾಶಿಂಗ್ ಪೌಡರ್ ನಿರ್ಮಾ ಕಂಪನಿ ಮಾಲಿಕರಾದ ‘ಕರ್ಸನ ಭಾಯಿ ಪಟೇಲ್’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಪ್ರಾರಂಭದಲ್ಲಿ ಸೈಕಲ್ ಮೇಲೆಯೇ ಮನೆಮನೆಗೂ ತೆರಳಿ ನಿರ್ಮಾ ಪೌಡರ್ ಮಾರಿ ಅರ್ಧ ಜೀವನ ಕಳೆದಿದ್ದರು…
*೫* ) “ನನಗೆ ಬಾಲ್ಯದಿಂದಲೇ ಎಲ್ಲರು ಮಂದಬುದ್ಧಿಯೆಂದು ಹೀಯಾಳಿಸುತ್ತಾರೆ…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಬೆಳಕು ಕೊಟ್ಟ ‘ಥಾಮಸ್ ಆಲ್ವಾ ಎಡಿಸನ್’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಬಾಲ್ಯದಲ್ಲಿ ಅವರನ್ನು ಮಂದಬುದ್ಧಿಯೆಂದು ಶಾಲೆಯಿಂದ ಆಚೆ ಹಾಕಿದ್ದರು
*೬* ) ”ನಾನೊಂದು ಚಿಕ್ಕ ನೌಕರಿ ಮಾಡುತ್ತಿರುವೆ ಅದರಿಂದ ಏನಾಗುತ್ತದೆ…?” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ‘ಧೀರುಭಾಯ ಅಂಬಾನಿ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ರಿಲಯನ್ಸ ಕಂಪನಿ ಪ್ರಾರಂಭಿಸುವ ಮುಂಚೆ ಒಂದು ಚಿಕ್ಕ ನೌಕರಿ ಮಾಡುತ್ತಿದ್ದರು
*೭* ) ”ನನ್ನ ಕಂಪನಿ ಅಥವಾ ನಾನು ಕೂಡಿಟ್ಟ ಹಣವೆಲ್ಲ ದಿವಾಳಿಯಾಯಿತು…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಜಗತ್ತಿನ ಅತಿ ದೊಡ್ಡ ಕೂಲ್ ಡ್ರಿಂಕ್ಸ್ ಕಂಪನಿ ‘ಪೆಪ್ಸಿ’ ಕೋಲಾವನ್ನು ನೆನೆಸಿಕೊಳ್ಳಿ. ಯಾಕಂದ್ರೆ ಆ ಕಂಪನಿ ಎರಡು ಸಲ ದಿವಾಳಿಯಾಗಿ ಬೀದಿಗೆ ಬಂದರೂ ಮತ್ತೆ ಈಗ ನಂಬರ್ ಒನ್ ಸ್ಥಾನದಲ್ಲಿದೆ…
*೮* ) “ನನ್ನತ್ರ ಸಾಕಷ್ಟು ದುಡ್ಡಿಲ್ಲ. ನಾನೇಗೆ ಬ್ಯುಸಿನೆಸ್ಸ್ ಸ್ಟಾರ್ಟ್ ಮಾಡಲಿ…?” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಇನ್ಫೋಸಿಸನ ಸಹ ಸಂಸ್ಥಾಪಕರಾದ ‘ನಾರಾಯಣ ಮೂರ್ತಿ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ತಮ್ಮ ಮಡದಿಯ ಒಡವೆಗಳನ್ನು ಮಾರಿ ಬ್ಯುಸಿನೆಸ್ಸ್ ಸ್ಟಾರ್ಟ್ ಮಾಡಿದ್ದರು
*೯* ) “ನಾನು ಜಾಬ್ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆದೆ…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಅಲಿಬಾಬಾ ಗ್ರೂಪನ (Alibaba.com) ಮಾಲೀಕರಾದ ‘ಜಾಕ್ ಮಾ’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರು ಒಟ್ಟು 30 ಜಾಬ್ ಇಂಟರ್ವ್ಯೂಗಳಲ್ಲಿ ರಿಜೆಕ್ಟ್ ಆಗಿ ಎಲ್ಲಿಯೂ ಕೆಲಸ ಸಿಗದೇ ಅಲಿಬಾಬಾ.ಕಾಮನ್ನು ಪ್ರಾರಂಭಿಸಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ…
*೧೦* ) “ನನ್ನ ಕೆಲಸವನ್ನು ಯಾರು ಅಪ್ರಿಸಿಯೇಟ ಮಾಡ್ತಿಲ್ಲ. ಬ್ಯಾಡ್ ಲಕ್ ನನ್ನ ಬೆನ್ನು ಬಿದ್ದಿದೆ…” ಎಂದು ನೀವು ಕೊರಗುತ್ತಿದ್ದರೆ, ಒಮ್ಮೆ ಬರವಣಿಗೆಯಿಂದಲೇ ಬಿಲೆನಿಯರ್ ಆದ ‘ಜೆ.ಕೆ.ರೋಲಿಂಗ್ಸ್’ ಅವರನ್ನು ನೆನೆಸಿಕೊಳ್ಳಿ. ಯಾಕಂದ್ರೆ ಅವರ ವಿಶ್ವವಿಖ್ಯಾತ “Harry Potter” ಕೃತಿ ಮೊದಲು 12 ಪ್ರಕಾಶನಗಳಿಂದ ಮುದ್ರಣ ಯೋಗ್ಯವಲ್ಲವೆಂದು ರಿಜೆಕ್ಟ್ ಆಗಿತ್ತು. ಆ ಸಮಯದಲ್ಲಿ ಅವರು ಗಂಡನಿಂದ ಡೈವೋರ್ಸ್ ಆಗಿದ್ದರು. ಜೊತೆಗೆ ಆರ್ಥಿಕವಾಗಿ ದಿವಾಳಿಯಾಗಿದ್ದರು…
ನೀವು ಸೋತಾಗ, ಸೋತು ಗೆದ್ದವರ ಕಡೆಗೆ ನೋಡಿ. ಸೋಲದೆ ಗೆದ್ದವರು ಯಾರು ಇಲ್ಲ. ಪ್ರಯತ್ನಶಾಲಿಗಳಿಗೆ ಸೋಲೆಂಬುದು ಸಿಗಲು ಸಾಧ್ಯವಿಲ್ಲ. ನಿಮ್ಮ ಮನಸ್ಥಿತಿಯನ್ನು ಬದಲಿಸಿ. ಆಮೇಲೆ ಪರಸ್ಥಿತಿಗಳು ತಾನಾಗಿಯೇ ಬದಲಾಗುತ್ತವೆ. ನಿಮ್ಮ ಕೊರತೆಗಳಿಗೆ ಕೊರಗದೆ ನಿಮ್ಮ ಗುರಿಯೆಡೆಗೆ ಗಮನ ಹರಿಸಿ. ಧೈರ್ಯವಾಗಿ ಮುನ್ನುಗ್ಗಿ. ಪ್ಲೀಸ್ ಗೆಳೆಯರೇ, ಸಣ್ಣಪುಟ್ಟ ಸಮಸ್ಯೆಗಳಿಗೆ ಹೆದರಿ ನಿಮ್ಮ ಗುರಿಯಿಂದ ಹಿಂದೆ ಸರಿಯಬೇಡಿ. ನೆಪಗಳನ್ನು ಹೇಳಿ ನಿಮಗೆ ನೀವೇ ವಂಚಿಸಿಕೊಳ್ಳಬೇಡಿ. ಪ್ಲೀಸ್ ಕುಂಟು ನೆಪಗಳನ್ನು ಹೇಳುವುದನ್ನು ನಿಲ್ಲಿಸಿ…
*ದುಡ್ಡೇ ಇಲ್ಲ ನಾರಾಯಣ ಮೂರ್ತಿ ಸರ್ ತರಹ ಬಂಗಾರ ಅಡಾ ಇಡೋಕೆ ಬಂಗಾರವೇ ಇಲ್ಲ ಇನ್ನೆಲ್ಲಿ ಏನು ಅಡಾ ಇಡಲಿ ಅನ್ನೋರು ನಮ್ ಸಂತೋಷ್ ಶೆಟ್ಟಿ ಸರ್ ನೆನಸಿಕೊಳ್ಳಿ. ಮತ್ತು ಅವರ ಮಾರ್ಗದರ್ಶನ ತಗೊಳ್ಳಿ ಏನನ್ನು ಅಡಾ ಇಡದೆ ಲಕ್ಷ ಲಕ್ಷ ಸಂಪಾದಿಸೋದು ಹೇಗೆ ಅನ್ನೋದನ್ನ ಕಲಿಸಿಕೊಡತಾರೆ.*
Modicare Anand
Contact No 7899920099
Find quality Manufacturers, Suppliers, Exporters, Importers, Buyers, Wholesalers, Products and Trade Leads from our award-winning International Trade Site. Import & Export on alibaba.com