03/01/2022
ಅಧಿಕ ರಕ್ತದೊತ್ತಡವು ಹಲವಾರು ವರ್ಷಗಳವರೆಗೆ ಯಾವ ಲಕ್ಷಣಗಳನ್ನೂ ತೋರಿಸದೇ ಇರಬಹುದು. ಕೆಲವೊಮ್ಮೆ ಬೇರೆ ಕಾರಣಗಳಿಗೆ ಪರೀಕ್ಷೆ ಮಾಡಿಸಿದಾಗ ರಕ್ತದೊತ್ತಡ ಹೆಚ್ಚಿರುವುದು ತಿಳಿಯುತ್ತದೆ. ಇದರ ಪ್ರಥಮ ಲಕ್ಷಣವೇ ಬೆಳಿಗ್ಗೆ ಏಳುವಾಗ ತಲೆನೋವು ಕಾಣಿಸಿಕೊಳ್ಳುವುದು, ಅದರಲ್ಲೂ ತಲೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುವುದು. ತಲೆಭಾರ, ತಲೆಸುತ್ತುವುದು, ಉಸಿರುಗಟ್ಟಿದಂತೆ ಆಗುವುದು, ನಿದ್ರಾಹೀನತೆ, ಆಯಾಸ, ಕಿವಿ ಮತ್ತು ಮುಖ ಕೆಂಪಾಗುವುದು, ಹೃದಯ ಬಡಿತ ಏರುವಿಕೆ, ಎದೆಯಲ್ಲಿ ಬಿಗಿತ, ಕೈಗಳು ಮತ್ತು ಭುಜಗಳಲ್ಲಿ ನೋವು, ಅಧಿಕ ಮೂತ್ರ ವಿಸರ್ಜನೆ ಮುಂತಾದವುಗಳು.
ಅಧಿಕ ರಕ್ತದೊತ್ತಡ ನಿರ್ಲಕ್ಷಿಸಿದರೆ ಕಣ್ಣು, ಹೃದಯ, ಮಿದುಳು ಮತ್ತು ಮೂತ್ರಪಿಂಡಗಳ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು. ಹೃದಯದ ವೈಫಲ್ಯ, ಹೃದಯಾಘಾತ, ಮೂತ್ರಪಿಂಡದ ಕಾಯಿಲೆ, ಮಿದುಳಿನಲ್ಲಿ ರಕ್ತಸ್ರಾವ, ಪಾರ್ಶ್ವವಾಯು, ಮೂರ್ಛೆರೋಗ ಮುಂತಾದವುಗಳಿಗೂ ಕಾರಣವಾಗಬಹುದು
*ಹೆಚ್ಚಿನ ಮಾಹಿತಿ ಮತ್ತು ಚಿಕಿತ್ಸೆಗಾಗಿ ಸಂಪರ್ಕಿಸಿ*
🩺🩺🩺🩺🩺🩺🩺🩺🩺🩺
𝗠𝗔𝗡𝗜𝗣𝗔𝗟 𝗧𝗛𝗘 𝗣𝗥𝗘𝗩𝗘𝗡𝗧𝗜𝗢𝗡 𝗖𝗘𝗡𝗧𝗥𝗘
No. 13/2, 13th Cross, Near K.K Function Hall, Hosahalli Main Road,
Padarayanapura, Bangalore- 560026. Phone : *080-26745577, 8749070012*