Dhrishti apnoka

Dhrishti apnoka Contact information, map and directions, contact form, opening hours, services, ratings, photos, videos and announcements from Dhrishti apnoka, Meditation Center, BTM layout, Bangalore.

08/07/2023

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌‌ ‌ ‌ ‌ ಅಧಿಕ ಮಾಸದಲ್ಲಿ ಯಾವ ದಾನ ಮಾಡಿದರೆ ಶ್ರೇಷ್ಠ ಫಲ? ಇಲ್ಲಿದೆ ವ್ರತಾಚರಣೆಯ ನಿಯಮಗಳು

ಈ ವರ್ಷ ಅಧಿಕ ಮಾಸ ಬಂದಿದೆ. ಇದು ಅಧಿಕ ಶ್ರಾವಣ ಮಾಸವಾಗಿದೆ. ಇದನ್ನು ‘ಮಲಮಾಸ’ ಅಂತಲೂ ಕರೆಯುವ ಪರಿಪಾಠ ಇದೆ. ಹಾಗೆ ನೋಡಿದರೆ ಪ್ರತಿ ತಿಂಗಳೂ ಸಂಕ್ರಮಣ ಆಗುತ್ತದೆ. ಮೇಷ, ವೃಷಭ, ಮಿಥುನ ಹೀಗೆ ಸಂಕ್ರಮಣ ಸಂಭವಿಸುತ್ತದೆ.

ಯಾವ ಮಾಸದಲ್ಲಿ ಸಂಕ್ರಮಣ ಆಗುವುದಿಲ್ಲವೋ ಅದನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಈ ಬಾರಿಯ ಅಧಿಕ ಶ್ರಾವಣ ಮಾಸವು ಜುಲೈ ತಿಂಗಳ 18ನೇ ತಾರೀಕಿನಿಂದ ಆಗಸ್ಟ್ 16ನೇ ತಾರೀಕಿನವರೆಗೂ ಇರುತ್ತದೆ. ಇನ್ನು ಪುರುಷೋತ್ತಮ ಸ್ವರೂಪಿಯಾದ ಆ ಪರಮಾತ್ಮನು ಈ ಮಾಸದ ನಿಯಾಮಕನಾಗುತ್ತಾನೆ. ಆದ್ದರಿಂದ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಈ ಅಧಿಕ ಮಾಸದಲ್ಲಿ ಮಂಗಳ ಕಾರ್ಯಗಳನ್ನು ಮಾಡುವಂತಿಲ್ಲ ಎಂದೂ ನಿಷೇಧ ಮಾಡಲಾಗಿದೆ. ಮದುವೆ, ಉಪನಯನಾದಿ ಕಾರ್ಯಕ್ರಮಗಳನ್ನು ಅಧಿಕ ಮಾಸ ಬಂದಾಗ ಮಾಡುವುದಿಲ್ಲ.
ಮೂವತ್ತಾಮೂರು ತಿಂಗಳಿಗೆ ಒಮ್ಮೆ ಅಧಿಕ ಮಾಸ ಬರುತ್ತದೆ. ಹೀಗೆ ಅಧಿಕ ಮಾಸ ಬಂದಾಗ ಕೆಲ ವಿಶಿಷ್ಟ ವ್ರತಗಳು, ಅನೇಕ ದಾನಗಳನ್ನು ಮಾಡಿದಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಹಾಗೆ ಹೇಳಿದ ವ್ರತ, ದಾನಗಳ ವಿವರ ಹೀಗಿವೆ:
ಉಪವಾಸ ವ್ರತ
ನಿರಾಹಾರ :- ಏನೂ ಆಹಾರ ಸೇವಿಸದೇ ಇರುವುದು
ಏಕಭುಕ್ತ :- ಹಗಲು ಒಂದು ಹೊತ್ತು ಮಾತ್ರ ಆಹಾರ ಸೇವನೆ ಮಾಡುವುದು
ನಕ್ತಭೋಜನ :- ಕೇವಲ ರಾತ್ರಿ ಒಂದು ಹೊತ್ತು ಮಾತ್ರ ಆಹಾರ ಸೇವನ
ಅಯಾಚಿತ:- ಏನು ದೊರೆಯುತ್ತದೋ ಅಷ್ಟನ್ನು ಮಾತ್ರ ಭುಂಜಿಸುವುದು, ಏನನ್ನೂ ಬೇಡುವಂತಿಲ್ಲ
ಧಾರಣ ಪಾರಣ :- ಇದರಲ್ಲಿ ಒಂದು ದಿನ ಊಟ, ಇನ್ನೊಂದು ದಿನ ಉಪವಾಸ ಹೀಗೆ ಮಾಸವಿಡೀ ಮಾಡುವುದು

ದಾನಗಳು:
– ಮಾಸ ಪೂರ್ತಿ ತಾಂಬೂಲ ದಾನ
– ಮಾಸ ಪೂರ್ತಿ ಗುರುಗಳು ಮತ್ತು ಗುರುಗಳ ಸನ್ನಿಧಿಯಲ್ಲಿ ಅಖಂಡ ದೀಪದಾನ
– ಪ್ರತಿ ದಿನ ಪ್ರಾತಃ ಕಾಲದಲ್ಲಿ ಗಂಗಾ ಮೊದಲಾದ ಮಹಾ ನದಿಗಳಲ್ಲಿ ಸ್ನಾನ
– ಪ್ರತಿ ದಿನ ಮೂವತ್ಮೂರು ಅಪೂಪ (ಅತಿರಸ ಅಥವಾ ಕಜ್ಜಾಯ) ದಾನ ಮಾಡಬೇಕು ಅಥವಾ ಈ ಮಾಸದಲ್ಲಿ ಒಂದು ದಿನವಾದರೂ ಮೂವತ್ಮೂರು ಅಪೂಪವನ್ನು ಪಾತ್ರೆ ಸಹಿತವಾಗಿ ಕೊಡಬೇಕು.
– ಈ ದಾನವನ್ನು ಅಧಿಕ ಮಾಸದಲ್ಲಿನ ಶುಕ್ಲ, ಕೃಷ್ಣ ಪಕ್ಷದ ದ್ವಾದಶಿ, ಹುಣ್ಣಿಮೆ, ಅಮಾವಾಸ್ಯೆ, ನವಮಿ, ಚತುರ್ದಶಿ ತಿಥಿಗಳಲ್ಲಿ, ವೈಧೃತಿ, ವ್ಯತೀಪಾತ ಯೋಗಗಳು ಇರುವಂಥ ದಿನದಂದು ಮಾಡಿದರೆ ಶ್ರೇಷ್ಠ.
‌ ಅಧಿಕಸ್ಯ ಅಧಿಕ ಫಲಂ ಎಂಬ ಮಾತಿದೆ. ಶುಭ ಅಥವಾ ಮಂಗಳ ಕಾರ್ಯಗಳನ್ನು ಹೊರತು ಪಡಿಸಿದಂತೆ ಮಾಡುವ ದಾನ ಮೊದಲಾದ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ. ಈ ದಾನ ಮಾಡುವ ಮುನ್ನ ಸಂಕಲ್ಪ ಮಾಡಿ, ಆ ನಂತರ ನೀಡಬೇಕು.

08/07/2023

ಸ್ತ್ರೀಯರು ಸುಲಭವಾಗಿ ಮಾಡಬಹುದಾದ ದಾನಗಳು.

1. ಮೂವತ್ಮೂರು ಶಂಖ ಚಕ್ರ ಪದ್ಮ ರಂಗೋಲಿ ವ್ರತ.
2. ಮೂವತ್ಮೂರು ಸ್ವಸ್ತಿಕ ರಂಗೋಲಿ ಶ್ರೀಕಾರ ರಂಗೋಲಿ ವ್ರತ. 3. ಮೂವತ್ಮೂರು ನಮಸ್ಕಾರ ವ್ರತ
4. ಮೂವತ್ಮೂರು ಗೆಜ್ಜೆ ಏರಿಸುವ ವ್ರತ
5. ಮೂವತ್ಮೂರು ತುಪ್ಪದ ಬತ್ತಿ ಹಚ್ಚುವ ವ್ರತ
6. ಮೂವತ್ಮೂರು ಹಾಡು ಹೇಳುತ್ತಾ ಭಜನೆ ಮಾಡುವುದು.
7. ಮೂವತ್ಮೂರು ಹೂವು ಏರಿಸುವುದು
8. ನಿತ್ಯವೂ ಲಕ್ಷ್ಮೀಶೋಭಾನ ಪಾರಾಯಣ
9. ಮೂವತ್ಮೂರು ಬೆಳ್ಳಿಯ ಆಕಳುಗಳ ದಾನ
10. ಮೂವತ್ಮೂರು ವಿಷ್ಣುಪಾದ ದಾನ
11. ಮೂವತ್ಮೂರು ಅರಿಷಣ ಕುಂಕುಮ ಬಟ್ಟಲು ದಾನ
12. ಮೂವತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವ್ರತ.
13. ಮೂವತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವ್ರತ.
14. ಒಂದು ವಟುವಿಗೆ ನಿತ್ಯ ಊಟ ಹಾಕುವ ವ್ರತ.
15. ಒಂದು ಮುತ್ತೈದೆಗೆ ನಿತ್ಯ ಹರಳು ಹಾಕಿ ಹೂವು ಮುಡಿಸುವ ವ್ರತ.
16. ಒಂದು ಬ್ರಾಹ್ಮಣ ಮುತ್ತೈದೆಗೆ ನಿತ್ಯ ತಾಂಬೂಲ ದಕ್ಷಿಣೆ ವ್ರತ.
17. ಒಂದು ಒಣಕೊಬ್ಬರಿ ಗಿಟುಕಿನಲ್ಲಿ ರಂಧ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಟುಕಿನ ರಂದ್ರ ಮುಚ್ಚಿ ತಾಂಬೂಲ ದಕ್ಷಿಣೆ ಸಹಿತ ದಾನ ಮಾಡಬೇಕು. (ಸಂತಾನ ಪ್ರಾಪ್ತಿಗೆ ).
18. ಮೂವತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ
19. ಮೂವತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಾಗ್ರಿ ದಾನ.
20. ಮೂವತ್ಮೂರು ಮರದ ಬಾಗಿನ ಸಹಿತ ಮೂವತ್ಮೂರು ದಂಪತಿ ಭೋಜನ.
21. ಮೂವತ್ಮೂರು ಗಣದ ಸೀರಿಯ ದಾನ.
22. ಮೂವತ್ಮೂರು ಜೊತೆ ದೀಪ ದಾನ

ಅಪೂಪದಾನ ವಿಶೇಷವಾದದ್ದು. ಅಂದೆ ಅಕ್ಕಿ ಬೆಲ್ಲ ತುಪ್ಪದಿಂದ ಮಾಡಿದ ಭಕ್ಷ್ಯ 33 ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಆಚಾರವಂತ ಬ್ರಾಹ್ಮಣನಿಗೆ ಅಥವಾ ಆಚಾರವಂತ ಅಳಿಯನಿಗೆ ದಾನ ಮಾಡಬೇಕು.
ಅನಾನಸ್ ಶ್ರೇಷ್ಠ. ಕರ್ಜಿಕಾಯಿ ಬೇಸನ್ ಲಾಡು ಅಥವಾ ನಿಮಗೆ ಏನು ಅನುಕೂಲ ಅದನ್ನು ಮಾಡಿ
ದಾನ ಮಾಡಿ.

ವಿಶೇಷ ವಿಷಯ... ದಯವಿಟ್ಟು ನಿಮ್ಮ ನಿಮ್ಮ ಶಕ್ತ್ಯಾನುಸಾರ ಯಾವುದೇ ದಾನಗಳಗಾಲಿ ಮಾಡಬೇಕು. ಮನೆಯಲ್ಲಿ ಇದ್ದವರ ಗೋಳಾಡಿಸಿ, ಹಣದ ಮುಗ್ಗಟ್ಟಿನಲ್ಲಿ ಸಿಕ್ಕಾಪಟ್ಟೆ ದೇಹವ ದಂಡಿಸಿ, ತೋರಿಕೆಗೆ ಮಾಡಬಾರದು ಅಂತ ಶಾಸ್ತ್ರ ಹೇಳುತ್ತದೆ. ಅನುಕೂಲ ಇದ್ದವರು ಖಂಡಿತ ಮಾಡಬೇಕು. ಆದರೆ ನೀವು ಏನೇ ದಾನ ಮಾಡಿದರೂ ಭಗವಂತನ ಮೂವತ್ಮೂರು ರೂಪಗಳ ಚಿಂತನೆ ಹಾಗೂ ಒಂದೊಂದು ರೂಪಗಳ ಅನುಸಂಧಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠ. ಹೆಣ್ಣುಮಕ್ಕಳು ವಿಶೇಷವಾಗಿ ಮದ್ವನಾಮ, ಶ್ರೀ ಹರಿಕಥಾಮೃತಸಾರ, ಶ್ರೀ ಲಕ್ಷ್ಮಿ ಶೋಭಾನ, ಹಿಂದಿನ ದಾಸರ ದೇವರ ನಾಮಗಳು, ತುಲಸಿ ಹಾಡುಗಳು ನಿತ್ಯವೂ ಹೇಳಿಕೊಂಡರೆ ಖಂಡಿತ ಭಗವಂತ ನಿಮ್ಮನ್ನ ಬಿಟ್ಟು ಹೋಗಲ್ಲ. ಸದಾ ನಿಮ್ಮ ಹೃದಯದಲ್ಲಿ ಇದ್ದು ಒಳ್ಳೆಯ ಸಾಧನೆ ಮಾಡಿಸುತ್ತಾನೆ.
ಪ್ರಯತ್ನ ಮಾಡಿ. ಮಾಡಿಸೋನು ಅವನು. ಆದರೂ ಮಾಡಿಸೋ ಮಹರಾಯ ಅಂತ ಪ್ರಾರ್ಥನೆ ಮಾಡೋಣ. ಎಸ್ ದಾಸ.

29/01/2023

Address

BTM Layout
Bangalore
560076

Website

Alerts

Be the first to know and let us send you an email when Dhrishti apnoka posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram