Shree kalabairava astrologer.

Shree kalabairava astrologer. Bhagavan Shree kalabairava swami namaha
astrology Consultation
Dr: VP Guruprasad astrologer

26/08/2021
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮ...
24/08/2021

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ‘ರಾಯರು, ಗುರುರಾಯರು, ಗುರುರಾಜರು’ ಎಂದು ಭಕ್ತಿಯಿಂದ ಕರೆಯುತ್ತಾರೆ.

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಗಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ಭವ್ಯ ಆರಾಧನೆ ನಡೆಯುತ್ತದೆ.

೧. ಪೂರ್ವಾಶ್ರಮ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ೧೫೯೫ ರಲ್ಲಿ ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದರು.

ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಷ್ಮೀ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕ್ರೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತಿದ್ದರು. ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಅಥವಾ ದೇವರ ನಾಮಸ್ಮರಣೆ ಬಿಡಲಿಲ್ಲ.

ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೇ ಗಂಧ ಅರಿಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ಪದ್ಧತಿಯ ಪ್ರಕಾರ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ಅಗ್ನಿ ಸೂಕ್ತ ಉಚ್ಚರಿಸುತ್ತ ಗಂಧ ತೇಯ್ದಿರುವುದಾಗಿ ಹೇಳಿ, ಅದರಿಂದಲೇ ಹೀಗಾಗಿರಬಹುದೆಂದು ಊಹಿಸಿದರು. ಮತ್ತು ವರುಣ ಮಂತ್ರವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಸ್ತೋತ್ರದ ಶಕ್ತಿ.

೨. ಸಂನ್ಯಾಸಾಶ್ರಮ
ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ದೇವರೇ ಬಂದು ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನೆಸಿ ನಕಾರತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ಸರಸ್ವತೀ ದೇವಿಯೇ ಸ್ವಪ್ನದಲ್ಲಿ ಕಂಡು ಸಂನ್ಯಾಸಾಶ್ರಮ ಸ್ವೀಕರಿಸಲು ಆಜ್ಞೆಯಿತ್ತಳು. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥನು ಫಾಲ್ಗುಣ ಶುಕ್ಲ ದ್ವಿತೀಯಾದಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು.

ಸಂನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವಸ್ಥೆಯಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೊಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರೂ ನನಗೆ ಮಹಾಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನಾದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೇ ವಿದ್ಯಾರ್ಥಿಯು ಮಹಾಪ್ರಸಾದವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

21/08/2021

ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ – ಭಾಗ ೧
ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ !

೧. ಉಪಾಯಪದ್ಧತಿಯ ತಿರುಳು

ಮಾನವನ ಸ್ಥೂಲದೇಹದಲ್ಲಿ ರಕ್ತಪರಿಚಲನ, ಶ್ವಸನ, ಪಚನ, ಮಜ್ಜೆ ಇತ್ಯಾದಿ ವಿವಿಧ ವ್ಯೂಹಗಳು ಕಾರ್ಯನಿರತವಾಗಿರುತ್ತವೆ. ಅವುಗಳಿಗೆ ಕಾರ್ಯವನ್ನು ಮಾಡಲು ಬೇಕಾಗುವ ಶಕ್ತಿಯನ್ನು ಪ್ರಾಣ ಶಕ್ತಿವಹನ ವ್ಯೂಹವು ಪೂರೈಸುತ್ತದೆ. ಅದರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಅಡಚಣೆ (ಅಡೆತಡೆ) ಬಂದಲ್ಲಿ ಸಂಬಂಧಿತ ಇಂದ್ರಿಯದ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ರೋಗಗಳು (ತೊಂದರೆ ಗಳು) ನಿರ್ಮಾಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಇಂದ್ರಿಯಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಆಯುರ್ವೇದಿಕ, ‘ಆಲೋಪೆಥಿಕ್ ಇತ್ಯಾದಿ ಔಷಧಿಗಳನ್ನು ಎಷ್ಟೇ ತೆಗೆದುಕೊಂಡರೂ ಅದರಿಂದ ಉಪಯೋಗವಾಗುವುದಿಲ್ಲ. ಅದಕ್ಕಾಗಿ ಪ್ರಾಣ ಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯನ್ನು ದೂರಗೊಳಿಸುವುದೇ ಏಕೈಕ ಮಾರ್ಗವಾಗಿರುತ್ತದೆ. ನಮ್ಮ ಕೈಬೆರಳುಗಳಿಂದ ಯಾವಾಗಲೂ ಪ್ರಾಣಶಕ್ತಿಯು ಹೊರಬೀಳುತ್ತಿರುತ್ತದೆ. ಅದನ್ನು ಬಳಸಿ ರೋಗಗಳನ್ನು ದೂರಗೊಳಿಸುವುದೇ ಈ ಪ್ರಾಣಶಕ್ತಿವಹನ ಉಪಾಯಪದ್ಧತಿಯ ತಿರುಳಾಗಿದೆ.

೨. ಅಧಿಕ ಪರಿಪೂರ್ಣ ಉಪಾಯಪದ್ಧತಿ !

ವ್ಯಕ್ತಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳು ವ್ಯಕ್ತಿಯಲ್ಲಿನ ರೋಗದ ಮೂಲ ಸ್ಥಾನವನ್ನು ಆಗಾಗ ಬದಲಾಯಿಸುತ್ತಿರುತ್ತವೆ. ಇಂತಹ ಸಮಯದಲ್ಲಿ ಬಿಂದುಒತ್ತಡ ಇತ್ಯಾದಿ ಉಪಾಯಪದ್ಧತಿಗಳಲ್ಲಿ ಹೇಳಲಾದ ರೋಗಕ್ಕೆ ಸಂಬಂಧಿಸಿದ ಬಿಂದುಗಳನ್ನು ಒತ್ತಿ ಯೋಗ್ಯ ಉಪಾಯ ಮಾಡಲು ಸಾಧ್ಯವಾಗುವುದಿಲ್ಲ. ಪ್ರಾಣಶಕ್ತಿವಹನ ವ್ಯೂಹದ ಉಪಾಯ ಪದ್ಧತಿಯಲ್ಲಿ ಪ್ರತಿಯೊಂದು ಸಲ ಅಡಚಣೆಗಳ ಸ್ಥಾನವನ್ನು ಹುಡುಕುವುದರಿಂದ ಯೋಗ್ಯ ಉಪಾಯ ಮಾಡಲು ಸಾಧ್ಯವಾಗುತ್ತದೆ.

೩. ಅಧಿಕ ಸ್ವಾವಲಂಬಿ ಉಪಾಯಪದ್ಧತಿ !

ಬರುವ ಭೀಕರ ಆಪತ್ಕಾಲದ ವಿಚಾರ ಮಾಡಿದರೆ ರೋಗನಿವಾರಣೆಗಾಗಿ ಸ್ವಾವಲಂಬಿಗಳಾಗಲು ಬಿಂದುಒತ್ತಡದ ಉಪಾಯ, ರಿಫ್ಲೆಕ್ಸಾಲಜಿ, ಪಿರಮಿಡ್ ಉಪಾಯ, ಆಯಸ್ಕಾಂತೀಯ ಉಪಾಯದಂತಹ ಉಪಾಯಪದ್ಧತಿಗಳು ಮಹತ್ವದ್ದಾಗಿವೆ. ಬಿಂದು ಒತ್ತಡ, ರಿಫ್ಲೆಕ್ಸಾಲಜಿ ಇತ್ಯಾದಿ ಉಪಾಯ ಪದ್ಧತಿಗಳಲ್ಲಿ ಪುಸ್ತಕ ಅಥವಾ ಅರಿತವರ ಸಹಾಯವು ಆವಶ್ಯಕವಾಗಿರುತ್ತದೆ. ಪಿರಮಿಡ್, ಆಯಸ್ಕಾಂತ ಇತ್ಯಾದಿ ಉಪಾಯಪದ್ಧತಿಗಳಲ್ಲಿ ಆಯಾ ಸಾಧನಗಳು ಆವಶ್ಯಕವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಯಾವುದೇ ಸಹಾಯವಿಲ್ಲದೇ ಮತ್ತು ಯಾವುದೇ ಸಾಧನಗಳ ಆವಶ್ಯಕತೆಯಿಲ್ಲದೇ ಪ್ರಾಣಶಕ್ತಿವಹನ ವ್ಯೂಹದ ಉಪಾಯ ಪದ್ಧತಿಯು ಅತ್ಯಂತ ಸ್ವಾವಲಂಬಿ

ಆಧ್ಯಾತ್ಮಿಕ ಉಪಾಯಗಳ ಹೊಸ ಹೊಸ ಪದ್ಧತಿಗಳ ವಿವೇಚನೆಯನ್ನು ಮಾಡುವ ಜಗತ್ತಿನ ಏಕೈಕ ಪರಾತ್ಪರ ಗುರು ಡಾ. ಆಠವಲೆ !

(ಪರಾತ್ಪರ ಗುರು) ಡಾ. ಆಠವಲೆ
ವ್ಯಕ್ತಿಗಾಗುವ ಶಾರೀರಿಕ ಮತ್ತು ಮಾನಸಿಕ ತೊಂದರೆಗಳ ಕಾರಣವು ಹೆಚ್ಚಿನಾಂಶ ಆಧ್ಯಾತ್ಮಿಕವಾಗಿರುತ್ತದೆ. ಅದರಲ್ಲಿನ ಪ್ರಮುಖ ಕಾರಣವೆಂದರೆ ಕೆಟ್ಟ ಶಕ್ತಿಗಳ ತೊಂದರೆಗಳು. ಈ ತೊಂದರೆಗಳ ನಿವಾರಣೆಗಾಗಿ ಇಂದಿನವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಉಪಾಯಗಳ ಅನೇಕ ಹೊಸ ಹೊಸ ಪದ್ಧತಿಗಳ ವಿವೇಚನೆಯನ್ನು ಮಾಡಿದ್ದಾರೆ, ಉದಾ. ದೇವತೆಗಳ ಒಂದರ ನಂತರ ಒಂದು ನಾಮಜಪ, ಖಾಲಿ ಪೆಟ್ಟಿಗೆಗಳ ಉಪಾಯ. ಈ ಉಪಾಯಪದ್ಧತಿಗಳಿಂದ ಸನಾತನದ ಸಾವಿರಾರು ಸಾಧಕರಿಗೆ ಲಾಭವಾಗುತ್ತಿರುವುದರಿಂದ ಈ ಪದ್ಧತಿಗಳು ಪ್ರಮಾಣೀಕರಿಸಿದ ಶಾಸ್ತ್ರಗಳೇ ಆಗಿವೆ. ಇವುಗಳಲ್ಲಿನ ಒಂದು ಪದ್ಧತಿ ಎಂದರೆ, ‘ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳ ಮೇಲಿನ ಉಪಾಯ. ೨೦೧೦ ರಿಂದ ಸಾವಿರಾರು ಸಾಧಕರು ಈ ಉಪಾಯಗಳ ಪ್ರಯೋಗ ಮಾಡಿ ಅವರಿಗೆ ಲಾಭವಾಗಿರುವುದು ದೃಢವಾದ ಮೇಲೆಯೇ ಈ ಉಪಾಯಪದ್ಧತಿಯ ಬಗ್ಗೆ ಈ ಗ್ರಂಥದ ಸಂಕಲನ ಮಾಡಲಾಗಿದೆ.

ಪ್ರಾಣಶಕ್ತಿ (ಚೇತನಾ) ವಹನ ಉಪಾಯಪದ್ಧತಿಯು ಹಿಂದೂ ಧರ್ಮದಲ್ಲಿನ ಜ್ಞಾನದ ಮೇಲಾಧರಿಸಿದ ಉಪಾಯಪದ್ಧತಿಯಾಗಿದೆ !

‘ಪ್ರಾಣಶಕ್ತಿ (ಚೇತನಾ)ಯು ಮನುಷ್ಯನಿಗೆ ಜೀವನದಾಯಿನಿ ಶಕ್ತಿಯಾಗಿದೆ. ಮನುಷ್ಯನ ರೋಗಗಳನ್ನು ಗುಣಪಡಿಸಲು ‘ಪಿರಮಿಡ್ ಉಪಾಯ, ‘ರೇಕಿ ಉಪಾಯ ಇಂತಹ ಪ್ರಚಲಿತ ಉಪಾಯ ಪದ್ಧತಿಗಳಲ್ಲಿಯೂ ಪ್ರಾಣಶಕ್ತಿಯನ್ನೇ ಉಪಯೋಗಿಸಲಾಗುತ್ತದೆ. ಈ ಗ್ರಂಥದಲ್ಲಿಯೂ ಪ್ರಾಣಶಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಉಪಯೋಗಿಸಿ ರೋಗಗಳನ್ನು ಗುಣಪಡಿಸುವುದರ ಹಿಂದಿನ ಶಾಸ್ತ್ರವನ್ನು ಹೇಳಲಾಗಿದೆ. ಈ ಉಪಾಯ ಪದ್ಧತಿಯಲ್ಲಿ ಕೈಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಮಾಡುವುದು ಮಹತ್ವ್ವದ ಘಟಕಗಳಾಗಿವೆ.
ಮಾನವನ ಐದು ಕೈಬೆರಳುಗಳು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚ ಮಹಾಭೂತಗಳನ್ನು ಪ್ರತಿನಿಧಿಸುತ್ತವೆ. ‘ಪ್ರತಿಯೊಂದು ಬೆರಳು ಮತ್ತು ಅದಕ್ಕೆ ಸಂಬಂಧಿಸಿದ ‘ಮಹಾಭೂತವನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಅದು ‘ಶಾರದಾತಿಲಕ (ಅಧ್ಯಾಯ ೨೩, ಶ್ಲೋಕ ೧೦೬ ರ ಸಂದರ್ಭದ ಟೀಕೆ) ಮತ್ತು ‘ಸ್ವರವಿಜ್ಞಾನ ಎಂಬ ಗ್ರಂಥದಲ್ಲಿ ನೀಡಲಾದ ಮಾಹಿತಿಯಂತಿದೆ.

ಮುದ್ರೆಯನ್ನು ಮಾಡಿ ಅದನ್ನು ಶರೀರದ ಕುಂಡಲಿನಿಚಕ್ರಗಳ ಸ್ಥಳದಲ್ಲಿ ಅಥವಾ ವಿವಿಧ ಅವಯವಗಳ ಸ್ಥಳದಲ್ಲಿ ‘ನ್ಯಾಸ ಮಾಡುವುದು ಪ್ರಾಣಶಕ್ತಿ (ಚೇತನಾ) ವಹನ ಪದ್ಧತಿಯ ಒಂದು ಭಾಗವಾಗಿದೆ. ‘ಪ್ರಾಚೀನ ಕಾಲದಿಂದಲೂ ಮಂತ್ರ ಯೋಗದಲ್ಲಿ ಮಾತೃಕಾನ್ಯಾಸವನ್ನು ಮಾಡಲು ಹೇಳಲಾಗಿದೆ. ಅದರಲ್ಲಿಯೂ ಐದು ಬೆರಳುಗಳು ಹಾಗೂ ಅಂಗೈಯಿಂದ ಶರೀರದ ವಿವಿಧ ಅವಯವಗಳ ಸ್ಥಳದಲ್ಲಿ ನ್ಯಾಸವನ್ನು ಮಾಡಲು ಹೇಳಲಾಗಿದೆ. (ಆಧಾರ ಗ್ರಂಥ : ಭಾರತೀಯ ಸಂಸ್ಕೃತಿಕೋಶ, ಖಂಡ ೪ ಮತ್ತು ೭)

ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ. ಅದರಲ್ಲಿ ಪ್ರಯೋಗಶೀಲತೆ ಮತ್ತು ಸೃಜನಶೀಲತೆಯಿದೆ. ಹಿಂದೂ ಧರ್ಮದಲ್ಲಿನ ಜ್ಞಾನವನ್ನು ಉಪಯೋಗಿ ಸುವಾಗ ನಾವು ಜಿಜ್ಞಾಸು ವೃತ್ತಿಯಿಂದ ಅಧ್ಯಯನ ಮಾಡಿದೆವು. ಪ್ರಾಣಶಕ್ತಿ (ಚೇತನಾ) ವಹನವ್ಯೂಹದಲ್ಲಿನ ಅಡಚಣೆಗಳನ್ನು ಹುಡುಕುವ ಪದ್ಧತಿ, ಹಾಗೆಯೇ ವಿವಿಧ ಮುದ್ರೆಗಳು, ನ್ಯಾಸ ಮತ್ತು ನಾಮಜಪದ ಸಂದರ್ಭದಲ್ಲಿ ಸ್ವತಃ ಪ್ರಯೋಗಗಳನ್ನು ಮಾಡಿ ಅನುಭವವನ್ನು ಪಡೆದುಕೊಂಡೆವು. ಅನೇಕ ಸಾಧಕರೂ ಈ ಉಪಾಯಪದ್ಧತಿಯ ಪ್ರಯೋಗವನ್ನು ಮಾಡಿದರು. ಈ ಉಪಾಯ ಪದ್ಧತಿಯ ಲಾಭವು ಗಮನಕ್ಕೆ ಬಂದ ಮೇಲೆ ಈಗ ಗ್ರಂಥದ ಮಾಧ್ಯಮದಿಂದ ಈ ಉಪಾಯ ಪದ್ಧತಿಯನ್ನು ಎಲ್ಲರೆದುರು ಪ್ರಸ್ತುತ ಪಡಿಸುತ್ತಿದ್ದೇವೆ. ವಾಚಕರೂ ಈ ಉಪಾಯಪದ್ಧತಿಯ ಸಂದರ್ಭದಲ್ಲಿ ಏನಾದರೂ ವೈಶಿಷ್ಟ್ಯಪೂರ್ಣ ಅನುಭವಗಳು ಬಂದಲ್ಲಿ ನಮಗೆ ತಿಳಿಸಬೇಕು. ‘ಈಶ್ವರನೇ ಈ ಕಾರ್ಯವನ್ನು ಮಾಡಿಸಿಕೊಂಡನು ಅದಕ್ಕಾಗಿ ಈಶ್ವರನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸು ತ್ತೇನೆ. – ಡಾ. ಆಠವಲೆ (೨೮.೧೦.೨೦೧೫)

೧. ಪ್ರಾಣಶಕ್ತಿ ಪ್ರವಾಹದಲ್ಲಿನ ಅಡೆತಡೆಗಳನ್ನು ಹುಡುಕುವುದು (ನ್ಯಾಸ ಮಾಡಲು ಸ್ಥಾನವನ್ನು ಹುಡುಕುವುದು)

೧ ಅ. ಕೆಟ್ಟ ಶಕ್ತಿಗಳ ತೊಂದರೆಯಿರುವವರು ನಾಮಜಪ ಮಾಡುತ್ತಾ ಸ್ಥಾನವನ್ನು ಹುಡುಕಬೇಕು ! :

ಬೆರಳುಗಳಿಂದ ಸ್ಥಾನವನ್ನು ಹುಡುಕುವಾಗ ‘ಶ್ವಾಸ ಎಲ್ಲಿ ನಿಲ್ಲುತ್ತದೆ ಎಂಬುದರ ಕಡೆ ಗಮನ ಕೊಡುವುದು ಮಹತ್ವದ್ದಾಗಿರುತ್ತದೆ. ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ನಾಮಜಪ ಮಾಡುತ್ತಾ ಪ್ರಯೋಗ ಮಾಡಬೇಕು; ಏಕೆಂದರೆ ಸ್ಥಾನವನ್ನು ಹುಡುಕುವಾಗ ಅವರ ಕೈಯ ಬೆರಳುಗಳಿಂದ ತ್ರಾಸದಾಯಕ ಶಕ್ತಿಯು ಅವರ ಶರೀರದಲ್ಲಿ ಹೋಗುವ ಸಾಧ್ಯತೆಯಿರುತ್ತದೆ.

೧ ಆ. ಕುಂಡಲಿನಿಚಕ್ರಗಳ ಸ್ಥಾನದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ನ್ಯಾಸ ಮಾಡಲು ಸ್ಥಾನವನ್ನು ಹುಡುಕುವುದು :

ಶ್ವಾಸದ ಕಡೆಗೆ ಗಮನವಿಟ್ಟು ತೊಂದರೆಗೆ ಸಂಬಂಧಿಸಿದ ಇಂದ್ರಿಯವು ಯಾವ ಕುಂಡಲಿನಿ ಚಕ್ರಕ್ಕೆ ಸಂಬಂಧಿಸಿದೆಯೋ ಅದರ ಸಮೀಪದ ಭಾಗದಲ್ಲಿ ಬೆರಳುಗಳನ್ನು ಮೇಲೆ ಅಥವಾ ಕೆಳಗೆ ಒಯ್ಯುವಾಗ ಶ್ವಾಸ ಸಿಲುಕಿ ಕೊಂಡಂತಾಗುತ್ತದೆ. ಇದಕ್ಕಾಗಿ ಹೆಬ್ಬೆರಳನ್ನು ಬಿಟ್ಟು ಸಡಿಲವಾಗಿಟ್ಟ ಕೈಯ ಇತರ ಬೆರಳುಗಳನ್ನು ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಒಯ್ಯಬೇಕು. ಆದರೆ ಏನೂ ಅರಿವಾಗದಿದ್ದರೆ ಸ್ವಾಧಿಷ್ಠಾನದಿಂದ ಸಹಸ್ರಾರದವರೆಗೆ ಪ್ರತಿಯೊಂದು ಚಕ್ರದ ಸಮೀಪದ ಭಾಗದಲ್ಲಿ ಬೆರಳುಗಳನ್ನು ಮೇಲೆ ಮತ್ತು ಕೆಳಗೆ ಹೀಗೆ ಒಯ್ಯಬೇಕು. ಹೀಗೆ ಮಾಡುವಾಗ ಯಾವ ಚಕ್ರದ ಸ್ಥಾನದಲ್ಲಿ ಅಥವಾ ಅದರ ಸಮೀಪ ಶ್ವಾಸ ಸಿಲುಕಿದಂತಾಗುವುದೋ, ಅದು ನ್ಯಾಸ ಮಾಡುವ ಸ್ಥಾನವಾಗಿರುತ್ತದೆ.

೧ ಇ. ಶರೀರದ ಎಲ್ಲ ಭಾಗಗಳ ಮೇಲೆ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ನ್ಯಾಸವನ್ನು ಮಾಡಲು ಸ್ಥಾನವನ್ನು ಹುಡುಕುವುದು :

ಕೆಲವೊಮ್ಮೆ ಕುಂಡಲಿನಿ ಚಕ್ರದ ಸ್ಥಾನದಲ್ಲಿ ಅಡೆತಡೆ ಇದ್ದರೂ ಅಥವಾ ಇಲ್ಲದಿದ್ದರೂ, ಶರೀರದಲ್ಲಿರುವ ವಿವಿಧ ನಾಡಿಗಳಲ್ಲೂ ಅಡಚಣೆಗಳು ಇರುತ್ತವೆ. ಆದ್ದರಿಂದ ಅವುಗಳಿಗೆ ಸಂಬಂಧಪಟ್ಟ ಇಂದ್ರಿಯಗಳಲ್ಲಿ ತೊಂದರೆಯ ಅರಿವಾಗುತ್ತದೆ, ಉದಾ. ಏದುಸಿರು ಬರುವುದು. ಇಂತಹ ಸಮಯದಲ್ಲಿ ನಾಡಿಗಳಲ್ಲಿನ ಅಡಚಣೆಗಳನ್ನು ಹುಡುಕಲು ಚಕ್ರದ ಸ್ಥಾನಗಳನ್ನು ಬಿಟ್ಟು ಶರೀರದ ಇತರ ಕಡೆಗಳಲ್ಲಿ, ಅಂದರೆ ತಲೆ, ಕುತ್ತಿಗೆ, ಎದೆ, ಹೊಟ್ಟೆ, ಕೈ, ಕಾಲು ಇತ್ಯಾದಿ ಎಲ್ಲ ಭಾಗಗಳ ಮೇಲೆ ಎಲ್ಲ ಕಡೆಗಳಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ‘ಎಲ್ಲಿಯಾದರೂ ಅಡಚಣೆಗಳಿವೆಯೇ ? ಎಂದು ಹುಡುಕಬೇಕು.

೧ ಈ. ಸ್ಥಾನವನ್ನು ಹುಡುಕುವಾಗ ಯಾವ ಸ್ಥಳದಲ್ಲಿ ತೊಂದರೆಯ ಪ್ರಕಟೀಕರಣದ ಲಕ್ಷಣಗಳು ಕಂಡುಬರುತ್ತವೆಯೋ, ಆ ಸ್ಥಳವೂ ನ್ಯಾಸ ಮಾಡಲು ಯೋಗ್ಯವಾಗಿರುತ್ತದೆ :

ಸ್ಥಾನವನ್ನು ಹುಡುಕುವಾಗ ಕೆಲವೊಮ್ಮೆ ಆಧ್ಯಾತ್ಮಿಕ ಉಪಾಯಗಳೂ ಆಗುತ್ತವೆ. ಆಧ್ಯಾತ್ಮಿಕ ಉಪಾಯ ವಾದುದರಿಂದ ತೊಂದರೆಯ ಪ್ರಕಟೀಕರಣದ ಲಕ್ಷಣಗಳೂ (ಉದಾ. ಆಕಳಿಕೆ, ತೇಗು, ಚರ್ಮದ ಮೇಲೆ ತ್ರಾಸದಾಯಕ ಸಂವೇದನೆಗಳ ಅರಿವಾಗುವುದು) ಅರಿವಾಗಬಹುದು. ಹೀಗಾದಲ್ಲಿ, ಆ ಸ್ಥಾನವೂ ನ್ಯಾಸ ಮಾಡಲು ಯೋಗ್ಯವಾಗಿದೆ ಎಂದು ತಿಳಿದುಕೊಳ್ಳಬೇಕು.

೧ ಉ. ಬಲಗೈಯ ಬೆರಳುಗಳಿಂದ ಸ್ಥಾನ ಸಿಗದಿದ್ದಲ್ಲಿ ಎಡಗೈಯ ಬೆರಳುಗಳಿಂದ ಸ್ಥಾನವನ್ನು ಹುಡುಕಬೇಕು.

೧ ಊ. ಎರಡು ಕೈಗಳ ಬೆರಳುಗಳಿಂದ ಸ್ಥಾನವನ್ನು ಹುಡುಕುವುದು :

ಒಂದು ಕೈಯ ಬೆರಳುಗಳಿಂದ ಕುಂಡಲಿನಿ ಚಕ್ರಗಳಲ್ಲಿನ ಅಥವಾ ಶರೀರದ ಇತರ ಸ್ಥಾನಗಳಲ್ಲಿರುವ ಪ್ರಾಣಶಕ್ತಿ ವಹನದ ಪ್ರವಾಹದಲ್ಲಿನ ಅಡಚಣೆ ಕಂಡು ಬರದಿದ್ದಲ್ಲಿ, ಒಂದು ಕೈಯ ಹಿಂಭಾಗದ ಮೇಲೆ ಇನ್ನೊಂದು ಕೈಯ ಅಂಗೈಯನ್ನು ಇಟ್ಟು, ಎರಡು ಕೈಗಳ ಬೆರಳುಗಳಿಂದ ಸ್ಥಾನವನ್ನು ಹುಡುಕಬೇಕು ಎರಡು ಕೈಗಳ ಬೆರಳುಗಳಿಂದ ಪ್ರಾಣಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವುದರಿಂದ ಅಡಚಣೆಯ ಪ್ರಮಾಣ ಕಡಿಮೆಯಿದ್ದರೂ, ಅಡಚಣೆಯ ಸ್ಥಾನ ಗಮನಕ್ಕೆ ಬರುತ್ತದೆ ಮತ್ತು ಆ ಸ್ಥಾನದ ಮೇಲೆ ಉಪಾಯವನ್ನು ಮಾಡಬಹುದು.

೧ ಎ. ಸ್ಥಾನವನ್ನು ಹುಡುಕಲು ಕೈಗಳ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯುವಾಗ ಕೆಲವೊಮ್ಮೆ ಅಸಹನೀಯ ತೊಂದರೆಯಾಗುವುದು :

ಸ್ಥಾನವನ್ನು ಹುಡುಕಲು ಕೈಗಳ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯುವಾಗ ಕೆಲವೊಮ್ಮೆ ವಾಂತಿ ಬಂದಂತಾಗುವುದು, ಉಸಿರು ಕಟ್ಟುವುದು, ಇಂತಹ ಅಸಹನೀಯ ತೊಂದರೆಗಳಾಗುತ್ತವೆ. ಈ ತೊಂದರೆಗಳು ಅಲ್ಲಿನ ಇಂದ್ರಿಯದ ಚಲನ ವಲನದ ನೈಸರ್ಗಿಕ ದಿಕ್ಕಿನ ಬದಲು ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಿದುದರಿಂದ ಆಗುತ್ತದೆ. ಅದರ ಒಂದು ಉದಾಹರಣೆ ಹೀಗಿದೆ – ದೊಡ್ಡ ಕರುಳಿನ ಚಲನವಲನದ ದಿಕ್ಕು ಹೊಟ್ಟೆಯ ಬಲಬದಿಯ ಕೆಳಗಿನ ಜಾಗದಿಂದ ನೇರವಾಗಿ ಮೇಲೆ ಪಕ್ಕೆಲುಬಿನ ವರೆಗೆ, ಅಲ್ಲಿಂದ ಎಡಬದಿಯ ಪಕ್ಕೆಲುಬಿನವರೆಗೆ ಮತ್ತು ಅಲ್ಲಿಂದ ಕೆಳಗೆ ಹೊಟ್ಟೆಯ ಎಡಬದಿಯ ಕೆಳಗಿನ ದಿಕ್ಕಿನೆಡೆಗೆ ಇರುತ್ತದೆ. ಇದರ ವಿರುದ್ಧವಾಗಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದರೆ ಅಸಹನೀಯ ತೊಂದರೆಯಾಗುತ್ತದೆ. ಇಂತಹ ತೊಂದರೆಯಾದರೆ ಆ ದಿಕ್ಕು ತಪ್ಪಾಗಿದೆ ಎಂದು ತಿಳಿದುಕೊಳ್ಳಬೇಕು.

ಟಿಪ್ಪಣಿ : ಇಲ್ಲಿಯವರೆಗೆ ನೋಡಿದ ನ್ಯಾಸ ಸ್ಥಾನ, ಮುದ್ರೆ ಮತ್ತು ನಾಮಜಪ ಸ್ವತಃ ಹುಡುಕಲು ಸಾಧ್ಯವಾಗದಿದ್ದರೆ ಯಾವ ಉಪಾಯ ಮಾಡಬೇಕೆಂಬುದನ್ನೂ ಗ್ರಂಥದಲ್ಲಿ ನೀಡಿದ್ದಾರೆ.

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೨

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೩

(ಆಧಾರ : ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ)

ಸಂತ ಮಹಾತ್ಮರು, ಜ್ಯೋತಿಷ್ಯರು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ. ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ರಕ್ಷಣೆಯನ್ನೂ ಮಾಡುವುದು ದೊಡ್ಡ ಸವಾಲೇ ಆಗಿರುತ್ತದೆ ಆಪತ್ಕಾಲದ ಸುಳಿಯಲ್ಲಿ ಸಂಪರ್ಕ ಕಡಿದುಕೊಳ್ಳುವುದರಿಂದ ರೋಗಿಯನ್ನು ಆಸ್ಪತ್ರೆಗೆ ಒಯ್ಯುವುದು, ವೈದ್ಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಪೇಟೆಯಲ್ಲಿ ಔಷಧಿ ದೊರೆಯುವುದು ಸಹ ಕಠಿಣವಾಗುತ್ತದೆ ಆಪತ್ಕಾಲದಲ್ಲಿ ಬಲಿಯಾಗುವ ರೋಗಗಳನ್ನು ಎದುರಿಸುವ ಪೂರ್ವ ಸಿದ್ಧತೆಯ ಒಂದು ಭಾಗವೆಂದು ಸನಾತನ ಸಂಸ್ಥೆಯು ‘ಭಾವಿ ಆಪತ್ಕಾಲದ ಸಂಜೀವಿನಿ’ ಈ ಗ್ರಂಥಮಾಲಿಕೆಯನ್ನು ತಯಾರಿಸುತ್ತಿದೆ. ಈ ಮಾಲಿಕೆಯಲ್ಲಿನ ೫ ಗ್ರಂಥಗಳು ಇಲ್ಲಿಯವರೆಗೆ ಪ್ರಕಾಶನಗೊಂಡಿವೆ. ಈ ಮಾಲಿಕೆಯಲ್ಲಿನ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಎಂಬ ಹೊಸ ಗ್ರಂಥದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ.

ಈ ಉಪಾಯಪದ್ಧತಿಯು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ಎಂದಿಗೂ ಉಪಯುಕ್ತವಾಗಿದೆ. ವಾಚಕರು ಈಗಿನಿಂದಲೇ ಈ ಉಪಾಯ ಮಾಡಿ ನೋಡಬೇಕು. ಈ ರೀತಿ ಮಾಡುವುದರಿಂದ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಅಭ್ಯಾಸವಾಗುವುದು ಮತ್ತು ಅದರಲ್ಲಿನ ಸೂಕ್ಷ್ಮ ವಿಷಯಗಳು ಸಹ ಗಮನಕ್ಕೆ ಬರುವವು. ಇದರಿಂದ ಆಪತ್ಕಾಲದಲ್ಲಿ ಬರುವ ರೋಗಗಳನ್ನು ಪ್ರತ್ಯಕ್ಷ ಎದುರಿಸಲು ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುವುದು. ಈ ವಿಷಯದಿಂದ ವಾಚಕರಿಗೆ ಉಪಾಯಪದ್ಧತಿಯ ಪರಿಚಯವಾಗುತ್ತದೆ. ಸವಿಸ್ತಾರ ಮಾಹಿತಿಯನ್ನು ಗ್ರಂಥದಲ್ಲಿ ನೀಡಲಾಗಿದೆ. ಆ ಗ್ರಂಥವನ್ನು ವಾಚಕರು ಅವಶ್ಯವಾಗಿ ಸಂಗ್ರಹಿಸಿಡಬೇಕು.

Astrology Consultation
20/08/2021

Astrology Consultation

ಭಗವಾನ ಶ್ರೀಕೃಷ್ಣನ ಅಸ್ತಿತ್ವದಿಂದ ಪುನೀತವಾಗಿರುವ ಕೆಲವು ಕ್ಷೇತ್ರಗಳ ಛಾಯಾಚಿತ್ರಮಯ ದರ್ಶನ !ಶ್ರೀಕೃಷ್ಣನಂತೆ ಒಬ್ಬ ಸಖಾ, ಗುರು, ಪಾಲಕ ಯಾರು ಇಲ...
19/08/2021

ಭಗವಾನ ಶ್ರೀಕೃಷ್ಣನ ಅಸ್ತಿತ್ವದಿಂದ ಪುನೀತವಾಗಿರುವ ಕೆಲವು ಕ್ಷೇತ್ರಗಳ ಛಾಯಾಚಿತ್ರಮಯ ದರ್ಶನ !
ಶ್ರೀಕೃಷ್ಣನಂತೆ ಒಬ್ಬ ಸಖಾ, ಗುರು, ಪಾಲಕ ಯಾರು ಇಲ್ಲ; ಈ ಸತ್ಯವನ್ನು ಅರಿತವನೇ ನಿಜವಾದ ಭಕ್ತ! ಭಗವಾನ್ ಶ್ರೀಕೃಷ್ಣನಿಗೆ ಸಂಪೂರ್ಣವಾಗಿ ಶರಣಾದ ಭಕ್ತನು ಈ ಸಂಸಾರದಿಂದ ಮುಕ್ತಿಯನ್ನು ಹೊಂದುತ್ತಾನೆ. ಶ್ರೀಕೃಷ್ಣನ ಬಗ್ಗೆ ಉತ್ಕಟ ಭಾವವನ್ನು ತಮ್ಮಲ್ಲಿ ಬೆಳೆಸಲು ಅವನ ಅವತಾರದ ಸಾನಿಧ್ಯದಿಂದ ಪಾವನವಾಗಿರುವ ದೈವೀ ಕ್ಷೇತ್ರಗಳಾದ ಗೋಕುಲ, ವೃಂದಾವನ ಮತ್ತು ದ್ವಾರಕೆಯ ಛಾಯಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಈ ಚಿತ್ರಗಳ ನೋಡುವಾಗ ಮನಸ್ಸಿನಲ್ಲಿ ಕೃತಜ್ಞತೆ ಇಟ್ಟುಕೊಂಡು ಶ್ರೀ ಕೃಷ್ಣನ ಅಸ್ತಿತ್ವವನ್ನು ಅನುಭವಿಸೋಣ!

ಜಗದ್ಗುರು ಶ್ರೀಕೃಷ್ಣನು ಸಾಕ್ಷಾತ್ ಪೂರ್ಣಾವತಾರ |
ಭಕ್ತಿ, ಜ್ಞಾನ ಮತ್ತು ಕರ್ಮ ಇವುಗಳ ಪರಿಪೂರ್ಣ ಭಂಡಾರ ||

ಶ್ರೀಕೃಷ್ಣನ ಬಾಲ ಲೀಲೆಗಳ ಆನಂದವನ್ನು ಪಡೆದ ಗೋಕುಲ !

‘ಮಾಧವ ಕುಂಜ ಗಲಿ’ (ಇಲ್ಲಿ ಕೆಲವೊಮ್ಮೆ ಶ್ರೀ ಕೃಷ್ಣನು ಅವನ ಗೆಳೆಯರೊಂದಿಗೆ ಕದ್ದು ತಂದ ಬೆಣ್ಣೆಯನ್ನು ಸವಿಯಲು ಬರುತ್ತಿದ್ದರೆ ಕೆಲವೊಮ್ಮೆ ಇಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದ)

ಶ್ರೀ ಕೃಷ್ಣನ ಭಕ್ತಿರಸದಲ್ಲಿ ನೆಂದು ಸಂಪೂರ್ಣ ಕೃಷ್ಣಮಯವಾಗಿರುವ ತೀರ್ಥಕ್ಷೇತ್ರ : ವೃಂದಾವನ !

ಕೇಶವನ ಮಧುರ ಕೊಳಲಿನ ಇಂಪಾದ ದನಿಯನ್ನು ಕೇಳಲು |
ಇಲ್ಲಿ ಬರುವರು ಗೋಪ-ಗೋಪಿಕೆಯರೊಂದಿಗೆ ಪ್ರಾಣಿ-ಪಕ್ಷಿಗಳು ||

ಶ್ರೀ ಕೃಷ್ಣನು ತನ್ನ ಮುರಳೀಧರ ರೂಪದ ದರ್ಶನವನ್ನು ನೀಡುತ್ತಿದ್ದ ವಟವೃಕ್ಷ, ಬನ್ಸಿವಟ್.

ರಾಸಲೀಲೆಯ ಮುಖ್ಯ ಸ್ಥಳ. ಇಲ್ಲಿ ಇಂದಿಗೂ ಪ್ರತಿ ರಾತ್ರಿ ಶ್ರೀ ಕೃಷ್ಣಾ ಮತ್ತು ಗೋಪಿಕೆಯರ ರಾಸಲೀಲೆ ನಡೆಯುತ್ತದೆ.

ಶ್ರೀಹರಿಯ ಅಸ್ತಿತ್ವವನ್ನು ಅನುಭವಿಸೋಣ ದ್ವಾರಿಕೆಯಲ್ಲಿ !

ವಿಶ್ವಕರ್ಮ ದೇವರು, ಒಂದೇ ರಾತ್ರಿಯೊಳಗೆ ೪ ವೇದಗಳನ್ನು ಪಠಿಸಿ ಶ್ರೀ ಕೃಷ್ಣನ ಈ ಭವ್ಯ ದೇವಸ್ಥಾನವನ್ನು ಕಟ್ಟಿದರು. ಈ ದೇವಸ್ಥಾನಕ್ಕೆ ೫೦೦೦ ವರ್ಷಗಳ ಇತಿಹಾಸವಿದೆ.

18/08/2021

ವರಮಹಾಲಕ್ಷ್ಮಿ ವ್ರತದ ಹಿನ್ನೆಲೆ

ಕೈಲಾಸದಲ್ಲಿ ಶಿವ ಪಾರ್ವತಿಯ ನಡುವಿನ ಸಂವಾದ -
ಪಾರ್ವತಿದೇವಿಯು ಶಿವನಲ್ಲಿ ಈ ರೀತಿ ಕೇಳುತ್ತಾಳೆ - 'ಲೋಕದಲ್ಲಿ ಯಾವ ವ್ರತದಿಂದ ಎಲ್ಲ ಕಷ್ಟಗಳು ಪರಿಹಾರವಾಗಲು ಸಾಧ್ಯವಿದೆಯೋ, ಯಾವ ವ್ರತದಿಂದ ಸರ್ವ ಸಂಪತ್ತುಗಳು ಪ್ರಾಪ್ತವಾಗಲು ಸಾಧ್ಯವಿದೆಯೋ, ಯಾವುದೇ ವ್ರತವೇನಾದರೂ ಇದ್ದರೆ, ಆ ವ್ರತದ ಬಗ್ಗೆ ತಿಳಿಸುವ ದಯೆ ಮಾಡಿ'. ಈ ಕೋರಿಕೆಯನ್ನು ಆಲಿಸಿದ ಶಂಕರನು ಪಾರ್ವತಿದೇವಿಗೆ ಮುಂದಿನ ಕಥೆಯನ್ನು ಹೇಳುತ್ತಾನೆ.
ಹಿಂದೊಮ್ಮೆ ಪುರಾಣಕಾಲದಲ್ಲಿ ಕುಂಡಿನಾಪುರ ಎಂಬ ಸಂಪದ್ಭರಿತವಾದ ಊರಿನಲ್ಲಿ ಚಾರುಮತಿ ಎಂಬ ಓರ್ವ ಬ್ರಾಹ್ಮಣ ಸ್ತ್ರೀಯು ಅವಳ ಪತಿಯೊಂದಿಗೆ ವಾಸಿಸುತ್ತಾಳೆ. ಮನೆಯಲ್ಲಿ ಕಡು ಬಡತನವಿದ್ದರೂ ಚಾರುಮತಿಯು ಭಕ್ತಿಯಲ್ಲಿ ಶ್ರೀಮಂತಳಾಗಿದ್ದಳು. ಅವಳ ಅನನ್ಯ ಭಕ್ತಿಗೆ ಪ್ರಸನ್ನಳಾದ ಶ್ರೀ ವರಮಹಾಲಕ್ಷ್ಮಿ ದೇವಿಯು ಅವಳ ಕನಸಿನಲ್ಲಿ ದರ್ಶನವನ್ನು ನೀಡಿ ಮುಂದಿನ ವರವನ್ನಿತ್ತಳು. 'ಶ್ರಾವಣ ಮಾಸದ ಹುಣ್ಣಿಮೆಯ ಹತ್ತಿರದ ಶುಕ್ರವಾರದಂದು (ಅಂದರೆ ೨ ನೇ ಶುಕ್ರವಾರದಂದು) ಯಾರು ಈ ವ್ರತವನ್ನು ಭಕ್ತಿ ಭಾವದಿಂದ ಆಚರಿಸಿ ಏನನ್ನೂ ಬೇಡಿದರೆ, ಅವನಿಗೆ ಅದು ಪ್ರಾಪ್ತವಾಗುತ್ತದೆ. ಆ ದಿನ ಸಂಜೆ ನಾನು ಭೂಲೋಕಕ್ಕೆ ಇಳಿದು ಬರುವೆನು. ಆ ಸಮಯದಲ್ಲಿ ಯಾರ ಮನೆಯ ಬಾಗಿಲಿನಲ್ಲಿ ದೀಪ ಬೆಳಗಿಸಿ ನನ್ನನ್ನು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆಯೋ ಅವರ ಮನೆಯಲ್ಲಿ ನಾನು ನೆಲೆಸಿ ಸಕಲ ಸಂಪತ್ತುಗಳನ್ನು ನೀಡುವೆನು 'ಎಂದು ಹೇಳಿ ದೇವಿ ವರಮಹಾಲಕ್ಷ್ಮಿಯು ಅದೃಶ್ಯಳಾದಳು.
ತನಗೆ ದೇವಿ ನೀಡಿದ ದರ್ಶನದ ಬಗ್ಗೆಯೂ, ವರದಿಯ ಬಗ್ಗೆ ಚಾರುಮತಿ ಬೆಳಗಾಗುತ್ತಲೇ ಊರಿನವರೆಲ್ಲರಿಗೂ ಹೇಳುತ್ತಾಳೆ. ಇವಳ ಮಾತನ್ನು ಕೇಳಿದ ಊರಿನವರು 'ಚಾರುಮತಿಗೆ ಭ್ರಮೆಯಾಗಿದ್ದಾರೆ, ಬುದ್ಧಿ ಭ್ರಷ್ಟವಾಗಿದೆ' ಎಂದು ಹೇಳಿ ಹೀಯಾಳಿಸುತ್ತಾರೆ. ಆದರೆ ಅಂದು ಶ್ರಾವಣ ಮಾಸದ ಎರಡನೇ ಶುಕ್ರವಾರವಾಗಿತ್ತು. ಚಾರುಮತಿಯು ದೇವಿಯ ಆಜ್ಞೆಯಂತೆ ಮನೆಯನ್ನು ಶುಚಿಗೊಳಿಸಿ, ದೀಪ ಬೆಳಗಿಸಿ, ಮನೆಯನ್ನು ಯಥಾ ಶಕ್ತಿ ದೀಪಗಳಿಂದ ಅಲಂಕರಿಸಿ ಶ್ರೀ ದೇವಿಯ ಆಗಮನಕ್ಕೆ ಭಕ್ತಿ ಭಾವದಿಂದ ಕಾದುಕುಳಿತಳು. ಶ್ರೀ ದೇವಿಯು ಭೂಲೋಕಕ್ಕೆ ಇಳಿದಾಗ, ಇತರರ ಮನೆಯಲ್ಲಿ ಅವಳನ್ನು ಬರಮಾಡಿಕೊಳ್ಳಲು ದೀಪಗಳು ಉಂಟಾಗುತ್ತವೆ. ಆದುದರಿಂದ ದೀಪಗಳಿಂದ ಝಗೌಗಿಸುವ ಭಕ್ತೆ ಚಾರುಮತಿಯ ಮನೆಗೆ ಬಂದು ದೇವಿಯು ಶಾಶ್ವತವಾಗಿ ಅಲ್ಲೇ ನೆಲೆಸುತ್ತಾಳೆ. ಶ್ರೀ ದೇವಿಯ ಆಗಮನದಿಂದ ಚಾರುಮತಿಯ ಮನೆಯ ಬಡತನವೆಲ್ಲ ದೂರವಾಗಿ ಅಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತದೆ, ಮನೆತನವು ಸಂಪದ್ಭರಿತವಾಗುತ್ತದೆ.
ಚಾರುಮತಿಯ ಮೇಲಾದ ಶ್ರೀ ದೇವಿಯ ಕೃಪೆಯನ್ನು ಕಂಡ ಊರಿನ ಇತರ ಸುಮಂಗಲೆಯರೂ ಕೂಡ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ ಇಷ್ಟಾರ್ಥ ಸಿದ್ಧಿಗಳನ್ನು ಮಾಡಿಕೊಳ್ಳುತ್ತಾರೆ.
ಇಂದಿಗೂ ಕೂಡ ಯಾರು ಶ್ರದ್ಧೆ-ಭಕ್ತಿಯಿಂದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆಯೋ ಅವರ ಮೇಲೆ ಶ್ರೀ ದೇವಿಯ ಕೃಪೆಯು ಖಂಡಿತವಾಗಿಯೂ ಇರುತ್ತದೆ.

16/08/2021

ಸಂಸಾರಿಗಳಿಗೆ ಸಾಕ್ಷಾತ್ಕಾರ ಹೇಗೆ ಸಾಧ್ಯ?
ಗೋಂದಾವಲಿ ಕ್ಷೇತ್ರದಲ್ಲಿ ವಾಸವಾಗಿದ್ದ ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಒಂದು ದಿನ ಸಂಸಾರಿಗಳಾದ ಭಕ್ತಜನರು ಒಂದು ಪ್ರಶ್ನೆಯನ್ನು ಕೇಳಿದರಂತೆ: “ನಾವು ಸಂಸಾರಿಕರು. ನಮಗೆ ಹೆಂಡತಿ ಮಕ್ಕಳು, ಹೊಲಮನೆ, ದನಕರುಗಳು – ಮುಂತಾಗಿ ಅನೇಕ ಉಪಾಧಿಗಳಿವೆ. ತಾವು ಹೇಳುವಂತೆ ಶ್ರೀರಾಮನಾಮಸ್ಮರಣೆಯನ್ನು ಸತತವಾಗಿ ಮಾಡುವುದಾಗಲೀ, ಶ್ರೀರಾಮನನ್ನು ಏಕಾಗ್ರತೆಯಿಂದ ಧ್ಯಾನಿಸುವುದಾಗಲಿ ಕೊನೆಗೆ ಸ್ವಲ್ಪಕಾಲ ಒಂದೇ ಚಿತ್ತದಿಂದ ಜಪ ಮಾಡುವುದಾಗಲೀ ನಮಗೆ ಸಾಧ್ಯವಿಲ್ಲವಾಗಿದೆ. ಇಂಥ ಸ್ಥಿತಿಯಲ್ಲಿ ನಾವು ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದು ಹೇಗೆ? ನಮ್ಮಂಥವರಿಗೆ ಪರಮಾರ್ಥ ಪ್ರಾಪ್ತಿಗೆ ಮಾರ್ಗವಾವುದು? ದಯವಿಟ್ಟು ತಿಳಿಸಿಕೊಡಿ.”

ಅದಕ್ಕೆ ಶ್ರೀ ಮಹಾರಾಜರು ಉತ್ತರಿಸಿದರು : “ನೀವು ಹೆಂಡತಿ ಮಕ್ಕಳನ್ನು ಕಂಡಾಗ ಶ್ರೀರಾಮನು ಈ ಹೆಂಡತಿ ಮಕ್ಕಳನ್ನು ನನಗೆ ಪಾಲನೆ ಮಾಡುವುದಕ್ಕಾಗಿ ಕೊಟ್ಟಿದ್ದಾನೆ. ನಾನು ಅವರ ಬಗ್ಗೆ ಏನೇನು ಮಾಡಬೇಕಾದ ಕರ್ತವ್ಯವಿದೆಯೋ ಅದೆಲ್ಲವನ್ನೂ ಮಾಡಿ ಶ್ರೀರಾಮನಿಗೆ ಒಪ್ಪಿಸಬೇಕು. “ಈ ಬಗ್ಗೆ ಏನು ಮಾಡಿದಿರಿ?” ಎಂದು ಪರಮಾತ್ಮನು ಕೇಳುತ್ತಾನೆ. ನಾನವನಿಗೆ ಉತ್ತರ ಹೇಳಬೇಕು – ಎಂಬುದನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಳ್ಳಿ. ಹೀಗೆಯೇ ಮನೆ ಹೊಲ ದನಗಳೇ – ಮುಂತಾದ ಎಲ್ಲದರ ಬಗ್ಗೆಯೂ ನಾನು ಶ್ರೀರಾಮನಿಗೆ ಉತ್ತರ ಹೇಳಬೇಕು ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಇದರಿಂದ ನಿಮಗೆ ನಿಮ್ಮ ಸಂಸಾರದ ಯಾವುದೇ ವಸ್ತುವನ್ನು ನೋಡಿದಾಗ “ಇದು ಶ್ರೀರಾಮನದು, ನನಗೆ ಅವನು ಇದನ್ನು ನೋಡಿಕೊಳ್ಳಲು ಕೊಟ್ಟಿದ್ದನೆ. ನಾನು ನನ್ನ ಕರ್ತವ್ಯವನ್ನು ಆ ಬಗ್ಗೆ ಮಾಡಿ ಅವನಿಗೆ ಒಪ್ಪಿಸಬೇಕು” ಎಂಬ ಭಾವವು ಹುಟ್ಟುವುದು. ಕೆಲವು ದಿನ ಪ್ರಯತ್ನಪೂರ್ವಕವಾಗಿ ಈ ಭಾವನೆಯನ್ನು ರೂಢಿಸಿಕೊಂಡರೆ, ಕಾಲಾಂತರದಲ್ಲಿ ಅದು ರೂಢಿಯಾಗಿ, ಮುಂದೆ ಸಹಜವಾಗಿಯೇ ಆ ಭಾವನೆಯು ನಿಮ್ಮ ಅಂತಃಕರಣದಲ್ಲಿ ಮೂಡುವುದು. ಇದರಿಂದ ಮುಂದೆ ‘ನನ್ನದು’ ಎಂಬ ಅಭಿಮಾನವು ಹೊರಟು ಹೋಗಿ, ಒಳಗೂ ಹೊರಗೂ ರಾಮಭಾವನೆಯು ವ್ಯಾಪಿಸಿಬಿಡುವುದು. ಈ ಸಾಧನೆಯನ್ನು ಬಿಡದೆ ಆರು ತಿಂಗಳ ಕಾಲ ಮಾಡಿ ನೋಡಿರಿ. ಶ್ರೀರಾಮನ ಸಾಕ್ಷಾತ್ಕಾರವಾಗದಿದ್ದಲ್ಲಿ ಆಗ ನನ್ನಲ್ಲಿ ಬಂದು ಕೇಳಿರಿ” ಎಂದರಂತೆ.

ಪ್ರಾರ್ಥನೆ ಬಲವಾದಂತೆ ಸಂಸಾರದ ಬಂಧನಗಳೂ ಸಡಿಲವಾಗಿ, ದೇವರ ಕಡೆಗೆ ಓಟ ತೀವ್ರವಾಗುತ್ತದೆ. ದೇವರು ನೋಡುವುದು ಭಕ್ತನ ಮನಸ್ಸು ಹೃದಯಗಳನ್ನೇ ಹೊರತು ಆತ ಸಂನ್ಯಾಸಿಯೋ, ಸಂಸಾರಿಯೋ ಎಂಬುದನ್ನಲ್ಲ.

16/08/2021

Anegunda ganapathi .udupi

14/08/2021
14/08/2021

💐ಅರೋಗ್ಯದ ಬಗ್ಗೆ ಪಿಸುಮಾತು 💐
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !

ತಾಮ್ರಜಲದ ಆಯುರ್ವೇದಿಕ ಲಾಭ
ತಾಮ್ರದ ಸ್ವಚ್ಛ ಪಾತ್ರೆಯಲ್ಲಿ ೨ ಗಂಟೆಗಿಂತ ಹೆಚ್ಚು ಕಾಲ ಇಟ್ಟ ನೀರಿಗೆ ‘ತಾಮ್ರಜಲ’ ಎನ್ನುತ್ತಾರೆ. ‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ ಶಾಸ್ತ್ರ ವಿಷಯದ ಒಂದು ಪ್ರಮಾಣೀಕೃತ ಸಂಸ್ಕೃತ ಗ್ರಂಥವಿದೆ. ಇದರ ಐದನೇ ಅಧ್ಯಾಯದ ೪೬ ನೇ ಶ್ಲೋಕದಲ್ಲಿ ತಾಮ್ರ ಈ ಧಾತುವಿನ ಮುಂದಿನ ಗುಣಧರ್ಮಗಳನ್ನು ಕೊಡಲಾಗಿದೆ –
ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹಸಿವು ಹೆಚ್ಚಿಸಲು ಹಾಗೂ ಕಣ್ಣುಗಳಿಗೆ ಅತ್ಯಂತ ಹಿತಕರವಾಗಿದೆ.’ ತಾಮ್ರದಿಂದ ರಕ್ತಾಭಿಸರಣದ ಸಮಸ್ಯೆಗಳು ನಿವಾರಣೆಯಾಗಿ ರಕ್ತಾಭಿಸರಣ ಸುಧಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ. ಕಾಂತಿಯು ಸತೇಜವಾಗುತ್ತದೆ. ಈ ಎಲ್ಲ ಲಾಭಗಳು ಸ್ವಚ್ಛ ಲಕಲಕ ಹೊಳೆಯುವ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನ ನಿಯಮಿತ ಬಳಕೆಯಿಂದಲೂ ಲಭಿಸುತ್ತವೆ.
ತಾಮ್ರ ಜಲದಂತೆಯೇ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರೂ ಶರೀರಕ್ಕೆ ಲಾಭದಾಯಕವಿದೆ. ಹಿತ್ತಾಳೆ ಇದು ತಾಮ್ರ ಹಾಗೂ ಗಂಧಕ (ಝಿಂಕ್) ಇವುಗಳ ಮಿಶ್ರಧಾತು ಇದೆ. ಗಂಧಕವು ಶರೀರದಲ್ಲಿಯ ಅನೇಕ ಕ್ರಿಯೆಗಳಿಗಾಗಿ ಅಗತ್ಯವಿರುತ್ತದೆ. ಗಂಧಕದ ಪ್ರಮಾಣವು ಕಡಿಮೆಯಾಗುವುದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕಡಿಮೆ ಯಾಗುತ್ತದೆ. ಹಾಲು ಕುಡಿಸುವ ಮಾತೆಯರಿಗೆ ಗಂಧಕದ ಅಗತ್ಯವು ಹೆಚ್ಚು ಪ್ರಮಾಣದಲ್ಲಿರುತ್ತದೆ.
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಿನ ಮೇಲೆ ಆಗಿರುವ ಆಧುನಿಕ ಸಂಶೋಧನೆ
ಅ. ಪಿತಾಂಬರಿ ಪ್ರಾಡಕ್ಟಸ್ ಪ್ರೈ.ಲಿ. ಈ ಕಂಪನಿಯು ತಾಮ್ರದ ಔಷಧಿ ಗುಣಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಲು ವಿವಿಧ ಪರೀಕ್ಷೆಗಳನ್ನು ಮಾಡಿತು. ಅದರಲ್ಲಿ ಈ. ಕೊಲಾಯ್ (E. coli) ಎಂಬ ಬೇಧಿಗೆ ಕಾರಣವಾಗಿರುವ ಜೀವಾಣು ತಾಮ್ರದ ಸಂಪರ್ಕದಲ್ಲಿದ್ದರೆ ಎರಡೂವರೆ ಗಂಟೆಗಳಲ್ಲಿಯೇ ನಾಶವಾಗುತ್ತದೆ, ಎಂದು ಕಂಡುಬಂದಿತು.
ಆ. ಇಂಗ್ಲೆಂಡಿನ ನೇಚರ್ ಈ ವಿಜ್ಞಾನ ಹಾಗೂ ಸಂಶೋಧನೆ ವಿಷಯದ ಮಾಸಿಕವು ನಾರ್ಥಂಬ್ರಿಯಾ ವಿಶ್ವ ವಿದ್ಯಾಲಯದ ಡಾ. ರೀಡ್ ಈ ಸೂಕ್ಷ್ಮ ಜೀವಶಾಸ್ತ್ರಜ್ಞರ ಸಂಶೋಧನೆಯ ಮಾಹಿತಿ ಪ್ರಕಟಿಸಿದ್ದಾರೆ. ಡಾ. ರೀಡ್ ಇವರು ಹಿತ್ತಾಳೆಯ ಹಾಗೂ ಮಣ್ಣಿನ ಪಾತ್ರೆಯಲ್ಲಿನ ನೀರಿನಲ್ಲಿ ಈ. ಕೊಲಾಯ್ ಈ ಬೇಧಿಯ ಜಂತು ಬಿಟ್ಟರು ಹಾಗೂ ಎರಡೂ ಪಾತ್ರೆಯಲ್ಲಿನ ನೀರನ್ನು ೬, ೨೪ ಹಾಗೂ ೪೮ ಗಂಟೆಗಳ ನಂತರ ಪರೀಕ್ಷೆ ಮಾಡಿದರು. ಆ ಪರಿಶೀಲನೆಯಲ್ಲಿ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರಲ್ಲಿ ಈ. ಕೊಲಾಯ್‌ನ ಜಂತುಗಳ ಪ್ರಮಾಣವು ಶೀಘ್ರವಾಗಿ ಕಡಿಮೆಯಾಗುತ್ತದೆ, ಎಂಬುದು ಗಮನಕ್ಕೆ ಬಂದಿತು.
ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿ ನೀರು ಶೇಖರಿಸುವ ಮೊದಲು ಆ ಪಾತ್ರೆಗಳನ್ನು ಸ್ವಚ್ಛ ತೊಳೆಯುವುದು ಅಗತ್ಯವಿದೆ !
ನಾವು ನೀರನ್ನು ಸಂಗ್ರಹಿಸಿಡಲಿರುವ ತಾಮ್ರ ಹಿತ್ತಾಳೆಯ ಪಾತ್ರೆಯನ್ನು ಪ್ರತಿದಿನ ಸ್ವಚ್ಛವಾಗಿ ತೊಳೆಯುವುದು ಆವಶ್ಯಕವಾಗಿದೆ. ಪಾತ್ರೆ ಸ್ವಚ್ಛ ತೊಳೆಯದಿದ್ದರೆ ಹವೆಯಲ್ಲಿನ ಪ್ರಾಣವಾಯುವಿನ ಸಂಪರ್ಕದಿಂದ ತಾಮ್ರವು ಆಕ್ಸಾಯಿಡ್ ಆಗುತ್ತದೆ ಹಾಗೂ ಅದರ ಪದರಿನಿಂದಾಗಿ ತಾಮ್ರದ ಗುಣಧರ್ಮವು ನೀರಲ್ಲಿ ಇಳಿಯುವುದಿಲ್ಲ ಹಾಗೂ ನೀರು ಬಳಸಲು ಅಯೋಗ್ಯವಾಗುತ್ತದೆ.
ಕುಡಿಯುವ ನೀರು ತಂಗಳು ಇರಬಾರದು !
೨೪ ಗಂಟೆಗಳ ನಂತರ ಒಂದು ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ತಂಗಳು ಆಗುತ್ತದೆ. ಇಂತಹ ನೀರು ಕುಡಿಯುವುದರಿಂದ ವಾತ, ಪಿತ್ತ ಹಾಗೂ ಕಫ ಈ ಮೂರೂ ದೋಷಗಳು ಹೆಚ್ಚುತ್ತವೆ. ಇದಕ್ಕಾಗಿ ತಾಮ್ರದ ಪಾತ್ರೆಯಲ್ಲಿನ ನೀರನ್ನು ಕೂಡ ೨೪ ಗಂಟೆಗಳ ನಂತರ ಬದಲಾಯಿಸಬೇಕು.

ಪಂಡಿತ್ : ವಿಪಿ ಗುರುಪ್ರಸಾದ್

Address

Market Road. 2cross. Rajendra Building 2floor. Marthalli. Bangalore
Bangalore

Telephone

+919480109062

Website

Alerts

Be the first to know and let us send you an email when Shree kalabairava astrologer. posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram