17/03/2018
*ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವ ವೈದ್ಯರ ಸಂಘ*
*ನಮ್ಮ ರಾಜ್ಯದ ನೀಟ್ MD/MS ಹಾಗು MDSನ ಸ್ಟೇಟ್ ಕೋಟ ಸೀಟುಗಳ ಹಂಚಿಕೆಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಪರವಾಗಿ ನಿಂತ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸೂಚಿಸುತ್ತೆವೆ* ಮತ್ತು ಅವರ ಬೆಂಬಲವಾಗಿ ನಾವು, ಕರ್ನಾಟಕದ ವೈದ್ಯ ಹಾಗೂ ದಂತವೈದ್ಯ ವೃಂದದವರು, *ಮಾ .19 ಸೋಮವಾರದಂದು ಮದ್ಯಾಹ್ನ 3.00 ಘಂಟೆಯಿಂದ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಭೆಯೊಂದನ್ನು ಹಮ್ಮಿಕೊಂಡಿದ್ದೇವೆ*.
*ನಮ್ಮ ಸರ್ಕಾರವು ತೆಗೆದುಕೊಂಡಿರುವ ಈ ನಿಧಾ೯ರದಿಂದ, ನಮ್ಮ ರಾಜ್ಯದ ವಿದ್ಯಾರ್ಥಿಗಳಿಗಾಗಿ MD/MSನಲ್ಲಿ ಸುಮಾರು 600 ರಷ್ಟು ಹಾಗು MDS ನಲ್ಲಿ ಸುಮಾರು 300 ರಷ್ಟು ಸೀಟುಗಳು ಉಳಿದುಕೊಳ್ಳುತ್ತವ*ೆ.
ಆದರೆ, ಕರ್ನಾಟಕ ಸರ್ಕಾರದ ಈ ನಿರ್ಧಾರದ ವಿರುದ್ಧ, ಹೊರ ರಾಜ್ಯದ ವಿದ್ಯಾರ್ಥಿಗಳು ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿರುವುದು ಹಾಗೂ ನಮ್ಮ ಸೀಟುಗಳನ್ನು ಕಸಿದುಕೊಳ್ಳಲು ಅವರು ಮಾಡುತ್ತಿರುವ ಪ್ರಯತ್ನಗಳು ಖಂಡನೀಯ. ಇದರ ವಿರುದ್ಧ ನಾವೆಲ್ಲರೂ ಜೊತೆಗೂಡಿ ನಿಲ್ಲಬೇಕಾಗಿದ್ದು, ಈ ಸಭೆಯನ್ನು ಸಾಕಾರಗೊಳಿಸಲು, ನಿಮ್ಮೆಲ್ಲರ ಉಪಸ್ಥಿತಿಯು ಅತ್ಯಗತ್ಯವಾದುದು.
*ಹೆಮ್ಮೆಯ ವಿಷಯ ಏನೆಂದರೆ, ನಮ್ಮ ಸತತ ಪ್ರಯತ್ನದಿಂದ 2017ರ ಜೂನ್ ತಿಂಗಳಲ್ಲಿ ನಡೆದ MBBS ಸೀಟು ಹಂಚಿಕೆಯಲ್ಲಿ 650 ಸೀಟುಗಳನ್ನು ನಾವು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗಾಗಿ ಹೆಚ್ಚಿಸಿದ್ದೆವು*.
ಕನ್ನಡಿಗರ ಬಗ್ಗೆ ಕಾಳಜಿ ಇರುವವರು ಸಹ ಈ ಸಭೆಯಲ್ಲಿ ಭಾಗಿಯಾಗಬಹುದು. ಆದ್ದರಿಂದ, ನೀವೆಲ್ಲರೂ ಈ ಸಭೆಯಲ್ಲಿ ಪಾಲ್ಗೊಂಡು, ನಮ್ಮ ಜೊತೆ ಕೈಜೋಡಿಸಿ, ಕನ್ನಡಿಗರ ಒಗ್ಗಟ್ಟನ್ನು ಎತ್ತಿಹಿಡಿಯಬೇಕೆಂದು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ.
ವಂದನೆಗಳು, 😊😊
*ಅಧ್ಯಕ್ಷರು, ಡಾ. ಭರತ್ ಕುಮಾರ್*
*ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವ ವೈದ್ಯರ ಸಂಘ*👍🏼😊👍🏼