ShwaasaGuru ಶ್ವಾಸಗುರು

ShwaasaGuru ಶ್ವಾಸಗುರು Socio Spiritual organisation

21/07/2024
A spectacular view of Yoga Mantapas on the bank of Tunga Bhadra River, Harihar, where Tungarati will be held.ಹರಿಹರದ ತುಂಗ...
01/10/2023

A spectacular view of Yoga Mantapas on the bank of Tunga Bhadra River, Harihar, where Tungarati will be held.
ಹರಿಹರದ ತುಂಗಭದ್ರಾ ನದಿ ತಟದಲ್ಲಿ ಸಿಧ್ಧವಾಗುತ್ತಿರುವ ತುಂಗಾ ಆರತಿ ಯೋಗ ಮಂಟಪಗಳ ಭವ್ಯ ನೋಟ.

25/09/2023
Namo Vishwa Nayaka who is making India a Vishwa Guru Our respected Prime Minister Sri Narendra Modiji is the main reason...
17/09/2023

Namo Vishwa Nayaka who is making India a Vishwa Guru

Our respected Prime Minister Sri Narendra Modiji is the main reason behind the drastic change in the image of India globally, after 2014. With his progressive thinking-planning, undying enthusiasm, global thinking, decisiveness and concern for global peace, Modi is a model prime minister. There is no doubt that he can be called Vishwa Nayaka.
When all the powerful countries of the world, which were flourishing with money and arms, were struggling after the attack of Corona pandemic, the way Modiji controlled India, with his concept of Atmanirbhar and put the country on the path to becoming the third largest economy in the world is commendable. He instilled confidence in people and gave them courage. He taught how the whole country should unite and fight together when faced with difficulties.Today the whole world is looking at admiringly and celebrating the work of Modiji.
The entire world is talking and discussing about Modiji's vision, important steps taken to transform India into a powerful country, whether it is manufacturing of domestic products or market expansion, care for farmers, Swachh Bharat Nirman, economic and social progress, improvement in people's standard of living etc.

The credit for the success of Chandrayaan 3 should certainly go to Modiji. Scientists themselves are proud of the inspiration they have given to scientists.

Modiji played a major role at the G20 summit where the Delhi Declaration was unanimously accepted by taking the confidence of all the leaders; African union was included in the G20; Modiji won the trust of all countries, he showed the wisdom of seeking peace between Ukraine and Russia without taking sides, and he developed cordial relations with all the nations. Such is the charisma of the world guru.

At the first meeting with Modiji on July 21, 2017, I said, “we are fortunate to have you as our Prime Minister. He responded humbly. I had a strong reason to say this. The reason why yoga has become a brand at the international level is obviously Narendra Modi ji. The Prime Minister, who is a yoga practitioner himself, has a great love for yoga. Though yoga has been prevalent in the country for five thousand years, it is Modi ji who has given it global recognition. The United Nations announced the International Day of Yoga after, due to Modiji's efforts, that people became more inclined towards yoga at the global level.

We celebrate the International Day of Yoga every year through our Shwasa Yoga Institute. We honor many 'unsung heroes' who have made extraordinary contributions to yoga by being yoga masters, by conferring the 'Yogaratna' award. Many of the yoga gurus who received the Yoga Ratna Award later went on to receive the country's highest honor, the Padma Shri Awards. It is an honor for the Swasa Yoga Institute. We came to know how wide the fame of Yogaratna award is spread when Modiji himself took interest in it and sent words for me, through Mr. Ananthakumar to meet him. As I stepped into the Prime Minister's Chamber, he greeted me with a smile, "Aai Ye Swasguruji". "I have heard a lot about you. You are a great yogi. You have achieved great things at such a young age. How do you select the yoga practitioners who will be awarded the Yogaratna award," he asked curiously. He listened to its full details with interest. When I presented him with a shawl, Rudrakshamala, which I had taken with love, he remarked "Bahut saja karke laye hai" (You have brought it with great care). I said “I have not come to meet the Prime Minister. I have come to meet a Yogi." He smiled and it was the smile of a yogi with inner divine light.

We met for the second time on 5th December 2019, and I invited the Prime Minister to the 'Harajatra Mahotsav' of Sri Panchamasali Jagadguru Peetha. I gifted him Ishtalinga, Vibhuti, Netipatre and Yoga book. Seeing the Ishtalinga, he was curious and asked, 'What is this?' ‘This is Ishtalinga. Its founder was Vishwaguru Basavanna of the twelfth century. It is not a stone. When I explained that it is prepared from Ayurvedic herbs, he was happy and said he would proudly wear the Vibhuti, and use the Netipatre, which is very popular with yoga practitioners. Modiji listened with interest when he informed that the Panchmasali society is always ahead in terms of country and devotion and bid farewell by assuring that he would certainly visit the Panchmasali Jagadguru Peetha at Harihar.

After Modiji became the Prime Minister, the way the world looks at India has changed. There is a lot of love for yoga and yogis. There is high respect. I travel around many countries as a yoga preacher. I invite anyone to come to India for higher yoga practice. In 2016, an eighteen-year-old boy caught my attention while on a yoga retreat in Chicago, USA. Earlier, whenever I asked the class who would like to come to India to practice yoga, the boy was unresponsive. But one day the boy enthusiastically said that he wants to come to India. When asked why this change, he said, “You have a new Prime Minister. He himself does yoga. It gave me motivation.”

On his birthday, I extend my hearty wishes to the Vishwa Nayaka PM Modiji, who filled the country with self-confidence, brought its people in unity, and put yoga on the global map and above all else, who is working tirelessly for the country. He deserves our admiration and unflinching support.

Jagadguru Sri Vachanananda Swamiji
Veerashaiva Lingayat Panchamasali Jagadguru Peetha, Harihara.

ಭಾರತವನ್ನು ವಿಶ್ವಗುರುವಾಗಿಸುತ್ತಿರುವ ವಿಶ್ವನಾಯಕನಿಗೆ ನಮೋ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪರಿಗಣಿಸುವ ದೃಷ್ಟಿ 2014ರ ನಂತರ ತೀವ್ರ ಬದಲಾವಣೆಯ...
17/09/2023

ಭಾರತವನ್ನು ವಿಶ್ವಗುರುವಾಗಿಸುತ್ತಿರುವ ವಿಶ್ವನಾಯಕನಿಗೆ ನಮೋ

ಭಾರತವನ್ನು ಜಾಗತಿಕ ಮಟ್ಟದಲ್ಲಿ ಪರಿಗಣಿಸುವ ದೃಷ್ಟಿ 2014ರ ನಂತರ ತೀವ್ರ ಬದಲಾವಣೆಯಾಗಲು ಪ್ರಧಾನ ಕಾರಣ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀಯವರು. ಪ್ರಗತಿಪರ ಯೋಚನೆ-ಯೋಜನೆ, ಪುಟಿಯುವ ಉತ್ಸಾಹ, ಪ್ರಾಪಂಚಿಕ ಚಿಂತನೆ, ಖಡಕ್ ತೀರ್ಮಾನ, ಜಾಗತಿಕ ಶಾಂತಿ ಕುರಿತ ಕಾಳಜಿಗಳಲ್ಲಿ ಮೋದಿಯವರು ವಿಶ್ವಕ್ಕೇ ಮಾದರಿ ಪ್ರಧಾನಿಯಾಗಿದ್ದಾರೆ. ಅವರನ್ನು ವಿಶ್ವನಾಯಕ ಎಂದು ಕರೆಯಲು ಯಾವುದೇ ಅನುಮಾನವಿಲ್ಲ.
ಹಣಬಲ ಮತ್ತು ಶಸ್ತ್ರಾಸ್ತ್ರಬಲದಿಂದಲೇ ಮೆರೆಯುತ್ತಿದ್ದ ಜಗತ್ತಿನ ಬಲಾಢ್ಯ ದೇಶಗಳೆಲ್ಲಾ ಕೊರೋನಾ ವೈರಸ್ ದಾಳಿಗೆ ಸಿಕ್ಕು ಒದ್ದಾಡುತ್ತಿರುವಾಗ ಆತ್ಮನಿರ್ಭರ ಭಾರತ ಮೂಲಕ ಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊಮ್ಮಿಸುವ ಯತ್ನದಲ್ಲಿ ಮೋದಿಜೀ ಭಾರತವನ್ನು ನಿಯಂತ್ರಿಸಿದ ರೀತಿ ನಿಜಕ್ಕೂ ಗ್ರೇಟ್. ಜನರಲ್ಲಿ ಆತ್ಮವಿಶ್ವಾಸ ತುಂಬಿದರು. ಧೈರ್ಯ ನೀಡಿದರು. ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಇಡೀ ದೇಶ ಒಗ್ಗಟ್ಟಾಗಿ ಹೋರಾಡಬೇಕು ಅನ್ನುವುದನ್ನು ಹೇಳಿಕೊಟ್ಟರು. ಇವತ್ತು ಮೋದಿ ಜೀ ಕೆಲಸವನ್ನ ಇಡೀ ಜಗತ್ತೇ ಕೊಂಡಾಡುತ್ತಿದೆ.
ಮೋದಿಜಿಯವರ ಆಡಳಿತ ವೈಖರಿಯ ಬಗ್ಗೆ, ದೂರದೃಷ್ಟಿ ಬಗ್ಗೆ, ಭಾರತವನ್ನು ಶಕ್ತಿಯುತ ದೇಶವನ್ನಾಗಿ ಪರಿವರ್ತಿಸುವತ್ತ ಇಟ್ಟಿರುವ ಮಹತ್ವದ ಹೆಜ್ಜೆಯ ಬಗ್ಗೆ, ದೇಶಿ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆ, ರೈತರ ಬಗ್ಗೆ ತೆಗೆದುಕೊಂಡ ಕಾಳಜಿ, ಸ್ವಚ್ಛಭಾರತ್ ನಿರ್ಮಾಣ್, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ, ಜನಜೀವನ ಮಟ್ಟದ ಸುಧಾರಣೆ ಇತ್ಯಾದಿಗಳ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ, ಚರ್ಚಿಸುತ್ತಿದೆ.
ಚಂದ್ರಯಾನ 3 ರ ಯಶಸ್ಸಿನ ಹಿರಿಮೆ ನಿಸ್ಸಂಶಯವಾಗಿ ಮೋದಿಜಿಯವರಿಗೆ ಸೇರಬೇಕು. ವಿಜ್ಞಾನಿಗಳಿಗೆ ಅವರು ತುಂಬಿದ ಸ್ಫೂರ್ತಿ ಬಗ್ಗೆ ಮನದುಂಬಿ ವಿಜ್ಞಾನಿಗಳೇ ಹೇಳಿಕೊಂಡಿದ್ದಾರೆ.
ಜಿ 20 ಶೃಂಗಸಭೆಯಲ್ಲಿ ಎಲ್ಲಾ ನಾಯಕರ ವಿಶ್ವಾಸವನ್ನು ತೆಗೆದುಕೊಂಡು ಮಂಡಿಸಿದ ದೆಹಲಿಯ ತೀರ್ಮಾನ ಸರ್ವ ಸಮ್ಮತವಾಗಿ ಸ್ವೀಕಾರವಾಗಿದ್ದು, ದಕ್ಷಿಣ ಆಫ್ರಿಕಾವನ್ನು ಜಿ 20 ಗೆ ಸೇರಿಸಿ ವಿಶ್ವಾಸ ಗೆದ್ದಿದ್ದು, ಯುಕ್ರೇನ್ ಮತ್ತು ರಷ್ಯಾದ ನಡುವೆ ಯಾರೊಬ್ಬರ ಪರ ವಹಿಸದೇ ಇಬ್ಬರಿಗೂ ಶಾಂತಿ ಕೋರುವ ಜಾಣ್ಮೆ ತೋರಿದ್ದು, ಎಲ್ಲಾ ರಾಷ್ಟ್ರಗಳ ಜೊತೆ ಸೌಹಾರ್ದಯುತ ಸಂಬಂಧ ಹೊಂದಿರುವುದು ಎಲ್ಲವೂ ಈ ವಿಶ್ವಗುರುವಿನ ವೈಶಿಷ್ಟ್ಯತೆಯನ್ನು ಎತ್ತಿ ನುಡಿಯುತ್ತದೆ.
ನಾವು ಮೋದಿಜೀಯವರನ್ನ 2017 ಜುಲೈ 21ರಂದು ಮೊದಲ ಸಲ ಭೇಟಿಯಾದಾಗ “ನೀವು ಪ್ರಧಾನಮಂತ್ರಿ ಆಗಿರೋದು ನಿಮ್ಮ ಪುಣ್ಯವಲ್ಲ. ಭಾರತದ ಪುಣ್ಯ" ಎಂದು ಹೇಳಿದಾಗ ಅವರು ವಿನಮ್ರರಾಗಿ ಪ್ರತಿಕ್ರಿಯಿಸಿದ್ದರು. ನಾವು ಈ ಮಾತು ಹೇಳಲು ಬಲವಾದ ಕಾರಣವೂ ಇದೆ. ಇಂದು ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಆಗಲು ಕಾರಣ ನಿಸ್ಸಂಶಯವಾಗಿ ನರೇಂದ್ರ ಮೋದಿ ಜೀಯವರೇ. ಸ್ವತಃ ಯೋಗಾಭ್ಯಾಸಿ ಆಗಿರುವ ಪ್ರಧಾನಿಗಳಿಗೆ ಯೋಗದ ಬಗ್ಗೆ ಅತೀವ ಪ್ರೀತಿ ಇದೆ. ಐದು ಸಾವಿರ ವರ್ಷಗಳಿಂದ ದೇಶದಲ್ಲಿ ಯೋಗ ಪ್ರಚಲಿತದಲ್ಲಿದ್ರೂ ಅದಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದು ಮೋದಿಜಿಯವರು ಅಧಿಕಾರಕ್ಕೆ ಬಂದ ಮೇಲೆಯೇ. ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗದಿನವನ್ನು ಘೋಷಿಸಿದ್ದು ಮತ್ತು ಜಾಗತಿಕ ಮಟ್ಟದಲ್ಲಿ ಜನರು ಯೋಗದ ಕಡೆಗೆ ಹೆಚ್ಚಿನ ಒಲವು ತೋರಲು ಸಾಧ್ಯವಾಗಿದ್ದು ಮೋದಿಜೀಯವರ ಪ್ರಯತ್ನದ ಫಲವೇ.
ನಾವು ನಮ್ಮ ಶ್ವಾಸ ಯೋಗ ಸಂಸ್ಧೆಯ ಮೂಲಕ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನ ಆಚರಿಸುತ್ತೇವೆ. ಅದರಲ್ಲಿ ಯೋಗ ಮಾಸ್ಟರ್ ಗಳಾಗಿ ಎಲೆಮರೆಕಾಯಿಯಂತೆ ಇದ್ದುಕೊಂಡು ಯೋಗಕ್ಕೆ ಅಸಾಧಾರಣ ಕೊಡುಗೆ ನೀಡಿರುವ ಹಲವು ‘ಅನ್ ಸಂಗ್ ಹೀರೋಸ್’ ಗಳಿಗೆ ‘ಯೋಗರತ್ನ’ ಪ್ರಶಸ್ತಿ ನೀಡಿ ಗೌರವಿಸುತ್ತೇವೆ. ಯೋಗ ರತ್ನ ಪ್ರಶಸ್ತಿ ಸ್ವೀಕರಿಸಿದ ಹಲವು ಯೋಗಗುರುಗಳು ದೇಶದ ದೊಡ್ಡ ಗೌರವವಾದ ಪದ್ಮಶ್ರೀ ಪ್ರಶಸ್ತಿಗಳಿಗೆ ನಂತರ ಭಾಜನರಾದರು ಅನ್ನುವುದು ಶ್ವಾಸಯೋಗ ಸಂಸ್ಥೆಗೆ ಸಿಕ್ಕ ಗೌರವ. ಯೋಗರತ್ನ ಪ್ರಶಸ್ತಿಯ ಖ್ಯಾತಿ ಎಷ್ಟು ವಿಶಾಲವಾಗಿ ಹಬ್ಬಿದೆ ಎಂದು ನಮಗೆ ತಿಳಿದುಬಂದಿದ್ದು ಆ ಬಗ್ಗೆ ಮೋದಿಜೀಯವರು ಸ್ವತಃ ಆಸಕ್ತಿವಹಿಸಿ ನಮ್ಮನ್ನು ಭೇಟಿ ಮಾಡಲು ಶ್ರೀ ಅನಂತಕುಮಾರ್ ಅವರ ಮೂಲಕ ಕರೆಸಿಕೊಂಡಾಗ. ಪ್ರಧಾನಿ ಛೇಂಬರ್ ಗೆ ಹೆಜ್ಜೆ ಇಡುತ್ತಲೇ ನಗುಮುಖದಿಂದ ಮೋದಿ ಜಿ, “ಆಯಿ ಯೇ ಶ್ವಾಸಗುರೂಜೀ” ಎಂದು ಸ್ವಾಗತ ಮಾಡಿದರು. "ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನೀವು ಮಹಾನ್ ಯೋಗಿಗಳು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀರಿ. ಯೋಗರತ್ನ ಪ್ರಶಸ್ತಿಗೆ ಭಾಜನರಾಗುವ ಯೋಗ ಸಾಧಕರನ್ನ ನೀವು ಹೇಗೆ ಆಯ್ಕೆ ಮಾಡುತ್ತೀರಿ" ಎಂದು ಕುತೂಹಲದಿಂದ ಕೇಳಿದರು. ಅದರ ಪೂರ್ಣ ವಿವರಗಳನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ನಾವು ಯೋಗರತ್ನ ಪ್ರಶಸ್ತಿ ಕೊಟ್ಟು ಪುರಸ್ಕರಿಸಿದ ಹಲವರಿಗೆ ಆನಂತರ ಪ್ರದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾವು ಪ್ರೀತಿಯಿಂದ ತೆಗೆದುಕೊಂಡುಹೋಗಿದ್ದ ಶಾಲು, ರುದ್ರಾಕ್ಷಿಮಾಲೆ ನೀಡಿ ಸನ್ಮಾನಿಸಿದಾಗ “ಬಹುತ್ ಸಜಾ ಕರ್ಕೆ ಲಾಯೆ ಹೈ”(ತುಂಬಾ ಶಿಸ್ತಿನಿಂದ ತಂದಿದ್ದೀರಿ) ಅಂತ ಖುಷಿಪಟ್ಟರು. ಅದಕ್ಕೆ ನಾವು "ನಾನು ಪ್ರಧಾನಿಯವರನ್ನ ಭೇಟಿ ಆಗಲು ಬಂದಿಲ್ಲ. ಒಬ್ಬ ಯೋಗಿಯನ್ನ ಭೇಟಿ ಆಗಲು ಬಂದಿದ್ದೇನೆ" ಅಂದಾಗ ನಕ್ಕರು. ಆ ನಗುವಿನಲ್ಲಿ ಯೋಗಿಯೊಬ್ಬರ ಅಂತರಂಗದ ದಿವ್ಯ ಬೆಳಕಿತ್ತು.
ಮತ್ತೆ 2019 ಡಿಸೆಂಬರ್ 5 ರಂದು ಎರಡನೇ ಬಾರಿಗೆ ಭೇಟಿಯಾಗಿ ಶ್ರೀ ಪಂಚಮಸಾಲಿ ಜಗದ್ಗುರು ಪೀಠದ ‘ಹರಜಾತ್ರಾ ಮಹೋತ್ಸವ’ಕ್ಕೆ ಪ್ರಧಾನಿಯವರನ್ನು ಆಹ್ವಾನಿಸಿ, ಅವರಿಗೆ ಉಡುಗೊರೆಯಾಗಿ ಇಷ್ಟಲಿಂಗ, ವಿಭೂತಿ, ನೇತಿಪಾತ್ರೆ ಮತ್ತು ಯೋಗಪುಸ್ತಕ ನೀಡಿದೆವು. ಇಷ್ಟಲಿಂಗವನ್ನ ನೋಡಿದ ಅವರು ‘ಇದೇನಿದು?’ ಎಂದು ಕುತೂಹಲ ತೋರಿದರು. ‘ಇದು ಇಷ್ಟಲಿಂಗ. ಇದರ ಜನಕ ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರು. ಇದು ಕಲ್ಲಲ್ಲ. ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾಗಿದ್ದು’ ಎಂದು ವಿವರಿಸಿದಾಗ ಖುಷಿಪಟ್ಟು ವಿಭೂತಿಯನ್ನು ನಾನೂ ಧರಿಸುತ್ತೇನೆ, ನೇತಿಪಾತ್ರೆ ಯೋಗ ಮಾಡುವವರಿಗೆ ಬಹಳ ಇಷ್ಟ ಎಂದು ಹೆಮ್ಮೆಪಟ್ಟರು. ದೇಶ ಮತ್ತು ಭಕ್ತಿ ವಿಷಯದಲ್ಲಿ ಪಂಚಮಸಾಲಿ ಸಮಾಜ ಯಾವತ್ತೂ ಮುಂದಿದೆ ಎಂದು ತಿಳಿಸಿಕೊಟ್ಟಾಗ ಕುತೂಹಲದಿಂದ ಕೇಳಿಸಿಕೊಂಡ ಮೋದೀಜಿ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಖಂಡಿತಾ ಬರುತ್ತೇನೆ ಎಂದು ಆಶ್ವಾಸನೆ ಕೊಟ್ಟು ಬೀಳ್ಕೊಟ್ಟರು.
ಮೋದಿ ಜೀ ಪ್ರಧಾನಿ ಆದಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೋಡುವ ರೀತಿಯೇ ಬದಲಾಗಿದೆ. ಯೋಗ ಮತ್ತು ಯೋಗಿಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ ಹರಿದು ಬರುತ್ತಿದೆ. ಗೌರವ ಹೆಚ್ಚಿದೆ. ನಾವು ಯೋಗಪ್ರಚಾರಕರಾಗಿ ಹಲವು ದೇಶಗಳನ್ನ ಸುತ್ತುತ್ತಾ ಇರುತ್ತೇವೆ. ಹೆಚ್ಚಿನ ಯೋಗಾಭ್ಯಾಸಕ್ಕಾಗಿ ಭಾರತಕ್ಕೆ ಬನ್ನಿ ಅಂತ ಆಮಂತ್ರಿಸುತ್ತೇವೆ. 2016ರಲ್ಲಿ ಅಮೆರಿಕದ ಶಿಕಾಗೋದಲ್ಲಿ ಯೋಗ ರಿಟ್ರೀಟ್ ದಲ್ಲಿದ್ದಾಗ ಹದಿನೆಂಟರ ಹುಡುಗ ನಮ್ಮ ಗಮನವನ್ನು ಸೆಳೆದಿದ್ದ. ಇಷ್ಟು ಸಲ, ಯಾರೆಲ್ಲಾ ಭಾರತಕ್ಕೆ ಯೋಗಾಭ್ಯಾಸಕ್ಕೆ ಬರುತ್ತೀರ ಅಂತ ಕೇಳಿದಾಗ ಆ ಹುಡುಗ ಸುಮ್ಮನೆ ಮಂಕಾಗಿ ಕೂತಿರುತಿದ್ದ. ಆದರೆ ಆ ದಿನ ಆ ಹುಡುಗ ನಾನೂ ಭಾರತಕ್ಕೆ ಬರಲು ಇಚ್ಛಿಸುತ್ತೇನೆ ಅಂದಿದ್ದ. ಯಾಕೆ ಈ ಬದಲಾವಣೆ ಅಂತ ಕೇಳಿದಾಗ ಆತ ‘ನಿಮ್ಮಲ್ಲಿ ಹೊಸ ಪ್ರಧಾನಿ ಬಂದಿದ್ದಾರೆ. ಅವರು ಸ್ವತಃ ಯೋಗ ಮಾಡ್ತಾರಂತೆ. ನನಗೆ ಅದು ಪ್ರೇರಣೆ ನೀಡಿತು’ ಎಂದು ಹೇಳಿದ್ದ.
ದೇಶಕ್ಕೆ ಆತ್ಮಸ್ಥೈರ್ಯ ತುಂಬಿದ, ಒಗ್ಗಟ್ಟಿನ ಸೂತ್ರ ಹೇಳಿಕೊಟ್ಟ, ಯೋಗದ ಅರಿವು ಮೂಡಿಸಿದ ಎಲ್ಲಕ್ಕಿಂತ ಹೆಚ್ಚಾಗಿ ದೇಶಕ್ಕಾಗಿ ಅವಿರತ ದುಡಿಯುತ್ತಿರುವ ವಿಶ್ವನಾಯಕ ಶ್ರೀ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಅಭಿನಂದನೆಗಳು.

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

30/08/2023

Address

Shwaasa Yoga Center
Bangalore
560094

Opening Hours

9am - 5pm

Telephone

+919980012999

Alerts

Be the first to know and let us send you an email when ShwaasaGuru ಶ್ವಾಸಗುರು posts news and promotions. Your email address will not be used for any other purpose, and you can unsubscribe at any time.

Contact The Practice

Send a message to ShwaasaGuru ಶ್ವಾಸಗುರು:

Share

Category