
28/10/2024
Oliver Multi-specialty Diagnostic Centre is committed to delivering exceptional medical support to all society groups. We envision an inclusive society where quality medical services are accessible affordably to everyone, regardless of wealth. Community giving is essential to us. Under Dr. Shivaraj K K's leadership, the Oliver group organized a free medical camp at Kalahalli, Kirisave Post on 27th October 2024, benefiting over 150 rural individuals, including those with limited literacy, with complimentary medical care and supplies. We gratefully acknowledge all contributors to this initiative.
ಉಚಿತ ಆರೋಗ್ಯ ತಪಾಸಣಾ ಶಿಬಿರ.....!
ಆಚಾರಕ್ಕೆ ಅರಸನಾಗು,ನೀತಿಗೆ ಪ್ರಭುವಾಗು,ನನ್ನಯ್ಯದಿರ ಜ್ಯೋತಿಯೆ ಆಗು ಜಗಕ್ಕೆಲ್ಲಾ.
-ಜನಪದರ ಭಾವಕೋಶದ ಮಾತು. ಈ ಮಾತಿಗೆ ಅನುಸಂಧಾನ ಮಾಡಿದವರು ಡಾಕ್ಟರ್ ಶಿವರಾಜ್ ಎಂ ಬಿ ಬಿ ಎಸ್, ಎಂ ಡಿ. ಇವರ ಮೂಲ ಹಳ್ಳಿಯ ಬೇರಿನ ರೂಪಕ; ಬದುಕು ರೆಕ್ಕೆಯ ರೂಪಕ ನಗರವಾದರು ಕೂಡ ಹಳ್ಳಿಯ ಮಣ್ಣಿನ ಸೆಳೆತ. ಇದಕ್ಕೆ ಅನುರೂಪವೆಂಬತೆ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಾಡು ಮಾಡುತ್ತಾರೆ. ಅದು ಕಲ್ಲಹಳ್ಳಿ ಎಂಬ ಊರಿನಲ್ಲಿ.ಇದು ರಾ.ಹೆ 75ರ ಸಮೀಪ ಕದಬಹಳ್ಳಿ ಟೋಲ್ ಬಳಿ ಇದೆ. ಇಂದು ದಿನಾಂಕ:27-10-24ರ ಭಾನುವಾರ ಬೆಂಗಳೂರು ಎಂಬ ಬೆಂಗಳೂರಿನಿಂದ ತನ್ನ ಕ್ಲೀನಿಕ್‌ನ ಸಿಬ್ಬಂದಿಯೊಂದಿಗೆ ಅಪಾರ ಪ್ರಮಾಣದ ಔಷಧಿ ಕಾರಿನಲ್ಲಿ ಹೊತ್ತುತಂದು ಮುಗ್ಧ ಮನಸ್ಸಿನ ಹಳ್ಳಿ ಜನರಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಇಸಿಜಿ, ಎಕೋ ಟೆಸ್ಟ್ ಮಾಡಿ, ಅಪಾರ ಶ್ರದ್ಧೆಯಿಂದ, ಪ್ರೀತಿಯಿಂದ ಸಲಹೆ ಸೂಚನೆಗಳನ್ನು ನೀಡಿ ಉಚಿತ ಔಷಧಿ ನೀಡಿದ ಸುಖದಲ್ಲಿ ದೂರದಿಂದ ಬಂದು ಸೇವೆ ಮಾಡಿದ ತೃಪ್ತಿ ತಂದಿದೆ ಎನ್ನುತ್ತಾರೆ. ರೋಗಿಗಳು ನಿಯಮಿತವಾಗಿ ಆರೋಗ್ಯ ತಪಾಸಣಾ ಮಾಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ಕೂಡ ನೀಡಿದರು.
ಇದಕ್ಕೆ ಇವರ ಶ್ರೀಮತಿ ಅವರ ಸಹಕಾರ ಹಾಗೂ ತಂದೆ,ತಾಯಿ,ಅತ್ತೆ, ಮಾವ, ರೋಗಿಗಳ ಮಧ್ಯೆ ನಿಂತು ನೆರವಾದುದು ವಿಶೇಷವಾಗಿತ್ತು. ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಗ್ರಾಮ ರಾಜ್ಯ ಗಾಂಧಿ ಪರಿಕಲ್ಪನೆಗೆ ಇಂಬು ನೀಡಿದೆ ಎಂದರೆ ತಪ್ಪಾಗಲಾರದು....
Regards,
Team Oliver MSDC