
16/04/2023
ಹೊಟ್ಟೆ ಭಾಗದ ಬೊಜ್ಜು, ಅಧಿಕ ತೂಕ
ಇಳಿಸಿಕೊಳ್ಳುವ ಸಹಜ, ಸುಲಭ ಹಾಗೂ ಸರಳ ವಿಧಾನ!
ಉಪವಾಸವಿಲ್ಲ-ಸಪ್ಲಿಮೆಂಟ್ಸ್ ಗಳಿಲ್ಲ-ಕಠಿಣ ವ್ಯಾಯಾಮವಿಲ್ಲ!
ನಿಮಗ ತಿಳಿದಿರುವಂತೆ ನಮ್ಮಲ್ಲಿ ಬಹಳಷ್ಟು ಜನ ಅಸಹಜ ರೀತಿಯಲ್ಲಿ ದಪ್ಪಗಿರುತ್ತಾರೆ, ಸಣ್ಣಗಿದ್ದವರಲ್ಲೂ ಹೊಟ್ಟೆಯ ಭಾಗ ದಪ್ಪಗಿರುತ್ತದೆ.
ಜೆನೆಟಿಕ್ ಕಾರಣದಿಂದ ಭಾರತೀಯರಲ್ಲಿ ಹೊಟ್ಟೆ ಹಾಗೂ ಮುಖದ ಭಾಗದಲ್ಲಿ, ಅಮೆರಿಕನ್ನರಲ್ಲಿ ಕುಂಡಿಯ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗುತ್ತದೆ.
ಮೂಲ ಕಾರಣವಿಷ್ಟೇ, ನಮ್ಮ ಆಹಾರ ಕ್ರಮ!
ಯಾರನ್ನಾದರೂ ನೀವು ಇಂದು ಏನು ತಿಂದಿರಿ ಕೇಳಿದರೆ, ಸಾಮಾನ್ಯವಾಗಿ ಸಿಗುವ ಉತ್ತರ ಅನ್ನ-ಚಪಾತಿ, ಅನ್ನ-ಅನ್ನ ಮುದ್ದೆ ಎಂದು ಉತ್ತರ ಸಿಗುತ್ತದೆ.
ಅಂದರೆ ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ 2 ಕೆಜಿ ಯಷ್ಟು ಊಟ ಮಾಡಿದರೆ ಅದರ 2/3 ಭಾಗದಷ್ಟು ಅನ್ನ, ಚಪಾತಿ ತಿನ್ನುತ್ತಾನೆ.
ಅಂದರೆ ಹೆಚ್ಚಿನ ಫ್ಯಾಟ್ ಉತ್ಪತ್ತಿ ಮಾಡುವ ಆಹಾರವನ್ನೇ ಪ್ರತಿ ದಿನ ಹೆಚ್ಚು ತಿನ್ನುತ್ತೇವೆ , ಇದೆ ಮೂಲ ಕಾರಣ.
ಹಾಗಾದರೆ ಪರಿಹಾರವೇನು?
ಮೊದಲನೇ ವಿಧಾನ:
ನೀವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಕನಿಷ್ಟ ಅರ್ಧದಷ್ಟು ಭಾಗ ಹಣ್ಣು, ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಇರುವಂತೆ ನೋಡಿಕೊಳ್ಳಿ. ಸೂರ್ಯಾಸ್ಥದ ನಂತರ ಬೆಳಗಿನ ಉಪಹಾರದವರೆಗಿನ ಅಂತರವನ್ನು ಕನಿಷ್ಠ 12 ಗಂಟೆ ಇರುವಂತೆ ನೋಡಿಕೊಳ್ಳಿ ಸಾಕು. ಕೇವಲ ಒಂದು ತಿಂಗಳಲ್ಲಿ ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ.
ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲಾ, ದೇಹದ ಯಾವ ಭಾಗದಲ್ಲಿ ಕೊಬ್ಬು ಹೆಚ್ಚಿದೆಯೋ ಅಲ್ಲೆಲ್ಲಾ ತನ್ನಿಂದ ತಾನೇ ಬೊಜ್ಜು ಕರಗುತ್ತದೆ.
ಎರಡನೆಯ ಪರಿಣಾಮಕಾರಿ ವಿಧಾನ ಡಿ.ಐ.ಪಿ ಡಯಟ್ (DIP):
ಮೂರು ಹಂತದ ಡಿ.ಐ.ಪಿ ಡಯಟ್ (DIP) ಅನುಸರಿಸುವುದು.
ಮೊದಲ ಹಂತ:
ನಿಮ್ಮ ದೇಹದ ತೂಕವನ್ನು ೧೦ ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ನಿಮ್ಮಿಷ್ಟದ ನಾಲ್ಕು ವಿವಿಧ ರೀತಿಯ ಹಣ್ಣುಗಳನ್ನು ಮಧ್ಯಾಹ್ನ 12 ಗಂಟೆಯ ವರಗೆ ತಿನ್ನಬೇಕು. (ಆಯಾ ಋತುಮಾನದ ಸ್ಥಳೀಯ ಹಣ್ಣುಗಳು, 60 ಕೆಜಿ ತೂಕದವರಾದರೆ 600 ಗ್ರಾಂ ನಷ್ಟು ).
ಎರಡೇ ಹಂತ:
ನಿಮ್ಮ ದೇಹದ ತೂಕವನ್ನು 5 ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ( 60 ಕೆಜಿ ತೂಕದವರು 300 ಗ್ರಾಂ ನಷ್ಟು) ನಾಲ್ಕು ರೀತಿಯ ಯಾವುದಾದರೂ ಹಸಿ ತರಕಾರಿಗಳನ್ನು ತಿನ್ನ ಬೇಕು, ನಂತರ ನಿಮ್ಮಿಷ್ಟದ ಏನನ್ನಾದರೂ ತಿನ್ನಬಹುದು.
ನೆನಪಿರಲಿ ಹಸಿ ತರಕಾರಿಗಳನ್ನು ತಿಂದ ನಂತರವೇ ನಿಮ್ಮಿಷ್ಟದ ಊಟ!
ರಾತ್ರಿಯ ಊಟಕ್ಕೂ ಇದೇ ವಿಧಾನ ಅನುಸರಿಸಿ. ಹಸಿ ತರಕಾರಿಗಳು+ನಿಮ್ಮಿಷ್ಟದ ಊಟ. ಗರಿಷ್ಠ 8 ಗಂಟೆಯ ಒಳಗೆ ತಿನ್ನ ಬೇಕು.
ಸಮಯ ಮೀರಿದರೆ ಯಾವ ಆಹಾರವೂ ಬೇಡ!
ಮೂರನೇ ಹಂತ: ಪ್ರಾಣಿಜನ್ಯ ಆಹಾರ ಪದಾರ್ಥಗಳನ್ನು ವರ್ಜಿಸುವುದು.
ಅಂದರೆ, ಮಾಂಸಾಹಾರ, ಮೊಟ್ಟೆ, ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ ಯಾವುದೂ ಬೇಡ. ಹಾಗೆಯೇ ಫ್ಯಾಕ್ಟರಿ, ಬೇಕರಿ ಪದಾರ್ಥಗಳನ್ನು ಈ ಡಯಟ್ ಸಮಯದಲ್ಲಿ ಬಿಟ್ಟು ಬಿಡುವುದು.
ಗಮನಿಸಿ. ಇಲ್ಲಿ ಸೂಚಿಸಿರುವಂತೆ ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಸಿಪ್ಪೆ ತೆಗೆದ ಮೇಲೆ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕೂ ಅಧಿಕ ಪ್ರಮಾಣದಲ್ಲಿ ಹಣ್ಣು- ತರಕಾರಿಗಳನ್ನು ತಿಂದರೆ ಅದು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಸರಿಯಾದ ಪ್ರಮಾಣಕ್ಕಿಂತ ಕಡಿಮೆ ತಿಂದರೆ ಅದು ಕೇವಲ ಆಹಾರವಾಗುತ್ತದೆ.
ಈ ಡಿ.ಐ.ಪಿ ಡಯಟ್ ಮೂರು ಮೂರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನದ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.
(ಸಸ್ಯಾಹಾರ-ಮಾಂಸಾಹಾರ ಆಹಾರ ಕ್ರಮದ ಮೇಲೆ ಅಲ್ಲ!)
ಒಂದು ತಿಂಗಳ ಕಾಲ ಶಿಸ್ತು ಬದ್ದವಾಗಿ ಈ ಡಿ.ಐ.ಪಿ ಡಯಟ್ ಅನ್ನು ಪಾಲಿಸಿದರೆ, ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ. ಮೂಳೆ-ಮಾಂಸಖಂಡಗಳಿಗೆ ಧಕ್ಕೆಯಾಗದಂತೆ ದೇಹದ ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲದೆ ಎಲ್ಲೆಲ್ಲಿ ಹೆಚ್ಚಿನ ಕೊಬ್ಬಿದೆಯೋ ಆಯಾ ಭಾಗದಲ್ಲಿ ಮಾತ್ರ ಕೊಬ್ಬು, ಹೆಚ್ಚಿನ ನೀರಿನ ಅಂಶ ಕರಗಿ ನಿಮ್ಮ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಕಡಿಮೆಯಾಗುತ್ತದೆ.
ಜೊತೆಗೆ ಬಹಳ ಚೈತನ್ಯವೂ ಇರುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ.
ಬಹಳ ಮುಖ್ಯವಾಗಿ ತಪ್ಪಾದ ಜೀವನ ಶೈಲಿಯಿಂದ ಬರುವ ಖಾಯಿಲೆಗಳಾದ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದಯ, ಚರ್ಮ ಸಂಬಂಧಿ ತೊಂದರೆಗಳು, ಖಾಯಿಲೆಗಳು, ಅಜೀರ್ಣ, ಮಲಬದ್ಧತೆ, ಇತ್ಯಾದಿ ಖಾಯಿಲೆಗಳ ವಿಷಯದಲ್ಲಿ ಕೇವಲ ಒಂದು ವಾರದಲ್ಲಿ ಈ ಡಿ.ಐ.ಪಿ ಡಯಟ್ ಅನುಸರಿಸುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸ್ವಾಭಾವಿಕವಾಗಿ ಪ್ರಗತಿ ಕಾಣಬಹುದು.
(ಡಿ.ಐ.ಪಿ ಡಯಟ್ ನ ಸಂಪೂರ್ಣ ವಿವರವನ್ನು ನನ್ನ ಹಿಂದಿನ ಲೇಖನದಲ್ಲಿ ತಿಳಿಸಲಾಗಿದೆ.)
ಇನ್ನೂ ಶೀಘ್ರದಲ್ಲಿ ಫಲಿತಾಂಶ ಪಡೆಯಲು ಅತ್ಯಂತ ಪರಿಣಾಮಕಾರಿ ಮೂರನೇ ವಿಧಾನವಿದೆ.
ಅದು ಹಾಟ್ ವಾಟರ್ ಇಮ್ಮರ್ಶನ್ ಥೆರಫಿ.
ಬಾತ್ ಟಬ್ ನಿಮಗೆ ಗೊತ್ತಿದೆ ಅಲ್ಲವೇ?
ಬಾತ್ ಟಬ್ ತುಂಬಾ ನೀರು ತುಂಬಿಸಿ. 42 ಡಿಗ್ರಿ ಸೆಲ್ಸಿಯಸ್ ನಷ್ಟು ನೀರನ್ನು ಬಿಸಿ ಮಾಡಿ. ಒಂದೇ ಬಾರಿಗೆ ಸುಮಾರು ಎರಡು ಗಂಟೆಯಷ್ಟು ಸಮಯ ಅಥವಾ ಬೆಳಿಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆಯಷ್ಟು ಸಮಯ ಕುತ್ತಿಗೆಯ ಮಟ್ಟಕ್ಕೆ ದೇಹವನ್ನು ಸಂಪೂರ್ಣ ಮುಳುಗಿಸಿ ಕಾಲು ನೀಡಿ ಕುಳಿತುಕೊಳ್ಳುವುದನ್ನು ಸುಮಾರು ಒಂದು ತಿಂಗಳು ಅಭ್ಯಾಸ ಮಾಡಿದರೆ, ನೀವು ಆಶ್ಚರ್ಯ ಪಡುವಷ್ಟು ರೀತಿಯಲ್ಲಿ ಬೊಜ್ಜು ಕರಗುವುದರ ಜೊತೆಗೆ ಗಣನೀಯವಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಎಷ್ಟು ಎಂದರೆ ದಿನಕ್ಕೆ ಸುಮಾರು 500 ಗ್ರಾಂ ನಿಂದ ಅತೀ ತೂಕದವರಿಗೆ 1 ಕೆಜಿ ವರೆಗೆ ಕಡಿಮೆಯಾಗುತ್ತದೆ!
ದೇಹದ ಅನಗತ್ಯ ನೀರಿನಂಶ, ಟ್ಯೂಮರ್, ಸ್ಟೋನ್ ಕರಗುತ್ತದೆ.
ಕಿಡ್ನಿ ಯಲ್ಲಿನ ಹೆಚ್ಚಿನ ಕ್ರೆಟಿನೈನ್, ಕೊಲೆಸ್ಟ್ರಾಲ್, ಯೂರಿಯ, ಪೊಟ್ಯಾಷಿಯಂ, ಸೋಡಿಯಂ, ಯೂರಿಕ್ ಆಸಿಡ್, ಶುಗರ್, ಹೆಚ್ಚಿನ ಫ್ಯಾಟ್ ಎಲ್ಲವೂ ಬೆವರು ಹಾಗೂ ಮೂತ್ರದ ರೂಪದಲ್ಲಿ ದೇಹವು ಸ್ವಾಭಾವಿಕ ರೂಪದಲ್ಲಿ ಹೊರಹಾಕುತ್ತದೆ. ಡಯಾಲಿಸಿಸ್ ಹಂತ ತಲುಪಿದವರಿಗೆ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಹೊಂದಲು ಇದೊಂದು ಪರಿಣಾಮಕಾರಿ ಅಸ್ತ್ರ.
(ಮೇಲಿನ ಮೂರು ವಿಧಾನಗಳಿಗೂ ವಿಜ್ಞಾನದ ಅಡಿಪಾಯವಿದೆ, ಲಕ್ಷಾಂತರ ಗುಣಮುಖರಾದ ಉದಾಹರಣೆಗಳಿವೆ, ಆಯುಷ್ ಇಲಾಖೆ ಡಿ.ಐ.ಪಿ ಡಯಟ್ ಯನ್ನು ಸತತ ಎರಡು ವರ್ಷ ಗಮನಿಸಿ, ಅದರ ಪಲಿತಾಂಶಗಳನ್ನು ಕೂಲಂಕುಷವಾಗಿ ಗಮನಿಸಿ ಅಧಿಕೃತವಾಗಿ ಮಾನ್ಯ ಮಾಡಿದೆ.)
ಧನ್ಯವಾದಗಳು
ಕಾರಂಜಿ ಶ್ರೀಧರ್
Email: swasthya.way2health@gmail.com