Tatkshana Ayurveda Hospital

Tatkshana Ayurveda Hospital 20 bedded Ayurvedic Hospital

Ayurveda hospital with In patient facilty Treatment for all health issues sich as Arthritis - Disc Prolapse - PCOS- Infertility - Thyroid - Obesity - Psoriasis - Parkinsons - Allergies - Urticaria

12/09/2025
11/09/2025

Ayurvedic specializations, known as branches or ashtangas, focus on different areas of medicine and wellness, such as Kayachikitsa (Internal Medicine), Shalya Ta**ra (Surgery), Shalakya Ta**ra (ENT and Ophthalmology), Kaumarbhritya (Pediatrics), Prasuti Ta**ra and Stri Roga (Obstetrics and Gynecology), Agad Ta**ra (Toxicology), and Bhuta Vidya (Psychiatry).

10/09/2025

ರಾಗಾದಿರೋಗಾನ್ ಸತತಾನುಷಕ್ತಾನ್ ಅಶೇಷಕಾಯ ಪ್ರಸೃತಾನಶೇಷಾನ್ ಔತ್ಸುಕ್ಯ ಮೋಹಾರತಿದಾನ್ ಜಘಾನ ಯೋಪೂರ್ವ ವೈದ್ಯಾಯ ನಮೋಸ್ತು ತಸ್ಮೈ 🙏
ಇದು ಅಷ್ಟಾಂಗಹೃದಯ ಸಂಹಿತೆಯಲ್ಲಿ ಕೊಟ್ಟಿರುವ ದೇವರ ಪ್ರಾರ್ತ್ಥನಾ ಶ್ಲೋಕವು. ಈ ಶ್ಲೋಕದ ಅರ್ಥವನ್ನು ತಿಳಿದು ದಿನಾ ಪಠಿಸುತ್ತಾ ಹೋದರೆ ನಮಿಗೆ ನೆಮ್ಮದಿ ಮತ್ತು ಆರೋಗ್ಯ ತಾನಾಗಿಯೆ ಬರುತ್ತೆ ಎಂಬ ನಂಬಿಕೆ. ರಾಗಾದಿ ರೋಗಾನ್ - ರೋಗಗಳು ಯಾವುದೆಲ್ಲಾ ಅಂದರೆ ಕಾಮ ಕ್ರೋಧ ಲೋಭ ಮದ ಮಾತ್ಸರ್ಯ - ರಾಗ ಅಂದರೆ ಛಟ ಜೀವನದಲ್ಲಿ ಒಬ್ಬೊಬ್ಬರಿಗೂ ಹಲವಾರು ಛಟಗಳು ಇರುತ್ತವೆ ಆಹಾರದಲ್ಲಾಗಲಿ ಇನ್ನಿತರ ವಿಷಯಗಳಲ್ಲಾಗಲಿ ಆವರ್ತನೆ ಹೊಂದುವ ಪ್ರೀತಿ ಛಟವಾಗೀ ತೀರಿ ರೋಗಗಳಾದುತ್ತವಮ ಎಂದು ತಾತ್ಪರ್ಯ. ಸತತಾನುಷಕ್ತಾನ್ ಅವುಗಳು ನಮ್ಮೊಂದಿಗೆ ಯಾವಾಗಳು ಅಂಟಿಕೊಂಡಿರುತ್ತವೆ. ಅಶೇಷಕಾಯಪ್ರಸೃತಾನ್ - ಈ ರೋಗಗಳು ಶರೀರಾಸಕಲ ಹರಡಿರುತ್ತವೆ, ಔತ್ಸುಕ್ಯ ಮೋಹ ಅರತಿದಾನ್ - ರೋಗಗಳಿಂದ ನಿಮಗೆ ಜೀವನದಲ್ಲಿ ಇಷ್ಟ ಕಡಿಮೆ ಆಗುವುದು, ತಪ್ಪಾದ ನಿರ್ಧಾರವನ್ನು ತೆಗೊಳ್ಳುವುದು ಮತ್ತು ದುಖ ಬರುವುದು ಕಂಡುಬರುತ್ತದೆ. ಆದಿ ವೈದ್ಯನಾದ ದೇವರು ಇವುಗಳನ್ನೆಲ್ಲಾ ಇಲ್ಲದೆ ಮಾಡುತ್ತಾರೆ ಅದಕ್ಕಾಗಿ ಆ ದೇವರಿಗೆ ನಮಸ್ಕಾರಿಸಬೇಕು ಎಂದು ವಾಗ್ಭಟಾಚಾರ್ಯರು ಉಪದೇಶಮಾಡಿರುತ್ತಾರೆ. 🌿

09/09/2025

“ನವಾನ್ಯೇವ ಹಿ ದ್ರವ್ಯಾಣಿ
ಯೋಜ್ಯಾನಿ ಅಖಿಲ ಕರ್ಮಸು “
ಆಯುರ್ವೇದದ ಒಂದು ಪರಮ ರಹಸ್ಯವೆಂದೇ ಹೇಳಬಹುದಾದ ಒಂದು ನಿಯಮ ಇಲ್ಲಿ ಬರದಿರುವುದು. ಇದು ಮಹರ್ಷಿ ಶಾರಂಗಧರ ಆಚಾರ್ಯ ತಮ್ಮ ಸಂಹಿತಾದಲ್ಲಿ ಬರದಿರುವುದು. ಕಾಯಿಲೆ ಯಾವುದೇ ಇರಲಿ ಅದಕ್ಕೆ ಚಿಕಿತ್ಸೆ ಮಾಡುವಾಗ ಬೇಕಾದ ಔಷಧಿಗಳು ತಾಜಾ ಗಿಡಮೂಲಿಕೆಗಳಿಂದ ತಯಾರಿಸಬೇಕು ಮತ್ತು ಆವಾಗ ಆವಾಗ ಸಿದ್ಧಪಡಿಸಿದ್ದಾಗಿರ ಬೇಕು ಹಾಗಾದರೆ ಉತ್ತಮ ಫಲ ನೀಡುತ್ತದೆ. ಇನ್ನು ತಯಾರು ಮಾಡಿ ತುಂಬಾ ಕಾಲಕಳುದಾದ ಔಷಧಗಳನ್ನು ಬಳಸಿ ಚಿಕಿತ್ಸೆ ಮಾಡುವಾಗ ಕೆಲವೋಮ್ಮೆ ಫಲಕಾರಿಯಾಗದೆ ಚಿಕಿತ್ಸೆ ತಡ ವಾಗಬಹುದು ಮತ್ತು ಫಲ ಸಾಧ್ಯತೆ ಕಡಿಮ ಕೂಡಾ ಆಗಬಹುದು. ಅದಕ್ಕಾಗಿ ನಮ್ಮಲ್ಲಿ ತಕ್ಷಣ ತಯಾರಿಸಿದ ಸ್ವರಸ ಮಂತಾದ ಔಷಧಗಳಿಂದ ಕಳುದ ಹತ್ತು ಪರುಷಗಳಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿ ಅತೀ ಕಠಿನ ರೋಗಗಳು ಕೂಡಾ ವಾಸಿಮಾಡಲಾಗಿದೆ. 🌿

08/09/2025

“ರಸ ಗುಣ ವೀರ್ಯ ವಿಪಾಕ ಪ್ರಭಾವ ಕರ್ಮಗಳು”
ಆಯುರ್ವೇದ ವೈದ್ಯರುಗಳು ಒಂದು ರೋಗಿಯನ್ನು ಪರಿಶೋಧಿಸಿ ಅವರಿಗೆ ಪಥ್ಯಾ ಪಥ್ಯ ಆಹಾರ ಕ್ರಮಗಳನ್ನು ಹೇಗೆ ತಿಳಿಸಿ ಹೇಳುತ್ತಾರೆ ? ಅದಕ್ಕೆ ಅವರು ಯಾವ ವಿದ್ಯಯನ್ನು ಉಪಯೋಗಿಸುತ್ತಾರೆ ? ಇದಕ್ಕಿರುವ ಉತ್ತರವೇ ಈ ಬರೆದಿರುವ ಫಾರ್ಮುಲಾ. ನಾವು ಬಳಸುವ ಪ್ರತೀ ಒಂದು ಆಹಾರ ಪದಾರ್ಥವು ಕೂಡಾ ಮೇಲೆ ಹೇಳಿರುವ ಆರು ಗುಣಗಳನ್ನು ಹೊಂದಿರುತ್ತದೆ. ರಸ ಅಂದರೆ ಷಡ್ರಸಗಳಾದ ಸಿಹಿ ಖಾರ ಹುಳಿ ಉಪ್ಪು ಕಹಿ ಮತ್ತು ಚೊಗರು. ಗುಣ ಅಂದರೆ ಲಘು ಮತ್ತು ಗುರು. ವೀರ್ಯ ಅಂದರೆ ಉಷ್ಣ ಮತ್ತು ಶೀತ. ವಿಪಾಕ ಅಂದರೆ ಆಹಾರವು ಸೇವಿಸಿ ಜೀರ್ಣವಾಗುವಾಗ ಪರಿಣಾಮ ಹೊಂದುವ ರೂಪ ಮೊದುರ ವಿಪಾಕ ಇತ್ಯಾದಿ. ಪ್ರೊಬಾವ ಅಂದರೆ ಒಂದು ಆಹಾರ ಶರೀರದಲ್ಲಿ ಯಾವ ಪ್ರೊಬಾವ ಬೀರುತ್ತವೆ ಅನ್ನುವುದು, ಉದಾಹರಣೆಗೆ ಕಾಪಿ ಚಹ ಇವುಗಳು ನಮ್ಮ ಶರೀರದಲ್ಲಿ ಕೆಲವು ಒಳ್ಳೆ ಮತ್ತು ಕೆಟ್ಟ ಪರಿಣಾಮ ಬೀರುತ್ತವೆ. ಮದ್ಯಪಾನ ತಂಬಾಕು ಸೋವನೆ ಇವ್ನೆಲ್ಲಾ ಬುದ್ದಿಗೆ ಕೆಟ್ಟ ಪ್ರಭಾವ ಬೀರುತ್ತದೆ.. ಇನ್ನು ಕರ್ಮ ಅಂದರೆ ಪ್ರತಿ ಪದಾರ್ಥವು ಅದರದ್ದೇ ಆದ ಕೆಲವು ಕೆಲಸಗಳನ್ನು ಮಾಡುತ್ತವೆ ಉದಾಹರಣೆಗೆ ಮಲಶೇಧನೆಯನ್ನು ತಡೆಯುವುದು, ಮೂತ್ರ ಶೋಧನೆ ಜಾಸ್ಚಿ ಮಾಡುವುದು… ನಿದ್ರೆಯನ್ನು ಕಡಿಮೆ ಮಾಡುವುದು ಮುಂದಾದವುಗಳು ಆಹಾರ ಪದಾರ್ಥಗಳ ಕರ್ಮ ಎಂದು ಪರಿಗಣಿಸಲಾಗುತ್ತದೆ. ಚರಕ ಸಂಹಿತಾ ಮುಂತಾದ ಆಯುರ್ವೇದ ಗ್ರಂಧಗಳಲ್ಲಿ ನಾವು ದಿನನಿತ್ಯ ಬಳಸುವ ಸಾವಿರಾರು ವಸ್ತುಗಳ ಗುಣದೋಷಗಳನ್ನು ವಿವರಿಸಲಾಗಿದೆ ಮತ್ತು ತಜ್ಞರು ಅದನ್ನು ಕಲಿತಿರುತ್ತಾರೆ. ನಾವು ಕೆಲವು ಆಹಾರಗಳನ್ನೋ ಔಷದಿಗಳನ್ನಾಗಲೀ ಪ್ರತೀ ದಿನ ಬಿಡದೇ ಸೇವಿಸುತ್ತಾ ಇದ್ದಲ್ಲಿ ಕೆಲವು ಆರೋಗ್ಯ ಸಮಸ್ಯಗಳು ಉಂಟಾಗುವ ಸಾಧ್ಯತೆ ಇದ್ದು ಕೆಲವು ರೋಗಾವಸ್ಥೆಗಳಲ್ಲಿ ಅವುಗಳನ್ನು ಸ್ವಲ್ಪ ದಿನ ಬಿಡುವುದರಿಂದ ರೋಗ ಬೇಗ ಗುಣಮುಖವಾಗುತ್ತದೆ ಮತ್ತು ಆರೋಗ್ಯ ಮರಳಿ ಬರುತ್ತದೆ. 🌿

05/09/2025

“ವಾತಂ ಪಿತ್ತಂ ಕಫಶ್ಟೇತಿ ತ್ರಯೋ ದೋಷಾ ಸಮಾಸತಃ”
ಮನುಷ್ಯ ಶರೀರವು ಪಂಚಮಹಾಭೂತಗಳಿಂದ ನಿರ್ಮಿಸಲಾಗಿದೆ. ಆವುಗಳು ಯಾಯವು ಅಂದರೆ ಮಣ್ಣು , ನೀರು , ಗಾಳಿ, ಬೆಂಕಿ ಮತ್ತು ಆಕಾಶ! ಇವುಗಳ ಜೋಡಿಗಳನ್ನು ದೋಷಗಳು ಎಂದು ಕರೆಯಲಾಗುತ್ತದೆ. ಮಣ್ಣು ಮತ್ತು ಜಲ ಸೇರಿ ಕಫ ದೋಷ, ಜಲ ಮತ್ತು ಬೆಂಕಿ ಸೇರಿ ಪಿತ್ತ, ಗಾಳಿ ಮತ್ತು ಆಕಾಶ ಸೇರಿ ವಾತ ದೋಷ. ಈ ಮೂರು ದೋಷಗಳು ಶರೀರವನ್ನು ಆರೋಗ್ಯದಲ್ಲಿ ಇಡುವುದರಲ್ಲಿ ತುಂಬಾ ಮುಖ್ಯತ್ವವನ್ನು ಹೊಂದಿದೆ. ದೋಷ ಅಂದರೆ ಕೆಚ್ಚು ಕಡಮೆ ಆಗುವಂಧಾದ್ದು ಅಂತ ಅರ್ಥ! ನಮಿಗೆ ಜ್ವರ ಬಂದಾಗ ಶರೀರ ತಾರ ಜಾಸ್ತಿ ಆಗ್ತದೆ ಅದರನ್ನು ಥೆರ್ಮೋಮೀಟರ್ನಲ್ಲಿ ಅಳತೆ ಮಾಡ ಬಹುದು, ಅದೇ ತರ ವಾತ ಪಿತ್ತ ಕಫಗಳು ಒಂದೋಂದು ರೋಗಗಳಲ್ಲಿ ಹೆಚ್ಚು ಇಲ್ಲಾ ಕಡಿಮೆ ಪ್ರಮಾಣದಲ್ಲಿ ಇರುತ್ತವೆ ಆ ಪ್ರಮಾಣಗಳನ್ನು ನಾಡಿ ಪರೀಕ್ಷೆ ಮತ್ತು ರೋಗಿಯ ಶರೀರ ಪರೀಕ್ಷೆ ಮಾಡುವುದರಿಂದ ವೈದ್ಯರು ಪತ್ತೆ ಹಚ್ಚುತ್ತಾರೆ. ಆಹಾರ ಕ್ರಮ ಇಲ್ಲ ವಿಹಾರ ಕ್ರಮ ತಪ್ಪಾದಾಗ ದೋಷಗಳು ಕುಪಿತವಾಗಿ ರೋಗಗಳಿಗೆ ಕಾರಣವಾಗುತ್ತವೆ. ಪ್ರತೀ ಒಬ್ಬನಿಗೂ ಹುಟ್ಟಿನಿಂದ ಒಂದು ಪ್ರಮಾಣದಲ್ಲಿ ದೋಷಗಳು ಇರುತ್ತವೆ ಅದಕ್ತೆ ಪ್ರಕೃತಿ ಎಂದು ಕರೆಯಲಾಗುತ್ತದೆ. ತಮ್ಮ ಪ್ರಕೃದಿಗನುಸಾರವಾದ ಆಗಾರಕ್ಕಮ ಮತ್ತು ಜೀವನ ನಡೆಸುವುದರಿಂದ ರೋಗಗಳಿಂದ ಪಾರಾಗಬಹುದು. ದೀರ್ಘಾಯುಸ್ಸಾಗಿ ಬಾಳಬಹುದು🌿.

04/09/2025

“ರೋಗಾಃ ಸರ್ವೇಪಿ ಜಾಯಂತೇ ವೇಗೋಧೀರಣ ಧಾರಣೈಃ”
ಇದ್ದಕ್ಕಿಂದಾಂಗೆಯೇ ಏನಾದರು ಒಂದು ಕಾಯಿಲೆ ಬಂದುಬಿಡುತ್ತದೆ ! ಯಾಕೆ ಯಾವ ಕಾರಣಕ್ಕೆ ನಮಗೆ ಒಂಡು ಕಾಯಿಲೆ ಬರುತ್ತದೆ ? ನಾವು ಯಾವ ತಪ್ಪು ಮಾಡಿಲ್ವಲ್ಲ ಅಂತ ಯೋಚಿಸ್ತೀವಿ…. ಆಯುರ್ವೇದದಲ್ಸಿದೆ ಈ ಪ್ರಶ್ನೆಗೆ ಉತ್ತರ!!
ಆಚಾರ್ಯ ವಾಗ್ಭಟರು ಹೇಳುತ್ತಾರೆ ನಮಿಗೆ ಎಲ್ಲಾ ರೋಗಗಳು ಬರುವುದಕ್ಕೆ ಕಾರಣ ಒಂದೇ ನಮ್ಮ ಶರೀರದ ಹಲವಾರು ಅವಶ್ಯಕತೆಗಳನ್ನು ನಿರ್ಲಕ್ಷ್ಯ ಮಾಡುವುದು ಅಥವಾ ಶರೀರದ ವೇಗಗಳಿಗೆ ಗಮನ ಕೊಡದೇ ಇರುವುದೇ ರೋಗಗಳಿದೆ ಮೂಲ ಕಾರಣ….
ಹಾಗಾದರೆ ವೇಗಗಳು ಅಂದರೆ ಯಾವುದೆಲ್ಲಾ ? ನೋಡಿ ನಮ್ಮ ಶರೀರ ಒಂದು ಯಂತ್ರದ ತರ ಅದಕ್ಕೆ ಕಾಲಾಕಲಕ್ಕೆ ಆಹಾರ ನೀರು ನಿದ್ರೆ ಇವುಗಳನ್ನು ನೀಡುತ್ತಾ ಇರಬೇಕು. ಮಲ ಮೂತ್ರ ವಿಸರ್ಜನೆ ಟೈಮಿಗೆ ಮಾಡಬೇಕು. ನಗು ಬರುತ್ತೆ ಅಳು ಬರುತ್ತೆ ಇಕ್ಕಳಿಕೆ ಬರುತ್ತೆ ಅಂದ್ರೆ ಮಾಡಬೇಕು ತಡೆಯ ಬಾರದು. ಹಸಿವಾದಾಗ ಆಹಾರ ಸೇವಿಸದೆ ಯಾವಾಗಲೋ ಸೇವಿಸುವುದರಿಂದ ಅಗ್ನಿಯು ಏರುಪೇರಾಗುತ್ತದೆ ಶರೀರ ತನ್ನ ಜೀರ್ಣ ಶಕ್ತಿಯನ್ನು ಕಳೆಯುತ್ತದೆ ಮತ್ತು ಅಜೀರ್ಣ ವಾದ ಆಹಾರ ವಿಷಕಾರಿಯಾಗಿ ಶರೀರದಲ್ಲೇ ಉಳಿಯುತ್ತದೆ. ಈ ತರ ಶರೀರದಲ್ಲಿ ಉಳುದಿರುವ ಕೆಟ್ಟ ಪದಾರ್ಥಗಳು ಯಾವುದು ಅಂದರೆ ಕೊಲಸ್ಟರೋಲ್, ಕ್ರಿಯಾಟಿನಿನ್, ಯೂರಿಕ್ ಆಸಿಡ್ , ಮೂತ್ರ ಕೋಶ ಕಲ್ಲು, ನೀರು ಗುಳ್ಳೆ ಮುಂತಾದವು. ಇವುಗಳು ರಕ್ತದ ಒತ್ತಡ ಸಕ್ಕರೆ ಕಾಯಿಲೆ , ಕಾಲು ನೋವು ಮುಂತಾದ ಹಲವಾರು ಸಮಸ್ಯೆಗಳಿಗೆ ಕಾರಣವಾದೀತು.
ಹಾಗಾಗಿ ಆರೋಗ್ಯವನ್ನು ಬಯಸುವವರು ಶರೀರವನ್ನು ಶರೀರದ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಸ್ಪಂದಿಸುವರಾಗಬೇಕು. ಆಗ ಎಷ್ಟೋ ಕಾಯಿಲೆಗಳು ಬರುವುದೇ ಇಲ್ಲ ಮತ್ತು ದೀರ್ಘಾಯುಸ್ಸು ದೊರೆತುತ್ತದೆ.
ನಿಮಗೆ ಈ ವಿಚಾರ ಸರಿ ಅಂಥ ಅನಿಸಿದಲ್ಲಿ ನಿಮ್ಮ ಬೇಕಾದವರಿಗೆ ಹಂಚಿ.
ಲೋಕಾ ಸಮಸ್ತಾ ಸುಖಿನೋ ಭವಂತು
ಶಾಂತಿಃ ಶಾಂತಿಃ ಶಾಂತಿಃ 🌿

03/09/2025

“ಆಯುರ್ವೇದೋಪದೇಶೇಷು ವಿಧೇಯೋ ಪರಮಾದರಃ”
ಇದು ಆಚಾರ್ಯ ವಾಗ್ಭಟರು ತಮ್ಮ ಅಷ್ಟಾಂಗಹೃದಯ ವೆಂಬ ಸಂಹಿತಾ ಪುಸ್ತಕದಲ್ಲಿ ಬರದಿರುವ ಶಾಸನೆ. ಇದರ ಅರ್ತ್ಛವು ತುಂಬಾ ಗೌರವಪೂರ್ಣವಾಗಿದೆ. ಮನುಷ್ಯ ಜೀವನವು ಇರುವುದು ಧರ್ಮ ಅರ್ಥ ಕಾಮ ಮೋಕ್ಷ ಈ ಪುರುಷಾರ್ಥಗಳನ್ನು ಸಾಧಿಸುವುದಕ್ಕಾಗಿ ಮತ್ತು ಆ ಸಾಧನೆಗಳಿಂದ ಮನಸ್ಸಿನ ನೆಮ್ಮದಿ ಶಾಂತಿ ಸಾರ್ಥಕತೆಯನ್ನು ಹೊಂದುವುದಕ್ಕಾಗಿ. ಆ ತರ ಒಂದು ಸಾರ್ಥಕ ಜೀವನ ಬದುಕಬೇಕೆಂದರೆ ನಮಗೆ ಆರೋಗ್ಯ ಆಯುಸ್ಸು ಸಹಾಯಕರವಾಗಿರಬೇಕು, ಅದಕ್ಕಾಗಿ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯ ಕೊಡಬೇಕು ತಮ್ಮ ತಮ್ಮ ಆರೋಗ್ಯವನ್ನು ಸದಾ ಕಾಪಾಡಲು ಆಯುರ್ವೇದ ಉಪದೇಶಗಳನ್ನು ರಾಜನ ಆದೇಶದ ತರ ಪಾಲಿಸಬೇಕು ಎಂದು ಆ ಶ್ಲೋಕದ ಅರ್ತ್ಛ. ಆಯುರ್ವೇದದಲ್ಲಿ ರೋಗಗಳ ವಿಚಾರ ಆರೋಗ್ಯದ ವಿಚಾರ ಆಹಾರದ ವಿಚಾರ ಎಲ್ಲವೂ ಬರುತ್ತೆ. ನಾವು ಒಂದೊಂದಾಗಿ ಇವುಗಳನ್ನು ನೋಡುತ್ತಾ ಹೋಗೋಣ🌿

31/08/2025

Now feel light and better by our special ayurvedic detox

31/08/2025

हर तरह का बीमारियों का इलाज हमारे आसपताल में दिया जाता हैं

Address

Tatkshana Ayurveda, Marappana Palya, Yeshwanthpur
Bangalore
560022

Alerts

Be the first to know and let us send you an email when Tatkshana Ayurveda Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to Tatkshana Ayurveda Hospital:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category