11/12/2018
ಹಲೋ ಮಿಸ್ಟರ್ ಫಕೀರ್ ನೀನು ಬರಿ ಭಾರತವನ್ನು ಅರಿತರೆ ಸಾಲದು ಜೊತೆಗೆ #ಭಾರತೀಯರನ್ನು ಸಹ ಅರಿಯಬೇಕು...
ಸತ್ಯ ಹೇಳು ನೀ ಅಧಿಕಾರಕ್ಕೆ ಬಂದಾಗಿನಿಂದ ಒಂದಾದ್ರು #ಪುಕ್ಸಟ್ಟೆ ಯೋಜನೆ ಕೊಟ್ಟಿದ್ದೀಯಾ, ಅಥ್ವಾ ಓಲೈಕೆ ಏನಾದ್ರೂ ಮಾಡಿದಿಯಾ...ಹೂಹ್ಞು ಯಾವ್ದು ಇಲ್ಲ ಬರಿ ಕೆಲಸ ಕೆಲಸ ಕೆಲಸ ಇಷ್ಟೇ ನಿನ್ ಜೀವನ...
ದೇಶದ ಸಾಲ ತೀರುಸ್ತಿನಿ ಅಭಿವೃದ್ಧಿಯ ಕ್ರಾಂತಿ ಮಾಡ್ತೀನಿ ಅಂತ ಹಗಲಿರುಳು ದುಡಿತ ಕುಂತ್ರೆ ಇಲ್ಲಿ ನಮ್ಗೆ ಪುಕ್ಸಟ್ಟೆ ಯೋಜನೆ ಕೊಡೋದ್ ಯಾರು?
ನೋಡಯ್ಯ ನ್ಯಾಯ ನೀತಿ ಧರ್ಮ ಅಂತ ಕೆಲಸ ಮಾಡಿದ್ದಕ್ಕೆ ನಿಮ್ ಗುರುಗಳು #ಅಟಲ್ ಗೆ ಮರೆಯಲಾರದ ಸೋಲು ಕೊಟ್ಟವರು ನಮ್ ಜನ, ಇನ್ನು ನೀನು ಸಹ ಅದೇ ಮಾರ್ಗದಲ್ಲಿ ಇದ್ದಿಯಾ ಈಗ ನಿನ್ ಕೈ ಕೂಡ ಬಿಡ್ತಾರೆ ನೋಡ್ತಿರು...
ನಿನ್ನ ಸೋಲಿಸೋದಿಕ್ಕೆ ಅದೆಷ್ಟು ಪಕ್ಷಗಳು ಒಂದಾಗಿ ಹಗಲಿರುಳು ಕಷ್ಟ ಪಡ್ತಿವೆ ನೋಡು, ಆದ್ರೆ ನಮ್ ಜನಕ್ಕೆ ಇದೇ ನರಿಗಳೇ ಬೇಕು , ಯಾಕಂದ್ರೆ ಜಾತಿ ಮುಖ್ಯ ನೋಡು ಅದುಕ್ಕೆ..
ನೋಟ್ ಬ್ಯಾನ್ ಮಾಡೋ ಅವಶ್ಯಕತೆ ಏನಿತ್ತು, ಭ್ರಷ್ಟ ಅಂತ ಗೊತ್ತಿದ್ರು ಅವ ನಮ್ ಜಾತಿಯವ ಅಂತ ಅವನನ್ನೇ ಗೆಲ್ಲಿಸುವ ಮನಸ್ಥಿತಿ ನಮ್ ಜನರದ್ದು, ನೀನ್ ಏನೇನೋ ಕಷ್ಟ ಪಡ್ತಿದಿಯಾ ಭ್ರಷ್ಟಾಚಾರ ಕಡಿಮೆ ಮಾಡೋಕೆ ಆದ್ರೆ ನಮ್ ಜನಕ್ಕೆ ಅದರ ಅವಶ್ಯಕತೆ ಇಲ್ಲ...
ನೀನ್ ನೂರು ಸಲ #ಭಾರತ್_ಮಾತಾ_ಕೀ_ಜೈ ಅಂತ ಹೇಳು, ಹೂಹ್ಞು ನಮಗೆ ನಮ್ ಜಾತಿಯವನೇ ಮುಖ್ಯ ನಮಗೆ ಅವನೇ ಗೆಲ್ಲಬೇಕು ಅಷ್ಟೇ ನಾವ್ ಜೈಕಾರ ಹಾಕೋದು ಕೂಡ ನಮ್ ಜಾತಿಯವನಿಗೆ...
#ಬಿಜೆಪಿಯಿಂದ ನೀನೊಬ್ಬನೇ ಕೆಲಸ ಮಾಡಿದ್ರೆ ಸಾಲ್ದು ಬೇರೆ ನಾಯಕರು ಸಹ ಕೆಲಸ ಮಾಡ್ಬೇಕು, ನಿನ್ ನೋಡಿದ್ರೆ ಒಮ್ಮೊಮ್ಮೆ ಅಯ್ಯೋ ಅನ್ಸುತ್ತೆ ಗುರುವೇ, ನೀನ್ ಒಬ್ನೆ ಅದೆಷ್ಟ್ ಕಷ್ಟ ಪಡ್ತಿದಿಯಾ ಅಂತ...
ನಿಂಗೇನ್ ಗುರು ಅಧಿಕಾರ ಇಲ್ದಿದ್ರು ಬದುಕ್ತಿಯ, ಆದ್ರೆ ನಮ್ ಕಥೆ ಹೇಳು? ಒಂದ್ ಗ್ರಾಮ ಪಂಚಾಯತ್ನ ಅಧ್ಯಕ್ಷ ಅಗೋದಿಕ್ಕೂ ಯೋಗ್ಯತೆ ಇಲ್ಲದವರೆಲ್ಲ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ, ನಮಗಿರುವ ಭಯ ಕೂಡ ಅದೇ , ಅಕಸ್ಮಾತ್ ಈ ಮೂರ್ಖರ ಕೈಗೆ ದೇಶವನ್ನು ಕೊಟ್ರೆ ಕೆಲವೇ ವರ್ಷಗಳಲ್ಲಿ ದೇಶವನ್ನು ತುಂಡು ತುಂಡು ಮಾಡಿ ಹರಿದು ಹಂಚಿ ಬಿಡ್ತಾರೆ...
ದುಡ್ ಹೋದ್ರು ಪರ್ವಾಗಿಲ್ಲ ಜನರನ್ನು ಸೆಳೆಯುವ ಯಾವ್ದಾದ್ರೂ ಯೋಜನೆ ಮಾಡು ಗುರುವೇ... ಸಧ್ಯಕ್ಕೆ ನಿನ್ ಬಿಟ್ರೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನ ಊಹಿಸಿಕೊಳ್ಳೋದಿಕ್ಕೂ ಕಷ್ಟ ಆಗ್ತಿದೆ...😢
-Shrinivas KB