16/03/2023
#ಒಳ್ಳೆಯದನ್ನೂ_ಹಂಚೋಣ_ಬನ್ನಿ:)
ಗುಜರಾತ್‌ನಲ್ಲಿ ಬೋರ್ಡ್ ಪರೀಕ್ಷೆ ನಡೆಯುತ್ತಿದೆ.
ಒಬ್ಬ ತಂದೆ ತನ್ನ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿ ಹೊರಟುಹೋಗ್ತಾನೆ.... ಮಗಳು 15 ನಿಮಿಷಗಳ ಕಾಲ ಅವಳ ರೋಲ್ ನಂಬರ್ ಹುಡುಕಲು ಪ್ರಯತ್ನಿಸಿದಳು, ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬಹಳ ಸಮಯದಿಂದ ಈಕೆ ಅಸಮಾಧಾನಗೊಂಡಿದ್ದನ್ನು ನೋಡಿದ ನಂತರ ಆಕೆಯ ಹಾಲ್ ಟಿಕೆಟ್ ತೆಗೆದುಕೊಂಡು ನೋಡ್ತಾರೆ.ಹುಡುಗಿಯ ತಂದೆ ಅವಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದ್ದಾರೆ, ಹುಡುಗಿಯ ನಿಜವಾದ ಪರೀಕ್ಷಾ ಕೇಂದ್ರವು ಅಲ್ಲಿಂದ 20 ಕಿಮೀ ದೂರದಲ್ಲಿದೆ ಅನ್ನೋದು ಅವರಿಗೆ ಗೊತ್ತಾಗತ್ತೆ.
ಪರೀಕ್ಷೆಗೆ 20 ನಿಮಿಷ ಮಾತ್ರ ಉಳಿದಿತ್ತು.ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕೃತ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಹುಡುಗಿಯನ್ನು ಸಮಯಕ್ಕಿಂತ ಮುಂಚಿತವಾಗಿ ಆಕೆಯ ಮೂಲ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಆಕೆಯ ಒಂದು ವರ್ಷ ಹಾಳಾಗದಂತೆ ರಕ್ಷಿಸಿದರು.