09/05/2026
*ವಿಶ್ವ ತಾಯಂದಿರ ದಿನದ ಶುಭಾಶಯಗಳು*
ರಜೆ, ಸಂಬಳವೇ ಇಲ್ಲದೆ ಕೆಲಸ ಮಾಡುವ ಶ್ರಮಜೀವಿ... ಕುಟುಂಬದ ಏಳಿಗೆಗೆ ಕ್ಷಣಕ್ಷಣಕ್ಕೂ ಕಷ್ಟಪಡುವ ತ್ಯಾಗಮಯಿ... ಇಂದು ಅಮ್ಮಂದಿರ ದಿನ. ಹೀಗಾಗಿ, ಇಲ್ಲಿದೆ ಪ್ರತ್ಯಕ್ಷ ದೇವರಾದ ಅಮ್ಮಂದಿರ ದಿನದ ಶುಭಾಶಯದ ಸಂದೇಶಗಳು...
ಅಮ್ಮ... ಈ ಒಂದು ಪದವೇ ಅಮೃತ... ಅಮ್ಮ ಎಂದರೆ ಸಂಜೀವಿನಿ, ಅಮ್ಮನ ಮಾತೇ ಜೇನಿಗಿಂತಲೂ ಸಿಹಿ... ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ... ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರೀ ಮಾತಲ್ಲ, ಅದು ನಿಜ ಕೂಡಾ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ.
ಕಷ್ಟ ಬಂದಾಗ ಸಂತೈಸಿದವರು ಅಮ್ಮ... ಮಕ್ಕಳ ಹಾದಿಗೆ ಸದಾ ಕಾವಲಾಗಿರುವವರು ಅಮ್ಮ... ಎಡವಿ ಬಿದ್ದಾಗ ಕೈ ಕೊಟ್ಟು ಮೇಲೆ ಎತ್ತುವವರು ಅಮ್ಮ... ಕಣ್ಣೀರಿಟ್ಟಾಗ ಪ್ರೀತಿಯ ಮಳೆಗರೆದು ಕಣ್ಣೀರು ಒರೆಸುವವರು ಅಮ್ಮ... ಸಾಧನೆ ಮಾಡಿದಾಗ ಹಿರಿಹಿರಿ ಹಿಗ್ಗಿ ಖುಷಿ ಪಡುವವರು ಅಮ್ಮ... ತಾನು ಅರೆಹೊಟ್ಟೆಯಲ್ಲಿದ್ದರೂ ಮಕ್ಕಳು ಹಸಿದಿರಬಾರದು ಎಂದು ಕಷ್ಟಪಡುವವರು ಅಮ್ಮ... ಕೊನೆಯುಸಿರು ಇರುವ ತನಕ ಮಕ್ಕಳ ಏಳಿಗೆಯನ್ನೇ ಬಯಸುವವರು ಅಮ್ಮ... ಹೀಗೆ... ಅಮ್ಮ ಎಂದರೆನೇ ಎಲ್ಲಾ... ಎಲ್ಲರ ಬದುಕಿನ ಅಣು ಅಣು ಕೂಡಾ ಅಮ್ಮ ಕೊಟ್ಟ ಭಿಕ್ಷೆ...
ಪ್ರತೀಕ್ಷಣವೂ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವರು ಅಮ್ಮ... ಇವರು ರಜೆ, ಸಂಬಳವೇ ಇಲ್ಲದೆ ದುಡಿಯುವ ಜೀವ... ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತವನ್ನೇ ಬೆವರಂತೆ ಬಸಿದು ಕುಟುಂಬವನ್ನು ಕಾಪಾಡುವ ಶಕ್ತಿ ಎಂದರೆ ಅದು ತಾಯಿ... ಅಮ್ಮನ ಮಮತೆಯ ಆಳ, ಅಗಲವನ್ನು ಅಳೆಯಲು ಯಾರಿಂದಲೂ ಸಾಧ್ಯವೇ ಇಲ್ಲ. ಬರೀ ಒಂದೆರಡು ಪದಗಳಲ್ಲಿ ತಾಯಿಯನ್ನು ಬಣ್ಣಿಸುವುದು ಕೂಡಾ ಸಾಧ್ಯವಿರುವ ಮಾತಲ್ಲ...
ಇಂದು ಅಮ್ಮಂದಿರ ದಿನ. ತಾಯಿಗಾಗಿ ಮೀಸಲಾದ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ದಿನ. ಹಾಗಂತ, ಅಮ್ಮಂದಿರ ದಿನ ಬರೀ ಒಂದು ದಿನಕ್ಕೆ ಮೀಸಲಲ್ಲ. ಯಾಕೆಂದರೆ, ಎಲ್ಲರಿಗೂ ಪ್ರತಿದಿನವೂ ಅಮ್ಮಂದಿರ ದಿನವೇ. ಆದರೆ, ಇಂದು ಈ ದಿನದ ಅಧಿಕೃತ ಆಚರಣೆಯಷ್ಟೇ. ಹೀಗಾಗಿ, ಎಲ್ಲರನ್ನೂ ನವಮಾಸ ಹೊತ್ತು ಹೆತ್ತು, ಸಾಕಿ ಸಲಹಿದ ತಾಯಿಗೆ ಶುಭಾಶಯ ಹೇಳುವುದು ಎಲ್ಲರ ಜವಾಬ್ದಾರಿ...
ತಾಯಿಯೇ ಶಕ್ತಿ, ಅವರೇ ಮೊದಲ ಗುರು, ಮಾರ್ಗದರ್ಶಕಿ. ಅವರೇ ಆತ್ಮಸಾಕ್ಷಿಯ ಕೈಗನ್ನಡಿ. ತಾಯಂದಿರದ್ದು ಪ್ರಾಂಜಲ ಮನಸ್ಸು, ನಿರ್ಮಲ ಪ್ರೀತಿ. ಅಂತಹ ಮಮಕಾರದ ಸಾಕಾರಮೂರ್ತಿಗಳಾದ ಎಲ್ಲ ಮಾತೆಯರಿಗೂ ತಾಯಂದಿರ ದಿನದ ಶುಭಾಶಯಗಳು.
Mother is greatest strength, first teacher, mentor and humble guide. She mirrored by conscience. Mothers are the purest soul, so here’s wishing them all a very Happy Mother’s Day.
https://youtu.be/PIjOXXVVKVs
https://youtu.be/w9yOuJTuDxg
https://youtu.be/R1HFIu89M8k