
16/08/2025
ದಿನಾಂಕ 15-08-2025 ರ ಶುಕ್ರವಾರ ಬೆಳಿಗ್ಗೆ ನಮ್ಮ ಆಸ್ಪತ್ರೆಯ ಆವರಣದಲ್ಲಿ 8.15 ಕ್ಕೆ ಆಸ್ಪತ್ರೆಯ ರಜತ ಸಂಭ್ರಮ ವರ್ಷದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಖ್ಯಾತ ಅರವಳಿಕೆ ತಜ್ಞರಾದ ಡಾ. ಮಾರುತಿ ಪ್ರಸಾದ್ ಪಿ. ಇವರು ನಡೆಸಿಕೊಟ್ಟು ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು.
ಶ್ರೀ ಜಗದೀಶ್ ಹಾಗೂ ಶ್ರೀಮತಿ ಶಾಂತ ಇವರು ದೇಶಭಕ್ತಿಗೀತೆ ಗಾಯನ ನಡೆಸಿಕೊಟ್ಟರು. ಆಸ್ಪತ್ರೆಯ ಅಸಿಸ್ಟೆಂಟ್ ಅಡ್ಮಿನ್ ಶ್ರೀನಂದನ್ ರಾವ್ ಇವರು ಪ್ರಧಾನ ಭಾಷಣ ಮಾಡಿ ಸ್ವಾತಂತ್ರ್ಯ ಬಂದ ಬಗೆ ಹಾಗೂ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರವನ್ನು ಉಳಿಸುಕೊಂಡು ಹೋಗುವಲ್ಲಿ ಇಂದಿನ ಜನತೆಗಿರುವ ಸವಾಲುಗಳ ಕುರಿತು ಮಾತನಾಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಬ್ಬರಾವ್ ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ಆಪರೇಷನ್ ಸಿಂಧೂರ್ ಬಗ್ಗೆ ಪ್ರಸ್ಥಾಪಿಸಿ ನಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಕೆಲವು ಇಂತಹ ಶಿಸ್ತುಬದ್ಧತೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆಕೊಟ್ಟರು.
ಶ್ರೀ ಶಿವಕುಮಾರ್ ಮತ್ತು ತಂಡದವರು ಕಾರ್ಯಕ್ರಮದ ಒಟ್ಟೂ ಉಸ್ತುವಾರಿ ನಿರ್ವಹಿಸಿ ಎಲ್ಲರಿಗೂ ಸಿಹಿ ವಿತರಣೆ ಮಾಡಿದರು. ಹಿರಿಯ ವೈದ್ಯರುಗಳಾದ ಡಾ.ರಾಘವೇಂದ್ರ ದೊಡ್ಡಮನಿ, ಡಾ. ಮುರಳೀಧರ ಎಸ್. ಪಿ, ಡಾ. ಗಾಯಿತ್ರಿ ಆರಾಧ್ಯಮಠ, ಡಾ. ನಿತೀಶ್ ಕೊಟ್ರಪ್ಪ, ಡಾ. ವಿರೂಪಾಕ್ಷಯ್ಯ ಹಿರೇಮಠ, ಡಾ. ಸುಧೀಂದ್ರ ಮುಂತಾದವರು ಉಪಸ್ಥಿತರಿದ್ದರು.