
11/11/2022
ಕರ್ನಾಟಕ ರಾಜ್ಯದ ಸಮುದಾಯ ಆರೋಗ್ಯ ಅಧಿಕಾರಿಗಳ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ನವೆಂಬರ್ 18ನೇ ತಾರೀಕು ಒಂದು ದಿನದ ಸಾಂಕೇತಿಕ ಧರಣಿಯನ್ನು ರಾಜ್ಯದ 28 ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಮುಂದೆ ಹಮ್ಮಿಕೊಳ್ಳಲಾಗಿದ್ದು ಸಂಬಂಧಪಟ್ಟ ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರತಿಯೊಬ್ಬರು ಆ ಧರಣಿಯಲ್ಲಿ ಭಾಗವಹಿಸಿ ಧರಣಿಯನ್ನು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
====>ಬೇಡಿಕೆಗಳು
1. ಸೇವೆ ಖಾಯಮಾತಿ ಮಾಡುವುದು.
2. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರೋತ್ಸಾಹ ಧನ 15,000/- ರೂ ಗಳಿಗೆ ಹೆಚ್ಚಿಸುವುದು.
3. ಕೇಂದ್ರದ ಮಾರ್ಗಸೂಚಿಯನ್ನ ಪಾಲಿಸದೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ವಿವಿಧ ಕೆಲಸಗಳಲ್ಲಿ ತೊಡಗಿಸುವುದನ್ನು ನಿಲ್ಲಿಸುವುದು.
4. ಕೆಲಸದಲ್ಲಿ ಆಗುತ್ತಿರುವ ಕಿರುಕುಳ ಹಾಗೂ ಒತ್ತಡವನ್ನು ನಿಲ್ಲಿಸುವುದು.
5. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸೂಕ್ತ ಅನುಕೂಲ ಮಾಡಿಕೊಡುವುದು.
6. ಇತರೆ ಕುಂದು ಕೊರತೆಗಳನ್ನು ನಿವಾರಿಸುವುದು.