
26/03/2025
~~*ಡಾಕ್ಟರ್ ಸುಕೃತ್ ಶೆಟ್ಟರ್~*~
*ಸಮನ್ವಯ ಹೋಮಿಯೋಪಥಿಕ್ ಕ್ಲಿನಿಕ್*
೧ನೇ ಮಹಡಿ, ಎಲ್.ಇ.ಎ. ಕ್ಯಾಂಟೀನ್ ಮೇಲುಗಡೆ, ಆರ್.ಎಲ್.ಎಸ್ ಕಾಲೇಜ್ ಕಾಂಪೌಂಡ್, ಕಾರ್ಪೊರೇಷನ್ ಸರ್ಕಲ್ ಹತ್ತಿರ
ಧಾರವಾಡ
Ph: 7795670875
*Gout*
ಗಂಟುವಾತ, ಕೀಂಟುಬೇನೆ
_ರೋಗದ ಸ್ವಭಾವ_ :- ಸೋಡಾದ ಯೂರೇಟ್ (urate of soda) ಎಂಬ ಜೇಡಿಸ್ವಭಾವದ ಲವಣವು, ರಕ್ತವಾಹಿನಿಗಳಲ್ಲಿ ಸೇರಿದ ದೆಸೆಯಿಂದ ಚಿಕ್ಕ ಗಂಟುಗಳು ಬಾತು ನೋಯುವದು.
_ಲಕ್ಷಣಗಳು_ :- ಕೈ ಕಾಲ ಗಂಟುಗಳು, ಮುಖ್ಯವಾಗಿ ಹೆಬ್ಬೆಟ್ಟುಗಳು, ಬಾತುಹೋಗುವದು, ಮಿಂಚುವ ಕೆಂಬಣ್ಣ, ಕಠಿಣ ಬೇನೆ, ರಾತ್ರಿ ಮಲಗಿರುವಾಗ ವಿಪರೀತ ನೋವು, ಜ್ವರ, ನಡುಗು, ಅಜೀರ್ಣ ಇರುವದು. ನೋವಿನ ಭಾಗಕ್ಕೆ ಕಿಂಚಿತ್ ಸ್ಪರ್ಶವಾದರೂ ವೇದನೆಯುಂಟಾಗುವದು.
_ಪರಿಣಾಮ_ :- ಈ ತರದ ವಾತದ ಬೇನೆ ಆಗಾಗ್ಗೆ ಉಂಟಾಗುವದು ಆದರೆ ಅನೇಕ ಸಂಗತಿಗಳಲ್ಲಿ ಹೋಮಿಯೊಪಥಿ ಚಿಕಿತ್ಸೆಯಿಂದ ಗುಣವಾಗಿದೆ. ಈ ತರದ ರೋಗಗಳು ಬಹುಶಃ ದೀರ್ಘಕಾಲದ ರೋಗವಾಗಬಹುದು. ಚಳಿಯಿಂದ, ರಸಕರ್ಪೂರ (calomel) ಯಾ ಕೊಲ್ಟಿಕಮ್ (colchicum) ಲವಣಗಳ ಅತಿ ಸೇವನೆಯಿಂದ ಮೆದುಳು, ಶ್ವಾಸಕೋಶ, ಅನ್ನಕೋಶಗಳ ಉರಿಬೇನೆ ಅಥವಾ ಗುಂಡಿಗೆರೋಗಕ್ಕೆ ಸೇರಿ ಬೇನೆ ವಿಷಮವಾಗಬಹುದು. ಸಂದುವಾತಕ್ಕೂ (gout) ಶೋಣಿತ ವಾತಕ್ಕೂ (rheumatism) ಹೆಚ್ಚು ಕಡಿಮೆ ಏನೆಂದರೆ; 1 ನೆಯದರಲ್ಲಿ ಚಿಕ್ಕ ಗಂಟುಗಳು ಬಾತಿರುವವು. ಪ್ರಾಯ ಬರುವದಕ್ಕೆ ಮುಂಚೆ ಉಂಟಾಗುವುದಿಲ್ಲ. ಬಹುಶಃ ಮಾತುಬರಿ ಜಡ ದೇಹಿಗಳಿಗೆ ಉಂಟಾಗುವದು. ಸಮಧಾತು ಪ್ರದೇಶದಲ್ಲಿ ಉಂಟಾಗುವದು. ಸಂತಾನ ಪರಂಪರೆಯಾಗಿ ಬರುವದು. ಆದರೆ 2ನೆಯದು ದೊಡ್ಡ ಗಂಟುಗಳಲ್ಲಿ ಉಂಟಾಗಿ, ವಯಸ್ಸಿನ ಭೇದವಿಲ್ಲದೆ ಯಾರಿಗಾದರೂ ಬರಬಹುದು. ಸ್ತ್ರೀಪುರುಷರಿಗೆ ಬರುವದು. ಕಾಯಕಷ್ಟ ಮಾಡಿ ಗೇಯುವ ಬಡವರಿಗೂ ಯಾವ ಪ್ರದೇಶದಲ್ಲಾದರೂ ಉಂಟಾಗಬಹುದು.
_ಕಾರಣಗಳು_ :- ನಡುಪ್ರಾಯ, ಪುರುಷತ್ವ, ಸಂತಾನಪರಂಪರೆ, ಪುಷ್ಟ ದೇಹಪ್ರಕೃತಿ, ಕೂತಲ್ಲಿಯೇ ಇದ್ದು ಮಾಡುವ ಪ್ರವೃತ್ತಿ, ಮೃಷ್ಟಾನ್ನ ಸೇವನೆ, ಉತ್ತೇಜಕವಾದ ಪಾನಗಳು, ಶರೀರಧಾವತಿ, ಅಜೀರ್ಣ, ಹುಳಿಪಾನಗಳ ವಿಪರೀತ ಅಭ್ಯಾಸ; ಕೆಲವು ಸಾರಿ ಬಡತನದ ಜೀವನ ಇವು ಕಾರಣವಾಗಬಹುದು.
_ಸಾಮಾನ್ಯ ಚಿಕಿತ್ಸೆ_ :- ಗಂಟುವಾತ ಬಾರದಂತೆ ಒಳ್ಳೇ ಲಘುತರದ ಆಹಾರವನ್ನು ಉಣ್ಣಬೇಕು. ಉತ್ತೇಜಕಗಳನ್ನು ವರ್ಜಿಸಬೇಕು. ನಿರ್ಮಲವಾದ ಗಾಳಿಯಲ್ಲಿ ತಿರುಗಾಡುತ್ತಿರಬೇಕು. ತಣ್ಣೀರಿನಲ್ಲಿ ಅದ್ದಿದ ಅಂಗವಸ್ತ್ರದಿಂದ ಪ್ರತಿ ದಿನ ಬೆಳಿಗ್ಗೆ ಮೈಯನ್ನು ತೊಳೆದು ಒರಸುವದು. ಅಸ್ವಸ್ಥದ ಕಾಲದಲ್ಲಿನೋವುಳ್ಳ ಭಾಗಗಳಿಗೆ ಬಿಸಿ ನೀರಿನ ಸೇಕ ಕೊಟ್ಟು ಕೆಲೆಂಡುಲದ ಮುಲಾಮನ್ನು * ಹಚ್ಚಬೇಕು. ಆಹಾರವು ಮಿತವಾಗಿರಬೇಕು.
*ಹೋಮಿಯೋಪಥಿ ಚಿಕಿತ್ಸೆ*
ಪದೇ ಪದೇ ಮರುಕಳಿಸುತ್ತಿರುವ ವಾಯು ಪ್ರಕೋಪಕ್ಕೆ ಮೂರು ತರಹದ ಚಿಕಿತ್ಸೆಯನ್ನು ಕಲ್ಪಿಸಲಾಗಿದೆ
1.ಸೆಕ್ಟರ್ ಟ್ರೀಟ್ಮೆಂಟ್(Sector Treatment): ಗ್ಯಾಸ್ ನ ಲಕ್ಷಣಗಳು ಉತ್ಪಾದನೆಯಾಗಲು ಕಾರಣಗಳನ್ನು ವಿಮರ್ಶಿಸಿ ಲಕ್ಷನಾಧಾರಿತ ಚಿಕಿತ್ಸೆ.
ವ್ಯಕ್ತಿಗತ ಚಿಕಿತ್ಸೆ (Individualized Treatment): ವ್ಯಕ್ತಿಯ ಮಾನಸಿಕ ದೈಹಿಕ ವಿಷಯಗಳನ್ನು ಪರಾಮರ್ಶಿಸಿ, ಕಾಯಿಲೆಯ ಮೂಲವನ್ನು ಕಂಡುಹಿಡಿದು ಅಧಿಕ ಸತ್ವದಲ್ಲಿ ನೀಡುವ ಚಿಕಿತ್ಸೆ.
ಇಂಟರ್ ಕರೆಂಟ್ ಚಿಕಿತ್ಸೆ(Intercurrent Treatment): ರೋಗವು ಮರುಕಳಿಸದಂತೆ ವ್ಯಕ್ತಿಯ ಮಯಾಸಂ ಆಧಾರದಲ್ಲಿ ನೀಡುವ ಚಿಕಿತ್ಸೆ.
ಹೋಮಿಯೋಪತಿ ಔಷಧವು ವ್ಯಕ್ತಿಗತ ಆಧರಿಸಿದೆ, ನಿರ್ದಿಷ್ಟ ಕಾಯಿಲೆಗೆ ಯಾವುದೇ ನಿರ್ದಿಷ್ಟ ಔಷಧಿಯನ್ನ ಆಯಾ ರೋಗಿಗಳ ಅನುಗುಣವಾಗಿ ಹುಡುಕಲಾಗುತ್ತೆ. ಆದ್ದರಿಂದ ಯಾವಾಗಲೂ ನಿಮ್ಮ ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಿ. ಸ್ವಯಂ ಪ್ರಿಸ್ಕ್ರಿಪ್ಷನ್ ತೆಗೆದುಕೊಳ್ಳುವುದನ್ನು ತಪ್ಪಿಸಿ.