Dr. Amaresh Patil

Dr. Amaresh Patil ಮಕ್ಕಳ ತಜ್ಞರು ಮತ್ತು ಅಧ್ಯಕ್ಷರು ಐ.ಎ.ಪಿ ವಿಜಯನಗರ ಶಾಖೆ, ಗಂಗಾವತಿ. Pediatrician & President IAP Vijayanagara Branch, Gangavati.

Ability to work and interact effectively with multidisciplinary team

ಕಿತ್ತೂರು ಸಾಮ್ರಾಜ್ಯದ ವೀರ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯ ದಿನದಂದು ಶತ ಶತ ನಮನಗಳು.
15/08/2025

ಕಿತ್ತೂರು ಸಾಮ್ರಾಜ್ಯದ ವೀರ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯ ದಿನದಂದು ಶತ ಶತ ನಮನಗಳು.

ಭಾರತ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ ಎಲ್ಲರ...
15/08/2025

ಭಾರತ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ ಎಲ್ಲರಿಗೂ 79 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸೋಣ! ನಮ್ಮ ಜಾತಿ ಧರ್ಮಗಳು ಯಾವುದೇ ಇರಲಿ, ಅಂತಿಮವಾಗಿ ನಾವು ಭಾರತೀಯರು ಎಂಬ ಭಾವ ನಮ್ಮಲಿರಲಿ. ಜೈ ಹಿಂದ...ಜೈ ಭಾರತ್...

ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಬ್ಬದ ಹಾರ್ಧಿಕ ಶುಭಾಶಯಗಳು .
09/08/2025

ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಬ್ಬದ ಹಾರ್ಧಿಕ ಶುಭಾಶಯಗಳು .

ನಿನ್ನೆ ಗಂಗಾವತಿ ನಗರದ ಭಕ್ತಿಯ ಪ್ರತೀಕವಾದ ಹಿಂದೂ ಮಹಾ ಮಂಡಳಿ ಗಣಪತಿಯ 11 ನೇ ವರ್ಷದ ಧ್ವಜಸ್ತಂಭ ಪೂಜಾ ಕಾರ್ಯಕ್ರಮದಲ್ಲಿ ಗುರು ಹಿರಿಯರೊಂದಿಗೆ ...
08/08/2025

ನಿನ್ನೆ ಗಂಗಾವತಿ ನಗರದ ಭಕ್ತಿಯ ಪ್ರತೀಕವಾದ ಹಿಂದೂ ಮಹಾ ಮಂಡಳಿ ಗಣಪತಿಯ 11 ನೇ ವರ್ಷದ ಧ್ವಜಸ್ತಂಭ ಪೂಜಾ ಕಾರ್ಯಕ್ರಮದಲ್ಲಿ ಗುರು ಹಿರಿಯರೊಂದಿಗೆ ಭಾಗವಹಿಸಿದ ಕ್ಷಣಗಳು.

ಭೋಲೊ ಗಜನಾನ ಮಹಾರಾಜ್ ಕೀ ಜೈ...

ದಿನಾಂಕ 30.7.2025 ರ ಬುಧವಾರ ದಂದು ಹಂಪಿ ಕ್ಷೇತ್ರದ ಸಂರಕ್ಷಣೆಯ ಕುರಿತಾದ 'ಯುನೆಸ್ಕೋ ಸಂವಾದದಲ್ಲಿ' KYTC ಮತ್ತು ಸ್ಥಳಿಯ ಸಮುದಾಯಗಳ ಪರವಾಗಿ  ...
01/08/2025

ದಿನಾಂಕ 30.7.2025 ರ ಬುಧವಾರ ದಂದು ಹಂಪಿ ಕ್ಷೇತ್ರದ ಸಂರಕ್ಷಣೆಯ ಕುರಿತಾದ 'ಯುನೆಸ್ಕೋ ಸಂವಾದದಲ್ಲಿ' KYTC ಮತ್ತು ಸ್ಥಳಿಯ ಸಮುದಾಯಗಳ ಪರವಾಗಿ ಭಾಗವಹಿಸುವ ಅವಕಾಶ ನನ್ನದಾಗಿತ್ತು.

ಈ ಸಂವಾದದಲ್ಲಿ..

1. ಅಂಜನಾದ್ರಿ / ಕಿಷ್ಕಿಂದೆ / ಹಂಪಿಯನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಘೋಷಿಸಿ, ಸ್ಥಳೀಯ ಜನತೆಯನ್ನೊಳಗೊಂಡ ಪ್ರವಾಸೋದ್ಯಮವನ್ನು ಸ್ಥಾಪಿಸಲು ಪ್ರೇರೇಪಿಸಬೇಕು.

2. ವಹಿವಾಟು ಅಥವಾ ನಿರ್ಮಾಣದ ಸುಲಭತೆಗಾಗಿ ಒಂದು ಸಂಪರ್ಕ ಸ್ಥಳವನ್ನು (Single Point of Contact) ರೂಪಿಸಬೇಕು.

3. ನಿರ್ಮಾಣ ಹಾಗೂ ಸಮರ್ಪಕ ನಿಯಂತ್ರಣದ ನಿಯಮಗಳು ಎಲ್ಲೆಡೆ ಒಂದೇ ರೀತಿಯಾಗಿರಬೇಕು.

3. ಹೋಮ್ ಸ್ಟೇ, ಫಾರ್ಮ್ ಸ್ಟೇ, ಕೃಷಿ ಪ್ರವಾಸೋದ್ಯಮ ಮತ್ತು ಸಾಯುಜ್ಯ ಕೃಷಿ ಜತೆಗೂಡಿದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು.

4. ಭಾರಿ ಕಾಂಕ್ರಿಟ್ ಕಟ್ಟಡಗಳಿಗೆ ಬದಲಾಗಿ ಬಂಗಾಳಿ ಹಟ್, ಚಾವಣಿಯ ಮನೆಗಳು, ಮಣ್ಣು ಮನೆಗಳಂತಹ ಪರಿಸರ ಸ್ನೇಹಿ ನಿರ್ಮಾಣ ಶೈಲಿಗೆ ಉತ್ತೇಜನ ನೀಡಬೇಕು.

5. ಯೋಜನೆ ಹಾಗೂ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಳಿಗೆ ಅಧ್ಯತೆ ನೀಡಬೇಕು.

6. ಇತಿಹಾಸ, ವಾಸ್ತುಶಿಲ್ಪ, ಪೌರಾಣಿಕ, ವನ್ಯಜೀವಿ ಸಂರಕ್ಷಣಾ ಪ್ರವಾಸ ಹಾಗೂ ಬೋಲ್ಡರಿಂಗ್ ಹಂತದ ಸಾಹಸಿಕ ಕ್ರೀಡೆಗಳ ಅನುಭವಕ್ಕೆ ಬಹುಮುಖ (Pluralistic) ದೃಷ್ಟಿಕೋನ ನೀಡಬೇಕು.

7. ತುಂಗಭದ್ರ ನದಿ ಕೋರಕಲ್ ಪ್ರವಾಸ ಮತ್ತು ಸಣ್ಣ ರಸ್ತೆ ಸಂಪರ್ಕಗಳಿಗೆ ಉತ್ತೇಜನ ನೀಡಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನ ಸಂವಾದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಮಂಡನೆ ಮಾಡಲಾಯಿತು. ನಮ್ಮ ಮುಂದಿನ ತಲೆಮಾರಿಗಾಗಿ ವಿಶ್ವ ಪರಂಪರೆ ಹಂಪಿಯ ಗತ ವೈಭವವನ್ನ ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ.

ಈ ಸಂವಾದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಅಧಿಕಾರಿಗಳಿಗೆ ಮತ್ತು KYTC ಸಂಸ್ಥೆಯ ಎಲ್ಲಾ ಪಧಾದಿಕಾರಿಗಳಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

#ಹಂಪಿ #ವಿಶ್ವಹೆರಿಟೇಜ್

ಸಮಸ್ತ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಾಗದೇವರು ಎಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ, ಸಂಪತ್ತು, ನೆಮ್ಮದಿಯನ್ನ ಕರುಣಿಸಲಿ ಶುಭವ...
29/07/2025

ಸಮಸ್ತ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಾಗದೇವರು ಎಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ, ಸಂಪತ್ತು, ನೆಮ್ಮದಿಯನ್ನ ಕರುಣಿಸಲಿ ಶುಭವಾಗಲಿ.

🦠 ವಿಶ್ವ ಹೆಪಟೈಟಿಸ್ ದಿನ - ಜುಲೈ 28"ಹೆಪಟೈಟಿಸ್: ತಿಳಿಯಿರಿ, ಪರೀಕ್ಷಿಸಿಕೊಳ್ಳಿ, ಚಿಕಿತ್ಸೆ ಪಡೆಯಿರಿ!"🌍 ಪ್ರತಿ ವರ್ಷ ಲಕ್ಷಾಂತರ ಜನರು ಹೆಪಟೈ...
28/07/2025

🦠 ವಿಶ್ವ ಹೆಪಟೈಟಿಸ್ ದಿನ - ಜುಲೈ 28
"ಹೆಪಟೈಟಿಸ್: ತಿಳಿಯಿರಿ, ಪರೀಕ್ಷಿಸಿಕೊಳ್ಳಿ, ಚಿಕಿತ್ಸೆ ಪಡೆಯಿರಿ!"

🌍 ಪ್ರತಿ ವರ್ಷ ಲಕ್ಷಾಂತರ ಜನರು ಹೆಪಟೈಟಿಸ್‌ನಿಂದ ಬಾಧೆಯಾಗುತ್ತಿದ್ದಾರೆ. ಆದರೆ ಇದು ತಡೆಯಬಹುದಾದ ಮತ್ತು ಚಿಕಿತ್ಸೆ ಸಾಧ್ಯವಿರುವ ರೋಗವಾಗಿದೆ.

📌 ಹೆಪಟೈಟಿಸ್ ಕುರಿತು ಜಾಗೃತಿ ಮೂಡಿಸಿ
📌 ತಕ್ಷಣ ಪರೀಕ್ಷಿಸಿಕೊಳ್ಳಿ
📌 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ
📌 ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ

👉 ಹೆಪಟೈಟಿಸ್ A, B, C, D ಮತ್ತು E ಬಗ್ಗೆ ಅರಿವು ಇರಲಿ
👉 ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ನೀವೂ ಇತರರಿಗೂ ಮಾಹಿತಿ ನೀಡಿರಿ

❤️ ಆರೋಗ್ಯವೆ ಸಂಪತ್ತು!

#ಜಾಗೃತಿ_ಮುಚ್ಚಳ

ಕಾರ್ಗಿಲ್ ವಿಜಯ ದಿನಕ್ಕೆ 26ನೇ ವರ್ಷದ ಸಂಭ್ರಮ ಭಾರತೀಯ ಸೇನೆಯ ಶೌರ್ಯ ಸಾಹಸಗಾಥೆ ಎಂದೆಂದಿಗೂ ಪ್ರಯಾಣದಾಯಿ ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾ...
26/07/2025

ಕಾರ್ಗಿಲ್ ವಿಜಯ ದಿನಕ್ಕೆ 26ನೇ ವರ್ಷದ ಸಂಭ್ರಮ ಭಾರತೀಯ ಸೇನೆಯ ಶೌರ್ಯ ಸಾಹಸಗಾಥೆ ಎಂದೆಂದಿಗೂ ಪ್ರಯಾಣದಾಯಿ ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜೊತೆಗೆ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸಂಭ್ರಮವನ್ನು ಸ್ಮರಿಸುವ ಕ್ಷಣ ಜೈ ಹಿಂದ್ ಜೈ ಭಾರತ್.

🇮🇳🇮🇳

ನಮ್ಮ ಭಾರತೀಯ ಮಕ್ಕಳ ವೈದ್ಯರ ಸಂಘದಿಂದ ಇದೇ ಜುಲೈ 21 ರಂದು ಐ.ಎ.ಪಿ ಸಿ.ಪಿ.ಆರ್ ದಿನ ಎಂದು ಆಚರಿಸಲಾಗುವುದು.ಈ ದಿನದಂದು ಹೃದಯ ಸ್ತಂಭನವಾದಗ ಪ್ರಾ...
19/07/2025

ನಮ್ಮ ಭಾರತೀಯ ಮಕ್ಕಳ ವೈದ್ಯರ ಸಂಘದಿಂದ ಇದೇ ಜುಲೈ 21 ರಂದು ಐ.ಎ.ಪಿ ಸಿ.ಪಿ.ಆರ್ ದಿನ ಎಂದು ಆಚರಿಸಲಾಗುವುದು.

ಈ ದಿನದಂದು ಹೃದಯ ಸ್ತಂಭನವಾದಗ ಪ್ರಾಣ ಉಳಿಸುವ ಆ ಗೊಲ್ಡನ್ ಮಿನಿಟ್ ನಲ್ಲಿ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬಹುದು ಎಂದು ಜಾಗೃತಿ ಮೂಡಿಸುವುದಾಗಿದೆ.

ಮನೆಯಲ್ಲಿ ಅಥವಾ ನಿಮ್ಮ ಸುತ್ತಮುತ್ತಲು ಯಾರಿಗಾದ್ರೂ ಸಡನ್ ಆಗಿ ಹಾರ್ಟ್ ಅಟ್ಯಾಕ್ ಆದ್ರೆ ಏನ್ ಮಾಡ್ಬೇಕು ತೋಚುತ್ತುಲ್ಲವೇ ?
ಹಾಗಾದರೆ ಈ ಕೋಡ್ ಸ್ಕ್ಯಾನ್ ಮಾಡಿ ಏನು ಮಾಡಬೇಕೆಂದು ತಿಳಿಯರಿ ಧನ್ಯವಾದಗಳು.

Scan this code n learn Cardio Pulmonary Resuscitation

ಅಖಂಡ ಮಂಡಲಾಕಾರಂ | ವ್ಯಾಪ್ತಯೇನ ಚರಾಚರಂ | ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ||ನಿಮ್ಮ ಕಾರ್ಯ, ನಿಮ್ಮ ವ್ಯಕ್ತಿತ್ವ, ಯಾವತ್ತಿಗ...
18/07/2025

ಅಖಂಡ ಮಂಡಲಾಕಾರಂ | ವ್ಯಾಪ್ತಯೇನ ಚರಾಚರಂ | ತತ್ಪದಂ ದರ್ಶಿತಂ ಯೇನ | ತಸ್ಮೈ ಶ್ರೀ ಗುರವೇ ನಮಃ ||

ನಿಮ್ಮ ಕಾರ್ಯ, ನಿಮ್ಮ ವ್ಯಕ್ತಿತ್ವ, ಯಾವತ್ತಿಗೂ ಎಲ್ಲರಿಗೂ ಸ್ಪೂರ್ತಿ
ಹೋಗಿ ಬನ್ನಿ ಗುರುಗಳೇ ಓಂಶಾಂತಿ....💐🙏

ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿ...
14/07/2025

ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಮೇರು ನಟಿ ಶ್ರೀಮತಿ ದಿ. ಸರೋಜಾ ದೇವಿ ಅವರು ಇಂದು ನಮ್ಮನ್ನ ಅಗಲಿದ್ದಾರೆ, ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನ ಕರುಣಿಸಲಿ ಓಂ ಶಾಂತಿ.

Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Amaresh Patil:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram