Atmasakshi foundation

Atmasakshi foundation ATMASAKSHI FOUNDATION
HEALTH, PEACE, LOVE, ENLIGHTENMENT
MIND IS THE ROOT CAUSE OF GOOD & BAD

PYRAMID MASTER. MEDITATION MENTOR. SAVE THE MOTHER EARTH.

OFFERING MEDITATION FREE CLASSES,
SPIRITUAL DISCOURSE. BASAVA PYRAMID HILLS MEDITATION CENTRE.

19/04/2026
MIND IS THE ROOT CAUSE OF GOOD AND BAD.ನಿಗ್ರಹವಿಲ್ಲದ ಮನಸ್ಸು ಜೀವನವನ್ನು ಗೊಂದಲಮಯವನ್ನಾಗಿಸುತ್ತದೆ. ಅತಿಯಾದ ಯೋಚನೆ ಸಂತೋಷವನ್ನು ಕಸಿದ...
08/04/2026

MIND IS THE ROOT CAUSE OF GOOD AND BAD.

ನಿಗ್ರಹವಿಲ್ಲದ ಮನಸ್ಸು ಜೀವನವನ್ನು ಗೊಂದಲಮಯವನ್ನಾಗಿಸುತ್ತದೆ. ಅತಿಯಾದ
ಯೋಚನೆ ಸಂತೋಷವನ್ನು ಕಸಿದುಕೊಳ್ಳುತ್ತದೆ.
ಶಾಂತ ಮನಸ್ಸು ಜೀವನವನ್ನು ಸುಂದರವಾಗಿಸುತ್ತದೆ.
ನಮ್ಮ ಮನಸ್ಸು ನಿಯಂತ್ರಣದಲ್ಲಿದ್ದರೆ ಶತ್ರುಗಳು
ಕೂಡ ಮಿತ್ರರಾಗುತ್ತಾರೆ. ಮನುಷ್ಯನ ಮನಸ್ಸೇ
ಆತನ ಬಂದು ಮತ್ತು ಶತ್ರು. ✨

Silence stops feeling empty once you finally understand yourself. When you’ve done the inner work, you no longer need no...
06/04/2026

Silence stops feeling empty once you finally understand yourself. When you’ve done the inner work, you no longer need noise, validation, or constant distraction to feel grounded. Quiet becomes clarity. Stillness becomes strength. And the more you grow, the more you realize that peace isn’t found in people—it’s found in knowing who you are.

 #ಅಂತರರಾಷ್ಟ್ರೀಯ_ಆತ್ಮಸಾಕ್ಷಿಯ_ದಿನವನ್ನು (International Day of Conscience) ಪ್ರತಿ ವರ್ಷ ಏಪ್ರಿಲ್ 5 ರಂದು ಆಚರಿಸಲಾಗುತ್ತದೆ. ಇದರ ಅರ್...
05/04/2026

#ಅಂತರರಾಷ್ಟ್ರೀಯ_ಆತ್ಮಸಾಕ್ಷಿಯ_ದಿನವನ್ನು (International Day of Conscience) ಪ್ರತಿ ವರ್ಷ ಏಪ್ರಿಲ್ 5 ರಂದು ಆಚರಿಸಲಾಗುತ್ತದೆ.

ಇದರ ಅರ್ಥ ಮತ್ತು ಮಹತ್ವ ಹೀಗಿದೆ:
ಅರ್ಥ: #ಆತ್ಮಸಾಕ್ಷಿ ಎಂದರೆ ಮನುಷ್ಯನ ಮನಸ್ಸಿನ ಅಂತರಾಳದ ಧ್ವನಿ ಅಥವಾ ಸರಿ-ತಪ್ಪಿನ ಅರಿವು. ಈ ದಿನವು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಂತರಾತ್ಮವನ್ನು ಪರೀಕ್ಷಿಸಿಕೊಂಡು, ಪ್ರೀತಿ, ಶಾಂತಿ, ಮತ್ತು ಸಹಾನುಭೂತಿಯಿಂದ ವರ್ತಿಸಲು ಪ್ರೇರೇಪಿಸುತ್ತದೆ.
ಉದ್ದೇಶ: ವಿಶ್ವಸಂಸ್ಥೆಯು ಈ ದಿನವನ್ನು ಶಾಂತಿ, ಸಹಿಷ್ಣುತೆ, ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸಲು ಸ್ಥಾಪಿಸಿದೆ. ಇದು ಜಗತ್ತಿನಲ್ಲಿ ಸ್ನೇಹಪರ ಸಂಬಂಧಗಳು, ಸಮಾನತೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಮಹತ್ವ: ಇದು ಮನುಷ್ಯರು ತಮ್ಮ ದೈನಂದಿನ ಜೀವನದಲ್ಲಿ ಸತ್ಯ ಮತ್ತು ಧರ್ಮವನ್ನು ಪಾಲಿಸುವಂತೆ, ಮತ್ತು ಇತರರ ಬಗ್ಗೆ ಕಾಳಜಿ ವಹಿಸುವಂತೆ ನೆನಪಿಸುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, "ಅಂತರಾತ್ಮದ ಧ್ವನಿಯನ್ನಾಲಿಸಿ, ಶಾಂತಿಯುತ ಸಮಾಜವನ್ನು ನಿರ್ಮಿಸುವ ದಿನ" ಎಂದು ಇದನ್ನು ಕರೆಯಬಹುದು.

 #ಕ್ರಾಂತಿ_ಯಾವುದು..?----------------------------ಕ್ರಾಂತಿ ಎಂಬ ಪದವು ನಮ್ಮ ಮನಸ್ಸಿನಲ್ಲಿ ಒಂದು ಗದ್ದಲವನ್ನು ಎಬ್ಬಿಸುತ್ತದೆ. ಧ್ವಜಗಳು, ...
01/04/2026

#ಕ್ರಾಂತಿ_ಯಾವುದು..?
----------------------------
ಕ್ರಾಂತಿ ಎಂಬ ಪದವು ನಮ್ಮ ಮನಸ್ಸಿನಲ್ಲಿ ಒಂದು ಗದ್ದಲವನ್ನು ಎಬ್ಬಿಸುತ್ತದೆ. ಧ್ವಜಗಳು, ಘೋಷಣೆಗಳು, ಹೋರಾಟಗಳು, ರಾಜಕೀಯ ಬದಲಾವಣೆಗಳು — ಇವೆಲ್ಲವೂ ಕ್ರಾಂತಿಯ ರೂಪಗಳಂತೆ ಕಾಣಿಸುತ್ತವೆ. ಆದರೆ ನಿಜವಾಗಿ ನೋಡಿದರೆ, ಕ್ರಾಂತಿ ಎಂದರೆ ಶಬ್ದದ ಸಂಗತಿ ಅಲ್ಲ; ಅದು ಮೌನದ ಘಟನೆ. ನಿಸರ್ಗವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಬೀಜವು ಮಣ್ಣಿನೊಳಗೆ ಸಿಡಿಯುತ್ತದೆ, ಆದರೆ ಅದರ ಸಿಡಿತ ಯಾರಿಗೂ ಕೇಳಿಸದು. ಹೂವು ಅರಳುತ್ತದೆ, ಆದರೆ ಅದು ಘೋಷಣೆ ಮಾಡುವುದಿಲ್ಲ. ಈ ಮೌನವೇ ನಿಜವಾದ ಕ್ರಾಂತಿಯ ಸ್ವಭಾವ.

ನಾವು ಎಲ್ಲರೂ ಬದಲಾವಣೆ ಬೇಕು ಎಂದು ಹೇಳುತ್ತೇವೆ. ಸಮಾಜ ಬದಲಾಗಬೇಕು, ವ್ಯವಸ್ಥೆ ಬದಲಾಗಬೇಕು, ರಾಜಕೀಯ ಸುಧಾರಿಸಬೇಕು — ಈ ಬೇಡಿಕೆಗಳು ಸಾಮಾನ್ಯ. ಆದರೆ ಒಂದು ಮೂಲಭೂತ ಪ್ರಶ್ನೆಯನ್ನು ನಾವು ವಿರಳವಾಗಿ ಕೇಳುತ್ತೇವೆ: “ನಾನು ಬದಲಾಗಲು ಸಿದ್ಧನೇ?” ಬಹುಪಾಲು ಸಂದರ್ಭಗಳಲ್ಲಿ, ನಾವು ಕ್ರಾಂತಿಗೆ ತೆರೆದುಕೊಳ್ಳುವುದಿಲ್ಲ; ನಾವು ಅದರ ಕಲ್ಪನೆಗೆ ಮಾತ್ರ ಆಕರ್ಷಿತರಾಗುತ್ತೇವೆ. ಈ ಆಕರ್ಷಣೆಯೊಳಗೆ ಆತ್ಮವಂಚನೆಯೂ ಇದೆ, ಸೂಕ್ಷ್ಮ ಹಿಪೋಕ್ರಸಿಯೂ ಇದೆ. ಹೊರಗಿನ ಬದಲಾವಣೆಯನ್ನು ಬಯಸುವ ನಾವು, ನಮ್ಮೊಳಗಿನ ಅಹಂಕಾರ ˌ ಅಧಿಕಾರ ದಾಹˌ ದುರಾಸೆˌ ಹಿಂಸೆ....ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡಿರುತ್ತೇವೆ. ನಮ್ಮೊಳಗಿನ ಅಹಂಕಾರˌ ದುರಾಸೆಗಳು ಸಾಯದ ಹೊರತು ಯಾವ ಕ್ರಾಂತಿಯು ಬದಲಾವಣೆ ತರದು.

ಕ್ರಾಂತಿ ಎಂದರೆ ಒಂದರಿಂದ ಮತ್ತೊಂದಕ್ಕೆ ಜಿಗಿತವಲ್ಲ. ಹಳೆಯ ವ್ಯವಸ್ಥೆಯನ್ನು ಬಿಟ್ಟು ಹೊಸ ವ್ಯವಸ್ಥೆಯನ್ನು ಸ್ವೀಕರಿಸುವುದೂ ಅಲ್ಲ. ಹಾಗಿದ್ದರೆ ಅದು ಕೇವಲ ಹೊರಗಡೆ ಬದಲಾವಣೆ ಮಾತ್ರ — ಅದರಿಂದ ಯಾವ ಪ್ರಯೋಜನವಿಲ್ಲ. ಉದಾ: ಅಂಗಡಿಯಲ್ಲಿ ಕೆಲಸ ಮಾಡುವವರನ್ನು ಬದಲಾಯಿಸಿದ್ರೆ ಅಂಗಡಿ ಬದಲಾಗುವುದಿಲ್ಲ. ಕೆಲಸಗಾರ ಬದಲಾದನಷ್ಟೆ. ಅಂಗಡಿಯ ಒಳಗಿನ ವಸ್ತುಗಳನ್ನೆ ಬದಲಾಯಿಸು. ಅಂಗಡಿಯು ಆಕರ್ಷಕವಾಗಿ ಕಾಣುವುದು. ಜನಗಳು ಬರುವರು. ಅಂಗಡಿಯಲ್ಲಿ ವಸ್ತುಗಳಲ್ಲಿ ಗುಣಮಟ್ಟ ಸುಧಾರಿಸು ಅಲ್ಲಿ ಗಮನನೀಡು. ನಿಜವಾದ ಕ್ರಾಂತಿ ಅಂದರೆ ಅದು ಹೊರಗಿನ ಲೋಕದೊಂದಿಗೆ ಅಲ್ಲ, ನಮ್ಮೊಳಗಿನ ಹಳೆಯ ಚಿಂತನೆ ಮತ್ತು ಹೊಸ ಅರಿವಿನ ನಡುವೆ.

ಮಾನವ ಇತಿಹಾಸವನ್ನು ನೋಡಿದರೆ, ನಾವು ಸಾವಿರಾರು ವರ್ಷಗಳಿಂದ ಒಂದರಿಂದ ಮತ್ತೊಂದಕ್ಕೆ ಓಡುತ್ತಿದ್ದೇವೆ. ಒಂದು ನಂಬಿಕೆಯಿಂದ ಮತ್ತೊಂದಕ್ಕೆ, ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ. ಆದರೆ ಪ್ರತಿಯೊಂದು “ಹೊಸದು” ನಮ್ಮದೇ ಹಳೆಯ ಮನಸ್ಸಿನ ಉತ್ಪನ್ನ. ಆದ್ದರಿಂದ ಅದು ಹೊಸ ರೂಪದ ನರಕವಾಗುತ್ತದೆ. ಈ ನಿರಂತರ ನೆಗೆತವೇ ನಮ್ಮೊಳಗಿನ ಸ್ವರ್ಗ ಮತ್ತು ನರಕದ ಸಂಘರ್ಷವನ್ನು ಮುಂದುವರಿಸುತ್ತದೆ. ಮನುಷ್ಯ ಇತಿಹಾಸದಲ್ಲಿ ರಾಜ ಪ್ರಭುತ್ವದಿಂದ ಹಿಡಿದೂ ಸರ್ವಾಧಿಕಾರˌ ಕಮ್ಯುನಿಷ್ಟˌ ಪ್ರಜಾಪ್ರಭುತ್ವ...ಎಲ್ಲಾ ಪ್ರಭುತ್ವಗಳ ಆಡಳಿತವನ್ನು ನೋಡಿದ್ದಾನೆ. ಯಾವ ಪ್ರಭುತ್ವದಲ್ಲಿ ಮನುಷ್ಯ ಸಂತೋಷವಾಗಿದ್ದಾನೆ? ಮಹಾಭಾರತ ರಾಮಾಯಣ ಕಾಲದಲ್ಲಿ? ಯುದ್ಧಗಳು ಏಕೆ ನಡೆದವು? ಸಂಸಾರ ಹೊರಗಡೆ ಓಡಿಸುತ್ತದೆ. ಅದು ಭ್ರಮೆ ಎಂದು ತಿಳಿಯುವಷ್ಟರಲ್ಲಿ ಆಯುಷ್ಯ ಮುಗಿದಿರುತ್ತದೆ. ಆಧ್ಯಾತ್ಮ ಒಳಗಡೆ..

ಹಾಗಾದರೆ ನಿಜವಾದ ಕ್ರಾಂತಿ ಎಲ್ಲಿದೆ? ಅದು ಸಮಾಜದಲ್ಲಿ ಹುಟ್ಟುವುದಿಲ್ಲ. ಅದು ರಾಜಕೀಯದಿಂದ ಬರೋದಿಲ್ಲ. ಅದು ವ್ಯಕ್ತಿಯ ಒಳಗೆ ಹುಟ್ಟುತ್ತದೆ. ಬುದ್ಧ ತನ್ನೊಳಗಿನ ಸತ್ಯವನ್ನು ಕಂಡುಕೊಂಡಾಗ, ಅವನು ಸಮಾಜವನ್ನು ಬದಲಿಸಲು ಹೊರಟಿರಲಿಲ್ಲ. ಆದರೆ ಅವನ ಒಳಗಿನ ಬದಲಾವಣೆ ಸಮಾಜದ ಮೇಲೆ ಆಳವಾದ ಪರಿಣಾಮ ಬೀರಿತು. ಹಾಗೆಯೇ ಬಸವಣ್ಣ ತನ್ನ ಅನುಭವದಿಂದಲೇ ಒಂದು ಹೊಸ ದಾರಿಯನ್ನು ತೆರೆದರು. ಅವರು ಕ್ರಾಂತಿಯನ್ನು ಬದುಕಿದರು.
ವ್ಯಕ್ತಿ ಮತ್ತು ಸಮಾಜದ ನಡುವೆ ಸದಾ ಒಂದು ಸಂಘರ್ಷ ಇರುತ್ತದೆ. ಸಮಾಜಕ್ಕೆ ಸ್ಥಿರತೆ ಬೇಕು; ವ್ಯಕ್ತಿಗೆ ಸ್ವಾತಂತ್ರ್ಯ ಬೇಕು. ಬಹುಪಾಲು ಜನರು ಸುರಕ್ಷತೆಯಿಗಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಬದುಕುತ್ತಾರೆ. ಆದರೆ ಕ್ರಾಂತಿ ಸುರಕ್ಷತೆಯಲ್ಲಿ ಹುಟ್ಟುವುದಿಲ್ಲ. ಅದು ಅಜ್ಞಾತದೊಳಗೆ ಹೆಜ್ಜೆ ಇಡುವ ಧೈರ್ಯದಲ್ಲಿ ಹುಟ್ಟುತ್ತದೆ. ಅದಕ್ಕಾಗಿ ನಿಜವಾದ ಕ್ರಾಂತಿಕಾರಿಗಳು ವಿರಳ. ಅವರು ಹೊರಗಿನ ಹೋರಾಟಕ್ಕಿಂತ ಒಳಗಿನ ಪರಿವರ್ತನೆಯನ್ನು ಆಯ್ಕೆ ಮಾಡುತ್ತಾರೆ.

ನಾವು ಅನೇಕ ಬಾರಿ ಕ್ರಾಂತಿಯ ಹೆಸರಿನಲ್ಲಿ ಪಲಾಯನ ಮಾಡುತ್ತೇವೆ. ಮತ್ತೊಬ್ಬರಿಗೆ ಜವಾಬ್ದಾರಿ ಕಲಿಸುತ್ತೇವೆ, ಆದರೆ ನಮ್ಮೊಳಗೆ ನೋಡಿಕೊಳ್ಳುವುದಿಲ್ಲ. ಇದು ಕ್ರಾಂತಿ ಅಲ್ಲ — ಇದು ತಪ್ಪಿಸಿಕೊಳ್ಳುವಿಕೆ. ನಿಜವಾದ ಕ್ರಾಂತಿ ಯಾವತ್ತೂ ವೈಯಕ್ತಿಕ. ಅದು ನಿನ್ನೊಳಗೆ ಆರಂಭವಾಗಬೇಕು. ವ್ಯಕ್ತಿಗತವಾಗಿ ಆಗದ ಕ್ರಾಂತಿಯನ್ನು ಸಮಾಜದಲ್ಲಿ ಬಯಸುವುದು ಒಂದು ಮಿಥ್ಯೆ.

ಸಮಾಜ ತನ್ನದೇ ಗತಿಯಲ್ಲಿ ಬದಲಾಗುತ್ತಲೇ ಇರುತ್ತದೆ. ಅದು ನೈಸರ್ಗಿಕ ಪ್ರಕ್ರಿಯೆ. ಆದರೆ ನಮ್ಮ ಅಹಂಕಾರ ಆ ಬದಲಾವಣೆಯನ್ನು ನಿಯಂತ್ರಿಸಲು ಯತ್ನಿಸುತ್ತದೆ. “ನಾನು ಬಯಸಿದಂತೆ ಬದಲಾಗಬೇಕು” ಎಂಬ ಆಕಾಂಕ್ಷೆ ಕ್ರಾಂತಿ ಅಲ್ಲ; ಅದು ನಿಯಂತ್ರಣದ ಆಸೆ. ಮೂಲದಿಂದ ಬದಲಾಗುವವರು ಅತಿ ಕಡಿಮೆ. ಅವರು ಅನುಕರಣ ಮಾಡುವುದಿಲ್ಲ; ಅವರು ದಾರಿ ನಿರ್ಮಿಸುತ್ತಾರೆ. ಉಳಿದವರು ಅವರನ್ನು ಅನುಸರಿಸುತ್ತಾರೆ.

ಕೊನೆಯಲ್ಲಿ, #ಕ್ರಾಂತಿ_ಎಂದರೆ_ಒಂದು_ಒಳಗಿನ_ಮೌನ. ಅಲ್ಲಿ ಮುಂದೆ ಹೋಗಬೇಕಾದ ದಾರಿಯೂ ಇಲ್ಲ, ಹಿಂದಕ್ಕೆ ತಿರುಗಬೇಕಾದ ಅಗತ್ಯವೂ ಇಲ್ಲ. ಅಲ್ಲಿ ವ್ಯಕ್ತಿ ತನ್ನನ್ನು ಸಂಪೂರ್ಣವಾಗಿ ಕಾಣುತ್ತಾನೆ. ಇದೇ ಪರಿಪೂರ್ಣ ಕ್ರಾಂತಿ.

ಆದ್ದರಿಂದ ಕ್ರಾಂತಿ ಹೊರಗಿನಿಂದ ಬರುವುದಿಲ್ಲ. ಅದು ನಿನ್ನೊಳಗೆ ಹುಟ್ಟಬೇಕು. ನೀನು ಬದಲಾಗಿದರೆ, ಅದು ಕೇವಲ ಒಂದು ವ್ಯಕ್ತಿಯ ಬದಲಾವಣೆ ಅಲ್ಲ — ಅದು ಸಮಸ್ತ ಸೃಷ್ಟಿಯಲ್ಲಿ ಒಂದು ಹೊಸ ಸ್ಪಂದನೆ.

31/03/2026

*ನೀನು ಏನೂ ಕಲಿತ್ತೇ ? — ಜಗತ್ತನ್ನು ಬಿಡು, ಜೀವನವನ್ನು ನೋಡು..!*
----------------------------------
ಪ್ರತಿ ದಿನ ಬೆಳಿಗ್ಗೆ ಎದ್ದ ಕ್ಷಣದಿಂದಲೇ, ನಮ್ಮ ಬದುಕು ಒಂದೇ ಚಕ್ರದಲ್ಲಿ ಸಿಲುಕುತ್ತದೆ. ಕುಟುಂಬದ ಜಂಜಾಟ… ಸಣ್ಣಸಣ್ಣ ಕಲಹಗಳು… ಆಫೀಸ್ ˌ ಮನೆ ಕೆಲಸಗಳುˌ ಅನೇಕ ಬಿಲ್ ಗಳುˌ ಹಲವು ಕಮಿಂಟ್ ಮೆಂಟ್ ಗಳು ˌ ಬ್ಯಾಂಕ್ ಲೋನಗಳುˌ ಅವುಗಳ EMI ಕಟ್ಟುವ ಸಮಸ್ಯೆಗಳುˌ ಮನೆ ಕಟ್ಟುವ ಆಸೆಗಳುˌ ಗ್ಯಾಸˌ ಪೆಟ್ರೋಲ್ ಸಮಸ್ಯೆˌ ಹೆಚ್ಚುತ್ತಿರುವ ಬೆಲೆಗಳುˌ ಮಕ್ಕಳ ಶಿಕ್ಷಣˌ ಮದುವೆˌ ಸಂಬಂಧಗಳುˌ ಚೂರುಪಾರು ಆಸ್ತಿ ಹೊಡೆದಾಟಗಳುˌ ದಾಯಾದಿ ಕಲಹಗಳುˌ ಕೊರ್ಟ ಕಛೇರಿ ಅಲೆದಾಟಗಳುˌ ಗಂಡ ಹೆಂಡತಿ ಜಗಳಗಳುˌ ಮಕ್ಕಳ ದುರ್ವತನೆˌ ತಿಂಗಳ ಬಜೆಟ್ ಹೊಂದಾಣಿಕೆ, ರಿಟೈರಮೆಂಟ್ ˌ ಪೆನಶ್ಯನ್ ˌ ಮೊಮ್ಮಕ್ಕಳು...

ಅದರಲ್ಲಿಯು ನಮ್ಮದೇ ಸಿದ್ಧಾಂತಗಳು, ತತ್ವಗಳು… ಜಾತಿˌ ಧರ್ಮˌ ಕರ್ಮˌ ರಾಷ್ಟ್ರ ˌ ಪಕ್ಷಗಳುˌ ಮೋದಿಯೋ ˌ ಗಾಂಧಿಯೋ? ಅಮೇರಿಕ ಇರಾಣ ಮುಂದೇನೋ?
ರಾಜಕೀಯ, ಚುನಾವಣೆ, ಯುದ್ಧ, ಸಂಘರ್ಷ… ಸೋಶಿಯಲ್ ಮಿಡಿಯಾ...24 ಗಂಟೆ ಒದರುವ ಸುದ್ದಿ ಮಾಧ್ಯಮಗಳು... ಭಾರತದ ಬಹುತೇಕ ಬಡ ಮತ್ತು ಮಧ್ಯಮ ವರ್ಗ ಇದೇ ಚಕ್ರದಲ್ಲಿ ಸಿಲುಕಿದೆˌ ಬದುಕಿದೆ ಎನ್ನಿಸುತ್ತದೆ...ಆದರೆ ಬದುಕಿಲ್ಲಾ... ಸುಮ್ನೆ ಯಾಂತ್ರಿಕವಾಗಿ ಚಲಿಸುತ್ತೀದೆ. ಬಹಳಷ್ಟು ಮಂದಿಗೆ ಕೇಳಿದಾಗˌ ಅವರು ಹೇಳುತ್ತಾರೆ ಹುಟ್ಟಿದ್ದೇವೆ ಅದಕ್ಕೆ ಬದುಕಬೇಕಷ್ಟೆ... ಜೀವನ ತುಂಬಾ ಯಾಂತ್ರಿಕವಾಗಿ ಒಂದೇ ವರ್ತುಲದಲ್ಲಿ ಸುತ್ತುತ್ತಲೆ ಇರುತ್ತದೆ.

ಹೊಸದನ್ನು ನೋಡಲಿಲ್ಲ ˌ ಹೊಸದನ್ನು ಕಲಿಯಲಿಲ್ಲ ˌ ಎಲ್ಲಿಯೂ ತಿರಗಲಿಲ್ಲ...ಜೀವನ ಗಾಣದೆತ್ತಿನಂತೆ ಅಲ್ಲಿಯೆ ತಿರುಗುತ್ತಲೆ ಇರುತ್ತದೆ.

ಯಾರನ್ನಾದರೂ ಭೇಟಿಯಾದರೆ —
ಅದೇ ಚರ್ಚೆ, ಅದೇ ಪ್ರತಿಕ್ರಿಯೆ, ಅದೇ ವಾದ-ಪ್ರತಿವಾದ. ಗೆಳೆಯರ "ಗುಂಡು ಮೇಜಿನ" ಪಾರ್ಟಿಗಳಲ್ಲಿಯು ಇದೇ ಜಗಳ... ವಿರಸ ...

ಇದೇ ಚಕ್ಕರದಲ್ಲಿ ಒಂದು ದಿನ ಮುಗಿಯುತ್ತದೆ. ಆದರೆ ಪ್ರಶ್ನೆ ಉಳಿಯುತ್ತದೆ: ಈ ದಿನದಲ್ಲಿ ನೀನು ಏನು ಕಲಿತ್ತೀಯ?

ನಾವು ಜಗತ್ತಿನ ಬಗ್ಗೆ ತುಂಬಾ ಚಿಂತಿಸುತ್ತೇವೆ.
ಆದರೆ ನಮ್ಮ ಜೀವನದ ಬಗ್ಗೆ ಎಷ್ಟು ಗಮನಿಸುತ್ತೇವೆ?
ಇಂದು ನೀನು ಮನೆಯಲ್ಲಿ ಹೊಸದಾಗಿ ಏನಾದರೂ ಅಡುಗೆ ಮಾಡಿದ್ದೀಯಾ? ಆ ರುಚಿಯಲ್ಲಿ ಹೊಸ ಅನುಭವ ಕಂಡೆಯಾ? ನೀನು ಮನೆ ಮುಂದಿನ ಗಿಡಗಳಲ್ಲಿ ನೀರು ಹಾಕುವಾಗ ಏನೂ ಮಾಡುತ್ತೀದ್ದಿ? ಮುಂಜಾನೆ ಚಹಾ ಕುಡಿಯುವಾಗ? ಚಹಾ ಕುಡಿಯುತ್ತಿದ್ದಿಯಾ ಅಥವಾ ಪೇಪರ ಚಹಾ ಎರಡು ಕುಡಿಯುತ್ತಿದ್ದೀಯಾ?? ಇಂದು ಯಾರಾದರೂ ಹೊಸ ಅತಿಥಿಯೊಂದಿಗೆ ಕುಳಿತು ಮಾತನಾಡಿದ್ದೀಯಾ?
ಅವರಲ್ಲಿ ಏನಾದರೂ ಕಲಿತ್ತೀಯಾ? ನಿನ್ನ ಮನೆಯ ನಾಯಿ ಮರಿಯೊಂದಿಗೆ ಏನಾದರೂ ಹೊಸದಾಗಿ ಆಟ ಆಡಿದೆಯಾ? ಮುಂಜಾನೆ ಸಂಜೆ ವಾಕಿಂಗ್ದಲ್ಲಿ ತಣ್ಣನೆ ಗಾಳಿ ಬೀಸುವ ಸುಖ ಅನುಭವಿಸಿದ್ದಿಯಾ?

ಅದರಲ್ಲೊಂದು ಜೀವನದ ನಿರಪರಾಧ ಸಂತೋಷವನ್ನು ಕಂಡೆಯಾ? ಜೀವನವು ದೊಡ್ಡ ಘಟನೆಗಳಲ್ಲಿ ಮಾತ್ರ ಇಲ್ಲ. ಅದು ಸಣ್ಣ ಕ್ಷಣಗಳಲ್ಲಿ ಅಡಗಿದೆ. ಆದರೆ ನಾವು ಅವನ್ನು ತಪ್ಪಿಸುತ್ತೇವೆ.
ಏಕೆಂದರೆ ನಮ್ಮ ಮನಸ್ಸು ಯಾವಾಗಲೂ “ಹೊರಗೆ” ಓಡುತ್ತಿದೆ. ಸಂತೋಷ "ದೊಡ್ಡದು" ಆಗಿ ಬರುತ್ತದೆ ಅಂದುಕೊಳ್ಳುತ್ತವೆ. ಅಂಥ ದೊಡ್ಡ ಸಂತೋಷವೆಂಬುವುದಿಲ್ಲ. ನಿನ್ನ ದಿನನಿತ್ಯ ಜೀವನದಲ್ಲಿ ಸಣ್ಣ ಖುಷಿಗಳನ್ನೆ ಅನುಭವಿಸುವುದನ್ನು ಕಲಿಯಬೇಕು.

ಜಗತ್ತಿನ ಸುದ್ದಿಗಳಲ್ಲಿ… ಇತರರ ಬದುಕಿನಲ್ಲಿ… ಅವರ ಇವರ ಮಾತುಗಳಲ್ಲಿ… ಇಂದು ಇಲ್ಲಿ ಸುದ್ದಿ…
ನಾಳೆ ಅಲ್ಲಿ ಸುದ್ದಿ…ಮತ್ತೊಂದು ದಿನ — ಅದು ರದ್ದಿ.
ಆದರೆ ನೀನು?

ನಿನ್ನೊಳಗೆ ಏನು ಉಳಿದಿದೆ?
“ನೀನು ನಿನ್ನನ್ನು ತಿಳಿಯದೇ, ಜಗತ್ತನ್ನು ತಿಳಿಯಲು ಸಾಧ್ಯವಿಲ್ಲ.” ಆದರೆ ನಾವು ಅದರ ವಿರುದ್ಧವಾಗಿ ಬದುಕುತ್ತೇವೆ. ಜಗತ್ತಿನ ಎಲ್ಲವನ್ನೂ ತಿಳಿಯಲು ಯತ್ನಿಸುತ್ತೇವೆˌ ಆದರೆ ನಮ್ಮನ್ನು ನಾವು ಮರೆತುಬಿಡುತ್ತೇವೆ.ಯಾರಾದರೂ ಏನಾದರೂ ಹೇಳಿದರುˌ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ.
“ಅವನು ಹೀಗೆ ಹೇಳಿದ… ನಾನು ಹೀಗೆ ಉತ್ತರ ಕೊಟ್ಟೆ…” ಇದರಿಂದ ಏನು ಲಾಭ?
ಇದು ನಿನ್ನ ಜೀವನವನ್ನು ಬದಲಾಯಿಸುತ್ತದೆಯಾ?
ಇದು ನಿನ್ನೊಳಗೆ ಹೊಸ ಅರಿವು ತರ್ತದೆಯಾ?

ಪ್ರತಿ ದಿನವನ್ನು ಒಂದು ಪ್ರಶ್ನೆಯಿಂದ ಮುಗಿಸು:
“ಇಂದು ನಾನು ಏನು ಕಲಿತೆ?” ಸಣ್ಣದಾದರೂ ಸಾಕು.
ಒಂದು ಹೊಸ ಆಲೋಚನೆ… ಒಂದು ಹೊಸ ಅನುಭವ… ಒಂದು ಹೊಸ ಅಭ್ಯಾಸ…
ಅದನ್ನು ಬರೆಯಿರಿ ˌ ಇತತರಿಗೆ ಬಿಡು ˌ ಅದು ನಿನಗೆ ಸ್ಪೂರ್ತಿಯಾಗುವುದು.

ಹೊರಗಡೆ ಬರೆಯಲು ಸಂಕೋಚವೇ ˌ ನಿನ್ನದೆ ಪರ್ಸನಲ್ ಡೈರಿಯಲ್ಲಿ ನಮೂದಿಸುˌ ಯಾಕೆಂದರೆ ಆ ಬರಹˌ ನಿನ್ನ ಬೆಳವಣಿಗೆಯ ಪ್ರತಿಬಿಂಬ.

ಜೀವನವು ಪ್ರತಿಕ್ಷಣವೂ ಹೊಸದು.
ನೀನು ಹಳೆಯ ಮನಸ್ಸಿನಿಂದ ಬದುಕಿದರೆ, ಹೊಸದನ್ನು ಕಳೆದುಕೊಳ್ಳುತ್ತೀಯ.

ನಿಸರ್ಗ ಪ್ರತಿ ಕ್ಷಣ ಪಾಠ ಮಾಡುತ್ತಿದೆ. ಮರದ ಎಲೆ ಬೀಳುವಾಗ… ಗಾಳಿ ಹಾದು ಹೋಗುವಾಗ… ಹಕ್ಕಿ ಹಾಡು ಕೇಳುವಾಗˌ ಮೋಡಗಳನ್ನು ˌ ನಕ್ಷತ್ರಗಳನ್ನು ನೋಡುವಾಗ...
ಮಳೆಯ ಹನಿ ಬಿದ್ದಾಗ… ಅವು ಹೇಳುತ್ತಿವೆ —
“ನೋಡು… ಕಲಿಯು…”

ಆದರೆ ನಾವು ಕೇಳುವುದಿಲ್ಲ.
ನೀನು ಜಗತ್ತನ್ನು ಬದಲಾಯಿಸಲು ಹೋಗಬೇಕಾಗಿಲ್ಲ.
ನೀನು ನಿನ್ನ ದಿನವನ್ನು ನೋಡಬೇಕು.

ನಿನ್ನ ಉಸಿರು…ನಿನ್ನ ನಡೆ… ನಿನ್ನ ಮಾತು… ನಿನ್ನ ಅನುಭವ… ಅಲ್ಲಿ ಜೀವನ ಅಡಗಿದೆ.
ಕೊನೆಗೆ… ಜೀವನ ದೊಡ್ಡ ಸಾಧನೆಗಳ ವಿಷಯವಲ್ಲ.
ಅದು ಸಣ್ಣ ಅರಿವಿನ ಪಥ.

ಪ್ರತಿ ದಿನ ಸ್ವಲ್ಪ ಕಲಿಯುವವನುˌ
ಒಂದು ದಿನ ಸಂಪೂರ್ಣವಾಗಿ ಬದಲಾಗುತ್ತಾನೆ.
ಹೀಗಾಗಿ… ಇವತ್ತು ನೀನು ಏನು ಕಲಿತ್ತೀಯ?
ಜಗತ್ತಿನ ಬಗ್ಗೆ ಅಲ್ಲ — ನಿನ್ನ ಬದುಕಿನ ಬಗ್ಗೆ.

ಇದಕ್ಕೆ ದೊಡ್ಡ ದೊಡ್ಡ ಗುರುಗಳ ಪ್ರವಚನˌ ಪಾಠˌ ಸಂದೇಶ ಯಾವುದು ಉಪಯೋಗವಿಲ್ಲ... ನೀನು ದಿನನಿತ್ಯದ ಬದುಕಲ್ಲಿ ಇವತ್ತು ಏನೂ ಹೊಸದನ್ನು ಕಲಿತ್ತೇ? ನಿನ್ನ ದಿನನಿತ್ಯದ ಜಂಜಾಟದ ಮಧ್ಯೆ ಇವತ್ತು ಹೇಗೆ ಬದುಕಿದೆ??? ಇದೇ ನಿಜವಾದ ಆಧ್ಯಾತ್ಮಿಕ ಮಾರ್ಗ.... ಇದನ್ನು ಕಲಿಸಲು ಯಾರು ಬೇಕಾಗಿಲ್ಲ. ನೀನು ಅರಿವಿನಿಂದ ಇದ್ರೆ ಸಾಕುˌ ನಿನ್ನ ಅರಿವೇ ಗುರುವಾಗುವುದು...

✍️*ಜಯದೇವ ಪೂಜಾರ*
7676870233

Address

Vidya Nagar
Gokak

Alerts

Be the first to know and let us send you an email when Atmasakshi foundation posts news and promotions. Your email address will not be used for any other purpose, and you can unsubscribe at any time.

Share