08/06/2023
ಬ್ರೈನ್ ಟ್ಯೂಮರ್ ಈ ಶಬ್ದವೀಗ ಬಹು ಚರ್ಚಿತ ಮತ್ತು ಎಲ್ಕೆಡೆ ಕೇಳಲ್ಪಡುತ್ತದೆ. ಹಾಗಿದ್ದರೆ ಏನಿದು ಬ್ರೈನ್ ಟ್ಯೂಮರ್? ಏನಿದರ ಲಕ್ಷಣ ತಿಳಿಯೋಣ ಬನ್ನಿ.
ಪ್ರತಿ ವರ್ಷ ಜೂನ್ ತಿಂಗಳ 8ನೇ ತಾರೀಖಿನಂದು ವಿಶ್ವ ಬ್ರೈನ್ ಟ್ಯೂಮರ್ ದಿನ (World Brain Tumor Day 2023) ಅಥವಾ ವಿಶ್ವ ಮೆದುಳು ಕ್ಯಾನ್ಸರ್ ದಿನ ಎಂದು ಆಚರಿಸಲಾಗುತ್ತದೆ.
*ಬ್ರೈನ್ ಟ್ಯೂಮರ್ ಎಂದರೇನು?*
ಮಿದುಳಿನಲ್ಲಿ ಅನಾರೋಗ್ಯಕರ ಜೀವಕೋಶಗಳು ಗೆಡ್ಡೆಯಾಕಾರದಲ್ಲಿ ಗುಂಪು ಗೂಡುವುದನ್ನು ಬ್ರೈನ್ ಟ್ಯೂಮರ್ ಎನ್ನಲಾಗುತ್ತದೆ. ಇದನ್ನು ಮಿದುಳಿನ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ.
*ಬ್ರೈನ್ ಟ್ಯೂಮರ್ ಆಗಲು ಕಾರಣವೇನು?*
ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯ ಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯ ಪ್ರತಿ ದಿನದ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ. ಇದೊಂದು ಗೆಡ್ಡೆಯ ರೂಪದಲ್ಲಿ ಉಂಟಾಗಿ ಕ್ರೇನಿಯಲ್ ನರ ಮಂಡಲ, ಮೆನಿಂಗ್ಸ್, ಪಿಟ್ಯುಯಿಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗ ಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ ಡಿಎನ್ಎ ರೂಪಾಂತರವಾಗಿ ಈ ಪ್ರಕ್ರಿಯೆಉಂಟಾಗುತ್ತದೆ.
*ಕಾರಣಗಳೇನು?*
– ಕುಟುಂಬದ ಇತಿಹಾಸದಲ್ಲಿ ಮೆದುಳು ಕ್ಯಾನ್ಸರ್ ಇದ್ದಲ್ಲಿ.
-ದೀರ್ಘಕಾಲದಿಂದ ಧೂಮಪಾನ ಮಾಡುತ್ತಿದ್ದರೆ.
– ಸಸ್ಯನಾಶಕಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವಾಗ ತೆಗೆದುಕೊಳ್ಳದೇ ಇರುವ ಮುನ್ನೆಚ್ಚರಿಕೆಗಳು.
– ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು ಅಂದರೆ ಅಂತಹ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವುದರಿಂದಲೂ ಬರಬಹುದು.
– ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸ್ಟೀನ್-ಬಾರ್ ವೈರಸ್ ಸೋಂಕನ್ನು ಹೊಂದಿರುವುದು.
ಬ್ರೈನ್ ಟ್ಯೂಮರ್ ಪತ್ತೆ ಹಚ್ಚುವ ವಿಧಾನ
– CT ಸ್ಕ್ಯಾನ್ – ಮೆದುಳು ಪರೀಕ್ಷಿಸಲು
-MRI ಸ್ಕ್ಯಾನ್ – ನಿಖರವಾದ ಸ್ಥಳ ಮತ್ತು ಹರಡುವಿಕೆಯನ್ನು ತಿಳಿಯಲು
-MR ಸ್ಪೆಕ್ಟ್ರೋಸ್ಕೋಪಿ – ಅದರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು
-ಪಿಇಟಿ ಸ್ಕ್ಯಾನ್ – ಸೆಕೆಂಡರಿಗಳನ್ನು ತಿಳಿಯಲು -ಆಂಜಿಯೋಗ್ರಾಮ್ – ಮೆದುಳಿನ ನಾಳಗಳನ್ನು ನೋಡಲು
-ಬಯಾಪ್ಸಿ.
ಆದ್ದರಿಂದ ಎಲ್ಲರೂ ಇದರ ಬಗ್ಗೆ ಅರಿಯಿರಿ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸಿ. ಸಂಭವನೀಯ ಅಪಾಯ ತಪ್ಪಿಸಿ. ಈ ಮೇಲಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ತಜ್ಞ ವೈದ್ಯರ ಭೇಟಿ ಮಾಡಿ.