20/01/2025
60-70 ದಾಟಿದ ವಯಸ್ಸಾದವರ ಜೀವನಶೈಲಿ ಹೇಗಿರಬೇಕು, ಹೇಗಿರಬಾರದು ಅನ್ನೋ ಅತ್ತುತ್ತಮ ಮಾಹಿತಿ ವಾಟ್ಸಾಪ್ ಮೂಲದಿಂದ ಸಿಕ್ಕಿದೆ
ಹಿರಿಯರೆಲ್ಲರಿಗೂ ಉಪಯುಕ್ತ ಮಾಹಿತಿ ಅಂತ ಇಲ್ಲಿ ಹಂಚಿದ್ದೇನೆ :-
ನೀವೇ ನಿಮ್ಮ ಜೀವನದ ನಿಜವಾದ ರಕ್ಷಕರು.
×××=×××=××=××=×××=×××
60 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಈ ಕೆಳಗಿನ ಹತ್ತು ಕ್ರಿಯೆಗಳನ್ನು ತಪ್ಪಿಸಬೇಕು:
1. ಮೆಟ್ಟಿಲುಗಳನ್ನು ಹತ್ತುವಾಗ ಹೆಚ್ಚು ಜಾಗರೂಕರಾಗಿರಿ, ಬೆಂಬಲ ಪೈಪ್ ಅನ್ನು ಹಿಡಿದುಕೊಂಡು ಹತ್ತಿ ಇಳಿಯಿರಿ.
2. ನಿಮ್ಮ ತಲೆಯನ್ನು ತುಂಬಾ ವೇಗವಾಗಿ ಚಲಿಸಬೇಡಿ, ಮೊದಲು ನಿಮ್ಮ ಇಡೀ ದೇಹವನ್ನು ಬೆಚ್ಚಗಾಗಿಸಿ (ವಾರ್ಮ್ ಅಪ್ ಮಾಡಿ).
3. ನಿಮ್ಮ ದೇಹವನ್ನು ಬಗ್ಗಿಸಿ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಬೇಡಿ, ಮೊದಲು ಪೂರ್ಣ ದೇಹವನ್ನು ವಾರ್ಮ್ ಅಪ್ ಮಾಡಿ.
4. ಎದ್ದು ನಿಲ್ಲುವ ಬದಲು ಕುಳಿತುಕೊಂಡು ನಿಮ್ಮ ಪೈಜಾಮಾ / ಪ್ಯಾಂಟ್ ಗಳನ್ನು ಧರಿಸಿ.
5. ನಿಮ್ಮ ಮುಖವನ್ನು ಮುಂದಕ್ಕೆ ನೋಡಿಕೊಂಡು ಏಳಬೇಡಿ. ಎಡ ಅಥವಾ ಬಲ ಮಗ್ಗಲು ತಿರುಗಿ ಎದ್ದೇಳಿ.
6. ಹಿಂಬದಿಗೆ ನಡೆಯಬೇಡಿ. ಅದು ಗಂಭೀರವಾದ ಗಾಯವನ್ನು ಉಂಟುಮಾಡಬಹುದು.
8. ಕೆಳಗೆ ಬಾಗಿ ಭಾರವಾದ ವಸ್ತುಗಳನ್ನು ಎತ್ತಬೇಡಿ, ಮೊದಲು ಮೊಣಕಾಲುಗಳಲ್ಲಿ ಬಾಗಿ ಸೊಂಟವನ್ನು ನೇರವಾಗಿ ಇಟ್ಟುಕೊಂಡು ನಂತರ ಮೇಲಕ್ಕೆತ್ತಿ.
9. ಮಲಗಿರುವಾಗ ಒಮ್ಮೆಲೆ ಏಳಬೇಡಿ, ಮೊದಲು ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತು ನಂತರ ಎದ್ದೇಳಿ.
10. ಶೌಚಕ್ಕೆ ಒತ್ತಡ ಹೇರಬೇಡಿ (ತಿಣುಕಬೇಡಿ) ಕರುಳಿನ ಚಲನೆ ಸ್ವಾಭಾವಿಕವಾಗಿರಲಿ.
-------
● ಹೆಚ್ಚು ಮುಖ್ಯವಾಗಿ - ಯಾವಾಗಲೂ ಕ್ರಿಯಾಶೀಲರಾಗಿರಿ, ಚಟುವಟಿಕೆಯಿಂದಿರಿ ಮತ್ತು ಸಕಾರಾತ್ಮಕ ಭಾವನೆಯನ್ನು ಹೊಂದಿರಿ. ಏಕೆಂದರೆ, ನಿಮ್ಮ ಜೀವನದುದ್ದಕ್ಕೂ ಕಷ್ಟ ಪಟ್ಟ ನಂತರ ಈಗ ನಿಜ ಜೀವನವನ್ನು ಸಂತೋಷದಿಂದ ಬದುಕುವ ಸಮಯ.
● ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಮರೆಯದಿರಿ. ನಿಮ್ಮ ಆರೋಗ್ಯ ಮತ್ತು ಮನರಂಜನೆಗಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಖರ್ಚು ಮಾಡಿ.
● ಜೀವನವು ಸೀಮಿತವಾಗಿದೆ ಮತ್ತು ನಶ್ವರವಾಗಿದೆ. ಜೀವನವು ಕೊನೆಗೊಂಡಾಗ, ಇಲ್ಲಿಯ ಏನನ್ನೂ ನಮ್ಮೊಂದಿಗೆ ತೆಗೆದುಕೊಂಡು ಹೋಗಲಾಗುವುದಿಲ್ಲ.
● ಹಾಗಾದರೆ, ನೀವು ಜೀವನದಲ್ಲಿ ಕೊನೆಯಲ್ಲಿ ಏಕೆ ಮಿತವ್ಯಯವನ್ನು ಮಾಡಬೇಕು? ಅಗತ್ಯವಾದ ಖರ್ಚುಗಳನ್ನು ಖಂಡಿತ ಮಾಡಬೇಕು ಮತ್ತು (ಸಾತ್ವಿಕ) ಆನಂದವನ್ನು ನೀಡುವ ಕೆಲಸಗಳನ್ನು ಮಾಡಬೇಕು.
● ಜೀವನದ ಮತ್ತು ಕಷ್ಟಪಟ್ಟು ಸಂಪಾದಿಸಿದ ದುಡ್ಡಿನ ಆನಂದ ಪಡೆಯುವ ಸಮಯ ಕಳೆದು ಹೋಗುತ್ತದೆ...!
● ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅವರು ತಮ್ಮ ಮಾರ್ಗವನ್ನು ಆರಿಸಿಕೊಳ್ಳಲಿ. ಅವರ ಭವಿಷ್ಯವನ್ನು ಅವರ ಮನಬಂದಂತೆ ರೂಪಿಸಿಕೊಳ್ಳಲಿ.
● ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ. ಆದರೆ ಅದೇ ಮೋಹದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಅವರಿಗೂ ಉಡುಗೊರೆ ನೀಡಿ.
● ಜೀವನವು ಹುಟ್ಟಿನಿಂದ ಸಾವಿನವರೆಗೆ ಕೇವಲ ಕಷ್ಟಪಡುವುದು ಅಥವಾ ಹಣ ಸಂಪಾದಿಸುವುದು ಅಲ್ಲ ಎಂಬುದನ್ನು ನೆನಪಿಡಿ.
● ದುಡ್ಡು ಗಳಿಸಲು ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ಅಂಥ ದುಡ್ಡಿನಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. ಭವಿಷ್ಯದಲ್ಲಿ ಎಷ್ಟು ಹಣ ಖರ್ಚು ಮಾಡಿದರು ಉತ್ತಮ ಆರೋಗ್ಯ ಸಿಗುವುದಿಲ್ಲ.
● ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಿ.
● ಇಳಿ ವಯಸ್ಸಿನಲ್ಲಿ ಪ್ರತಿಯೊಬ್ಬರ ಮುಂದೆ ಎರಡು ಪ್ರಮುಖ ಪ್ರಶ್ನೆಗಳಿರುತ್ತವೆ. ಹಣ ಸಂಪಾದಿಸುವುದನ್ನು ಯಾವಾಗ ನಿಲ್ಲಿಸಬೇಕು? ಮತ್ತು ಎಷ್ಟು ಹಣ ನಿಮಗೆ ಸಾಕಾಗುತ್ತದೆ?
● ನಿಮ್ಮಲ್ಲಿ ಎಷ್ಟೇ ಎಕರೆ ಫಲವತ್ತಾದ ಕೃಷಿಭೂಮಿ ಇದ್ದರೂ, ನಿಮಗೆ ಪ್ರತಿದಿನ ಎಷ್ಟು ಆಹಾರ ಧಾನ್ಯ ಬೇಕು? ಅದೆಷ್ಟೋ ಮನೆಗಳಿದ್ದರೂ ರಾತ್ರಿ ಮಲಗಲು ಒಂದೇ ಕೋಣೆ ಸಾಕು!
● ಒಂದು ದಿನ ಸಂತೋಷವಿಲ್ಲದೆ ಕಳೆದರೆ, ನೀವು ಜೀವನದ ಒಂದು ದಿನವನ್ನು ಕಳೆದುಕೊಂಡಿದ್ದೀರಿ; ಒಂದು ದಿನ ಸಂತೋಷದಿಂದ ಕಳೆದರೆ ನೀವು ನಿಮ್ಮ ಜೀವನದಲ್ಲಿ ಒಂದು ದಿನವನ್ನು ಗಳಿಸಿದ್ದೀರಿ ಎಂಬುದನ್ನು ನೆನಪಿಡಿ.
● ಇನ್ನೊಂದು ವಿಷಯ ನಿಮ್ಮ ಸ್ವಭಾವವು ತಮಾಷೆಯಾಗಿದ್ದರೆ ನೀವು ಅನಾರೋಗ್ಯದಿಂದ ಬೇಗ ಚೇತರಿಸಿಕೊಳ್ಳುತ್ತೀರಿ ಮತ್ತು ನೀವು ಯಾವಾಗಲೂ ಹರ್ಷಚಿತ್ತದಿಂದ ಇದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.
● ಅತ್ಯಂತ ಮುಖ್ಯವಾಗಿ, ಯಾವುದು ಒಳ್ಳೆಯದು, ಯಾವುದು ಉದಾತ್ತವಾದದ್ದು ಎಂದು ಸುತ್ತಲೂ ನೋಡಿ. ಅದನ್ನು ಕಾಪಾಡಿಕೊಳ್ಳಿ.
● ಮತ್ತು ಹೌದು, ನಿಮ್ಮ ಬಂಧುಬಳಗ, ಸ್ನೇಹಿತರನ್ನು ಎಂದಿಗೂ ಮರೆಯದಿರಿ, ಅವರ ಸಂಪರ್ಕದಲ್ಲಿರಿ, ನೀವು ಇದನ್ನು ನಿರ್ವಹಿಸಿದರೆ, ನೀವು ಹೃದಯದಲ್ಲಿ ಯುವಕರಾಗಿರುತ್ತೀರಿ ಮತ್ತು ಇತರರಿಗೂ ಬೇಕಾದವರಾಗಿರುತ್ತೀರಿ.
● ಬಂಧುಬಳಗದವರು, ಸ್ನೇಹಿತರು ಇಲ್ಲದಿದ್ದರೆ ನೀವು ಖಂಡಿತವಾಗಿಯೂ ಒಂಟಿತನವನ್ನು ಅನುಭವಿಸುವಿರಿ. ಅದಕ್ಕಾಗಿ ಪ್ರತಿದಿನ ನಿಮಗಿಷ್ಟವಾದ ಮಾಧ್ಯಮದ ಮೂಲಕ ಅವರೊಡನೆ ಸಂಪರ್ಕದಲ್ಲಿರಿ. ನಗಿ ಮತ್ತು ನಗಿಸಿ. ಒಳ್ಳೆಯ ಸಂದೇಶಗಳನ್ನು ಕಳುಹಿಸಿ. ಸಾಧ್ಯವಾದಾಗಲೆಲ್ಲ ವೈಯಕ್ತಿಕವಾಗಿ ಭೇಟಿ ಮಾಡಿ.
ಅದಕ್ಕೇ ಹೇಳುವುದು: ಜೀವನ ತುಂಬಾ ಚಿಕ್ಕದು, ಖುಷಿಯಾಗಿ ಬಾಳು ಎಂದು! 💕
● ಪ್ರೀತಿ, ಸ್ನೇಹ ಜೀವನದಾಯಕ, ಅದನ್ನು ಸವಿಯಿರಿ..! ಕೋಪ, ದ್ವೇಷ ಇವು ಅಪಾಯಕಾರಿ, ಅವನ್ನು ಸಮಾಧಿ ಮಾಡಿ..!
● ಬಿಕ್ಕಟ್ಟುಗಳು ತಾತ್ಕಾಲಿಕವಾಗಿರುತ್ತವೆ; ಅವುಗಳನ್ನು ಎದುರಿಸಿ..!
● ಪರ್ವತದ ಹಿಂದೆ ಕಣ್ಮರೆಯಾದ ಸೂರ್ಯನನ್ನು ಮತ್ತೆ ಕಾಣಬಹುದು. ಆದರೆ…. ಕಾಲದ ಮುಸುಕಿನ ಹಿಂದೆ ಕಣ್ಮರೆಯಾದ ಆಪ್ತರೂ ಮತ್ತು ಆತ್ಮೀಯರು ಮತ್ತೆ ಕಾಣಿಸುವುದಿಲ್ಲ.
!! ಸಂಬಂಧಗಳನ್ನು ಮತ್ತು ಸ್ನೇಹವನ್ನು ಕಾಪಾಡಿಕೊಳ್ಳಿ !!
🔸️⚡️🔸️⚡️🌟⚡️🔸️⚡️🔸️
ನೀವು ಹಿರಿಯ ನಾಗರಿಕರಲ್ಲದಿದ್ದರೂ, ದಯವಿಟ್ಟು ಎಲ್ಲಾ ಹಿರಿಯ ನಾಗರಿಕರಿಗೆ ಈ ಸಂದೇಶವನ್ನು ಕಳುಹಿಸಿ. 🙏