Lakshman Akashe

Lakshman Akashe Farmer, Writer, Poet, Yoga Teacher, Lecturer in Commerce.

ಶ್ರೀ ವಿಧುಶೇಖರಭಾರತಿ ಸ್ವಾಮೀಜಿಗಳು ನಮ್ಮ ಮನೆಗೆ ಆಗಮಿಸಿದ್ದು ನಮ್ಮ ಭಾಗ್ಯವೆಂದೇ ಭಾವಿಸುತ್ತೇನೆ.ಅವರು ಮನೆಗೆ ಬರುವ ಸಮಯದಲ್ಲಿ ನಾವು ಊಟಕ್ಕೆ ಕ...
03/12/2025

ಶ್ರೀ ವಿಧುಶೇಖರಭಾರತಿ ಸ್ವಾಮೀಜಿಗಳು ನಮ್ಮ ಮನೆಗೆ ಆಗಮಿಸಿದ್ದು ನಮ್ಮ ಭಾಗ್ಯವೆಂದೇ ಭಾವಿಸುತ್ತೇನೆ.
ಅವರು ಮನೆಗೆ ಬರುವ ಸಮಯದಲ್ಲಿ ನಾವು ಊಟಕ್ಕೆ ಕುಳಿತಿದ್ದೆವು. ನಮ್ಮ ಊಟ ಮುಗಿಯುವವರೆಗೆ ಸ್ವಲ್ಪ ಸಮಯ ನಿಂತುಕೊಂಡರು. ನಂತರ ನಮ್ಮನ್ನೆಲ್ಲಾ ಆಶೀರ್ವದಿಸಿ ಹೊರಟರು. ಇದಾದ ಒಂದೆರಡು ನಿಮಿಷದ ನಂತರ ಏನೋ ಪಾತ್ರೆಯ ಶಬ್ದ ಕೇಳಿಸಿತು. ಅಮ್ಮ ಬೇಗ ಎದ್ದು ಕಷಾಯ ಮಾಡುತ್ತಿದ್ದರು. ನಾನು ಈಗಷ್ಟೇ ಎದ್ದೆ.
ಓಂ ನಮಃ ಶಿವಾಯ.

02/12/2025

ಬ್ರಾಹ್ಮಣ...

ಬ್ರಾಹ್ಮಣ ಒಳ್ಳೆಯವನಾದರೆ ಜಗತ್ತಿಗೇ ಒಳಿತು ಬಯಸುತ್ತಾನೆ. ಉದಾ:- ಅದ್ವೈತದಿಂದ ದೇಶವನ್ನೇ ಉಳಿಸಿದ ಆ ದೇವದೂತ.
ಬ್ರಾಹ್ಮಣ ಕೆಟ್ಟುಹೋದರೆ ಜಗತ್ತನ್ನೇ ಹಾಳು ಮಾಡುತ್ತಾನೆ.‌ ಉದಾ:- ಜನಿವಾರ ಕಿತ್ತೆಸೆದು ಪ್ರತ್ಯೇಕ ಧರ್ಮ ಬಯಸಿ, ಅದು ಆಗದಿದ್ದಾಗ ತನ್ನ ಅಕ್ಕನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಆ ಧೂರ್ತ.

02/12/2025

ಹೊಸ ಅಡಿಕೆ ತೋಟದಲ್ಲಿ ಅಂತರಬೆಳೆಯಾಗಿ ಬೆಳ್ಳುಳ್ಳಿ ಮೊಳಕೆ ನೆಡುವುದು.

28/11/2025

ಹೊಸ ಅಡಿಕೆ ತೋಟದಲ್ಲಿ ಅಂತರಬೆಳೆಯಾಗಿ ತೊಂಡೆಕಾಯಿ ಬಳ್ಳಿ ನೆಡುವುದು.

27/11/2025

ಹೊಸ ಅಡಿಕೆ ತೋಟದಲ್ಲಿ ಅಂತರಬೆಳೆಯಾಗಿ ಬೆಂಡೆಕಾಯಿ ಗಿಡ ನೆಡುವುದು. ಬುಡದಲ್ಲಿ ತಂಪಿಗಾಗಿ ಬಾಳೆದಿಂಡಿನ ದೋಣಿಗಳನ್ನು ಇರಿಸಿದ್ದು.

ಹೆಣ್ಣುಮಕ್ಕಳೇಕೆ ಪೂರ್ತಿ ಬಟ್ಟೆ ಉಟ್ಟುಕೊಳ್ಳಬೇಕು? ಇಲ್ಲಿದೆ ಉತ್ತರ...ಮೊದಲೇ ಹೇಳುತ್ತೇನೆ- ಈ ಬರಹ ವಿವೇಕ ಇರುವ ಹೆಣ್ಣುಮಕ್ಕಳಿಗಾಗಿ ಅಲ್ಲ, ಹಾ...
25/11/2025

ಹೆಣ್ಣುಮಕ್ಕಳೇಕೆ ಪೂರ್ತಿ ಬಟ್ಟೆ ಉಟ್ಟುಕೊಳ್ಳಬೇಕು? ಇಲ್ಲಿದೆ ಉತ್ತರ...

ಮೊದಲೇ ಹೇಳುತ್ತೇನೆ- ಈ ಬರಹ ವಿವೇಕ ಇರುವ ಹೆಣ್ಣುಮಕ್ಕಳಿಗಾಗಿ ಅಲ್ಲ, ಹಾಗೂ ಉದ್ಧಟತನ ಮಾಡುವ ಹೆಣ್ಣುಮಕ್ಕಳಿಗೂ ಅಲ್ಲ. ಉದ್ಧಟತನ ಮಾಡುವ ಹೆಣ್ಣುಮಕ್ಕಳಿಗೆ ಮೌನವೇ ನಮ್ಮ ಉತ್ತರ. ಇಲ್ಲಿ ಬರುವ ಎಲ್ಲಾ ವಿಚಾರಗಳೂ ವೈಜ್ಞಾನಿಕ, ಹಾಗಾಗಿ ಅಸಹ್ಯವೆಂದು ಭಾವಿಸಬಾರದು.
ಮೊದಲು ಲಿಂಗದ ವಿಚಾರಕ್ಕೆ ಬರೋಣ. ಲಿಂಗಗಳಲ್ಲಿ ಮೂರು ವಿಧ- ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ. ನಪುಂಸಕಲಿಂಗದವರ ವಿಚಾರ ಇಲ್ಲಿ ಕೈಬಿಡೋಣ. ಏಕೆಂದರೆ ಅವರಿಂದ ದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಏನೂ ಏರುಪೇರು ಆಗುವುದಿಲ್ಲ. ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳಲ್ಲಿ ಸಂತಾನೋತ್ಪತ್ತಿಗೆ ಹಾಗೂ ಮಕ್ಕಳ ಬೆಳವಣಿಗೆಗೆ ಕಾರಣವಾಗುವ ಅಂಗ ಅಥವಾ ಅಂಗಾಂಗಗಳನ್ನು ಮರ್ಮಾಂಗ ಎನ್ನಲಾಗುತ್ತದೆ. ಅವುಗಳನ್ನು ಗುಪ್ತವಾಗಿ ಇಡಬೇಕಾದುದರಿಂದ ಗುಪ್ತಾಂಗ ಎಂದೂ ಕರೆಯಲಾಗುತ್ತದೆ. ಗುಪ್ತವಾಗಿ ಏಕೆ ಇಡಬೇಕು ಎಂದರೆ, ಗುಪ್ತವಾಗಿ ಇಡದಿದ್ದರೆ ವಿರುದ್ಧಲಿಂಗದವರಿಗೆ ಆಕರ್ಷಣೆ ಉಂಟಾಗುತ್ತದೆ ಅಂತ. ಗಂಡಸರಿಗೆ ಗುಪ್ತಾಂಗ ಕೆಳಗೆ ಇರುತ್ತದೆ. ಅದನ್ನು ಶಿಶ್ನ ಎನ್ನುತ್ತಾರೆ. ಅದು ಮಗುವಿನ ಜನ್ಮ ನಿರ್ಧಾರಕ್ಕೆ ಕಾರಣವಾಗುತ್ತದೆ. ಹೆಂಗಸರಿಗೆ ಗುಪ್ತಾಂಗ ಶರೀರದ ಎರಡು ಕಡೆ ಇರುತ್ತದೆ- ಒಂದು ಕೆಳಗೆ ಯೋನಿ, ಇದು ಮಗುವಿನ ಜನನಕ್ಕೆ ಕಾರಣವಾಗುತ್ತದೆ; ಇನ್ನು, ಮೇಲೆ ಇರುವ ಎರಡು ಸ್ತನಗಳು, ಅವು ಮಗುವಿಗೆ ಹಾಲೂಡಿಸಲು ಸಹಾಯವಾಗುತ್ತವೆ. ಗಂಡಸರು, ಹೆಂಗಸರೂ ಇಬ್ಬರೂ ತಮ್ಮ ತಮ್ಮ ಗುಪ್ತಾಂಗಗಳನ್ನು ಗುಪ್ತವಾಗಿಯೇ ಇಡಬೇಕು. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಗುಪ್ತಾಂಗಗಳನ್ನು ಗುಪ್ತವಾಗಿಡುವುದು ಬಹಳ ಮುಖ್ಯ. ಕಾರಣ, ಅದು ಪ್ರಕೃತಿ. ಹೆಣ್ಣು ಗಂಡಿಗೆ ಆಕರ್ಷಿತಳಾಗುವುದಕ್ಕಿಂತ ಗಂಡು ಹೆಣ್ಣಿಗೆ ಆಕರ್ಷಿತನಾಗುವುದು ಬೇಗ. ಇದು ಮನುಷ್ಯರಲ್ಲಿ ಮಾತ್ರವಲ್ಲ, ಎಲ್ಲಾ ಪ್ರಾಣಿಗಳಲ್ಲೂ ಇರುವ ಸಹಜ ಪ್ರಕೃತಿ, ದೇವರ ಸೃಷ್ಟಿ. ಹೀಗಿರುವಾಗ 'ಸಮಾನತೆ' ಎನ್ನುವ ಧ್ಯೇಯವಾಕ್ಯವನ್ನು ವಸ್ತ್ರಕ್ಕೂ ಅಳವಡಿಸುವುದು ಸಮಂಜಸವಲ್ಲ. ಗಂಡು ಒಂದೇ ಕಡೆ ಇರುವ ತನ್ನ ಮರ್ಮಾಂಗವನ್ನು ಮುಚ್ಚಿಕೊಂಡು ಉಳಿದ ಅಂಗಗಳನ್ನು ಮುಚ್ಚಿಕೊಳ್ಳುವುದಿಲ್ಲ ಎಂದುಕೊಳ್ಳೋಣ. ಅದನ್ನೇ ಹೆಣ್ಣೂ ಮಾಡಲು ಹೊರಟರೆ ಏನಾದೀತು? ಹೆಣ್ಣಿಗೆ ಮರ್ಮಾಂಗ ಇರುವುದು ಒಂದೇ ಕಡೆ ಅಲ್ಲವಲ್ಲ! ಹಾಗಾಗಿ ಸಮಾನತೆಯ ತತ್ವದ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಯಾರು ಹೇಗಿರಬೇಕೋ ಹಾಗಿದ್ದರೇನೇ ಚೆಂದ. ಗಂಡು ಹೆಣ್ಣಿಗೆ ಹಾಗೂ ಹೆಣ್ಣು ಗಂಡಿಗೆ ಬುದ್ಧಿವಾದ ಹೇಳುತ್ತಾ ವಾದದ ಸರಪಳಿ ಮಾಡುವುದು ಸೂಕ್ತವಲ್ಲ. ಒಬ್ಬಿಬ್ಬರು ಗಂಡಸರು ಅಥವಾ ಒಬ್ಬಿಬ್ಬರು ಹೆಂಗಸರು ಹೇಗಿರುತ್ತಾರೆ ಎನ್ನುವುದನ್ನೂ ಸಾರ್ವತ್ರಿಕವಾಗಿ ಅಳವಡಿಸಿ ಮಾತಾಡುವುದು ತಪ್ಪು. ಬಹುಸಂಖ್ಯಾತ ಮಂದಿ ಹೇಗಿರುತ್ತಾರೆ ಎನ್ನುವುದು ಪ್ರಶ್ನೆ. ಇತ್ತೀಚಿನ ಕಾಲದಲ್ಲಿ ಬಹುಸಂಖ್ಯಾತ ಮಂದಿ ಗಂಡುಗಳಿಗೆ ತುಲನೆ ಮಾಡಿದರೆ ಬಹುಸಂಖ್ಯಾತ ಮಂದಿ ಹೆಣ್ಣುಗಳೇ ಪೂರ್ತಿ ಬಟ್ಟೆಯನ್ನು ಹಾಕಿಕೊಳ್ಳದೇ ಇರುವವರು ಜಾಸ್ತಿ. ಗಂಡಸರಿಗೆ ಚಡ್ಡಿ..ಟವಲ್..ಕಚ್ಚೆ..ಲುಂಗಿ..ಬರ್ಮುಡಾ..ಪ್ಯಾಂಟ್ ಈ ರೀತಿ ವಸ್ತ್ರವಿನ್ಯಾಸ‌ ಬದಲಾಗಿ ಅಂಗಗಳು ಮುಚ್ಚುತ್ತಾ ಹೋದಂತೆ, ಹೆಂಗಸರಿಗೆ ಸೀರೆ ರವಿಕೆ.. ಸೀರೆ ತೋಳಿಲ್ಲದ ರವಿಕೆ.. ನೈಟಿ, ಚೂಡಿದಾರ್.. ತೋಳಿಲ್ಲದ ಚೂಡಿದಾರ್.. ಟೈಟ್ ಟೀಶರ್ಟ್ ಜೀನ್ಸ್ ಪ್ಯಾಂಟ್.. ಟೀಶರ್ಟ್ ಚಡ್ಡಿ.. ಬಿಕಿನಿ ಕಾಚ.. ಈ ರೀತಿ‌ ವಸ್ತ್ರವಿನ್ಯಾಸದಲ್ಲಿ ಬದಲಾವಣೆಗಳಾಗಿ ನಗ್ನರಾಗುತ್ತಾ ಹೋದರು. ಹೆಣ್ಣುಮಕ್ಕಳ ಇಂತಹ ನಗ್ನಾವಸ್ಥೆಗಳೇ ಗಂಡುಮಕ್ಕಳ ಲೈಂಗಿಕ‌ ಆಕರ್ಷಣೆಗೆ ಕಾರಣವಾಯಿತು. ಲೈಂಗಿಕ ಆಕರ್ಷಣೆ ಹಾಗೂ ಕಾಮುಕತೆಗೆ ಬಹಳಷ್ಟು ವ್ಯತ್ಯಾಸವಿದೆ. ದೈಹಿಕವಾಗಿ ಸರಿ ಇರುವ ಗಂಡಸರಿಗೆ ಹೆಣ್ಣುಮಕ್ಕಳ ಬಗ್ಗೆ ಲೈಂಗಿಕ ಆಕರ್ಷಣೆ ಇರುವುದು ಸಹಜ. ಅದರಲ್ಲಿ ಕೆಲವರಿಗೆ ಸ್ವಲ್ಪ ಜಾಸ್ತಿ, ಕೆಲವರಿಗೆ ಸ್ವಲ್ಪ ಕಡಿಮೆ ಅಷ್ಟೆ. ಇನ್ನು ಕಾಮುಕತೆ ಎನ್ನುವುದು ಬೇರೆ ವಿಷಯ. ಯಾವಾಗಲೂ ಅನೈತಿಕ ವಿಚಾರಗಳ ಕುರಿತು ಚಿಂತಿಸುವುದು, ಮಾತಾಡುವುದು, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಇವು ಕಾಮುಕತೆಯ ಸ್ವರೂಪಗಳಾಗಿವೆ‌. ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಅಸಂಸ್ಕೃತಿಯನ್ನು ಯಾವ ಗಂಡಸರು ಖಂಡಿಸುತ್ತಾರೋ ಅಂಥವರಲ್ಲಿ ಕಾಮುಕತೆ ಇರುವುದಿಲ್ಲ, ಖಂಡಿಸದೆ 'ಹೋಗಲಿ ಬಿಡೋಣ' ಅಂತ ಸುಮ್ಮನಿರುವ ಗಂಡಸರಲ್ಲಿಯೂ ಕಾಮುಕತೆ ಇರುವುದಿಲ್ಲ. ಆದರೆ ಹೆಣ್ಣುಮಕ್ಕಳ ಅಶ್ಲೀಲ ವಿಚಾರಗಳನ್ನು ತಿಳಿದೂ ಅಂಥವರನ್ನೇ ಬೆಂಬಲಿಸುವವರಿಗೆ ಹಾಗೂ ಅವರೆದುರು ತಾನು ಭಾರೀ ಸಂಭಾವಿತ ಹಾಗೂ ಹೆಣ್ಣುಮಕ್ಕಳಿಗೆ ಭಾರೀ ಗೌರವ ಕೊಡುವವರು ಎಂದು ನಟಿಸುವವರಲ್ಲಿ ಕಾಮುಕತೆ ಇದ್ದೇ ಇರುತ್ತದೆ; ಹೊರಗಿನಿಂದ ಕಾಣುವುದಿಲ್ಲ, ಮನಸ್ಸಿನಲ್ಲಿ ಚಪಲವಿರುತ್ತದೆ. ಇಂತಹ ಕಾಮುಕತೆ ಕೇವಲ ಅವಿವಾಹಿತರಲ್ಲಿ ಮಾತ್ರವಲ್ಲ, ವಿವಾಹವಾಗಿ ಅದೆಷ್ಟೋ ವರ್ಷ ದಾಂಪತ್ಯ ಕಳೆದ ದೊಡ್ಡ ದೊಡ್ಡ ಗಂಡಸರಲ್ಲೂ ಇರುತ್ತದೆ. ಇನ್ನು, ಹೆಣ್ಣುಮಕ್ಕಳು ನಗ್ನರಾಗಿದ್ದಾಗ ಅಥವಾ ಅರೆನಗ್ನರಾಗಿದ್ದಾಗ ಸಾಮಾನ್ಯ ಲೈಂಗಿಕ ಆಕರ್ಷಣೆಗಳೇ ಕಾಮುಕತೆಗೆ ಪ್ರೇರಣೆಯನ್ನು ನೀಡುತ್ತವೆ. ಸಮಾಜದಲ್ಲಿ ಗಂಡಿಗೂ ಹೆಣ್ಣಿಗೂ ನೈತಿಕ ಶಿಕ್ಷಣದ ಅಗತ್ಯವಿದೆ. ಅದರಲ್ಲೂ ಹೆಣ್ಣಿಗೆ ನೈತಿಕ ಶಿಕ್ಷಣದ ಅಗತ್ಯ ಬಹಳಷ್ಟಿದೆ. ಹೆಣ್ಣು ಅರೆಬೆತ್ತಲೆಯಾಗಿ ಇರುವಾಗಲೂ ಎಲ್ಲಾ ಗಂಡುಮಕ್ಕಳೂ ಸುಮ್ಮನಿರಬೇಕು, ಸೋದರಿಯರೆಂದು ತಿಳಿದು ಗೌರವಿಸಬೇಕು ಎನ್ನುವಂಥದ್ದು ಮರುಳುತನ. ಪ್ರಕೃತಿಯನ್ನು ಸಾಮಾನ್ಯ ವ್ಯಕ್ತಿಗಳು ಎಂದೂ ಮೀರಲು ಸಾಧ್ಯವಿಲ್ಲ. ಮಗು ಲಾಡು ತಿನ್ನಬಾರದೆಂದು ತಾಯಿ ಅದನ್ನು ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಟ್ಟರೆ ಮಗು ಏನೂ ಮಾಡುವುದಿಲ್ಲ. ಅದನ್ನು ಬಿಟ್ಟು, ಲಾಡು ಇರುವ ಪೆಟ್ಟಿಗೆಯನ್ನು ಸ್ವಲ್ಪ ತೆರೆದಿಟ್ಟು 'ಮಗೂ ಆ ಪೆಟ್ಟಿಗೆಯಲ್ಲಿ ಲಾಡು ಇದೆ, ತಿನ್ನಬೇಡ' ಎಂದರೆ ಮಗು ಸುಮ್ಮನಿದ್ದೀತೇ? ಇಲ್ಲ‌ ಹಾಗಾದರೆ ಇಲ್ಲಿ ತಪ್ಪು ಯಾರದ್ದು? ತನ್ನ ವಯಸ್ಸಿಗೆ ಸರಿಯಾಗಿ ಲಾಡು ಮೇಲೆ ಆಸೆ ಇಟ್ಟುಕೊಂಡ ಮಗುವಿನ ತಪ್ಪೇ ಅಥವಾ ಮಗು ಲಾಡು ತಿನ್ನಬಹುದು ಎಂದು ತಿಳಿದಿದ್ದರೂ ಲಾಡು ಕಾಣುವಂತೆ ಪೆಟ್ಟಿಗೆ ತೆರೆದಿಟ್ಟ ತಾಯಿಯ ತಪ್ಪೇ? ಅರ್ಥ ಮಾಡಿಕೊಳ್ಳಿ. ತನ್ನ ವಯೋಸಹಜವಾದ ಆಸೆಯನ್ನು ಬಿಡುವಂತೆ ಮಗುವಿದೆ ಬೈದೋ ಅಥವಾ ಬಡಿದೋ ಬುದ್ಧಿವಾದ ಹೇಳಲು ಸಾಧ್ಯವೇ? ಅದೇ ರೀತಿ ಎಲ್ಲಾ ವಿಚಾರಗಳಲ್ಲೂ ಗಂಡುಮಕ್ಕಳಿಗೇ ಬುದ್ಧಿವಾದ ಹೇಳುವುದು ಸರಿಯೇ? ವಿಜ್ಞಾನ ಹಾಗೂ ತತ್ವಜ್ಞಾನ ಎರಡಕ್ಕೂ ಕೆಲವೊಂದು ವಿಚಾರದಲ್ಲಿ ನೇರ ಸಂಬಂಧ ಇದ್ದರೂ, ಕೆಲವೊಂದು ವಿಚಾರದಲ್ಲಿ ವಿರುದ್ಧ ಸಂಬಂಧವೂ ಇದೆ. ಪ್ರಕೃತಿ ಎಂದರೆ ವಿಜ್ಞಾನ. ಪ್ರಕೃತಿಗೆ ಮಾರಕವಾಗದಂತೆ ತನ್ನಿಷ್ಟದಂತೆ ಆಕೃತಿ ಕೊಡುವುದು ತತ್ವಜ್ಞಾನ. ಹೆಚ್ಚಾಗಿ ವಿಜ್ಞಾನವನ್ನು ಮೀರಿ ತತ್ವಜ್ಞಾನವೊಂದು ಬೆಳೆಯಲು ಸಾಧ್ಯವಿಲ್ಲ. ಅರೆನಗ್ನ ಅಥವಾ ನಗ್ನ‌ಹೆಣ್ಣುಮಕ್ಕಳನ್ನು ನೋಡಿದಾಗ ಗಂಡುಮಕ್ಕಳ ಮನಸ್ಸು ಸೆಳೆಯುವುದರ ಜೊತೆಗೆ ಅವರ ಮರ್ಮಾಂಗ ಕೂಡಾ ನಿಮಿರುತ್ತದೆ. ಆದರೆ ಹೆಣ್ಣುಮಕ್ಕಳಿಗೆ ಹಾಗಲ್ಲ, ಸುಂದರವಾಗ ಯುವಕರನ್ನು ನೋಡುವಾಗ ಅವರ ಮನಸ್ಸಿನಲ್ಲಿ ಸೆಳೆತ ಉಂಟಾಗಬಹುದೇ ವಿನಃ ದೇಹದ ಅಂಗಾಂಗಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗಾಗಿಯೇ ಹೆಣ್ಣುಮಕ್ಕಳಿಗೆ ತಮ್ಮ ವಸ್ತ್ರಗಳ ಬಗ್ಗೆ ತೀರಾ ನಿಗಾ ಇರುವಂಥದ್ದು ಅವಶ್ಯಕ. ಕೆಲವು ಗಂಡಸರು ತಮ್ಮ ಮನೋನಿಗ್ರಹದಿಂದ ಉದ್ದೇಶಪೂರ್ವಕವಾಗಿ ವಿಜ್ಞಾನವನ್ನು ಮೀರಿಸುವಂತೆ ತತ್ವಜ್ಞಾನವನ್ನು ಹೊಂದಿದವರೂ ಇದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರು. ಆಚಾರ್ಯರುಗಳು ತಮ್ಮ ಎಳವೆಯ ವಯಸ್ಸಿನಲ್ಲಿಯೇ ಕಠಿಣ ತಪಸ್ಸು ಮತ್ತು ಮನೋನಿಗ್ರಹದಿಂದ ಕಾಮಾದಿಗಳನ್ನು ತೊರೆದವರು. ಅದು ಅವರು ಯತಿಗಳಾಗಬೇಕೆಂದೇ ಗೈದ ಉದ್ದೇಶಪೂರ್ವಕ ಕ್ರಿಯೆಯಾಗಿತ್ತು. ಅಧ್ಯಾತ್ಮದ ಪ್ರಚಾರ ಹಾಗೂ ಧರ್ಮದ ಬಗ್ಗೆ ಅರಿವು ಮೂಡಿಸುವುದು ಇವೇ ಆಚಾರ್ಯರುಗಳ ಜೀವನೋದ್ದೇಶವಾಗಿತ್ತು. ಹಾಗಂತ ಎಲ್ಲರೂ ಆಚಾರ್ಯರುಗಳ ಹಾಗೆ ಲೈಂಗಿಕ ವಿಚಾರದಲ್ಲಿ ಮನೋನಿಗ್ರಹ ಮಾಡಿಕೊಳ್ಳಬೇಕೆಂದರೆ ಅದರಲ್ಲಿ ಅರ್ಥವಿರುವುದಿಲ್ಲ. ಶಿಕ್ಷಕರಾಗಿರುವ ನಮ್ಮಿಂದ ಶಿಕ್ಷಣ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಅನೇಕ ದೊಡ್ಡದೊಡ್ಡ ಉದ್ಯೋಗಗಳನ್ನು ಪಡೆದು ನಮಗಿಂತಲೂ ಹತ್ತು ಪಟ್ಟು ಹೆಚ್ಚು ಮಾಸಿಕ ವೇತನ ಪಡೆಯುವವರಿರುತ್ತಾರೆ. ಹಾಗಂತ ನಾವೇಕೆ ಇನ್ನೂ ಇದೇ ಉದ್ಯೋಗ ಮಾಡುತ್ತೇವೆ ಎಂದು ಕೇಳಲಾಗದು. ಶಿಕ್ಷಕರಾಗಬೇಕು, ಅದೇ ವೃತ್ತಿಯಲ್ಲಿ ಮುಂದುವರೆಯಬೇಕು ಎನ್ನುವುದೇ ನಮ್ಮ ಧ್ಯೇಯವಾಗಿರುತ್ತದೆ. ಅಂತೆಯೇ ಆಚಾರ್ಯರದ್ದೂ ಕೂಡಾ. ಅಷ್ಟುಮಾತ್ರವಲ್ಲ, ಎಲ್ಲರೂ ಮನೋನಿಗ್ರಹ ಮಾಡಿಕೊಂಡರೆ ಮಾನವಕುಲ ಮುಂದುವರೆಯುವುದಾದರೂ ಹೇಗೆ? ಹಾಗಾಗಿ ಲೈಂಗಿಕ ವಿಚಾರಗಳಲ್ಲಿ ಎಲ್ಲರಿಗೂ ತತ್ವಜ್ಞಾನದ ಅಳವಡಿಕೆ ಸೂಕ್ತವಾಗುವುದಿಲ್ಲ. ಹೆಣ್ಣುಮಕ್ಕಳ ಅಸಹ್ಯ ವಸ್ತ್ರಗಳಿಗೆ ತಕ್ಕಂತೆ ಅತ್ಯಾಚಾರಗಳಾಗುವಾಗ ಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳ ಪ್ರಶ್ನೆ ಏಳುತ್ತದೆ. ಮಕ್ಕಳೇನು ತಪ್ಪು ಮಾಡಿದ್ದವು ಎನ್ನುವುದು. ಮಕ್ಕಳು ತಪ್ಪು ಮಾಡುವುದಲ್ಲ. ದೊಡ್ಡವರ ನಗ್ನಾವಸ್ಥೆ ಅಥವಾ ಚಿಕ್ಕಮಕ್ಕಳಿಗೆ ತೊಡಿಸುವ ಚಿಕ್ಕಚಿಕ್ಕ ಬಟ್ಟೆಗಳೂ ಅತ್ಯಾಚಾರಕ್ಕೆ ಕಾರಣವೇ ಆಗಿವೆ. ಇದಕ್ಕೆ ಮನೋವಿಜ್ಞಾನದಲ್ಲಿ ಉತ್ತರ. ನಮ್ಮ ಅನೇಕ ವರ್ತನೆಗಳು ನಮ್ಮ ಸುಪ್ತಮನಸ್ಸನ್ನು ಅವಲಂಬಿಸಿರುತ್ತವೆ. ಉದಾಹರಣೆಗೆ, ಎಲ್ಲಿಯಾದರೂ ಯಕ್ಷಗಾನದ ಮದ್ದಲೆ ಕೇಳಿಬಂದರೆ ನನ್ನಂತಹ ಕಲಾಸಕ್ತರು ಬೆರಳುಗಳಿಂದ ಎದುರಿರುವ ಮೇಜು ಬಡಿಯುವುದಿದೆ. ಸಂಗೀತವನ್ನು ದೂರದಿಂದ ಕೇಳುವಾಗ ಕೆಲವು ಸಂಗೀತಾಸಕ್ತರು ತಲೆ ಅಲ್ಲಾಡಿಸುತ್ತಾರೆ. ಇವೆಲ್ಲಾ ಮನಸ್ಸಿನ ಕ್ರಿಯೆ ಇಲ್ಲದೇ ನಡೆಯುವ ಪ್ರತಿಕ್ರಿಯೆಗಳು. ಅಂತೆಯೇ ಸಿಟ್ಟು ಬಂದಾಗ ಗಂಡುಮಕ್ಕಳಾದರೆ ಎದುರಿದ್ದವರಿಗೆ ಬಡಿಯುತ್ತಾರೆ, ಹೆಣ್ಣುಮಕ್ಕಳಾದರೆ ತಮ್ಮ ಕೈಯಲ್ಲಿದ್ದ ವಸ್ತುಗಳನ್ನು ಎಸೆಯುವುದು ಮುಂತಾದವನ್ನು ಮಾಡುತ್ತಾರೆ. ಯಾರದ್ದೋ ಮೇಲಿನ ತಮ್ಮ ಸಿಟ್ಟನ್ನು ಯಾವುದೋ ವಸ್ತುಗಳನ್ನು ಎಸೆಯುವುದರ ಮುಖಾಂತರ ತೀರಿಸಿಕೊಳ್ಳುತ್ತಾರೆ. ಸಿಟ್ಟನ್ನೋ ಅಥವಾ ಆಸಕ್ತಿಗಳನ್ನೋ ತೀರಿಸಿಕೊಳ್ಳುವ ಪ್ರಬಲತೆ ಸ್ವಾಭಾವಿಕವಾಗಿ ಹೆಣ್ಣಿಗಿಂತ ಗಂಡಿಗೆ ಜಾಸ್ತಿ ಇರುತ್ತದೆ. ಅದು ಸ್ವಾಭಾವಿಕ. ಅಂತೆಯೇ ಚಿಕ್ಕ ಮಕ್ಕಳ ಮೇಲಿನ ಅತ್ಯಾಚಾರಗಳೂ ಕೂಡಾ. ಇದನ್ನು ತತ್ವಜ್ಞಾನದಿಂದ ಸರಿಮಾಡಲಾಗದು. ದೊಡ್ಡ ಹೆಣ್ಣುಮಕ್ಕಳ ಅರೆನಗ್ನಾವಸ್ಥೆ ನೋಡಿ ಅತಿಯಾಗಿ ಕಾಮೋದ್ರೇಕಗೊಳ್ಳುವ ಕೆಲವು ಗಂಡುಮಕ್ಕಳು ಒಂದೇ ಅಂತಹ ಹೆಣ್ಣುಮಕ್ಕಳನ್ನೇ ಅತ್ಯಾಚಾರ ಮಾಡುತ್ತಾರೆ. ಒಂದುವೇಳೆ ಅವರು ಪ್ರಭಾವಶಾಲಿ ಕುಟುಂಬದವರೋ ಅಥವಾ ಕೈಗೆ ಸಿಗಲಾರದವರೋ ಆಗಿದ್ದರೆ ಅತಿಯಾದ ಕಾಮೋದ್ರೇಕದಿಂದ ಕಾಮವನ್ನು ಹೇಗಾದರೂ ತೀರಿಸಿಕೊಳ್ಳಬೇಕೆಂದು ಬೇರೆ ಹೆಣ್ಣುಮಕ್ಕಳ ಮೇಲೆ, ವೃದ್ಧೆಯರ ಮೇಲೆ, ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಾರೆ. ಕೆಲವು ಹೆಂಗಸರು ತಮ್ಮ ಮಕ್ಕಳಿಗೆ ಅತ್ಯಂತ ಚಿಕ್ಕಚಿಕ್ಕ ಉಡುಗೆಗಳನ್ನು ತೊಡಿಸುವುದಿದೆ. ಅವುಗಳ ಅಗತ್ಯವಾದರೂ ಏನಿದೆ? ಇವುಗಳಿಂದಲೇ ಕಾಮೋದ್ರೇಕರಾಗಿ‌ ಮನಸ್ಸಿನ ಹತೋಟಿ ತಪ್ಪಿ ಯುವಕರು ಅತ್ಯಾಚಾರವೆಸಗುತ್ತಾರೆ. ವಿದೇಶಗಳಲ್ಲಿ, ಅದರಲ್ಲೂ ಅಮೇರಿಕಾದಂತಹ ದೇಶಗಳಲ್ಲಿ ತುಂಡು ಬಟ್ಟೆಯನ್ನೇ ಉಡುತ್ತಾರಲ್ಲಾ ಎನ್ನುವುದೂ ಕೆಲವರ ಪ್ರಶ್ನೆಯಾಗಿರಬಹುದು. ಒಬ್ಬ ವ್ಯಕ್ತಿಯ ದೇಹ ಹಾಗೂ ಮನಸ್ಸು ಆ ವ್ಯಕ್ತಿಯು ಬದುಕುವ ದೇಶದ ಪ್ರಕೃತಿ, ವಾತಾವರಣ, ಆಹಾರ ಇವುಗಳಿಂದ ರೂಪುಗೊಂಡಿರುತ್ತದೆ. ಅಮೆರಿಕಾದ ಹೆಣ್ಣುಮಕ್ಕಳಿಗೆ ತುಲನೆ ಮಾಡಿದರೆ ನಮ್ಮ‌ದೇಶದ ಹೆಣ್ಣುಮಕ್ಕಳಲ್ಲಿ ಮಕ್ಕಳನ್ನು ಪಡೆಯಲು ಫಲವತ್ತತೆಯ ಪ್ರಮಾಣ‌ ಬಹಳಷ್ಟು ಹೆಚ್ಚು. ಇದೇ ಕಾರಣಕ್ಕೋಸ್ಕರ ಅಮೆರಿಕಾದಂತಹ ದೇಶದವರು ನಮ್ಮ ದೇಶದ ಹೆಣ್ಣುಮಕ್ಕಳಿಗೆ ದುಡ್ಡುಕೊಟ್ಟು ಬಾಡಿಗೆ ತಾಯಿ ಮಾಡುವ‌ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದು. ಇದು ನಮ್ಮ ದೇಶದ ಸಂಸ್ಕೃತಿಗೆ ಧಕ್ಕೆ ತರುವ ವಿಚಾರವಾದ್ದರಿಂದ ವಿದೇಶಿಗರಿಗೆ ನಮ್ಮವರು ಬಾಡಿಗೆ ತಾಯಿ ಆಗುವುದಕ್ಕೆ ಕಡಿವಾಣ ಹಾಕಬೇಕೆಂಬ ಹೋರಾಟವೂ ನಡೆದಿತ್ತು. ಮಕ್ಕಳನ್ನು ಪಡೆಯಲು ಇರುವ ಅರ್ಹತೆ ಹೆಣ್ಣಿಗೆ ಮಾತ್ರ ಇದ್ದರೆ ಸಾಲದು, ಗಂಡಿಗೂ ಇರಬೇಕು. ಮಕ್ಕಳಾಗದಿದ್ದಾಗ ಹೆಣ್ಣುಮಕ್ಕಳನ್ನೇ ದೂಷಿಸುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹೆಣ್ಣುಮಕ್ಕಳಿಗೆ ಕೆಲವರಿಗೆ ಬಂಜೆತನದ ಸಮಸ್ಯೆ ಇದ್ದಂತೆ ಗಂಡುಮಕ್ಕಳಿಗೂ ಕೆಲವರಿಗೆ ಮೀರ್ಯಾಣುಗಳಲ್ಲಿ ಕೊರೆತೆ, ನಿರ್ವೀರ್ಯತೆ ಮುಂತಾದ ಸಮಸ್ಯೆಗಳಿರುತ್ತವೆ. ಹಾಗಾಗಿ ಮಕ್ಕಳ ಜನನ, ಲಿಂಗ ಇತ್ಯಾದಿಗಳ ನಿರ್ಧಾರದಲ್ಲಿ ಗಂಡು, ಹೆಣ್ಣು ಇಬ್ಬರೂ ಸಮಾನ ಪಾತ್ರ ವಹಿಸುತ್ತಾರೆ. ಅಮೆರಿಕಾದಂತಹ ದೇಶಗಳಲ್ಲಿ ಹೆಂಗಸರಿಗೆ ಫಲವತ್ತತೆಯ ಸಮಸ್ಯೆ ಹೇಗೆ ಹೆಚ್ಚಿದೆಯೋ ಅದೇ ರೀತಿ ಗಂಡಸರಿಗೂ ವೀರ್ಯಾಣುಗಳ ಹಾಗೂ ಉದ್ರೇಕಗೊಳ್ಳುವಿಕೆಯ ಸಮಸ್ಯೆ ಹೆಚ್ಚಿರುತ್ತದೆ. ಹಾಗಾಗಿ ಅಂತಹ ದೇಶಗಳ ಹೆಣ್ಣುಮಕ್ಕಳು ಹೇಗಿದ್ದರೂ ನಡೆಯುತ್ತದೆ. ನಮ್ಮ ದೇಶದ ಹೆಣ್ಣುಮಕ್ಕಳಲ್ಲಿ ಫಲವತ್ತತೆಯ ಸಾಮರ್ಥ್ಯ ಹೆಚ್ಚಿರುವಂತೆ ಗಂಡುಮಕ್ಕಳಲ್ಲಿಯೂ ಮಕ್ಕಳನ್ನು ಹೊಂದಲು ಬೇಕಾದ ಸಾಮರ್ಥ್ಯ ಹೆಚ್ಚಿರುವುದರಿಂದ ಸ್ವಾಭಾವಿಕವಾಗಿಯೇ ಕಾಮದ ವಿಚಾರದಲ್ಲಿ ಹಾಗೂ ಉದ್ರೇಕಗೊಳ್ಳುವ ವಿಚಾರದಲ್ಲಿ ಬಹಳಷ್ಟು ಮುಂದಿರುತ್ತಾರೆ. ಇದೇ ಕಾರಣಕ್ಕೋಸ್ಕರ ಹಿಂದಿನ ಕಾಲದವರು ಭಾರತೀಯ ಮಹಿಳೆಯರಿಗೆ ಪೂರ್ತಿ ಮೈ ಮುಚ್ಚುವಂತಹ ಉಡುಗೆ ಸೂಚಿಸಿರುವುದು. ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಲ್ಲಿ ಯಾವುದೇ ಲಿಂಗಭೇದವಿಲ್ಲದೆ ಬೆತ್ತಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಅಂದರೆ ಎಲ್ಲರೂ ಸಂಪೂರ್ಣ ಬೆತ್ತಲಿದ್ದು ವಿವಿಧ ಆಟೋಟಗಳನ್ನು ನಡೆಸುವುದು, ಮೋಜು ಮಾಡುವುದು. ಕೆಲವು ಹುಡುಗರು ತಮಾಷೆಗಾಗಿ ಹೇಳುವುದಿದೆ 'ಅಲ್ಲಿ ಗಂಡಸರು ತಮ್ಮ ಮರ್ಮಾಂಗಕ್ಕೆ ಯಾವುದೋ ದ್ರಾವಣವನ್ನು ಸಿಂಪಡಿಸುತ್ತಾರೆ, ಹಾಗಾಗಿ ಉದ್ರೇಕವಾಗುವುದಿಲ್ಲ‌' ಅಂತ. ಇದು ಹುಡುಗರು ಮಾತಾಡುವ ಅಶ್ಲೀಲ ಹಾಸ್ಯವೇ ಹೊರತು ಸತ್ಯವಲ್ಲ. ಸಂಗಾತಿಗೆ ದೀರ್ಘ ಸಮಯದವರೆಗೆ ಸುಖ ನೀಡಲು ಶಿಶ್ನವನ್ನು ನಿಮಿರಿದ ಸ್ಥಿತಿಯಲ್ಲಿಯೇ ಸ್ವಲ್ಪ ಹೆಚ್ಚು ಸಮಯ ಇರಿಸಲು ಸಿಂಪಡಿಸಿಕೊಳ್ಳಬಹುದಾದ ದ್ರಾವಣಗಳು ಲಭ್ಯವಿದ್ದಾವೆ ನಿಜ. ಆದರೆ, ಶಿಶ್ನದ ನಿಮಿರುವಿಕೆಯನ್ನು ತಡೆಹಿಡಿಯಲು ಯಾವುದೇ ದ್ರಾವಣಗಳಿಲ್ಲ. ನಿಮಿರುವಿಕೆಯ ಸಮಸ್ಯೆ ಇದ್ದವರಿಗೆ ಮಾತ್ರ ಅಂತಹ ವಾತಾವರಣ ಇದ್ದರೂ ನಿಮಿರುವುದಿಲ್ಲ. ದೇಶದ ಪ್ರಕೃತಿಯನ್ನು ಆಡುಭಾಷೆಯಲ್ಲಿ "ಮಣ್ಣಿನ ಗುಣ" ಎನ್ನಲಾಗುತ್ತದೆ. ನಮ್ಮ‌ದೇಶದ ಮಣ್ಣಿನ ಗುಣಕ್ಕೆ ತಕ್ಕಂತೆ ನಮ್ಮ ಹೆಣ್ಣುಮಕ್ಕಳು ಇರಬೇಕು. ಎಲ್ಲದರಲ್ಲೂ ಸಮಾನತೆಯ ಧೋರಣೆಯನ್ನು ಇಟ್ಟುಕೊಳ್ಳುವ ಕೆಲವು ಹೆಣ್ಣುಮಕ್ಕಳು ಗಂಡುಮಕ್ಕಳ ಕೆಲವು ಅರೆಬರೆ ವಸ್ತ್ರಗಳ ಬಗ್ಗೆಯೂ ಮಾತೆತ್ತುವುದಿದೆ. ಯಾವುದೋ ಒಂದು ನಂಬಿಕೆಯ ಆಧಾರದ ಮೇಲೆ ಕೆಲವು ಮೂರುಕಾಸಿನ ಗಂಡಸರು ವಿವಸ್ತ್ರವಾಗಿ ಇರುವುದಿದೆ. ಇಂತಹ ಅತ್ಯಂತ ನೀಚ ಗಂಡಸರಿಗೆ ಬಟ್ಟೆ ಬಿಚ್ಚಿಕೊಂಡೇ ಬದುಕುವುದು ಇಷ್ಟವಾದರೆ ಅಂಥವರು ನಾಗರಿಕ ಸಮಾಜದಲ್ಲಿ ಇರುವುದೇಕೆ? ಎಲ್ಲಿಯಾದರೂ ದೂರ ಕಾಡಿಗೆ ಹೋಗಿ ಪರ್ಣಕುಟೀರ ಮಾಡಿಕೊಂಡು ಬದುಕಬಹುದು. (ನಾನು ಕಾರ್ಕಳದಲ್ಲೇ ಇದ್ದುಕೊಂಡು ಈ ವಿಚಾರವನ್ನು ಧೈರ್ಯದಿಂದ ಬರೆದಿದ್ದೇನೆ). ಗಂಡುಮಕ್ಕಳು ನಮ್ಮ ಸಮಾಜಕ್ಕೆ ಒಗ್ಗದ ಬರ್ಮುಡಾ, ಚಡ್ಡಿ ಮುಂತಾದವನ್ನು ಅನಗತ್ಯವಾಗಿ ಧರಿಸಬಾರದು. ನೀಲಿ ಕಾಲರ್ ಕೆಲಸ ಮಾಡುವ ಕೆಲವರಿಗೆ (ರೈತರು, ಕೂಲಿ ಕಾರ್ಮಿಕರು, ಗಾರೆ ಕೆಲಸದವರು ಇತ್ಯಾದಿ..) ಕೆಲವೊಮ್ಮೆ ಬರ್ಮುಡಾ ಅಥವಾ ಚಡ್ಡಿಯಂತಹ ವಸ್ತ್ರಗಳು ಅನಿವಾರ್ಯವೇ ಆಗಿರುತ್ತವೆ. ಹಾಗಂತ ಸಾರ್ವಜನಿಕವಾಗಿ ಅಂತಹ ವಸ್ತ್ರಗಳ ಬಳಕೆ ಸರಿಯಲ್ಲ. ರಸ್ತೆಯ ಆಸುಪಾಸಿನಲ್ಲಿ ಮನೆ ಇರುವವರ ಕೆಲವು ಗಂಡುಮಕ್ಕಳು ಮೊಬೈಲ್ ನಲ್ಲಿ ಮಾತಾಡುತ್ತಾ ಹಾಗೆಯೇ ರಸ್ತೆಗೆ ಇಳಿಯುತ್ತಾರೆ. ಇದು ಅಸಭ್ಯ ಪ್ರವೃತ್ತಿ ಹಾಗೂ ಖಂಡನೀಯ. ಅಂತಹ ಪಡ್ಡೆ ಹುಡುಗರು ರಸ್ತೆಗೆ ಇಳಿಯುವಾಗ ಚಡ್ಡಿಯ ಮೇಲೆ ಒಂದು ಶಾಲು ಸುತ್ತಿಕೊಂಡಾದರೂ ಬರಬಹುದು. ಹಾಗಂತ ಎದೆಯ ಮೇಲೆ ಏನೂ ಇಲ್ಲದಿದ್ದರೂ ನಡೆಯುತ್ತದೆ. ಏಕೆಂದರೆ ಗಂಡುಮಕ್ಕಳಿಗೆ ಹೆಣ್ಣುಮಕ್ಕಳು ಆಕರ್ಷಿತರಾಗುವಂತಹ ಯಾವುದೇ ಅಂಗ ಎದೆಯ ಮೇಲೆ ಇರುವುದಿಲ್ಲ. ಗಂಡುಮಕ್ಕಳ ಅರೆನಗ್ನಾವಸ್ಥೆಯಿಂದ ಅವರಿಗೇ ಏನಾದರೂ ತೊಂದರೆ ಆಗುತ್ತದೆಯೇ? ಇಲ್ಲ. ಹೆಣ್ಣುಮಕ್ಕಳಿಗೆ ಹಾಗಲ್ಲವಲ್ಲ? ತಾವು ಅರೆನಗ್ನವಾಗಿ ಇರುವುದರಿಂದ ತಮಗೇ ತೊಂದರೆ, ಸಭ್ಯತೆಯಿಂದ ಇರುವ ಹೆಣ್ಣುಮಕ್ಕಳಿಗೂ ತೊಂದರೆ. ಹಾಗಾಗಿ ಸಮಾಜದ ಸ್ವಾಸ್ಥ್ಯ ಕೆಡಬಾರದು ಎಂದರೆ ಹೆಣ್ಣುಮಕ್ಕಳು ಪೂರ್ತಿ ಬಟ್ಟೆ ಧರಿಸಿಕೊಳ್ಳಬೇಕು. ಅಷ್ಟುಮಾತ್ರವಲ್ಲ, ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ಒಂದು ವಿಶೇಷವಾದ ಸ್ಥಾನವಿದೆ. ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ನಮ್ಮ ಸಮಾಜವು ಪುರುಷಪ್ರಧಾನ ಸಮಾಜವೆಂದು ಕರೆಸಿಕೊಂಡರೂ ಗೌರವದ ವಿಷಯದಲ್ಲಿ ಹೆಣ್ಣಿಗೇ ಹೆಚ್ಚಿನ ಸ್ಥಾನ ಇರುವುದು. ದೇವರಲ್ಲಿಯೂ ಆದಿಶಕ್ತಿ ದೇವಿಯೇ ಮೊದಲು ಎನ್ನಲಾಗುತ್ತದೆ. ನಮ್ಮ ನಿಜವಾದ ರಾಷ್ಟ್ರಗೀತೆ ವಂದೇ ಮಾತರಂ ಹೆಣ್ಣನ್ನು ಗೌರವಿಸುತ್ತದೆ‌. "ವಂದೇ ಪಿತರಂ" ಅಂತ ಯಾರೂ ಬರೆದಿಲ್ಲ. ಸಂಧ್ಯಾವಂದನೆ ಹಾಗೂ ಪೂಜೆಯ ಪ್ರಾರಂಭದಲ್ಲಿ ಮೊದಲು 'ಮಾತೃಭ್ಯೋ ನಮಃ" ಬರುತ್ತದೆ, ನಂತರ "ಪಿತೃಭ್ಯೋ ನಮಃ". ಶ್ರೀರಾಮಚಂದ್ರನ ಸುಪ್ರಭಾತವನ್ನು " ಕೌಸಲ್ಯಾ ಸುಪ್ರಜಾ ರಾಮ" ಎಂದು ಪ್ರಾರಂಭಿಸುಯ್ತೇವೆಯೇ ಹೊರತು "ದಶರಥ ಸುಪ್ರಜಾ ರಾಮ" ಎಂದು ಹೇಳುವುದಿಲ್ಲ. ಶಂಕರಾಚಾರ್ಯರು ತಮ್ಮ ದೇವ್ಯಾಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" ಎಂದಿದ್ದಾರೆ. ಇಲ್ಲಿ ತಾಯಿಗೆ ಮಾತ್ರ ಗೌರವ ಕೊಟ್ಟದ್ದಲ್ಲ, ಪ್ರತಿಯೊಂದು ಹೆಣ್ಣೂ ಒಂದಲ್ಲ ಒಂದು ದಿನ ತಾಯಿಯ ಸ್ಥಾನವನ್ನು ಹೊಂದುತ್ತಾಳೆ, ಪ್ರತಿಯೊಂದು ಹೆಣ್ಣೂ ದೇವಿಯ ಸ್ವರೂಪ; ಹಾಗಾಗಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಅಷ್ಟುಮಾತ್ರವಲ್ಲ, ಮನೆಯ ಸಣ್ಣ ಹೆಣ್ಣುಮಕ್ಕಳನ್ನು ಮುದ್ದು ಮಾಡುವಾಗ ಕೂಡಾ "ಮುದ್ದು ಲಕ್ಷ್ಮಿ, ಪುಟ್ಟ ಲಕ್ಷ್ಮಿ, ಗೌರಮ್ಮಾ" ಎಂದೆಲ್ಲಾ ದೇವಿಯ ಹೆಸರಿನಿಂದಲೇ ಕರೆಯಲಾಗುತ್ತದೆ. ಆದರೆ ಸಣ್ಣ ಗಂಡುಮಕ್ಕಳನ್ನು ಕರೆಯುವಾಗ "ಮುದ್ದು ಶಿವ" ಅಂತನೋ "ಮುದ್ದು ವಿಷ್ಣು" ಅಂತನೋ ಯಾರೂ ಹೆಚ್ಚಾಗಿ ಕರೆಯುವುದಿಲ್ಲ. ಕೃಷ್ಣನ ಜೀವನಚರಿತ್ರೆ ನಮಗೆ ಆತನ ಬಾಲ್ಯದಿಂದ ಓದಲು ಸಿಗುವುದರಿಂದ ಸಣ್ಣ ಗಂಡುಮಕ್ಕಳಿಗೆ "ಮುದ್ದುಕೃಷ್ಣ" ಎನ್ನಲಾಗುತ್ತದೆ ಅಷ್ಟೆ. ಇವೆಲ್ಲದರ ಒಳಮರ್ಮ ಏನು ಗೊತ್ತೇ? ಈ ದೇಶದಲ್ಲಿ ಹೆಣ್ಣಿಗೆ ಕೊಡುವ ಗೌರವ ಹಾಗೂ ಸ್ಥಾನಮಾನ. ಹೀಗಿರುವಾಗ ಹೆಣ್ಣು ತನ್ನ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಲ್ಲವೇ? ಹಾಗಂತ ಗಂಡುಮಕ್ಕಳಿಗೆ ಗೌರವವಿಲ್ಲವೆಂದೋ ಅಥವಾ ಗೌರವ ಬೇಡವೆಂದೋ ಇದರ ಅರ್ಥವಲ್ಲ. ನಮಗೆ ನಮ್ಮ ಮಿತ್ರರು ವಂಚನೆ ಮಾಡಿದರೆ ಹೆಚ್ಚಿನ ಅಸಮಾಧಾನ ಉಂಟಾಗುತ್ತದೆಯೇ ಅಥವಾ ಮೂರನೇ ವ್ಯಕ್ತಿ ವಂಚನೆ ಮಾಡಿದರೆ ಹೆಚ್ಚಿನ ಅಸಮಾಧಾನ ಉಂಟಾಗುತ್ತದೆಯೇ? ಮಿತ್ರರು ವಂಚನೆ ಮಾಡಿದಾಗ. ಏಕೆಂದರೆ ನಾವು ಮೂರನೇ ವ್ಯಕ್ತಿಗಿಂತ ಮಿತ್ರರಿಗೇ ಹೆಚ್ಚಿನ ಸ್ಥಾನ ಕೊಟ್ಟಿರುತ್ತೇವೆ ಹಾಗಾಗಿ. ಅಂತೆಯೇ ನಾವು ಯಾವ ಹೆಣ್ಣಿಗೆ ದೇವಿಯ ಸ್ವರೂಪವೆಂದು ಉನ್ನತ ಸ್ಥಾನವನ್ನು ಕೊಟ್ಟಿದ್ದೇವೆಯೋ ಅಂತಹ ಹೆಣ್ಣು ಬಟ್ಟೆಗಳನ್ನೇ ಸರಿಯಾಗಿ ಧರಿಸಿಕೊಳ್ಳದೆ ಅಸಂಸ್ಕೃತಿ ಪ್ರದರ್ಶಿಸುವಾಗ ಬೇಸರವಾಗುವಂಥದ್ದು ಹಾಗೂ ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೇ ಬುದ್ಧಿವಾದ ಹೇಳಬೇಕಾದ ಅನಿವಾರ್ಯ ಪ್ರಮೇಯ ಬಂದಿರುವಂಥದ್ದು. ಹಾಗಾಗಿ ಇನ್ನಾದರೂ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಸನಾತನ ಭಾರತೀಯ ಸಂಸ್ಕೃತಿಯಂತೆ ಪೂರ್ತಿ ಬಟ್ಟೆಯನ್ನು ಉಟ್ಟುಕೊಳ್ಳುವಂತಾಗಲಿ. ತರಗತಿಯಲ್ಲಿ ಎಲ್ಲರೂ ಉತ್ತೀರ್ಣರಾಗಬೇಕು ಎಂದುಕೊಂಡು ನಾವು ಪಾಠ ಮಾಡುವುದು. ಆದರೆ ಒಬ್ಬಿಬ್ಬರು ಓದದೆ ಅನುತ್ತೀರ್ಣರಾಗುತ್ತಾರೆ ಎಂದುಕೊಳ್ಳೋಣ. ಹಾಗಂತ ನಾವು ಪಾಠ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಲ್ಲಿ ಈ ಬರಹವನ್ನು ಓದಿದ ನಂತರವೂ ಅನುತ್ತೀರ್ಣರಾಗುವ ಹೆಣ್ಣುಮಕ್ಕಳ ಸಂಖ್ಯೆಯೇ ಜಾಸ್ತಿ ಇರಬಹುದು. ಆದರೆ ಒಬ್ಬಿಬ್ಬರಾದರೂ ಉತ್ತೀರ್ಣರಾದರೆ ಅದೇ ಸಮಾಧಾನ. ಮುಚ್ಚುತ್ತಿರುವ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದು, ಆತ ಉತ್ತೀರ್ಣನಾದಾಗ ತರಗತಿಗೆ ನೂರು ಪ್ರತಿಶತ ಫಲಿತಾಂಶ ಎಂದು ಪ್ರಕಟಿಸಿದಂತೆ ನಮ್ಮ ಪಾಡು.
ಭಾರತ ಮಾತೆಗೆ ಜಯವಾಗಲಿ.
ವಂದೇ ಮಾತರಂ.

- ಲಕ್ಷ್ಮಣ ಆಕಾಶೆ, ಕಾರ್ಕಳ

24/11/2025

ಇವತ್ತು ನಮ್ಮಲ್ಲಿ ನಡೆದ ಚೌತಿಯ ಪೂಜೆ... ವೇದಮೂರ್ತಿ ಶ್ರೀ ಶ್ರೀ ಶ್ರೀ Prakasha Marathe ಅವರ ಸಾರಥ್ಯದಲ್ಲಿ.

ಎರಡನೇ ವರ್ಷದಲ್ಲಿ ನಾನು ಮಾಡಿದ ಗಣಪ...ಈ ವರ್ಷ ನಮ್ಮ ತಂದೆಯವರ ಅನಾರೋಗ್ಯದ ನಿಮಿತ್ತ ಭಾದ್ರಪದದಲ್ಲಿ ನಡೆಯುವ ಚೌತಿಯ ಪೂಜೆ ನಾಳೆಗೆ ಮುಂದೂಡಿತು. ...
23/11/2025

ಎರಡನೇ ವರ್ಷದಲ್ಲಿ ನಾನು ಮಾಡಿದ ಗಣಪ...

ಈ ವರ್ಷ ನಮ್ಮ ತಂದೆಯವರ ಅನಾರೋಗ್ಯದ ನಿಮಿತ್ತ ಭಾದ್ರಪದದಲ್ಲಿ ನಡೆಯುವ ಚೌತಿಯ ಪೂಜೆ ನಾಳೆಗೆ ಮುಂದೂಡಿತು. ಇದು ಎರಡನೇ ವರ್ಷ ನಾನು ಗಣಪತಿ ಮಾಡಿದ್ದು. ಅಂದೇ ಗಣಪತಿ ತಯಾರು ಮಾಡಿದ್ದೆ. ದೃಷ್ಟಿ ಮಾತ್ರ ಬಾಕಿ ಇತ್ತು. ಇವತ್ತು ದೃಷ್ಟಿ ಬಿಡಿಸಿದ್ದೇನೆ. ದೃಷ್ಟಿ ಬಿಡಿಸಿದವನ ದೃಷ್ಟಿಗೇನಾಗಿದೆ ಎಂದು ಕೇಳಬೇಡಿ. ಸುಮ್ನೆ ಹೇಗಿರುತ್ತದೆ ನೋಡೋಣ ಅಂತ ಪ್ಲಾಸ್ಟಿಕ್ ಕನ್ನಡಕ ಹಾಕಿಕೊಂಡದ್ದು‌😀
ಗಣಪತಿಯ ಮೂರ್ತಿ ಅಷ್ಟೊಂದು ನಾಜೂಕಾಗಿ ಆಗಿಲ್ಲ. ಇನ್ನೂ ಒಂದೆರಡು ವರ್ಷ ಮಾಡಿ ಮಾಡಿ ಅನುಭವವಾಗಬೇಕು. ಆಗ ಸರಿಯಾಗುತ್ತದೆ.

Address

Karkal

Website

Alerts

Be the first to know and let us send you an email when Lakshman Akashe posts news and promotions. Your email address will not be used for any other purpose, and you can unsubscribe at any time.

Contact The Practice

Send a message to Lakshman Akashe:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram