
22/04/2025
ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡
ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪ್ರವಾಸಿಗರ ಮೇಲೆ ಭಯೋತ್ಪಾದಕರಿಂದ ನಡೆದಿರುವ ಹೀನ ಕೃತ್ಯದಿಂದ ನನ್ನ ಕರುನಾಡಿನ ಇಬ್ಬರು ಸೇರಿ ದೇಶದ 30ಕ್ಕೂ ಹೆಚ್ಚು ನಾಗರೀಕರು ಅಸುನೀಗಿರುವುದು ನಮ್ಮೆಲ್ಲರಿಗೂ ಅತ್ಯಂತ ನೋವುಂಟು ಮಾಡಿದೆ.
ಈ ಕೃತ್ಯಕ್ಕೆ ಕಾರಣಕರ್ತರಾದ ಉಗ್ರಗಾಮಿಗಳಿಗೆ ಯಾವುದೇ ಕರುಣೆ ಇಲ್ಲದೆ ಅತ್ಯಂತ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಇಡೀ ಭಾರತ ದೇಶ ಒತ್ತಾಯಿಸುತ್ತಿದೆ.
ಈ ಧಾರ್ಮಿಕ ಮೂಲಭೂತವಾದಿಗಳನ್ನು ಪಕ್ಷಾತೀತವಾಗಿ ಯಾವುದೇ COURTESY ಇಲ್ಲದೆ ಹತ್ತಿಕ್ಕುವ ಕೆಲಸ ಆಗಲೇ ಬೇಕು. THEY SHOULD NOT BE SPARED.
ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ, ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ತುಂಬಾ ನೋವಿನಿಂದ ಹೇಳಲು ಇಚ್ಚಿಸುತ್ತೇನೆ.