28/01/2025
*ಜಲ, ಸೂತ್ರ ನೇತಿ ಮತ್ತು ಜಲ ದೌತಿ*
ಪ್ರೀತಿಯ ಬಂಧುಗಳೇ,
ತಪಸ್ವಿ ಯೋಗ ಕೇಂದ್ರದ ವತಿಯಿಂದ ಜಲ ನೇತಿ, ಸೂತ್ರ ನೇತಿ ಮತ್ತು ಜಲ ದೌತಿ washing/cleansing the Nasal tract and Digestive tract) ಕಾರ್ಯಕ್ರಮವನ್ನು ನಡೆಸಲಾಗುವುದು.
ವಿವರಗಳು ಇಂತಿವೆ:
ದಿನ /ದಿನಾಂಕ : **ರವಿವಾರ - 02/02/2025*
ಸ್ಥಳ : *ತಪಸ್ವಿ ಯೋಗ ಕೇಂದ್ರ, ಬಿಕರ್ಣಕಟ್ಟೆ ಕೈಕಂಬ, ಮಂಗಳೂರು.*
ಸಮಯ : *ಬೆಳಿಗ್ಗೆ 6.00-8.00*
ನೋಂದಾವಣೆ ಶುಲ್ಕ : *ರೂ.200/=*
ನೋಂದಾವಣೆಗೆ ಕೊನೆಯ ದಿನ : *01-02-2025*
ಸಂಪರ್ಕಿಸಿ : *8123862919*
*ಗಮನಕ್ಕೆ:*
1.) ಎಲ್ಲರೂ ಈ ಅಭ್ಯಾಸದಲ್ಲಿ ಭಾಗವಹಿಸಬಹುದು. ( 15ಕ್ಕಿಂತ ಕಡಿಮೆ ವಯಸ್ಸಿನವರು ಹೊರತುಪಡಿಸಿ). ಯೋಗಾಭ್ಯಾಸಕ್ಕೆ ಹೊಸಬರೂ ಕೂಡಾ ದೌತಿ ಕ್ರಿಯೆ ಮಾಡಬಹುದು.
2.) ಅತಿ ರಕ್ತದೊತ್ತಡ, ತೀವ್ರ ಮಧುಮೇಹ, ಹೃದಯ ದೌರ್ಬಲ್ಯದವರು, ಗರ್ಭಿಣಿಯರು ದೌತಿ ಕ್ರಿಯೆ ಮಾಡುವಂತಿಲ್ಲ.
3.) ಬರುವಾಗ ಖಾಲಿ ಹೊಟ್ಟೆಯಲ್ಲಿ ಬರುವುದು. No bed tea; bed coffee.
4.) ಯೋಗ ಕ್ರಿಯೆಯ ಬಳಿಕ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗುವುದು.
5.) ಒಂದು ಚೊಂಬು (ಸ್ವಲ್ಪ ದೊಡ್ಡದು) ಅಥವಾ ಲೀಟರ್ ನ ಬಾಟಲ್ / ಫ್ಲಾಸ್ಕ್, ನಾಪ್ ಕಿನ್ (ಕೈ ವಸ್ತ್ರ), ಯೋಗ ಜಮಖಾನ - ಇಷ್ಟನ್ನು ತರಬೇಕು.
6.) ಕಾರ್ಯಕ್ರಮದ ವಿವರಗಳು:
*ಬೆಳಿಗ್ಗೆ:*
6.00 - ಉಪಸ್ಥಿತಿ.
6.00 - ನೇತಿ, ಸೂತ್ರ ನೇತಿ ಮತ್ತು ಜಲ ದೌತಿ ಕ್ರಿಯೆಯ ಮಾಹಿತಿ/ ಪ್ರಶ್ಣೋತ್ತರ
6.30 - ನೇತಿ, ಸೂತ್ರ ನೇತಿ ಮತ್ತು ಜಲ ದೌತಿ ಆರಂಭ
7.30 - ಯೋಗ ನಿದ್ರೆಯ ಅಭ್ಯಾಸ
7.50 - ಲಘು ಉಪಹಾರ
8.10- ಮುಕ್ತಾಯ.
ಸಮಯಕ್ಕೆ ಸರಿಯಾಗಿ ಹಾಜರಿದ್ದು ಎಲ್ಲಾ ಚಟುವಟಿಕೆಗಳಲ್ಲಿ ಸಹಕಾರ ನೀಡುವ.
7.) *ನೆನಪಿರಲಿ:*
*ನೇತಿ, ಸೂತ್ರ ನೇತಿ ಮತ್ತು ಜಲ ದೌತಿ ನಂತರ ಯೋಗ ನಿದ್ರೆಯ ಅಭ್ಯಾಸ ಖಡ್ಡಾಯ. ಯಾವುದೇ ತುರ್ತಿನ ನೆಪದಲ್ಲಿ ಈ ವಿಶ್ರಾಂತಿ ಕ್ರಿಯೆ ಮಾಡದೆ ಯಾರೂ ಹಿಂತಿರುಗುವಂತಿಲ್ಲ.*
*ಅಂತೆಯೇ ಲಘು ಉಪಹಾರ ಸೇವಿಸಿಯೇ ಮನೆಗೆ ತೆರಳುವುದು.*
ನೇತಿ, ಸೂತ್ರ ನೇತಿ ಮತ್ತು ಜಲ ದೌತಿ ಯೋಗಾಭ್ಯಾಸಿಗಳು ಶರೀರದ ಆಂತರಿಕ ಶೌಚಕ್ಕಾಗಿ ಮಾಡುವ, ಮಾಡಬೇಕಾದ, ಮಾಡಲೇ ಬೇಕಾದ ಕ್ರಿಯೆಗಳಾಗಿವೆ.
ದೌತಿ ಕ್ರಿಯೆಯಲ್ಲಿ ಉಗುರು ಬೆಚ್ಚ ಉಪ್ಪಿನ ನೀರನ್ನು ಕುಡಿಯುವುದು. ತತ್ ಪರಿಣಾಮ ಜಠರ, ಕರುಳು, ಗುದ ನಾಳ ಶುದ್ಧಿಗೊಂಡು ಇಡೀ ಜೀರ್ಣಾ0ಗ ವ್ಯೂಹ (digestive system) ಶುಚಿಗೊಳ್ಳುತ್ತದೆ. ಅಪಚನ ಮತ್ತು ಮಲ ಬದ್ಧತೆಗೆ ಉತ್ತಮ ಪರಿಹಾರ ಇದರಲ್ಲಿದೆ.
ಬನ್ನಿ, ಇತರರನ್ನು ಕರೆತನ್ನಿ. ಜಲನೇತಿ, ಸೂತ್ರ ನೇತಿ ಮತ್ತು ಜಲ ದೌತಿಯ ಯೋಗ ಕ್ರಿಯೆಗಳಲ್ಲಿ ಭಾಗಿಗಳಾಗಿ. ಅಂತರ್ ಶೌಚದ ಮೂಲಕ ಆರೋಗ್ಯ ವರ್ಧಿಸುವ.
Team Tapaswi..............