Suvarna Clinic

Suvarna Clinic Ayurveda, which means the science of life (Ayur = Life, Veda = Science). We are striving to get Ayurveda to everyday life .

10/11/2024

Treatment in Arthritis

04/07/2024
07/06/2024

ಕೋವಿಡ್ ನಂತರದ ರಕ್ತಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ, ಪಕ್ಷಾಘಾತ ತಡೆಯಿರಿ
ಕೋವಿಡ್ ಲಸಿಕೆಗಳಿಂದ ಅಡ್ಡ ಪರಿಣಾಮದ ಬಗ್ಗೆ ವೈದ್ಯ ವೃಂದ ಹಾಗೂ ಹಲವು ಸಂಶೋಧಕರು ಮೊದಲಿನಿಂದಲೂ ಎಚ್ಚರಿಸುತ್ತಾ ಬಂದಿದ್ದರೂ ಅವುಗಳನ್ನು ಕಡೆಗಣಿಸಲಾಯಿತು ಅಥವಾ ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು ಎನ್ನುವ ಆಪಾದನೆ ಕೇಳಿಬರುತ್ತಿದ್ದ ಸಮಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವ ವಾಯು ರೋಗಗಳ ಸಂಖ್ಯೆಗಳಲ್ಲಿ ಏರಿಕೆಯು ಕಂಡುಬಂದಿರುವುದು ಅನುಮಾನಗಳಿಗೆ ಕಾರಣವಾಗಿ ಮತ್ತೂ ಹೆಚ್ಚಿನ ಸಂಶೋಧನೆಗಳು ಜಗತ್ತಿನಾದ್ಯಂತ ನಡೆದವು ಹಾಗೂ ಕೋವಿಡ್ ವ್ಯಾಕ್ಸಿನ್ನಿನ ಅನಪೇಕ್ಷಿತ ಪರಿಣಾಮಗಳ ಪಟ್ಟಿಯೇ ವರಧಿಯಾಯಿತು. ಹೃದಯಾಘಾತ ಮತ್ತು ಪಕ್ಷಾಘಾತಗಳಿಗೆ ಮೂಲ ಕಾರಣಗಳಲ್ಲಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಹೆಚ್ಚು ಕಂಡುಬರುತ್ತಿದೆ. ಜಾಗತಿಕವಾಗಿ ಇವು ಅತಿ ಹೆಚ್ಚು ಸಾವುಗಳಿಗೆ ಕಾರಣೀಭೂತವಾಗಿವೆ. ಕೋವಿಡ್ ನಂತರದ ಸಮಯದಲ್ಲಿ ಸಾವಿನ ಪ್ರಮಾಣ ಇಂತಹ ಕಾರಣಗಳಿಂದಲೇ ಅಧಿಕವಾಗಿರುವುದಲ್ಲದೇ ಸಣ್ಣ ವಯಸ್ಸಿನ ಯುವಕ ಯುವತಿಯರೂ ಬಲಿಯಾಗಿರುವುದು ಜಾಗತಿಕ ಅಂಕಿ ಅಂಶಗಳಿಂದ ಸ್ಪಸ್ಟವಾಗಿವೆ. ಬ್ರಿಟೀಷ್ ನ್ಯಾಯಾಲಯದಲ್ಲಿ ಆಸ್ಟ್ರಾಝೆನಿಕಾ ತಯಾರಿಸಿದ್ದ ಕೋವಿಶೀಲ್ಡ್ ವ್ಯಾಕ್ಸಿನ್ ಕೆಲವರಲ್ಲಿ ರಕ್ತನಾಳಗಳ ರಕ್ತಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್ ಲೆಟ್ ರಕ್ತಕಣಗಳ ನ್ಯೂನತೆಗೆ ಕಾರಣವಾಗುತ್ತದೆ ಎಂಬ ತೀರ್ಪಿನಿಂದ, ಹಾಗೂ ಇದರ ಜೊತೆ ಜೊತೆಗೇ ಬನಾರಸ್ ಹಿಂದೂ ಯುನಿವರ್ಸಿಟಿ ಕೈಗೊಂಡ ಸಂಶೋಧನೆಯಲ್ಲಿ ಭಾರತ್ ಬಯೋಟೆಕ್ ಉತ್ಪಾದಿಸಿದ ಕೋವ್ಯಾಕ್ಸಿನ್ ಪಡಕೊಂಡ 30 ಪ್ರತಿಶತಃ ಜನರಲ್ಲಿ ಅಡ್ಡಪರಿಣಾಮ ಕಂಡುಬಂದಿದ್ದು ಹೃದಯಸ್ಥಂಭನಗಳು ಮತ್ತು ಪಾರ್ಶ್ವ ವಾಯು 1 ಪ್ರತಿಶತಃ ಜನರಲ್ಲಿ ಮಾರಣಾಂತಿಕವಾಗಿ ಪರಿಣಮಿಸಿದೆ ಎಂಬ ಅಧ್ಯಯನ ವರದಿಯು ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡಕೊಂಡ ಕೋಟ್ಯಾಂತರ ಜನರಲ್ಲಿ ಆತಂಕದ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ.
ಕೋವಿಡ್ ವ್ಯಾಕ್ಸಿನ್ ಪಡಕೊಂಡವರಲ್ಲಿ ಅಡ್ಡಪರಿಣಾಮಗಳಾದ ತೀವ್ರತರನಾದ ತಲೆನೋವು, ದೃಷ್ಟಿದೋಷಗಳು, ಪೆರಿಕಾರ್ಡೈಟಿಸ್, ಮಯೋಕಾರ್ಡೈಟಿಸ್, ಹೊಟ್ಟೆನೋವು, ವಾಂತಿ, ಬೆನ್ನುನೋವು, ದಮ್ಮುಕಟ್ಟುವಿಕೆ, ಪುನರಾವರ್ತಿತ ಶ್ವಾಸಕೋಶದ ಸೋಂಕು, ಶಾರೀರಿಕ ನಿಶ್ಯಕ್ತಿ, ಬಿಳಿರಕ್ತಕಣಗಳ ನ್ಯೂನತೆ, ಚರ್ಮರೋಗಗಳು, ನರಗಳ ತೊಂದರೆ, ಮಾಂಸಖಂಡಗಳ ನಿಶ್ಯಕ್ತಿ, ಕಾಲುಗಂಟು ಊತ ನೋವು, ರಕ್ತನಾಳಗಳಲ್ಲಿ ವೆಯ್ನ್ಸ್ ಹಾಗೂ ಆರ್ಟರಿಗಳ ಒಳಪದರಗಳಲ್ಲಿ ತ್ರೋಂಬಸ್ ಉತ್ಪತ್ತಿಯಾಗಿ ರಕ್ತ ಸಂಚಾರಕ್ಕೆ ತಡೆ ಉಂಟಾಗುವುದು ಸಂಶೋಧಕರಿಂದ ವರಧಿಯಾಗಿರುತ್ತದೆ. ರಕ್ತದಲ್ಲಿ ಸ್ಟುವರ್ಟ್ ಪವರ್ ಫಾಕ್ಟರ್ ನ ಕೊರತೆಯಿಂದ ವಿಟಮಿನ್ ಕೆ ಅವಲಂಬಿತ ಸೆರೈನ್ ಪ್ರೋಟೀನ್ ಉತ್ಪತ್ತಿ ಕಡಿಮೆ ಆಗುವುದರಿಂದ ರಕ್ತನಾಳಗಳ ಒಳಪದರಗಳಲ್ಲಿ ರಕ್ತಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್ ಲೆಟ್ ರಕ್ತಕಣಗಳ ಸಂಖ್ಯೆಯಲ್ಲಿ ಕುಸಿತ ಊಂಟಾಗುತ್ತದೆ. ಇವುಗಳಲ್ಲಿ ಹೃದಯದ ಆಘಾತ, ಮೆದುಳಿನ ಆಘಾತ ಹಾಗೂ ರೋಗನಿರೋಧಕ ಶಕ್ತಿಯ ವ್ಯತ್ಯಾಸದಿಂದ ಕಂಡುಬರುವ ಗಿಲ್ಯಾನ್ ಬರೆ ಸಿಂಡ್ರೋಮ್ ಹೆಚ್ಚು ಆತಂಕಕ್ಕೆ ಕಾರಣವಾಗಿದೆ ಹಾಗೂ ಹೆಚ್ಚು ಅಪಾಯಕಾರಿಯಾಗಿದೆ. ಜಗತ್ತಿನಾದ್ಯಂತ ಹಲವು ಸಂಶೋಧಕರು ಅಂಕಿ ಅಂಶಗಳಿಂದ ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳನ್ನು ಪಟ್ಟಿ ಮಾಡುತ್ತಿದ್ದರೂ ನಮ್ಮ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ನ ಡೈರೆಕ್ಟರ್ ಜನರಲ್ ರಾಜೀವ್ ಬೆಹ್ಲ್, ಕಂಟ್ರೋಲ್ ಆರ್ಮ್ಡ್ ಸ್ಟಡೀ ಆಗಿಲ್ಲ ಎನ್ನುವ ನೆಪ ಒಡ್ಡಿ ಈ ಎಲ್ಲಾ ವರಧಿಗಳನ್ನು ನಿರಾಕರಿಸಿದ್ದಾರೆ.
ದೇಹದ ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ರಕ್ತಪರಿಚಲನೆಯು ಅತ್ಯವಶ್ಯಕ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ರಕ್ತವು ಜೀವಕೋಶಗಳಿಗೆ ತಲುಪಿಸುವುದಲ್ಲದೇ ದೇಹದಲ್ಲಿ ಚಯಾಪಚಯ ಕ್ರೀಯೆಯಿಂದ ಉತ್ಪತ್ತಿಯಾದ ಕಶ್ಮಲಗಳನ್ನು ಜೀವಕೋಶಗಳಿಂದ ಬೇರ್ಪಡಿಸಿ ಯಕೃತ್, ಮೂತ್ರಪಿಂಡ, ಶ್ವಾಸಕೋಶ ಮತ್ತು ಚರ್ಮದ ಪದರಗಳಿಗೆ ತಲುಪಿಸಿ ಅವುಗಳ ಮುಖಾಂತರ ದೇಹದಿಂದ ಹೊರಗೆ ವಿಸರ್ಜಿಸಿ ದೇಹವನ್ನು ಸ್ವಸ್ಥವಾಗಿಡಲು, ರಕ್ತದ ಸುಗಮ ಸಂಚಾರಕ್ಕೆ ಹೃದಯದ ನಿರಂತರ ಕ್ರಮಬದ್ಧವಾದ ಸ್ಪಂದನೆ ಅತ್ಯವಶ್ಯಕವಾಗಿರುತ್ತದೆ. ಚಿಕ್ಕ ಹೃದಯದ ಏರುಪೇರುಗಳು ಇಡೀ ದೇಹದ ಕ್ರೀಯೆಗಳನ್ನು ಅಲ್ಲೋಲಕಲ್ಲೋಲವನ್ನಾಗಿಸುತ್ತವೆ. ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದರಿಂದ ರಕ್ತಪರಿಚಲನೆಯು ನಿಯಮಿತವಾಗಿ ನಡೆಯದೇ ಹೃದಯ ಮತ್ತು ಮೆದುಳನ್ನು ಘಾಸಿಗೊಳಿಸುತ್ತವೆ. ಲಸಿಕೆಗಳ ಅಡ್ಡ ಪರಿಣಾಮದ ಭಾಗವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರ ಜೊತೆ ಜೊತೆಗೇ ಪ್ಲೇಟ್ ಲೆಟ್ ರಕ್ತಕಣಗಳ ನ್ಯೂನ್ಯತೆ ಉಂಟಾಗುವುದರಿಂದ ಮೆದುಳಿನಲ್ಲಿ ರಕ್ತಸ್ರಾವದಂತಹ ಮಾರಣಾಂತಿಕ ಪರಿಸ್ಥಿತಿ ಸಂಭವಿಸಬಹುದು. ಇದರೊಂದಿಗೆ ರೋಗನಿರೋಧಕ ವ್ಯವಸ್ಥೆಯ ವೈಪರೀತ್ಯ ಪರಿಸ್ಥಿತಿ ತಲೆದೋರಬಹುದು.
ಹೃದಯ ಮತ್ತು ಮೆದುಳಿನ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ಸರಿಪಡಿಸಿ ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿ ಈ ಮಾರಣಾಂತಿಕ ಕಾಯಿಲೆಯನ್ನು ಪರಿಹರಿಸುವಲ್ಲಿ ಜಗತ್ತಿನ ಅತಿ ಪ್ರಾಚೀನ ವೈದ್ಯಶಾಸ್ತ್ರ ಸುಶ್ರುತ ಸಂಹಿತಾದಲ್ಲಿ ಉಲ್ಲೇಖಿಸಿರುವ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಜಲೌಕಾಚರಣವು (ಐಜಜಛಿ ಣಜಡಿಚಿಠಿಥಿ/ ಹಿರುಡೋ ತೆರಪಿ ಏಕೈಕ ಆಶಾಕಿರಣವಾಗಿದೆ. ಇದು ನಮ್ಮ ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ದತಿಯ ಹೆಮ್ಮೆ. ಪಂಚಕರ್ಮ ಚಿಕಿತ್ಸೆಯಾದ ಜಲೌಕಾಚರಣ ಅಥವಾ ಲೀಚ್ ಥೆರಪಿಯು ರಕ್ತಹೆಪ್ಪುಗಟ್ಟುವಿಕೆಯಿಂದ ಹೃದಯ ಹಾಗೂ ಮೆದುಳನ್ನು ರಕ್ಷಿಸಿ ಹೃದಯಾಘಾತ, ಪಕ್ಷಾಘಾತ ಹಾಗೂ ಅಂಗಾಂಗವೈಫಲ್ಯದಂತಹ ಮಾರಣಾಂತಿಕ ರೋಗಗಳಿಂದ ಮುಕ್ತಿ ಹೊಂದಬಹುದು.
ಹೊಸ ಹೊಸ ಆಧುನಿಕ ಜೀವನಿರೋಧಕ ವ್ಯವಸ್ಥೆಯು ಶರೀರಕ್ಕೆ ಒಗ್ಗಿಕೊಳ್ಳದೇ ಇದ್ದಲ್ಲಿ ಕೆಲವೊಮ್ಮೆ ಅತೀ ಶೀಘ್ರದಲ್ಲೇ ಅದರ ಅಡ್ಡ ಪರಿಣಾಮಗಳು ಗೋಚರಿಸಬಹುದು ಅಥವಾ ಇನ್ನು ಕೆಲವು ಸಂದರ್ಭಗಳಲ್ಲಿ ನಿಧಾನವಾಗಿ ಗೋಚರಿಸಬಹುದು. ಇಲ್ಲಿ ಮಾನವನ ದೇಹವು ಪ್ರತಿಯೊಬ್ಬರಲ್ಲಿಯೂ ಭಿನ್ನತೆ ಇರುವುದರಿಂದ ಒಬ್ಬರಿಗಾದ ಒಳಿತು ಇನ್ನೊಬ್ಬರಿಗೆ ಆಗಬೇಕೆಂದಿಲ್ಲ. ಹಲವರಲ್ಲಿ ಉಪಯೋಗ ಕಂಡುಬಂದರೂ ಇನ್ನು ಕೆಲವರಲ್ಲಿ ವಿಪರೀತ ತೊಂದರೆಯನ್ನು ಉಂಟುಮಾಡಬಲ್ಲುದು. ಜನಮಾನಸದಲ್ಲಿ ಸರ್ವರಿಗೂ ಆರೋಗ್ಯದಾಯಕವನ್ನುಂಟು ಮಾಡುವಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆಯಲ್ಲಿ ದೀಘ್ರ ಸಮಯದ ಸಂಶೋಧನೆಯ ಅಗತ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಸೂಕ್ಷ್ಮ ವಿಷಯವನ್ನು ನಾವು ಅರಿತಿದ್ದರೂ ಎಡವಿದ್ದು ನಮ್ಮ ಅತಿಯಾದ ಆತ್ಮ ವಿಶ್ವಾಸದ ಸ್ಪರ್ಧಾತ್ಮಕ ದುರಂತವೇ? ಇದೆಲ್ಲಾ ನಡೆದಿದ್ದರೂ ನಮ್ಮ ಬಗಲಲ್ಲೇ ಇರುವ ನಮ್ಮ ಪ್ರಾಚೀನ ವೈದ್ಯ ಪದ್ದತಿ ನಮಗೆಲ್ಲರಿಗೂ ಒಗ್ಗಿಕೊಂಡಿರುತ್ತದೆ ಮಾತ್ರವಲ್ಲದೇ ಉಪಕಾರವನ್ನುಂಟು ಮಾಡುತ್ತದೆ.
ಲೀಚ್ ಥೆರಪಿಯ ಸಮಯದಲ್ಲಿ ಜಲೌಕದ ಲಾಲಾಸ್ರಾವದಲ್ಲಿರುವ 60 ವಿವಿಧ ಬಗೆಯ ಪ್ರೋಟೀನ್ ಗಳು ದೇಹದ ರಕ್ತವನ್ನು ಸೇರುತ್ತವೆ. ಇವುಗಳಲ್ಲಿ ಹಿರುಡಿನ್ ಎಂಬ ಪ್ರೋಟೀನ್ ರಕ್ತಹೆಪ್ಪುಗಟ್ಟದಂತೆ ತಡೆದು ರಕ್ತವು ದ್ರವರೂಪದಲ್ಲಿರುವಂತೆ ಕಾಪಾಡುತ್ತದೆ. ಇದರಲ್ಲಿರುವ ಅಪೈರೇಸ್, ಕೊಲ್ಯಾಜಿನೇಸ್ ಹಾಗೂ ಕಾಲಿನ್ ಎಂಬ ಪ್ರೋಟೀನ್ ಗಳು ದೇಹದ ಸೂಕ್ಮ ರಕ್ತನಾಳಗಳನ್ನು ಹಿಗ್ಗಿಸಿ ರಕ್ತಪರಿಚಲನೆಯನ್ನು ಸರಿಪಡಿಸಿ ದೇಹದ ಅಂಗಾಂಗಗಳಿಗೆ ಸರಿಯಾಗಿ ರಕ್ತಪೂರೈಕೆಯಾಗುವಂತೆ ಮಾಡಿ ದೇಹದ ರಕ್ಷಣೆಯನ್ನು ಮಾಡುತ್ತದೆ. ಹೀಗೆ ಮಾಡುವುದರಿಂದ ಬ್ಲಡ್ ಪ್ರೆಷರ್ ನಿಯಂತ್ರಣಕ್ಕೆ ಬಂದು ಹೃದಯದ ಒತ್ತಡವು ಕಡಿಮೆಯಾಗುತ್ತದೆ. ಇದು ಶರೀರದಲ್ಲಿ ಪ್ಲೇಟ್ ಲೆಟ್ ರಕ್ತಕಣಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಹೀಗೆ ಸರ್ವ ರೀತಿಯಲ್ಲೂ ಒಳಿತನ್ನು ಮಾಡುವ ವೈದ್ಯ ಪದ್ದತಿಯ ಹೊಸ ಹೊಸ ಆವಿಷ್ಕಾರಗಳು ಜನಮಾನಸದಲ್ಲಿ ಯಾವುದೇ ಅಡ್ಡಪರಿಣಾಮ ಅಥವಾ ನಾವು ಬಯಸದೇ ಬರುವ ಪರಿಣಾಮಗಳ ಬಗ್ಗೆ ಕಾಳಜಿವಹಿಸಿ ಜನರ ದುಗುಡವನ್ನು ಪರಿಹರಿಸುವಲ್ಲಿ ವೈದ್ಯವೃಂದ ಸದಾ ಕ್ರೀಯಾಶೀಲರಾಗಿರುವುದು ಬಹುಮುಖ್ಯ.
ಡಾ. ಹರಿಪ್ರಸಾದ್ ಸುವರ್ಣ
ಸುವರ್ಣ ಕ್ಲಿನಿಕ್, ಅಳದಂಗಡಿ, ಬೆಳ್ತಂಗಡಿ, ದ.ಕ.
ಫೊ. 9449616356

Address

Mangalore

Alerts

Be the first to know and let us send you an email when Suvarna Clinic posts news and promotions. Your email address will not be used for any other purpose, and you can unsubscribe at any time.

Contact The Practice

Send a message to Suvarna Clinic:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram