DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

30/04/2026

*ಪೊಲೀಸ್ ಕಮೀಷನರ್ ವಿರುದ್ದ ಷಡ್ಯಂತ್ರ..? ದಕ್ಷ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಬಂದ ನಂತರದ ಬೆಳವಣೆಗೆ ಬಗ್ಗೆ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್.*

ಸರಕಾರಿ ಆಸ್ಪತ್ರೆ ಖಾಸಗೀ ಸಂಸ್ಥೆ ಜೊತೆ ಕರಾರು ಒಪ್ಪಂದ ರದ್ದುಗೊಳಿಸಲು, ಕಿದ್ವಾಯಿ, ಜಯದೇವ ಆಸ್ಪತ್ರೆ ಸಹಿತ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸ...
30/04/2026

ಸರಕಾರಿ ಆಸ್ಪತ್ರೆ ಖಾಸಗೀ ಸಂಸ್ಥೆ ಜೊತೆ ಕರಾರು ಒಪ್ಪಂದ ರದ್ದುಗೊಳಿಸಲು, ಕಿದ್ವಾಯಿ, ಜಯದೇವ ಆಸ್ಪತ್ರೆ ಸಹಿತ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ, ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಡಿವೈಎಫ್ಐ ಸಂಘಟಿಸಿದ ಉಸ್ತುವಾರಿ ಸಚಿವರ ಕಚೇರಿ ಚಲೋ ಹೋರಾಟ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
#ಸರಕಾರಿ_ಆಸ್ಪತ್ರೆ_ಬಲಪಡಿಸಿರಿ_ಖಾಸಗೀ_ಆಸ್ಪತ್ರೆ_ನಿಯಂತ್ರಿಸಿರಿ
#ಕಿದ್ವಾಯಿ
#ಜಯದೇವ

*ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ*ತಾ.29-04-2026ಮಂಗಳೂರು*ಮೆಸ್ಕಾಂನ ಅವ್ಯವಸ್ಥೆಯಿಂದಾಗಿ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆ...
29/04/2026

*ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ*
ತಾ.29-04-2026
ಮಂಗಳೂರು

*ಮೆಸ್ಕಾಂನ ಅವ್ಯವಸ್ಥೆಯಿಂದಾಗಿ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಸಂಕಷ್ಟದಲ್ಲಿ;*
*ಸಮಸ್ಯೆ ಇತ್ಯರ್ಥಗೊಳ್ಳದಿದ್ದಲ್ಲಿ ಮೆಸ್ಕಾಂ ಕಚೇರಿ ಚಲೋ*

ಮೆಸ್ಕಾಂನ ಸರ್ವರ್ ಹಾಗೂ N-SOFT ನ ತೀವ್ರ ಸಮಸ್ಯೆಯಿಂದಾಗಿ ಹೊಸದಾಗಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರು, ಜನಸಾಮಾನ್ಯರು ಹಾಗೂ ವಿದ್ಯುತ್ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದು, ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ದ.ಕ. ಜಿಲ್ಲಾ ಸಮಿತಿ, CITU, DYFI, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವಾರು ಜನಪರ ಸಂಘಟನೆಗಳು ಮೆಸ್ಕಾಂ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ದ.ಕ. ಜಿಲ್ಲೆಯ ಜನತೆ ಕಷ್ಟಪಟ್ಟು ಹೊಸ ಮನೆಯನ್ನು ನಿರ್ಮಿಸಿದ್ದು, ಇನ್ನೇನು ಆ ಮನೆಯಲ್ಲಿ ವಾಸಿಸಲು ಗೃಹಪ್ರವೇಶಕ್ಕೆ ದಿನಾಂಕ ನಿಗದಿಪಡಿಸಬೇಕಾದರೆ, ಆ ಹೊಸ ಮನೆಗೆ ವಿದ್ಯುತ್ ಸಂಪರ್ಕ ಇನ್ನೂ ಸಿಗುತ್ತಿಲ್ಲ. ಹೀಗೆ ಸಾವಿರಾರು ಹೊಸ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕಷ್ಟಪಡುತ್ತಿದೆ. ಜೊತೆಗೆ ಗ್ರಾಹಕರು ಮಾನಸಿಕವಾಗಿ ನೊಂದಿದ್ದಾರೆ. ಈ ಹೊಸ ಮನೆಗಳ ವಿದ್ಯುತ್ ಜೋಡಣೆಗೆ ಸಂಬಂಧಿಸಿ ಸಂಪೂರ್ಣ ಕೆಲಸಗಳನ್ನು ವಿದ್ಯುತ್ ಗುತ್ತಿಗೆದಾರರು ತಮ್ಮ ಕೈಯಿಂದಲೇ ಹಣ ಹಾಕಿ ಕೆಲಸಗಳನ್ನು ಪೂರ್ಣಗೊಳಿಸಿರುತ್ತಾರೆ. ಆದರೆ ವಿದ್ಯುತ್ ಸಂಪರ್ಕ ಅಗದೆ ಗ್ರಾಹಕರು ವಿದ್ಯುತ್ ಗುತ್ತಿಗೆದಾರರಿಗೆ ನೀಡಬೇಕಾದ ಹಣವನ್ನು ತಡೆಹಿಡಿದಿರುತ್ತಾರೆ. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿರುವ ಗುತ್ತಿಗೆದಾರರಲ್ಲಿ ಲಕ್ಷಾಂತರ ರೂ.ಗಳ ಬಾಕಿಯಿಂದಾಗಿ ಪ್ರತಿಯೊಬ್ಬರ ಬದುಕು ತೀವ್ರ ಸಂಕಷ್ಟದಲ್ಲಿದೆ. ಒಟ್ಟಿನಲ್ಲಿ ಮೆಸ್ಕಾಂ ಇಲಾಖೆಯ ಅವ್ಯವಸ್ಥೆ ಹಾಗೂ ಬೇಜವಾಬ್ದಾರಿತನದಿಂದಾಗಿ ಗ್ರಾಹಕರು ಜನಸಾಮಾನ್ಯರು, ವಿದ್ಯುತ್ ಗುತ್ತಿಗೆದಾರರು ತೀವ್ರವಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಈ ಬಗ್ಗೆ ವಿದ್ಯುತ್ ಗುತ್ತಿಗೆದಾರರ ಸಂಘದ ಮುಖಂಡರು ಹಲವಾರು ಬಾರಿ ಮೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿ ತಮ್ಮ ಅಹವಾಲನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ದ.ಕ. ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ರೈತ ಕಾರ್ಮಿಕರು, ವಿದ್ಯಾರ್ಥಿ ಯುವಜನರು ಮಹಿಳೆಯರು ದಲಿತ ಅದಿವಾಸಿ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಶಕ್ತಿಗಳ ಜೊತೆಗೂಡಿ ಮೆಸ್ಕಾಂ ಕಚೇರಿ ಚಲೋದಂತಹ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದವರು...
*ಸುನಿಲ್ ಕುಮಾರ್ ಬಜಾಲ್* , CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ
*ಕುಶಾಲ್ ಪೂಜಾರಿ*
ದ.ಕ.ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು
*ಉರ್ಬನ್ ಪಿಂಟೋ,* ರಾಜ್ಯ ನಿಕಟಪೂರ್ವ ಉಪಾಧ್ಯಕ್ಷರು ಹಾಗೂ ರಾಜ್ಯ ಸಲಹಾ ಸಮಿತಿ ಸದಸ್ಯರು
*ಕೆ. ಯಾದವ ಶೆಟ್ಟಿ,* ಜಿಲ್ಲಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಇತರರು...
*ಪುರುಷೋತ್ತಮ್* , ಕಾರ್ಯದರ್ಶಿ
*ಯೂಸುಫ್,* ಸಂಘಟನಾ ಕಾರ್ಯದರ್ಶಿ

*ಅಂತರದ ನಿಯಮ ಉಲ್ಲಂಘಿಸಿ ಸ್ಥಾಪನೆಗೊಳ್ಳುತ್ತಿರುವ ಟೋಲ್ ಗೇಟ್ ಗಳ ವಿರುದ್ಧ ರಣಕಹಳೆ ಮೊಳಗಿಸಿದ ಜನಾಂದೋಲನ ನಡಿಗೆ*ಕಳೆದ ಎರಡು ದಶಕಗಳಿಂದ ಟೋಲ್ ಸ...
28/04/2026

*ಅಂತರದ ನಿಯಮ ಉಲ್ಲಂಘಿಸಿ ಸ್ಥಾಪನೆಗೊಳ್ಳುತ್ತಿರುವ ಟೋಲ್ ಗೇಟ್ ಗಳ ವಿರುದ್ಧ ರಣಕಹಳೆ ಮೊಳಗಿಸಿದ ಜನಾಂದೋಲನ ನಡಿಗೆ*

ಕಳೆದ ಎರಡು ದಶಕಗಳಿಂದ ಟೋಲ್ ಸಂಗ್ರಹಿಸುತ್ತಿರುವ ನಿಯಮ ಬಾಹಿರ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ಅಂತರದ ನಿಯಮ ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹೊಸ ಟೇಲ್ ಗೇಟ್ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ "ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಇದರ ವತಿಯಿಂದ ಬೃಹತ್ ಜನಾಂದೋಲನ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ ಮೂಲೆ ಮೂಲೆಗಳಿಂದ ಹಲವು ಸಮಾನ ಮನಸ್ಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಕಾರ್ಯಕರ್ತರು ಭಾಗಿಗಳಾಗಿದ್ದರು. ಸಾವಿರಕ್ಕೂ ಹೆಚ್ಚು ಜನರು ಬಿರು ಬೇಸಿಗೆಯಲ್ಲೂ ದೀರ್ಘ ನಡಿಗೆಯಲ್ಲಿ ಭಾಗವಹಿಸಿದ್ದು ಹೋರಾಟಕ್ಕೆ ಇರುವ ಜನಬೆಂಬಲವನ್ನು ಸೂಚಿಸುತ್ತಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲೆಯ ಸಂಸದರು, ಶಾಸಕರುಗಳು ಇನ್ನಾದರು ಎಚ್ಚೆತ್ತುಕೊಂಡು ಬೇಕಾಬಿಟ್ಟಿ ಟೋಲ್ ಗೇಟ್ ಸುಲಿಗೆಗೆ ಕಡಿವಾಣ ಹಾಕಲಿ.‌ಇಲ್ಲದಿದ್ದಲ್ಲಿ ಟೋಲ್ ತೆರವು ಹೋರಾಟ ಜನಾಂದೋಲನವಾಗಿ ಪರಿವರ್ತನೆ ಆಗುವ ಎಲ್ಲಾ ಸಂದೇಶಗಳನ್ನು ಒಂದಿನ ನಡಿಗೆ ಸ್ಪಷ್ಟವಾಗಿ ನೀಡಿದೆ. ಮುಂದಿನ ಹಂತದ ಹೋರಾಟ ಮತ್ತಷ್ಟು ತೀವ್ರ ಸ್ವರೂಪದಲ್ಲಿ‌‌ ನಡೆಯಲಿದೆ.

ಇಂದು ಜನಾಂದೋಲನ‌ ಮೆರವಣಿಗೆ ಟೋಲ್ ಗೇಟ್ ಸಮೀಪ ತಲುಪಿದಾಗ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ನಿಲುಗಡೆ ಗೊಂಡಿತು. ಸಂಬಂಧ ಪಟ್ಟವರು ನಿಯಮ ಉಲ್ಲಂಘಿಸಿ ಕಾರ್ಯಾಚರಿಸುವ ಟೋಲ್ ಗೇಟ್ ಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಜನಾಂದೋಲನವೇ ಟೋಲ್ ಗೇಟ್ ಅನ್ನು ಸ್ಥಗಿತಗೊಳಿಸುತ್ತದೆ.

ಜನಾಂದೋಲನ ನಡಿಗೆಯ ಯಶಸ್ಸಿಗಾಗಿ ಹಗಲು ರಾತ್ರಿ ದುಡಿದ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಬಂಟ್ವಾಳ ಇದರ ಪದಾಧಿಕಾರಿಗಳಿಗೆ ಅಭಿನಂದನೆಗಳು.

ಮುನೀರ್ ಕಾಟಿಪಳ್ಳ

ಉಸ್ತುವಾರಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ -
28/04/2026

ಉಸ್ತುವಾರಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ -

ದಕ್ಷಿಣ ಕನ್ನಡ ಉಸ್ತುವಾರಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ Tuesday, April 28, 2026 ಮಂಗಳೂರು: ಸರಕಾರಿ ಆಸ್.....

ದ.ಕ.ಜಿಲ್ಲೆಯ ನಾಲಕ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ (ಹಸ್ತಾಂತರ) ಮಾಡುವ ಒಪ್ಪಂದವನ್ನು ರದ್ದುಗೊಳಿಸುವಂತೆ ಒ...
28/04/2026

ದ.ಕ.ಜಿಲ್ಲೆಯ ನಾಲಕ್ಕು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ (ಹಸ್ತಾಂತರ) ಮಾಡುವ ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಮೆರವಣಿಗೆ ಹೊರಟ ಡಿವೈಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆ ಮೂಲಕ ಆರೋಗ್ಯ ಕ್ಷೇತ್ರದ ಖಾಸಗೀಕರಣದ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಯತ್ನಿಸಿದ್ದಾರೆ.

ಜಿಲ್ಲಾಡಳಿತದ ಈ ನಡೆ ಖಂಡನೀಯ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಹೊಸ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಎಂದು ಅಭಿಯಾನ ನಡೆಯುತ್ತಿರುವಾಗಲೆ, ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ರಂಗದ ತಿಮಿಂಗಿಲ ಗಳಿಗೆ ಸರಕಾರಿ ಆಸ್ಪತ್ರೆ ಗಳನ್ನು ಮಾರಾಟ ಮಾಡುವ ಆರೋಗ್ಯ ಸಚಿವ ಗುಂಡೂರಾವ್ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ಉಸ್ತುವಾರಿ ಸಚಿವರ ಬೆನ್ನ ಹಿಂದೆ ನಿಂತು ಖಾಸಗಿ ಮೆಡಿಕಲ್ ಕಾಲೇಜು ಮಾಲಕರ ಪರ ಬ್ಯಾಟಿಂಗ್ ಮಾಡುತ್ತಿರುವ "ಸಾಹೇಬರು" ಗಳಿಗೂ ಮುಂದಿನ ದಿನಗಳಲ್ಲಿ ನಡೆಯಲಿರುವ ಹೋರಾಟ ತಕ್ಕ ಉತ್ತರ ನೀಡಲಿದೆ.

ಮೇ 14 ರಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಮಂಗಳೂರು ನಗರದಲ್ಲಿ ಇದೇ ಪ್ರಶ್ನೆಯ ಮೇಲೆ ಬೃಹತ್ ಮೆರವಣಿಗೆ ನಡೆಸಲಿದೆ. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳ ಮುಂಭಾಗ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಜನತೆಯ ಆರೋಗ್ಯದ ಹಕ್ಕನ್ನು, ಸರಕಾರಿ ಆಸ್ಪತ್ರೆಗಳನ್ನು ಯಾವುದೇ ಬೆಲೆ ತೆತ್ತಾದರು ಉಳಿಸಿಕೊಳ್ಳಲಾಗುವುದು.

ಜಿಲ್ಲೆಯನ್ನು ಖಾಸಗಿ ವೈದ್ಯಕೀಯ ಲಾಭಿಗಳು, ಮೆಡಿಕಲ್ ಕಾಲೇಜು ಲಾಭಿಗಳಿಗೆ ಬರೆದು ಕೊಡಲಾಗಿಲ್ಲ, ಎಚ್ಚರ ಇರಲಿ. ಹೋರಾಟ ತೀವ್ರಗೊಳ್ಳಲಿದೆ. ಜನತೆ, ಜನಪರ ಸಂಘಟನೆಗಳು ಈ ಕುರಿತು ಮೌನ ವಹಿಸಬಾರದು.

ಮುನೀರ್ ಕಾಟಿಪಳ್ಳ

https://youtu.be/WbEEO_2-jS0
28/04/2026

https://youtu.be/WbEEO_2-jS0

1 like. "ಮಂಗಳೂರಿನಲ್ಲಿ ಉಸ್ತುವಾರಿ ಸಚಿವರ ಕಚೇರಿ ಚಲೋ ಹೊರಟ ಡಿವೈಎಫ್ಐ ಕಾರ್ಯಕರ್ತರ ಬಂ. ಧನ | Mangalore DYFI protest"

28/04/2026

ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು, ಜಯದೇವ , ಕಿದ್ವಾಯಿ ಆಸ್ಪತ್ರೆ, ಪ್ರತೀ ತಾಲೂಕಿಗೆ ಸಮುದಾಯ ಆಸ್ಪತ್ರೆ ಕೇಳಿದಕ್ಕೆ DYFI ನಾಯಕರುಗಳ ಮತ್ತು ಕಾರ್ಯಕರ್ತರ ಬಂಧನ

#ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಯದೇವ & ಕಿದ್ವಾಯಿ ಆಸ್ಪತ್ರೆ ನಿರ್ಮಾಣ ಆಗಲೇಬೇಕು, ಇದಕ್ಕೆ ರಾಜಕೀಯ ಇಚ್ಚಾ ಶಕ್ತಿ ಬೇಕು!“ನನ್ನ ಜೀವಮಾನದ ಗುರಿ: ...
27/04/2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಯದೇವ & ಕಿದ್ವಾಯಿ ಆಸ್ಪತ್ರೆ ನಿರ್ಮಾಣ ಆಗಲೇಬೇಕು, ಇದಕ್ಕೆ ರಾಜಕೀಯ ಇಚ್ಚಾ ಶಕ್ತಿ ಬೇಕು!

“ನನ್ನ ಜೀವಮಾನದ ಗುರಿ: ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಉಚಿತ ಆರೋಗ್ಯ ಸಿಗಬೇಕು. ಅಂದ್ರೆ ದೇಶದಲ್ಲಿ ಆರೋಗ್ಯ ಹಕ್ಕು ಕಾನೂನು ಜಾರಿಗೊಳಿಸುವುದಕ್ಕಾಗಿ ದೇಶದ್ಯಂತ ಸಂಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ.”
ಡಿವೈಎಫ್ಐ ಯುವಜನ ಸಂಘಟನೆ ಎತ್ತಿರುವ ಪ್ರಶ್ನೆ ಸರಿಯಾದದ್ದು ಅವರ ಹೋರಾಟಕ್ಕೆ ನನ್ನ ಬೆಂಬಲ.

— ಡಾ. ಸುನೀಲ್ ಕುಮಾರ್ ಹೆಬ್ಬಿ
ವೈದ್ಯರು, ಆರೋಗ್ಯ ಹಕ್ಕು ಹೋರಾಟಗಾರರು ಬೆಂಗಳೂರು

ನಾಳೆ ದ.ಕ ಜಿಲ್ಲೆ ಉಸ್ತುವಾರಿ ಮಂತ್ರಿ ಕಚೇರಿ ಚಲೋ*ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ಕರಾರು ಒಪ್ಪಂದ ರದ್ದುಗೊಳಿಸ...
27/04/2026

ನಾಳೆ
ದ.ಕ ಜಿಲ್ಲೆ ಉಸ್ತುವಾರಿ ಮಂತ್ರಿ ಕಚೇರಿ ಚಲೋ*

ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ಕರಾರು ಒಪ್ಪಂದ ರದ್ದುಗೊಳಿಸಲು ಒತ್ತಾಯಿಸಿ...

ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ಸ್ಥಾಪಿಸಲು ಒತ್ತಾಯಿಸಿ....

ವೆನ್ಲಾಕನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಖಾಸಗೀಕರಣದ ಪಿಪಿಪಿ ಮಾದರಿ ಕೈಬಿಡಲು ಆಗ್ರಹಿಸಿ...

ಜಯದೇವ, ಕಿದ್ವಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದ.ಕ ಜಿಲ್ಲೆಯಲ್ಲೂ ಸ್ಥಾಪಿಸಲು ಒತ್ತಾಯಿಸಿ...

ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ಪ್ರತೀ ತಾಲೂಕಿಗೂ ತಾಲೂಕು ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ...

ಉಸ್ತುವಾರಿ ಮಂತ್ರಿಗಳ ಕಚೇರಿ ಚಲೋ

ಸರಕಾರಿ ವೆನ್ಲಾಕ್ ಆಸ್ಪತ್ರೆ ಮುಂಭಾಗದಿಂದ ಜಿಲ್ಲಾ ಉಸ್ತುವಾರಿ ಮಂತ್ರಿ( ಜಿಲ್ಲಾಧಿಕಾರಿಗಳ) ಕಚೇರಿವರೆಗೆ*

ದಿನಾಂಕ: 28-04-2026 ಮಂಗಳವಾರ ಬೆಳಗ್ಗೆ 10ಗಂಟೆಗೆ

ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ .
ಸಮಾನ ಮನಸ್ಕ ಸಂಘಟನೆಗಳು, ಮಂಗಳೂರು



#ಮಂಗಳೂರು

ಅಪಘಾತದಿಂದ ಗಂಭೀರ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಿ  ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ ಅಮಾನವೀಯ ನಡೆ, ಪಿ.ಪಿ.ಪಿ ಮಾದರಿಯ ತುತ್ತೂರಿ ಊ...
25/04/2026

ಅಪಘಾತದಿಂದ ಗಂಭೀರ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಿ ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ ಅಮಾನವೀಯ ನಡೆ, ಪಿ.ಪಿ.ಪಿ ಮಾದರಿಯ ತುತ್ತೂರಿ ಊದುವವರು ಉತ್ತರಿಸಲಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ನವೀನ್ (29 ವರ್ಷ) ಎಂಬ ಯುವ ಕಾರ್ಮಿಕರಿಗೆ ನಿನ್ನೆ ಸಂಜೆ ಹೊನ್ನಾಳಿ ಸಮೀಪ ರಸ್ತೆ ಅಪಘಾತ ಆಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ನವೀನ್ ಅವರನ್ನು ತಕ್ಷಣವೆ ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಗಾನ್ ಗೆ ಸೇರಿಸಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಮೊಣಕಾಲು ಸಮೀಪ ಗಂಭೀರ ಸ್ವರೂಪದ ಮೂಳೆ ಮುರಿತ ಆಗಿರುವುದರಿಂದ ಮಂಗಳೂರಿನ ಸರಕಾರಿ ಜಿಲ್ಲಾಸ್ಪತ್ರೆ ವೆನ್ ಲಾಕ್ ಗೆ ತಕ್ಷಣವೆ ದಾಖಲಿಸಲು ಸೂಚಿಸಿದರು.

ಅದರಂತೆ ಗಂಭೀರ ಗಾಯಾಳು ನವೀನ್ ಅವರನ್ನು ಬೆಳಗ್ಗಿನ ಜಾವ 3 ಗಂಟೆಗೆ ವೆನ್ಲಾಕ್ ಗೆ ಕರೆತರಲಾಯಿತು. ಆದರೆ, ವೆನ್ಲಾಕ್ ತೀವ್ರ ಗಾಯಾಳುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿತು. ವೆನ್ಲಾಕ್ ನಲ್ಲಿ "ಮುಂದಿನ ಗುರುವಾರದ ವರಗೆ OPT ಫುಲ್ ಆಗಿದೆ, ಅಲ್ಲಿಯವರಗೆ ಶಸ್ತ್ರಚಿಕಿತ್ಸೆ ಚಿಕಿತ್ಸೆ ಸಾಧ್ಯವಿಲ್ಲ, ಬೇರೆಡೆ ಕೊಂಡು ಹೋಗಿ" ಎಂದು ಹೇಳಿ, ಗಾಯಾಳು ನವೀನ್ ಅವರನ್ನು ದಾಖಲಿಕೊಳ್ಳಲು ನಿರಾಕರಿಸಿದ್ದಾರೆ. ಅಪಘಾತದ ಗಾಯಾಳುವನ್ನು, ಅದರಲ್ಲಿಯೂ ತುರ್ತು ಸರ್ಜರಿಯ ಗಾಯಾಳುವನ್ನು ದಾಖಲಿಸಿಕೊಳ್ಳಲು ನಿರಾಕರಿಸುವುದು, ಆಪರೇಷನ್ ಥಿಯೇಟರ್ ವಾರಗಳ ಕಾಲ ಹೌಸ್ ಫುಲ್ ಆಗಿದೆ ಎಂದು ಹೇಳುವುದು ಅಮಾನವೀಯತೆ ಮಾತ್ರ ಅಲ್ಲ, ಕಾನೂನು ಪ್ರಕಾರ ಅದು ಅಪರಾಧ.

ಇದರಿಂದ ಕಂಗೆಟ್ಟ ನವೀನ್ ಕುಟುಂಬ ಬೇರೆ ದಾರಿ ಕಾಣದೆ ಮರಳಿ ಮಣಿಪಾಲಕ್ಕೆ ತೆರಳಿ ಅಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನವೀನ್ ರನ್ನು ದಾಖಲಿಸಿದೆ.

ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಲಘುವಾಗಿಸಲು "ವೆನ್ಲಾಕ್ ಆಸ್ಪತ್ರೆಯನ್ನು ತೋರಿಸಿ " ನೋಡಿ, ಖಾಸಗಿಯವರು ಎಷ್ಟು ಒಳ್ಳೆಯ ಸೇವೆ ನೀಡುತ್ತಿದ್ದಾರೆ ಎಂದು ಪುಂಗಿ ಊದುತ್ತಿರುವವರು ವೆನ್ಲಾಕ್ ನಲ್ಲಿ ಚಿಕಿತ್ಸೆ ನಿರಾಕರಿಸಿರುವ ಈ ಪ್ರಕರಣದ ಕುರಿತು ಮಾತಾಡಬೇಕು. ಖಾಸಗಿಯವರಿಗೆ ಅವರ ಅನುಕೂಲ, ಲಾಭಗಳ ಹೊರತಾಗಿ ಸೇವೆಯ ಯಾವ ಉದ್ದೇಶವೂ ಇರುವುದಿಲ್ಲ.

ಶಿಕಾರಿಪುರದ ನವೀನ್ ಗೆ ವೆನ್ಲಾಕ್ ನಲ್ಲಿ ಚಿಕಿತ್ಸೆ ನಿರಾಕರಿಸಿದ ಪ್ರಕರಣ ತನಿಖೆಗೆ ಒಳಪಡಬೇಕು. ಸರಿಯಾದ ಕ್ರಮಗಳು ಜರುಗಬೇಕು.

ಮುನೀರ್ ಕಾಟಿಪಳ್ಳ

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Share