Atharva Ayurvision

Atharva Ayurvision ATHARVA AYURVISION is a dedicated attempt to recreate the wonders of Ayurveda in the modern world.

Apart from rendering valuable service in alleviating the sufferings and providing optimal health solutions.

Prepare your child to be healthy in physical intellectual psychological way. Administer classically prepared Swarna Bind...
30/08/2024

Prepare your child to be healthy in physical intellectual psychological way. Administer classically prepared Swarna Bindu Drops.

Contact to get service-6362226505

16/08/2023
Action of AYURDANTHAM
06/07/2023

Action of AYURDANTHAM

A life with a chemical free ayurveda life
06/05/2023

A life with a chemical free ayurveda life

Amlini is now online sale..Hurry up..
17/04/2023

Amlini is now online sale..
Hurry up..

🦢 ಅಮೃತಾತ್ಮರೇ ನಮಸ್ಕಾರ,ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದಸಂಚಿಕೆ-61414.01.2022••••••••••••••✍️: ಇಂದಿನ ವಿಷಯ:ವೈರಸ್ ನಿವಾರಣೆಗೆ ಸ...
14/01/2022

🦢
ಅಮೃತಾತ್ಮರೇ ನಮಸ್ಕಾರ,

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-614
14.01.2022
••••••••••••••
✍️: ಇಂದಿನ ವಿಷಯ:
ವೈರಸ್ ನಿವಾರಣೆಗೆ ಸರಳ, ಸಮಯೋಚಿತ, ಪರಿಣಾಮಕಾರೀ ಚಿಕಿತ್ಸೆ
••••••••••••••••••••••••

ಆರೋಗ್ಯದ ಸ್ವಾವಲಂಬನೆ, ಅಂದರೆ ಔಷಧ ರಹಿತ ಜೀವನ ನಮ್ಮದಾಗಬೇಕು.

ವೈರಸ್ ನಿವಾರಣೆಗೆ ಸರಳ, ಸಮಯೋಚಿತ, ಪರಿಣಾಮಕಾರಿ ಚಿಕಿತ್ಸೆ ಇದೆ-
• ಇದಕ್ಕೆ ಹಣದ ಖರ್ಚು ಕಡಿಮೆ, ಕೆಲವೊಮ್ಮೆ ಖರ್ಚೇ ಇಲ್ಲ...!
• ಅತ್ಯಂತ ಪರಿಣಾಮಕಾರಿ
• ಅಡ್ಡ ಪರಿಣಾಮ ಇಲ್ಲದ್ದು
• ದುಷ್ಪರಿಣಾಮ‌ ಬೀರದು.

ಪರಿಣಾಮಕಾರೀ ಚಿಕಿತ್ಸೆಯ ಗುಟ್ಟು ಏನೆಂದರೆ, ವೈರಸ್ ಬೆಳೆಯಲು ಶರೀರದಲ್ಲಿ ಈ ನಾಲ್ಕು ಅಂಶಗಳನ್ನು ಕೊಡದಿರುವುದೇ ಆ ಚಿಕಿತ್ಸೆ-
1. ಆಹಾರ
2. ನೀರು
3. ಗಾಳಿ
4. ಸ್ಥಳಾವಕಾಶ

ಇವುಗಳ ಸಹಕಾರ ಇಲ್ಲದೇ ಯಾವ ಜೀವಿತಾನೇ ಶರೀರ ಸೇರುತ್ತದೆ? ಅದನ್ನು ಕೊಲ್ಲಲು ಹೋಗಿ ನಮ್ಮನ್ನೇ ಕೊಂದುಕೊಳ್ಳುತ್ತಿರುವುದು ಸರಿಯಲ್ಲ.

ಸರಳ ಚಿಕಿತ್ಸೆಗಳು:

1. ವೈರಸ್‌ಗೆ ಬೇಕಾದ ಆಹಾರ ಕೊಡಬೇಡಿ:
ನಮ್ಮ ನಿತ್ಯ ಚಟುವಟಿಕೆಗೆ ಶಕ್ತಿ ಒದಗಿಸಲು ಆಹಾರ ಬೇಕು, ಅದರ ಕಾಲ ಮತ್ತು ಪ್ರಮಾಣವನ್ನು ಹೇಳುವುದೇ ನಮ್ಮ "ಹಸಿವು"
ಹಸಿವಿಗೆ ವಿರುದ್ಧವಾಗಿ, ಕೆಲಸದಿಂದ ಶಕ್ತಿ ವ್ಯಯಿಸದ ಹೊರತು ಹೆಚ್ಚಿನ ಪ್ರಮಾಣದ ಆಹಾರ ಸೇವನೆಯು "ನಮಗೆ ಭಾರ ಮತ್ತು ವೈರಸ್‌ಗೆ ಆಹಾರ."
ಅತ್ಯಂತ ಶಕ್ತಿಯುತ ಆಹಾರಗಳಾದ ಕೊಬ್ಬು, ಮಾಂಸ, ಸಿಹಿಗಳನ್ನು ಅತ್ಯಂತ ಕಡಿಮೆ ಅಥವಾ ಸಧ್ಯಕ್ಕೆ ಇಲ್ಲವಾಗಿಸಿರಿ.
ಹಾಗೆಯೇ, ನಿತ್ಯದ ಆಹಾರದಲ್ಲಿ-
ನಮ್ಮ ಅವಶ್ಯಕತೆಯ 80% ಅಥವಾ 90% ಸೇವಿಸಿ. ಇದು ಕೇವಲ ವೈರಸ್‌ಗೆ ಮಾತ್ರವಲ್ಲ ನಮ್ಮಲ್ಲಿರಬಹುದಾದ ಮಧುಮೇಹ, ಬಿ.ಪಿ, ಕೊಲೆಸ್ಟರಾಲ್‌, ಥೈರಾಯ್ಡ್, ಮೂಲವ್ಯಾಧಿ, ಸ್ಥೌಲ್ಯ ಮುಂತಾದವುಗಳನ್ನೂ ನಿಯಂತ್ರಿಸಬಲ್ಲದು.

2. ನೀರು ಕೊಡಬೇಡಿ:
ವೈರಾಣು ಮೊದಲುಗೊಂಡು ಯಾವುದೇ ಜೀವಿ ಬೆಳೆಯಲು ತೇವಾಂಶ ಅತ್ಯಂತ ಮುಖ್ಯ, ಅದಕ್ಕೆ ಬೇಕಾದ ತೇವಾಂಶ ಎಲ್ಲಿದೆ ಎಂದರೆ. "ಹಿಂದಿನ ದಿನದ ಅಥವಾ ಮತ್ತೆ ಮರುಬಿಸಿಮಾಡಿದ ಸಂಬಾರು, ಪಲ್ಯ ಮುಂತಾದ ಆಹಾರ ಪದಾರ್ಥಗಳಲ್ಲಿ ಅಡಗಿದೆ."
ಇಂತಹ ಪದಾರ್ಥಗಳನ್ನು ಫ್ರಿಜ಼ರ್‌ನಲ್ಲಿ ಇಟ್ಟು ಬಿಸಿ ಮಾಡಿದರೂ ಹೊರಗೇ ಇಟ್ಟು ಬಿಸಿ ಮಾಡಿದರೂ, ಶರೀರಕ್ಕೆ ಜೀವಜಲ ಅಂದರೆ ಸತ್ವಗುಣ ನಾಶವಾಗುತ್ತದೆ. ಆ ಸ್ಥಳವನ್ನು ದುಷ್ಟ ಜಲದ ರೂಪದಲ್ಲಿ ತಮಸ್ಸು ಬೆಳೆಯುತ್ತದೆ.
ಸತ್ವಗುಣದ ಜಲ ಜೀವಕೋಶಗಳಿಗೆ ಪ್ರಾಣಕಾರಕವಾದರೆ ತಮ ಪ್ರಧಾನ ಜಲ ಪ್ರಾಣನಾಶಕವಾಗಿ ಪರಿಣಾಮ ಬೀರುತ್ತದೆ.
"ತಮಸ್ಸು ಕ್ರಿಮಿ ಕೀಟಗಳಿಗೆ ಸರ್ವರೀತಿಯಿಂದಲೂ ಸಹಾಯಮಾಡುತ್ತದೆ."
ಹಾಗಾಗಿ,
ಪುನಃ ಬಿಸಿಮಾಡಿದ ಆಹಾರ ಸೇವನೆ ಬೇಡವೇ ಬೇಡ.

3. ಅದರ ಉಸಿರಾಟಕ್ಕೆ ಗಾಳಿ ಕೊಡಬೇಡಿ:
ಆಳದ ಉಸಿರಾಟದಿಂದ ಶರೀರದ ಆಮ್ಲಜನಕ ಹೆಚ್ಚಿ ಶಕ್ತಿ ಬಿಡುಗಡೆಯಾಗುತ್ತದೆ ಹಾಗೆಯೇ ಕಶ್ಮಲ ಹೊರಹೋಗುತ್ತದೆ. ಆಳದ ಉಸಿರಾಟಕ್ಕೆ ಕಷ್ಟಪಟ್ಟು ಗಂಟೆಗಟ್ಟಲೆ ಪ್ರಾಣಾಯಾಮ ಮಾಡಬೇಕಿಂದಿಲ್ಲ, ಅದಕ್ಕೆ ತನ್ನದೇ ಆದ ನಿಯಮಗಳಿವೆ, ತಪ್ಪಿದರೆ ಅಪಾಯ ಕೂಡಾ ಇದೆ. ಸರಳ ಪರಿಹಾರ ಎಂದರೆ,
* ಸೂರ್ಯ ನಮಸ್ಕಾರ
* ನಿರಂತರ ಮನೆಗೆಲಸ
* ಹೊಲಗದ್ದೆಗಳ ಕೆಲಸ
* ಬೆವರು ಬರುವಂತೆ ವ್ಯಾಯಾಮ....
ಮುಂತಾದವುಗಳಿಂದ ಆಮ್ಲಜನಕ ಸಹಜವಾಗಿ ಶರೀರ ಸೇರುತ್ತದೆ.
ವೈರಸ್‌ಗೆ ಬೇಕಾದ ಶುಕ್ತಪಾಕ (ಫರ್ಮಂಟೇಷನ್ ಗಾಳಿ)ದ ಗಾಳಿ ಸಿಗುವುದಿಲ್ಲ.

4. ಸ್ಥಳಾವಕಾಶ ನೀಡಬೇಡಿ:
ಸ್ಥಳಾವಕಾಶ ಎಂದರೆ, ಜೀವಕೋಶದೊಳಗಣ ಅಜೀರ್ಣ, ಇದು ಕೇವಲ ಉದರಕ್ಕೆ ಸಂಬಂಧಿಸಿಲ್ಲ, ಕೇವಲ ಮಲಬಹಿರ್ಗಮನವೇ ಜೀರ್ಣ ಲಕ್ಷಣವಲ್ಲ. ಅಜೀರ್ಣ ರೋಗಿಯ ಹೊಟ್ಟೆ ಹಸಿಯಬಲ್ಲದು, ಬೇರೆಯವರಿಗಿಂತ ಜೋರಾಗಿಯೂ ಸಂಕಟ ಕೊಡುವಂತೆ ಹಸಿಯಬಹುದು. ತಡೆಯಲು ಸಾಧ್ಯವೇ ಇಲ್ಲದಂತೆ ಬೇಧಿ ಬರಬಹುದು, ಹಾಗಾಗಿ ಹಸಿವು, ಬೇಧಿ ಅಜೀರ್ಣ ಇಲ್ಲ ಎಂದಲ್ಲ.
ಅಜೀರ್ಣ ಇಲ್ಲವಾದರೆ, ವ್ಯಕ್ತಿ ನಿರಂತರ ಚುರುಕಾಗಿರುತ್ತಾನೆ, ಆಳವಾಗಿ ನಿದ್ದೆ ಮಾಡುತ್ತಾನೆ ಮತ್ತು ಎದ್ದ ತಕ್ಷಣ ಚುರುಕುತನ ಇರುತ್ತದೆ.

ಇಲ್ಲದಿದ್ದರೆ ಆಳದಲ್ಲಿ ಅಜೀರ್ಣ ಇರುತ್ತದೆ, ಇದನ್ನು
ಆಯುರ್ವೇದ *"ರಸಶೇಷಾಜೀರ್ಣ"* ಎಂದು ಕರೆಯುತ್ತದೆ.

ಈ ಅಜೀರ್ಣ ನಿವಾರಣೆಗಾಗಿ ಕೆಲವು ಗಿಡಮೂಲಿಕೆಗಳ ಕಷಾಯಗಳು
ಶ್ವಾಸಕೋಶ ಆಶ್ರಿತ ಅಜೀರ್ಣ ಪರಿಹರಿಸಲು ಮೂಹೂರ್ತಕ್ಕೆ ಒಮ್ಮೆ ಸೇವಿಸುವ ಶುದ್ಧ ಜೇನು ಮಿಶ್ರಿತ ಔಷಧಗಳು
ಹಾಗೂ
ಗಂಟಲಿನ ಊತದಲ್ಲಿ ವೈರಾಣುವಿಗೆ ಸ್ಥಳ ತಡೆಯಲು 'ಊತ ನಿವಾರಕ ಗಂಡೂಷ ದ್ರವ್ಯಗಳು' ಬೇಕಾಗುತ್ತವೆ.

ನಿಮ್ಮಲ್ಲಿ ರಸಶೇಷಾಜೀರ್ಣ ಲಕ್ಷಣಗಳಿಲ್ಲ ಎಂದರೆ, ಮೇಲೆ ಹೇಳಿದ ಲಕ್ಷಣಗಳಿಂದ ಮುಕ್ತರಾಗಿ, ನಿಮ್ಮಲ್ಲಿ ನಿರಂತರ ಉತ್ಸಾಹ ಇದ್ದರೆ ಯಾವ ಔಷಧಿಗಳೂ ಬೇಡ. ಕೇವಲ ಉಳಿದ 4 ನಿಯಮಗಳನ್ನು ಪಾಲಿಸಿದರೆ ಸಾಕು. ನೀವು ಸುರಕ್ಷಿತ.

ಔಷಧಗಳ ಅವಲಂಬನೆಯಿಂದ ದೂರ ಇರೋಣ, ಆರೋಗ್ಯದಲ್ಲಿ ಸ್ವಾವಲಂಬಿಗಳಾಗೋಣ

🙏ಧನ್ಯವಾದಗಳು🙏
••••••••••••••
https://t.me/joinchat/Pzj2OBdb9refGJ5DbP1CSw

8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🌴

🦢  ಅಮೃತಾತ್ಮರೇ, ನಮಸ್ಕಾರ  🦢  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-612     ದಿನಾಂಕ: 12.01.2022•••••••••••••••••••••••••...
12/01/2022

🦢 ಅಮೃತಾತ್ಮರೇ, ನಮಸ್ಕಾರ 🦢

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-612
ದಿನಾಂಕ: 12.01.2022
•••••••••••••••••••••••••••••••••••••••••••
✍️: ಇಂದಿನ ವಿಷಯ:
ಒಮಿಕ್ರಾನ್ ವೈರಸ್ -- ಎಚ್ಚರಿಕೆ ಅತ್ಯಗತ್ಯ
•••••••••••••••••••••••••••••••••••••••••••
ಆತ್ಮಬಂಧುಗಳೇ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ...

ಸಧ್ಯಕ್ಕೆ ಜಗತ್ತಿನಲ್ಲಿ ಸಿಗುತ್ತಿರುವ ವಿವಿಧ ಸಂಶೋಧಕರ, ತಜ್ಞರ, ಆರೋಗ್ಯ ಸಂಸ್ಥೆಗಳ ಹಾಗೂ ವಿವಿಧ ದೇಶಗಳ ಸರಕಾರಗಳು ವ್ಯಕ್ತಪಡಿಸಿದ ಮಾಹಿತಿಗಳೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ...

.... ಅಪಾಯವನ್ನು ಎದುರಿಸಲು ಸಿದ್ಧರಾಗಿ, ಪ್ರಾಣಾಪಾಯ ಹೆಚ್ಚು ಅಲ್ಲದಿದ್ದರೂ ಬಹುಕಾಲ ಆಸ್ಪತ್ರೆ, ಆಕ್ಸಿಜನ್, ಔಷಧಿ, ನಿಶ್ಯಕ್ತಿ, ಚೈತನ್ಯಹೀನರಾಗಿ ಬಾಳುವಂತಾಗುವ ಎಚ್ಚರಿಕೆಯನ್ನು ಎಲ್ಲರೂ ನೀಡಿದ್ದಾರೆ.

ಒಮಿಕ್ರಾನ್, ಶ್ವಾಸಕೋಶದ ಆಳದವರೆಗೆ ತಲುಪುವುದಾದರೂ, ಅಲ್ಲಿ ಜೀವಕೋಶಗಳೊಳಗೆ ನುಗ್ಗುವ ಸಾಮರ್ಥ್ಯ ಕಡಿಮೆ ಇರುವುದರಿಂದ, ಪ್ರಾಣಾಪಾಯ ಮಾಡದಿದ್ದರೂ ಚೈತನ್ಯಹೀನ ಬದುಕನ್ನು ಸೃಷ್ಟಿಸುತ್ತದೆ. ಔಷಧ ಮತ್ತು ಆಕ್ಸಿಜನ್ ಮೇಲೆ ಬಹಳ ಕಾಲ ಇರಬೇಕಾಗುವುದು ಎಂದಿದ್ದಾರೆ...

ಭಾರತದಂತಹ ಆಧ್ಯಾತ್ಮಿಕ ಶ್ರೀಮಂತಿಕೆಯುಳ್ಳ ದೇಶಗಳ ಜನರ ಮನಸ್ಥಿತಿ ಹೇಗಿರುತ್ತದೆ ಎಂದರೆ "ಚೈತನ್ಯಹೀನ ಬದುಕಿಗಿಂತ ಸಾವೇ ಮೇಲು" ಎನ್ನುವ ಜನ ನಾವು... 🤔

ರೂಪಾಂತರಿ ಒಮಿಕ್ರಾನ್ ಲಕ್ಷಣಗಳು:

• ಕೇವಲ ಒಂದು ತಿಂಗಳಲ್ಲಿ ಜಗತ್ತಿನ‌ 151 ರಾಷ್ಟ್ರಗಳನ್ನು ತಲುಪಿದೆ.

• ಶೇ. 90 ಕ್ಕಿಂತಲೂ ಹೆಚ್ಚು ಜನತೆ ವ್ಯಾಕ್ಸೀನ್ ಪಡೆದ ರಾಷ್ಟ್ರಗಳಲ್ಲೇ ಹೆಚ್ಚು ಹರಡುತ್ತಿದೆ.

• ಈಗಾಗಲೇ ಪಡೆದ ವ್ಯಾಕ್ಸೀನ್‌ಗಳು ರಕ್ಷಣೆ ನೀಡಲಾರವು ಎಂದು ಆರೋಗ್ಯ ಸಂಸ್ಥೆ ಹೇಳಿದೆ.

• ಹಿಂದಿನ ಡೆಲ್ಟಾ ವೈರಸ್‌ಗೆ ಹೋಲಿಸಿದರೆ 70ರಷ್ಟು ಹೆಚ್ಚು ವೇಗದಲ್ಲಿ ಹರಡುತ್ತಿದೆ!!

• ಹೆಚ್ಚು ಹೆಚ್ಚು ಹರಡುವ ಗುಣ ಇರುವ ಕಾರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಒಮ್ಮೆಗೇ ಗಣನೀಯವಾಗಿ ಏರಲಿದೆ.

• ಲಕ್ಷಣಗಳು:
ಮೂಗು ಸೋರುವಿಕೆ, ಕಟ್ಟುವಿಕೆ, ಸೀನು, ಗಂಟಲು ಕೆರೆತ, ಜ್ವರ, ಉಸಿರಾಟದ ತೊಂದರೆ. ಇವು ಬಹಳ ಕಾಲ ಉಳಿಯುತ್ತವೆ.

• ಸಮರ್ಥ ಪರೀಕ್ಷಾ ಕಿಟ್ ಬಂದಿಲ್ಲದ ಕಾರಣ, ಸಾಮಾನ್ಯ ನೆಗಡಿ ಇದ್ದವರಿಗೂ ಒಮಿಕ್ರಾನ್ ಪಾಸಿಟಿವ್ ಎಂದು ಫಲಿತಾಂಶ ಬರುತ್ತಿದೆ. ಆದ್ದರಿಂದ ಪರೀಕ್ಷೆ ಮಾಡಿಸಿದವನೇ "ಮೂರ್ಖ" ಎನ್ನುವಂತಾಗಿದೆ!

• ಚಿಕಿತ್ಸೆ:
ನಿರ್ದಿಷ್ಟ ಚಿಕಿತ್ಸೆ ಇಲ್ಲವಾದ್ದರಿಂದ, ಹಿಂದಿನಂತೆ ಲಾಕ್ಷಣಿಕ ಚಿಕಿತ್ಸೆ ಮಾಡಲು ತಿಳಿಸುತ್ತಾರೆ.

• ಕೆಲ ಕಂಪನಿಗಳು ಒಮಿಕ್ರಾನ್‌ಗೆ ಸೂಕ್ತ ವ್ಯಾಕ್ಸೀನ್ ಕೊಡುತ್ತೇವೆ ಎಂದು ವ್ಯಾಪಾರ ದೃಷ್ಟಿಯ ಹೇಳಿಕೆಗಳನ್ನೂ ಕೊಟ್ಟಿದ್ದಾರೆ...

• ಬೂಸ್ಟರ್ ಡೋಜ್ ಎಂದು ನಾಲ್ಕು ಬಾರಿ ವ್ಯಾಕ್ಸೀನ್ ಆದವರನ್ನೂ ಒಮಿಕ್ರಾನ್ ಬಿಟ್ಟಿಲ್ಲ. ಆದರೂ ವ್ಯಾಕ್ಸೀನ್ ತಯಾರಿಸಲು ಉತ್ಸುಕವಾಗಿವೆ -- ಕಂಪನಿಗಳು ಮತ್ತು ಸರಕಾರಗಳು!!
•••••••••••••••••••••••••••••••••••••••••••
ರಕ್ಷಣೆಗೆ ಏನು ಮಾಡಬಹುದು?:
ಜೀವಕೋಶಗಳ ಸಾಮರ್ಥ್ಯ ವರ್ಧನೆಯೊಂದೇ ದಾರಿ. ಇದು ರಾತೋರಾತ್ರಿ ಬರುವಂತಹುದಲ್ಲ. ಇಂದು ಚವನಪ್ರಾಶ ಲೇಹ ಸೇವಿಸಿ ನಾಳೆಗೆ ಇಮ್ಯೂನಿಟಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಸಧ್ಯಕ್ಕೆ ಆಹಾರದ ಪ್ರಮಾಣ ಕಡಿಮೆ ಮಾಡಿಕೊಳ್ಳಿ, ಜೀರ್ಣಕ್ರಿಯೆ ಚೆನ್ನಾಗಿ ಇಟ್ಟುಕೊಳ್ಳಿ, ಅಂದರೆ ಚೆನ್ನಾಗಿ ಹಸಿಯುವಂತೆ ಕೆಲಸ ಮಾಡಿ, ಹಸಿದ ನಂತರವಷ್ಟೇ ಆಹಾರ ಸೇವಿಸಿ.

ಪ್ರಬಲ ಅಸ್ತ್ರ:
ಉಪವಾಸ ಅಥವಾ ಚೆನ್ನಾಗಿ ಹಸಿಯುವವರೆಗೆ ಆಹಾರ ಸೇವನೆ ಮಾಡದಿರುವ ಸಂಕಲ್ಪವೇ ಪರಿಣಾಮಕಾರಿಯಾಗಿದೆ. ಇದೊಂದು ಪ್ರಬಲ ಅಸ್ತ್ರವನ್ನು ಪ್ರಯೋಗಿಸಿ ನೋಡಿ, ಎಷ್ಟೇ ಅಪಾಯಕರ ವೈರಸ್ ಕೂಡಾ ಆಹಾರ ಸಿಗದೇ ಮೆತ್ತಗಾಗುತ್ತದೆ, ಸತ್ತೇಹೋಗುತ್ತದೆ...

ನಾಳೆಗೆ ಮುಂದುವರಿಯುವುದು...

🙏 ಧನ್ಯವಾದಗಳು 🙏
•••••••••••••••••••••••••••••••••••••••••••
https://t.me/joinchat/Pzj2OBdb9refGJ5DbP1CSw

8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴

🦢 ಅಮೃತಾತ್ಮರೇ, ನಮಸ್ಕಾರ  🦢      ದಿನಾಂಕ: 09.01.2022  ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-609  ಲೇಖಕರು: ಡಾ. ಮಲ್ಲಿಕಾರ್ಜು...
09/01/2022

🦢 ಅಮೃತಾತ್ಮರೇ, ನಮಸ್ಕಾರ 🦢

ದಿನಾಂಕ: 09.01.2022
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-609
ಲೇಖಕರು: ಡಾ. ಮಲ್ಲಿಕಾರ್ಜುನ ಡಂಬಳ
•••••••••••••••••••••••••••••••••••••••
✍️: ಇಂದಿನ ವಿಷಯ:
ಅಪೆಂಡಿಸೈಟೀಸ್ ಶಸ್ತ್ರಚಿಕಿತ್ಸೆಯ ಅಗತ್ಯ ಯಾವಾಗ?
•••••••••••••••••••••••••••••••••••••••
ಚಿಕ್ಕ ಮಕ್ಕಳಾದಿ ಎಲ್ಲ ವಯಸ್ಸಿನ ಜನರನ್ನೂ ಕಾಡುವ ಅಪೆಂಡಿಸೈಟೀಸ್‌ಗೆ ಚಿಕಿತ್ಸೆ ಏನು ಎಂದು ಯಾರನ್ನು ಕೇಳಿದರೂ "ಆಪರೇಷನ್" ಎಂದು ಥಟ್ಟನೆ ಉತ್ತರ ಹೇಳುತ್ತಾರೆ!?? 🤔

ಇದು ಸತ್ಯವಲ್ಲ, ಆಹಾರ ಮತ್ತು ಔಷಧಿಗಳಿಂದ ಸರಿಪಡಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ!

•••••••• ಮುಂದುವರಿದ ಭಾಗಗಳನ್ನು ನೋಡೋಣ...

ಯಾವ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅತ್ಯಾವಶ್ಯಕವಾಗಿ ಬೇಕು?:

• ಉದರ ಶೂಲೆ ತೀವ್ರವಾಗಿದ್ದು, ನಿರಂತರ ವಾಂತಿಯಾಗುತ್ತಿದ್ದರೆ
• ನೋವಿನ ಜೊತೆಗೆ ಜ್ವರ ತೀವ್ರವಾಗಿ ಬಂದರೆ
• ಹೊಟ್ಟೆ ಗಟ್ಟಿಯಾದರೆ ಅಥವಾ ಉಬ್ಬರಿಸಿದರೆ
• ಬಲಭಾಗದಲ್ಲಿ ಅಷ್ಟೇ ಅಲ್ಲದೇ, ಹೊಕ್ಕಳಿನ ಸುತ್ತಲೂ ನೋವಿದ್ದರೆ
• ವ್ಯಕ್ತಿ ಮೂರ್ಛಿತನಾದರೆ...

ತಡಮಾಡದೇ, ಶಸ್ತ್ರಚಿಕಿತ್ಸಾ ತಜ್ಞರನ್ನು ಭೇಟಿಮಾಡಿ ಉದರದ ಸ್ಕ್ಯಾನಿಂಗ್ ಮಾಡಿಸಿ, ಅವರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಿಸಬೇಕು.

ವಿ.ಸೂ:
ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ರಹಿತವಾಗಿ ಚಿಕಿತ್ಸೆ ಮಾಡಿಸಲು ಯಾರು ಏನೇ ಅಭಿಪ್ರಾಯ ಹೇಳಲಿ, ಅದು ಅಸಾಧ್ಯ ಮತ್ತು ಅಪಾಯಕರ. ಹಾಗಾಗಿ, ತಕ್ಷಣ ಕಾರ್ಯಪ್ರವೃತ್ತರಾಗಿರಿ...
•••••••••••••••••••••••••••••••••••••••

ಈ ಸಂದರ್ಭದಲ್ಲಿ ಉದರದೊಳಗೆ ಏನಾಗಿರುತ್ತದೆ?:
ಈ ವಿಷಯ ತಿಳಿದಲ್ಲಿ, ನೀವು ಸ್ಪಷ್ಟ ನಿಲುವಿಗೆ ಬರಲು ಸಹಾಯವಾಗುತ್ತದೆ...

ಅಪೆಂಡಿಕ್ಸ್ ಊತಕ್ಕೆ ಸೋಂಕು ತಗುಲಿ
• "ಕೀವು ತುಂಬಿಕೊಂಡಿರುತ್ತದೆ" ಮತ್ತೆ ಕೆಲವೊಮ್ಮೆ
• "ಊತ ಒಡೆದು ಕೀವು ಉದರದ ಎಲ್ಲಾ ಭಾಗಕ್ಕೆ ಪಸರಿಸಿರುತ್ತದೆ"

ಈ ಎರಡೂ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯ...

ಮೇಲೆ ತಿಳಿಸಿದ ಜ್ವರ, ವಾಂತಿ ಲಕ್ಷಣಗಳು ಕೀವು ತುಂಬಿಕೊಂಡಿರುವುದನ್ನು ಹೇಳುತ್ತವೆ ಮತ್ತು ಹೊಟ್ಟೆ ಗಟ್ಟಿಯಾಗುವುದು, ಮೂರ್ಛೆ ಬರುವುದು ಎಂದರೆ, ಗಡ್ಡೆ ಒಡೆದು ಕೀವು ಉದರವನ್ನು ವ್ಯಾಪಿಸುತ್ತಿದೆ ಎಂದರ್ಥ...

ಕೀವು ಪೆರಿಟೋನಿಯಮ್ ಎಂಬ ದೊಡ್ಡ ಪದರವನ್ನು ವ್ಯಾಪಿಸಿದರೆ ಅದು ಪ್ರಾಣಾಪಾಯಕಾರಕ... 🤔

ಹಾಗಾಗಿ, ಇಲ್ಲಿ ಸ್ಪಷ್ಟ ಮತ್ತು ಬಹುಬೇಗ ನಿರ್ಧಾರಕ್ಕೆ ಬರುವುದು ಅತ್ಯಗತ್ಯ...

🙏 ಧನ್ಯವಾದಗಳು 🙏
•••••••••••••••••••••••••••••••••••••••
https://t.me/joinchat/Pzj2OBdb9refGJ5DbP1CSw

8792290274 9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research center

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴

🦢  ಅಮೃತಾತ್ಮರೇ, ನಮಸ್ಕಾರ  🦢  🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴•••••••••••••••••••••••••••••••••••...
09/01/2022

🦢 ಅಮೃತಾತ್ಮರೇ, ನಮಸ್ಕಾರ 🦢

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴
•••••••••••••••••••••••••••••••••••••••
ದಿನಾಂಕ: 08.01.2022
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-608
ಲೇಖಕರು: ಡಾ. ಮಲ್ಲಿಕಾರ್ಜುನ ಡಂಬಳ
•••••••••••••••••••••••••••••••••••••••
✍️: ಇಂದಿನ ವಿಷಯ:
ಅಪೆಂಡಿಸೈಟೀಸ್ -- ಆಹಾರ-ಔಷಧಿಗಳಿಂದ ಗುಣಪಡಿಸಬಹುದು!
•••••••••••••••••••••••••••••••••••••••
ಚಿಕ್ಕ ಮಕ್ಕಳಾದಿ ಎಲ್ಲ ವಯಸ್ಸಿನ ಜನರನ್ನೂ ಕಾಡುವ ಅಪೆಂಡಿಸೈಟೀಸ್‌ಗೆ ಚಿಕಿತ್ಸೆ ಏನು ಎಂದು ಯಾರನ್ನು ಕೇಳಿದರೂ "ಆಪರೇಷನ್" ಎಂದು ಥಟ್ಟನೆ ಉತ್ತರ ಹೇಳುತ್ತಾರೆ!?

ಇದು ಸತ್ಯವಲ್ಲ, ಆಹಾರ ಮತ್ತು ಔಷಧಿಗಳಿಂದ ಸರಿಪಡಿಸಿಕೊಳ್ಳಲು ಖಂಡಿತಾ ಸಾಧ್ಯವಿದೆ!

•••••••• ಮುಂದುವರಿದ ಭಾಗಗಳನ್ನು ನೋಡೋಣ...

ಶಸ್ತ್ರಚಿಕಿತ್ಸೆ ತಪ್ಪಿಸುವ ಉಪಾಯಗಳೇನು?:
ಹೊಟ್ಟೆನೋವು ಕಾಣಿಸಿಕೊಂಡ ತಕ್ಷಣ ಗಾಬರಿಯಾಗುವುದು ಬೇಡ...

ಜನರು ಹೇಳುತ್ತಾರೆ ಏಕಾಏಕಿ ಹೊಟ್ಟೆನೋವು ಬಂದಿತು ಎಂದು, ಅದು ಸತ್ಯವಲ್ಲ, ಕನಿಷ್ಟ 10-15 ದಿನಗಳ ಪೂರ್ವದಿಂದಲೇ, ಮಲಬದ್ಧತೆ ಅಥವಾ ಅಸಮರ್ಪಕ ಮಲಪ್ರವೃತ್ತಿ ಅಥವಾ ಮಲದ ಸ್ವರೂಪದಲ್ಲಿ ವ್ಯತ್ಯಾಸ ಇವು ಇದ್ದೇ ಇರುತ್ತವೆ. ಇವುಗಳನ್ನು ತಕ್ಷಣಕ್ಕೆ ಸರಿಪಡಿಸಿಕೊಳ್ಳಲೇಬೇಕು.‌ ಅದಕ್ಕಾಗಿ ಮಲಪ್ರವೃತ್ತಿ ಮಾಡುವ ಔಷಧಿಗಳಷ್ಟೇ ಸೇವಿಸಬೇಡಿ, ಅದು ಶಸ್ತ್ರಚಿಕಿತ್ಸೆಯನ್ನು ತಡೆಯದು. ಕಡಿಮೆ ಪ್ರಮಾಣದ ಆಹಾರ, ಹದವಾಗಿ ನೀರಿನಲ್ಲಿ ಬೇಯಿಸಿದ ಆಹಾರ, ಗೋಧಿ, ಉದ್ದು, ಮೈದಾ ರಹಿತ ಆಹಾರ ಸೇವಿಸಿ. ಒಟ್ಟಾರೆ, "ನಿತ್ಯವೂ, ಒತ್ತಾಯವಲ್ಲದ ಮತ್ತು ಔಷಧಗಳಿಲ್ಲದೇ ಮಲಪ್ರವೃತ್ತಿ ಆಗುವಂತೆ ನೋಡಿಕೊಳ್ಳಬೇಕು!"
ಉದರದ ಸ್ಕ್ಯಾನಿಂಗ್ ಮಾಡಿಸುವ ಮೊದಲು, ಸ್ವಲ್ಪ ಜೀರಿಗೆ ಕಷಾಯ ಸೇವಿಸಿ, ಉದರವನ್ನು ಖಾಲೀ ಬಿಡಿ, ಶೂಲೆ ನಿಯಂತ್ರಣಕ್ಕೆ ಬರುತ್ತದೆ.
ನಂತರ ಆಯುರ್ವೇದ ವೈದ್ಯರನ್ನು ಕಾಣಿರಿ.
ಅವರು --
• ನಿಮ್ಮ ಉದರಶೂಲೆಯನ್ನು ತಕ್ಷಣ ನಡುವೆ ನಿವಾರಿಸಬಲ್ಲರು.
• ಸಾರ ಮತ್ತು ಕಿಟ್ಟವಾಗಿ ವಿಭಜನೆಯಾಗದ ಆಹಾರ ಹಳಸಿ ಉಷ್ಣತೆಯನ್ನು ಉಂಟುಮಾಡುತ್ತದೆ, ಅದನ್ನು ಹೇಗೆ ನಿಯಂತ್ರಿಸಬಹುದು ಅಥವಾ ಹೊರಹಾಕಬಹುದು ಎಂದು ಯೋಚಿಸಿ ಔಷಧಗಳನ್ನು ಯೋಜಿಸುತ್ತಾರೆ.
• ಕರುಳಿನಲ್ಲಿರುವ ಮೂಲ ಪಚನ ಸ್ಥಾನದಲ್ಲಿನ ಕಾರ್ಯನಿರ್ವಾಹಕ ಘಟಕಗಳಾದ "ಸಮಾನ ವಾಯು ಮತ್ತು ಅಗ್ನಿ"ಯನ್ನು ಪ್ರಾಕೃತ ಅವಸ್ಥೆಗೆ ತರುತ್ತಾರೆ, ಅವುಗಳನ್ನು ಉತ್ತೇಜಿಸುವುದಿಲ್ಲ.
• ಉಂಡುಕದ ಊತವನ್ನು ನಿವಾರಿಸಲು ಬೇಕಾದ ಔಷಧಗಳನ್ನು ಯೋಜಿಸುತ್ತಾರೆ.
ಮತ್ತು
• ಎಲ್ಲಕ್ಕಿಂತ ಮುಖ್ಯವಾಗಿ ಆಹಾರಕ್ರಮವನ್ನು ಹೇಳುತ್ತಾರೆ...

ಇದರಿಂದ ಸಂಭಾವ್ಯ ಶಸ್ತ್ರಚಿಕಿತ್ಸೆಯನ್ನು ತಡೆದುಬಿಡುತ್ತಾರೆ...

ವಿ. ಗಮನಕ್ಕೆ:
ನೂರು ಜನ ನೂರು ಅಭಿಪ್ರಾಯಗಳನ್ನು ಕೊಡಲಿ. ಕನಿಷ್ಟ ಪಕ್ಷ ಒಬ್ಬ ಆಯುರ್ವೇದ ತಜ್ಞರ ಸ್ಪಷ್ಟ ಅಭಿಪ್ರಾಯವನ್ನು ಪಡೆಯಿರಿ. ಅವರು, ಆಹಾರದಿಂದಲೇ ನಿಯಂತ್ರಿಸಬಲ್ಲರು ಅಥವಾ ಔಷಧಗಳಿಂದ ಗುಣಪಡಿಸಬಲ್ಲರು ಅಥವಾ ಶಸ್ತ್ರಚಿಕಿತ್ಸೆಗೆ ಹೇಳುತ್ತಾರೆ ಕೆಲವರು ಶಸ್ತ್ರಚಿಕಿತ್ಸೆ ಮಾಡುತ್ತಾರೆ...
•••••••••••••••••••••••••••••••••••••••
ಯಾವ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅತ್ಯಾವಶ್ಯಕವಾಗಿ ಬೇಕು? -- ಈ ವಿಷಯ ನಾಳೆಗೆ ಮುಂದುವರಿಯುವುದು...

🙏 ಧನ್ಯವಾದಗಳು 🙏
•••••••••••••••••••••••••••••••••••••••
ಪ್ರತಿದಿನದ ಆರೋಗ್ಯ ಮಾಹಿತಿಗಾಗಿ ಲಿಂಕ್ ಒತ್ತಿ "ಆಸ್ಪತ್ರೆ ರಹಿತ ಜೀವನ" ಗುಂಪಿಗೆ ಸೇರಿ
👇
https://t.me/joinchat/Pzj2OBdb9refGJ5DbP1CSw
ಮತ್ತು ನಿಮ್ಮ ಆಪ್ತ ಬಳಗವನ್ನು ಈ ಗುಂಪಿಗೆ ಸೇರಿಸಬಹುದು.
•••••••••••••••••••••••••••••••••••••••
ನಿಮ್ಮ ಸಂಪರ್ಕಕ್ಕೆ:
📞 8792290274
9148702645

🙏 ಧನ್ಯವಾದಗಳು 🙏
•••••••••••••••••••••••••••••••••••••••
ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Address

Shimoga

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+919916995513

Alerts

Be the first to know and let us send you an email when Atharva Ayurvision posts news and promotions. Your email address will not be used for any other purpose, and you can unsubscribe at any time.

Contact The Practice

Send a message to Atharva Ayurvision:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram