19/05/2025
ಕಳೆದ 15 ವರ್ಷಗಳಿಂದ, ಜನರ ಆರೋಗ್ಯವನ್ನು ನೋಡಿಕೊಳ್ಳುವ ಧ್ಯೇಯದೊಂದಿಗೆ ತನ್ನ ಅನೇಕ ಪ್ರಸಿದ್ಧ ಉತ್ಪನ್ನಗಳ ಮೂಲಕ ಮನೆಮಾತಾಗಿರುವ ಅಮೃತ್ ನೋನಿ ತನ್ನ ಅದ್ಭುತ ರಿಸಲ್ಟ್ ನೊಂದಿಗೆ ಜನರ ನಂಬಿಕೆಯನ್ನು ಗೆಲ್ಲುತ್ತಲೇ ಬಂದಿದೆ. ಅಮೃತ್ ನೋನಿ ಇದೀಗ ತನ್ನ ಸಾಂಪ್ರದಾಯಿಕ ಆಯುರ್ವೇದಿಯ ಪದ್ಧತಿಯಲ್ಲಿ ಔಷಧ ತಯಾರಿಕೆಗೆ ವೈಜ್ಞಾನಿಕ ಪುರಾವೆ ಅಂದರೆ ತನ್ನ ಉತ್ಪನ್ನಗಳ ಶ್ರೇಷ್ಠತೆಯನ್ನು ಕ್ಲಿನಿಕಲ್ ಟ್ರಯಲ್ ಗಳ ಮೂಲಕ ಸಾಬೀತುಪಡಿಸುವುದರಿಂದ ಸಾರ್ವಜನಿಕರ ಮತ್ತಷ್ಟು ನಂಬಿಕೆಯನ್ನು ಗಟ್ಟಿಗೊಳಿಸಿದೆ.ಈ ಕಂಪನಿ ತನ್ನ ಉತ್ಪನ್ನದ ಅತ್ಯುನ್ನತ ಗುಣಮಟ್ಟ ಕಾಪಾಡುವುದರ ಜೊತೆಗೆ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಕೂಡ ವ್ಯಾಲ್ಯೂ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ನ ಮೂಲಕ ಪೂರ್ಣಗೊಳಿಸುತ್ತಿದೆ.
ಅಮೃತ್ ನೋನಿಯ ತಯಾರಿಕಾ ಘಟಕವಾದ ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಯಾವುದೇ ಕಡ್ಡಾಯವಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳು ಅನ್ವಯಿಸದಿದ್ದರೂ ಕೂಡ ತನ್ನ ಖುಷಿಗಾಗಿ ವ್ಯಾಲ್ಯೂ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ನ ಮೂಲಕ ಎಂದಿನಿAದಲೂ ಕೂಡ ಜನರ ನಿಸ್ವಾರ್ಥ ಸೇವೆಯಲ್ಲಿ ಭಾಗಿಯಾಗಿದೆ.
ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಥವಾ ಉನ್ನತ ಶಿಕ್ಷಣದಲ್ಲಿ ಸಹಾಯ ಮಾಡುವುದು, ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಔಷಧಿಗೆ ಸಹಾಯ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಉದಾಹರಣೆಗೆ ಕೋವಿಡ್ ನ ಸಮಯದಲ್ಲಿ ಉಚಿತವಾಗಿ ಆಕ್ಸಿಜನ್ ಫಿಟ್ಟೆಡ್ ಆಂಬುಲೆನ್ಸ್ ನ ಸೇವೆ, ಅತಿವೃಷ್ಟಿ ಅಥವಾ ಅನಾವೃಷ್ಟಿಯ ಸಮಯದಲ್ಲಿ ಆಹಾರ ಹಾಗೂ ಬಟ್ಟೆಯ ವ್ಯವಸ್ಥೆ ಹೀಗೆ ಅನೇಕ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದೆ.
ಕಳೆದ ವರ್ಷ ಕಂಪನಿಯ ಪಕ್ಕದ ಹಳ್ಳಿಯಾದ ಬಸವಪುರ ಶಾಲೆಯ ನವೀಕರಣವನ್ನು ಮಾಡಲಾಗಿತ್ತು.ಇದೀಗ ಇನ್ನೊಂದು ಹೆಜ್ಜೆ ಮುಂದಾಗಿ ರಾಮೇನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 5 ವರ್ಷ ದತ್ತು ಪಡೆಯುವುದರ ಜೊತೆಗೆ ಸರಿಸುಮಾರು 24 ಲಕ್ಷ ಖರ್ಚು ಮಾಡಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ವ್ಯವಸ್ಥಿತವಾಗಿ ಪಾಠ ಕೇಳಲು ಕುಳಿತುಕೊಳ್ಳಲು ಬೆಂಚುಗಳು ಹಾಗೂ ಆಧುನೀಕರಣದ ಬಗ್ಗೆ ಜ್ಞಾನವನ್ನು ಹೊಂದಲು ಸ್ಮಾರ್ಟ್ ಟಿವಿಯನ್ನು ಕೂಡ ಈ ಶಾಲೆಗೆ ನೀಡಲಾಗಿದೆ.
ದಿನಾಂಕ 19-5-2025 ಸೋಮವಾರ ಬೆಳಿಗ್ಗೆ 10 ಗಂಟೆಗೆ ನೂತನ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಶ್ರೀಯುತ ಮಧು ಬಂಗಾರಪ್ಪ, ಮಾನ್ಯ ಸಚಿವರು ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಇವರಿಂದ ನೆರವೇರಿದೆ. ಈ ಕಾರ್ಯಕ್ರಮವನ್ನು ಶ್ರೀಯುತ ಡಾ. ಶ್ರೀನಿವಾಸ್ ಮೂರ್ತಿ, ಮ್ಯಾನೇಜಿಂಗ್ ಡೈರೆಕ್ಟರ್ ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ (ಅಮೃತ್ ನೋನಿ ತಯಾರಿಕಾ ಘಟಕ)ಹಾಗು ಶ್ರೀಮತಿ ಅಂಬುಜಾಕ್ಷಿ ಶ್ರೀನಿವಾಸ್ ಮೂರ್ತಿ ಇವರು ಆಯೋಜಿಸಿದ್ದು, ಇದರ ಅಧ್ಯಕ್ಷತೆಯನ್ನು ಶ್ರೀಮತಿ ಶಾರದಾ ಪೂರ್ಯನಾಯಕ್, ಶಾಸಕರು ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರ ಇವರು ವಹಿಸಿದ್ದಾರೆ. ಘನ ಉಪಸ್ಥಿತಿ ಶ್ರೀಮತಿ ಕವಿತಾ ಯೋಗಪ್ಪನವರ್, ಮಾನ್ಯ ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ.
ಈ ಕಾರ್ಯಕ್ರಮದಲ್ಲಿ ಶ್ರೀಯುತ ದತ್ತಾತ್ರಿ - ಪ್ರಕೋಷ್ಠಗಳ ರಾಜ್ಯ ಸಂಯೋಜಕರು ಬಿಜೆಪಿ, ಶ್ರೀಯುತ ಕಡಿದಾಳ್ ಗೋಪಾಲ್ - ಜಿಲ್ಲಾಧ್ಯಕ್ಷರು ಜೆಡಿಎಸ್, ಶ್ರೀಯುತ ರಮೇಶ್ - ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶ್ರೀಯುತ ಮಂಜುನಾಥ್ - ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶ್ರೀಯುತ ರಾಘವೇಂದ್ರ ಬಿ ಆರ್ - ಎಸ್.ಡಿ.ಎಂ.ಸಿ ಅಧ್ಯಕ್ಷರು, ಶ್ರೀಯುತ ಕೃಷ್ಣಮೂರ್ತಿ - ಪಂಚಾಯಿತಿ ಮಾಜಿ ಅಧ್ಯಕ್ಷರು; ಹಾಲಿ ಸದಸ್ಯರು, ಶ್ರೀಮತಿ ಗಾಯತ್ರಿ - ಅಧ್ಯಕ್ಷರು ಅಗಸವಳ್ಳಿ ಗ್ರಾಮ ಪಂಚಾಯಿತಿ, ಶ್ರೀಮತಿ ಆರಿಫ್ ಉನ್ನಿಸಾ - ಗ್ರಾಮ ಪಂಚಾಯತಿ ಸದಸ್ಯರು, ಶ್ರೀಯುತ ಸೋಮಶೇಖರ್ - ಮುಖ್ಯ ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.