20/05/2017
ಇವರು ಜಿ. ಸಿ. ಸಿದ್ದಯ್ಯ . ಸರಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ನಮ್ಮ ತುಮಕೂರು ಜಿಲ್ಲೆಯ ತುಮಕೂರು ತಾಲೋಕಿನ ಗೌರಗೊಂಡನಹಳ್ಳಿ ಗ್ರಾಮದವರು...
ಇವರು ಸರಕಾರಿ ಸೇವೆಯಲ್ಲಿದಾಗಲೇ ಆಯುರ್ವೇದ ಪಾರಂಪರಿಕ ಚಿಕಿತ್ಸೆಯ ಬಗ್ಗೆ ಆಸಕ್ತಿ ವಹಿಸಿ ಸುಮಾರು 20 ವರ್ಷದಿಂದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಸಾವಿರಾರು ರೋಗಳಿಗೆ ಅಲವಾರು ಕಾಯಿಲೆಗಳನ್ನು ಗುಣಪದಿಸಿದ್ದಾರೆ. ಪ್ರತೀ ಹುಣ್ಣಿಮೆಯ ದಿನದಂದು ಶ್ರೀ ಕ್ಷೇತ್ರ ಸಿದ್ದರಬೇಟ್ಟದ (ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ) ಶ್ರೀ ಬಾಳೆಹೊನ್ನುರ್ ಖಾಸಾ ಶಾಖಾ ಮಠಕ್ಕೆ ಬಂದು ನೂರಾರು ರೋಗಿಗಳಿಗೆ ಉಚಿತವಾಗಿ (ಔಷಧಿ ತಯಾರಿಸಲು ಆಗುವ ಖರ್ಚನ್ನು ಮಾತ್ರ ಪಡೆದು) ಆಯುರ್ವೇದ ಪಾರಂಪರಿಕ ಚಿಕಿತ್ಸೆ ನೀಡಿ ನಿಸ್ವಾರ್ಥ ಸೇವೆ ಸಲ್ಲಿಸುತಿದ್ದಾರೆ ಮತ್ತು ಬೇರೆ ದಿನಗಳಲ್ಲಿ ತಮ್ಮ ಸ್ವಗ್ರಾಮ ಗೌರಗೊಂಡನಹಳ್ಳಿಯಲ್ಲಿ ದೇಶದ ವಿವಿಧ ಮೂಲೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ಶ್ರೀ ಕ್ಷೇತ್ರ ಸಿದ್ದರಬೇಟ್ಟದ ಕಾಡಿನಿಂದ ಗಿಡಮೂಲಿಕೆಗಳನ್ನ ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧ ಪಡಿಸುತ್ತಾರೆ. ಔಷಧಿಗಳನ್ನು ತೆಗೆದುಕೊಳ್ಳಲು ರೋಗಿಯೇ ಬರಬೇಕೆಂದಿಲ್ಲ, ಮೆಡಿಕಲ್ ರಿಪೋರ್ಟ್ ನೊಂದಿಗೆ ಸಂಬಂಧಿಕರು ಬಂದು ರೋಗದ ಲಕ್ಷಣಗಳ ಬಗ್ಗೆ ವಿವರಿಸಿ ಔಷಧಿ ತೆಗೆದುಕೊಳ್ಳಬಹುದು..
೨೦ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಜಿ.ಸಿ. ಸಿದ್ದಯ್ಯ ರವರು ಯಾರಿಂದಲೂ ಏನನ್ನೂ ಪ್ರತಿಯಾಗಿ ಇಚ್ಛಿಸದ ಇವರು ಮಾಧ್ಯಮ ಜಗತ್ತಿನಿಂದಲೂ ಬಹುದೂರ ಉಳಿದಿದ್ದಾರೆ. ಯಾವುದೇ ಕಾಯಿಲೆ ಇದ್ದರು ಉಚಿತವಾಗಿ ಔಷಧಿ ನೀಡುವ ಇವರು ಕೇವಲ ಔಷಧಿ ತಯಾರಿಸಲು ಆಗುವ ಖರ್ಚನ್ನು ಮಾತ್ರ ಪಡೆದು ಚಿಕಿತ್ಸೆ ಮಾಡುತ್ತಾರೆ. ಆಸ್ಫತ್ರೆ ಗಳು ಲಕ್ಷ ಲಕ್ಷ ಸುಲಿಗೆ ಮಾಡುವ ಈ ದಿನಗಳಲ್ಲಿ ಇವರು ನಿಜಕ್ಕೂ ಮಾದರಿ...
ಸಂಪೂರ್ಣ ವಿವರ:
ಆಯುರ್ವೇದ ಪಾರಂಪರಿಕ ನಾಟಿ ವೈದ್ಯರ ಹೆಸರು: ಶ್ರೀ ಜಿ.ಸಿ. ಸಿದ್ದಯ್ಯ
ಸ್ಥಳ: ತುಮಕೂರು ನಿಂದ ಚಿಕ್ಕತೊಟ್ಲುಕೆರೆ ಮಾರ್ಗವಾಗಿ ಹೊರಟರೆ ಸುಮಾರು ೧೮ ಕಿ.ಮಿ. ದೂರದಲ್ಲಿ ಸಿಗುವ ಗೌರಗೊಂಡನಹಳ್ಳಿ ಯಲ್ಲಿ ಇಳಿದು ಸುಮಾರು ೧೦೦ ಹೆಜ್ಜೆ ಕಾಲ್ ನಡಿಗೆ ಮಾಡಿದರೆ ಸಾಕು ಮತ್ತೆ ಇವರ ಬಗ್ಗೆ ಈ ಊರಿನಲ್ಲಿ ಯಾರನ್ನು ಕೇಳಿದರು ಇವರ ಮನೆಗೆ ದಾರಿ ತೋರಿಸುತ್ತಾರೆ .
ಮೊಬೈಲ್ 1 : 9844597506
ಮೊಬೈಲ್ 2 : 7353944313
ಪ್ರತಿ ತಿಂಗಳು ಹುಣ್ಣಿಮೆ ದಿನದಂದು ಶ್ರೀ ಕ್ಷೇತ್ರ ಸಿದ್ದರಬೇಟ್ಟದ (ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ) ಶ್ರೀ ಬಾಳೆಹೊನ್ನುರ್ ಖಾಸಾ ಶಾಖಾ ಮಠ ದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆ ಒಳಗೆ ಸಿಗುತ್ತಾರೆ..