10/10/2025
ದಿನಾಂಕ 10.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಸರಣಿ ಕಾರ್ಯಕ್ರಮದ ಭಾಗವಾಗಿ ನರ್ಸಿಂಗ್ ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿ ಗಳಿಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಸ್ವಪ್ನ ಸುರೇಶ್ (ಜಿಲ್ಲಾ ಗವರ್ನರ್, ಲಯನ್ಸ್ dist. 317C), ಮತ್ತು ಶ್ರೀ ಮಟಪಾಡಿ ಪ್ರಭಾತ್ ಕಲ್ಕೂರ ,ವಿಪತ್ತು ನಿರ್ವಹಣಾ ಮತ್ತು ತುರ್ತು ಸೇವಾ ತಜ್ಞರು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಡಾ. ನಿಶಾಂತ್ ಭಟ್ (ಅಧ್ಯಕ್ಷರು,ಲಯನ್ಸ್ ಕ್ಲಬ್ ,ಮಣಿಪಾಲ),MJF ಲಯನ್ ಜಯಕರ ಶೆಟ್ಟಿ ಇಂದ್ರಾಳಿ (ಗ್ಲೋಬಲ್ ಸರ್ವೀಸ್ ಟೀಮ್ ಎಂ ಡಿ 317). ಲಯನ್ ಕೇಶವ್ ಅಮೀನ್ (ಲಯನ್ಸ್ ಗ್ಲೋಬಲ್ ಸರ್ವಿಸ್ ಟೀಮ್), ಲಯನ್ ಡಾ. ಎಚ್ ಗಣೇಶ್ ಪೈ (ಸಂಯೋಜಕರು ಮೆಂಟಲ್ ಹೆಲ್ತ್ ಅಂಡ್ ವೆಲ್ ಬೀಯಿಂಗ್ ವೀಕ್)ಡಾ ಅಶೋಕ್ ಕುಮಾರ್ ಅಧ್ಯಕ್ಷರು ಐ ಎಂ ಎ ಉಡುಪಿ ಕರಾವಳಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ (ನಿರ್ದೇಶಕರು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ) ಇವರು ವಹಿಸಿದ್ದರು, ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಡಾ. ಮಾನಸ್ ಈ.ಆರ್, ಮನೋವೈದ್ಯರು,ಕಾರ್ಯದರ್ಶಿಗಳು. IMA ಉಡುಪಿ- ಕರಾವಳಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು ,ಆಪ್ತಸಮಲೋಚಕರಾದ ಶ್ರೀ ವಿಶ್ವೇಶ್ವರ ಹೆಗಡೆ ಇವರು ಸರ್ವರನ್ನು ಸ್ವಾಗತಿಸಿದರು,ಆಪ್ತಸಮಲೋಚಕರಾದ ಶ್ರೀಮತಿ ಪದ್ಮ ರಾಘವೇಂದ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಆಪ್ತಸಮಲೋಚಕರಾದ ಶ್ರೀಮತಿ ದೀಪಶ್ರೀ ವಂದಿಸಿದರು,
ಸಭಾ ಕಾರ್ಯಕ್ರಮದ ನಂತರ ಮೊದಲ ಅವಧಿಯನ್ನು ಶ್ರೀಯುತ ಮಟಪಾಡಿ ಪ್ರಭಾತ್ ಕಲ್ಕೂರ ಇವರು ವಿಪತ್ತು ನಿರ್ವಹಣಾ ಮತ್ತು ಮಾನಸಿಕ ಆರೋಗ್ಯದ ಕುರಿತಾಗಿ ಮಾತಾಡಿದರು,ಎರಡನೆಯ ಅವಧಿಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ ಪಿವಿ ಭಂಡಾರಿ ಇವರು ಆಘಾತಕಾರಿ ಘಟನೆಗಳ ಮತ್ತು ಒತ್ತಡ ಕಾಯಿಲೆಗಳು ಹಾಗೂ ಪರಿಹಾರದ ಕುರಿತಾಗಿ ಮಾತನಾಡಿದರು,ಮೂರನೆಯ ಅವಧಿಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ತೆಗೆದುಕೊಂಡು ಆತ್ಮಹತ್ಯೆ ಹಾಗೂ ಅದರ ತಡೆಗಟ್ಟುವಿಕೆ ಕುರಿತಾಗಿ ವಿವರಿಸಿದರು.ಹಾಗೂ ನಾಲ್ಕನೆಯ ಅವಧಿಯಲ್ಲಿ ಮಾನಸಿಕ ರೋಗದ ತುರ್ತು ಚಿಕಿತ್ಸೆ ಕುರಿತಾಗಿ ಮನಶಾಸ್ತ್ರಜ್ಞರಾದ ಶ್ರೀ ನಾಗರಾಜ ಮೂರ್ತಿ ಇವರು ಮಾಹಿತಿ ನೀಡಿದರು.ಕಾರ್ಯಕ್ರಮದ ಸೌಖ್ಯ ಕಾಲೇಜ್ ಆಫ್ ನರ್ಸಿಂಗ್, ಕೆನರಾ ಕಾಲೇಜ್ ಆಫ್ ನರ್ಸಿಂಗ್ ಮತ್ತು ರುಕ್ಮಿನಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಸರಕಾರಿ ಸಮಾಜ ಕಾರ್ಯ ಇಲ್ಲಿನ 135 ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದರು.